anjali chakra and sufi malik kiss ಇಂಡಿಯಾ-ಪಾಕಿಸ್ತಾನದ ಮೂಲದ ಲೆಸ್ಬಿಯನ್ ಜೋಡಿಯಾಗಿದ್ದ ಭಾರತದ ಅಂಜಲಿ ಚಕ್ರಾ ಹಾಗೂ ಪಾಕಿಸ್ತಾನದ ಸೂಫಿ ಮಲೀಕ್ ಮದುವೆಗೂ ಒಂದು ವಾರ ಮುನ್ನವೇ ತಮ್ಮ ಬ್ರೇಕಪ್ ಘೋಷಿಸಿಕೊಂಡಿದ್ದಾರೆ.
ನವದೆಹಲಿ (ಮಾ.26): ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಾಗಿದ್ದ ಭಾರತದ ಅಂಜಲಿ ಚಕ್ರಾ ಹಾಗೂ ಪಾಕಿಸ್ತಾನದ ಸೂಫಿ ಮಲೀಕ್ ತಮ್ಮ ರಿಲೇಷನ್‌ಷಿಪ್ ಕೊನೆಯಾಗಿರುವುದನ್ನು ಘೋಷಿಸಿಕೊಂಡಿದ್ದಾರೆ. ಅದರೊಂದಿಗೆ ಒಂದೇ ವಾರದಲ್ಲಿ ನಡೆಯಬೇಕಿದ್ದ ಮದುವೆಯನ್ನೂ ಕೂಡ ಅವರು ರದ್ದು ಮಾಡಿದ್ದಾರೆ. 2019ರಿಂದಲೂ ಇಂಟರ್‌ನೆಟ್ ಸೆನ್ಸೇಷನ್ ಆಗಿದ್ದ ಈ ಲೆಸ್ಬಿಯನ್ ಜೋಡಿ ಸಲಿಂಗಿ ಪ್ರೇಮ ಹಾಗೂ ದಕ್ಷಿಣ ಏಷ್ಯಾ ಸಂಸ್ಕತಿಯ ಆಕರ್ಷಕ ಆಚರಣೆಯ ಕಾರಣಕ್ಕಾಗಿ ಹೆಸರುವಾಸಿಯಾಗಿತ್ತು. ಈಗ ತಾವಿಬ್ಬರೂ ಬೇರೆಬೇರೆಯಾಗಿರುವುದನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಘೋಷಿಸಿಕೊಂಡಿದ್ದಾರೆ. ಈ ನಡುವೆ ಅಂಜಲಿ ಚಕ್ರಾ, ಸೂಫಿ ಕಡೆಯಿಂದ ನನಗೆ ದಾಂಪತ್ಯ ದ್ರೋಹವಾಗಿದ್ದು ಅದೇ ಕಾರಣಕ್ಕಾಗಿ ಬ್ರೇಕಪ್ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಅಂಜಲಿ ಹಾಗೂ ಸೂಫಿ ಅವರ ಜಂಟಿ ಪ್ರಯಾಣ ಐದು ವರ್ಷದ ಹಿಂದೆ ಆರಂಭವಾಗಿತ್ತು. ಗಡಿಗಳು ಹಾಗೂ ಸಾಂಸ್ಕೃತಿಕ ಮಾನದಂಡಗಳನ್ನು ಮೀರಿದ ಪ್ರೀತಿಯ ಸುಂದರ ಚಿತ್ರಣ ಅನೇಕರ ಹೃದಯವನ್ನು ಸೆರೆಹಿಡಿದಿತ್ತು.
ಇನ್ನು ಕಳೆದ ವರ್ಷ ನಡೆದ ಇವರಿಬ್ಬರ ನಿಶ್ಚಿತಾರ್ಥ ಸಮಾರಂಭ ಅಂಬಾನಿ ಪುತ್ರನ ಪ್ರಿ ವೆಡ್ಡಿಂಗ್ ಸಮಾರಂಭಕ್ಕಿಂತಲೂ ಕಡಿಮೆ ಇದ್ದಿರಲಿಲ್ಲ. ನ್ಯೂಯಾರ್ಕ್‌ನ ಪ್ರಸಿದ್ಧ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನಲ್ಲಿ ಸೂಫಿ, ಅಂಜಲಿಗೆ ಮದುವೆಯ ಪ್ರಪೋಸ್ ಮಾಡಿದ್ದರು. ಈ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದರು. ಇದು ವ್ಯಾಪಕವಾಗಿ ವೈರಲ್ ಆಗಿತ್ತು.
ಆದರೆ, ಜೊತೆಯಾಗಿ ಸಂಸಾರ ಮಾಡುವ ಲೆಸ್ಬಿಯನ್ ಜೋಡಿಯ ಆಸೆ ಈಗ ಕಮರಿಹೋಗಿದೆ. ಮದುವೆಗೆ ಇನ್ನೇನು ಒಂದು ವಾರವಿದೆ ಎನ್ನುವಾಗ, ಸೂಫಿ ನನಗೆ ದ್ರೋಹ ಎಸಗಿದ್ದಾಳೆ ಎಂದು ಆರೋಪಿಸಿರುವ ಅಂಜಲಿ ಚಕ್ರಾ ತಮ್ಮ ರಿಲೇಷನ್‌ಷಿಪ್ ಬ್ರೇಕ್ ಅಪ್ ಆಗಿದ್ದು, ಮದುವೆ ಮುರಿದುಬಿದ್ದಿದೆ ಎಂದು ತಿಳಿಸಿದ್ದಾರೆ.
'ನಾನು ಮದುವೆಗೂ ಕೆಲವು ವಾರಗಳ ಮುನ್ನ ಆಕೆಗೆ ಮೋಸ ಮಾಡುವ ಮೂಲಕ ಕ್ಷಮಿಸಲಾಗದ ದ್ರೋಹವನ್ನು ಮಾಡಿದ್ದೇವೆ. ನಾನು ಆಕೆಯನ್ನು ತುಂಬಾ ನೋಯಿಸಿದ್ದೇನೆ. ಇದು ನನ್ನ ತಿಳುವಳಿಕೆಯನ್ನೂ ಮೀರಿದ ತಪ್ಪು ಎಂದು ನನಗನಿಸಿದೆ. ನಾನು ಈ ತಪ್ಪನ್ನು ಮಾಡಿದ್ದೇನೆ, ಹಾಗೂ ಇದನ್ನು ಮುಂದುವರಿಸುತ್ತೇನೆ.
ನಾನು ತುಂಬಾ ಜನರನ್ನು ನೋಯಿಸಿದ್ದೇನೆ. ನಮ್ಮ ಕುಟುಂಬ ಮತ್ತು ಸ್ನೇಹಿತರು ಸೇರಿದಂತೆ ನನ್ನ ಕ್ರಿಯೆಗಳ ಮೂಲಕ ನಾನು ಹೆಚ್ಚು ಪ್ರೀತಿಸುವ ಮತ್ತು ಕಾಳಜಿ ವಹಿಸುವ ಹಾಗೂ ನನ್ನ ಪ್ರೀತಿಸುವ ನಮ್ಮ ಸಮುದಾಯವನ್ನು ನೋಯಿಸಿದ್ದೇನೆ' ಎಂದು ಸೂಫಿ ಮಲಿಕ್ ತಮ್ಮ ಇನ್ಸ್‌ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
'ನಾನವಳಿಗೆ ಮೋಸ ಮಾಡ್ಬಿಟ್ಟೆ' ಭಾರತ ಪಾಕಿಸ್ತಾನದ ಖ್ಯಾತ ಸಲಿಂಗ ಜೋಡಿ ಅಂಜಲಿ ಚಕ್ರ- ಸೂಫಿ ಮಲಿಕ್ ಬ್ರೇಕಪ್
"ಇದು ಆಘಾತಕಾರಿಯಾಗಬಹುದು, ಆದರೆ ನಮ್ಮ ಪ್ರಯಾಣವು ಬದಲಾಗುತ್ತಿದೆ. ಸೂಫಿ ಮಾಡಿದ ದಾಂಪತ್ಯ ದ್ರೋಹದಿಂದಾಗಿ ನಾವು ನಮ್ಮ ಮದುವೆಯನ್ನು ರದ್ದುಗೊಳಿಸಲು ಮತ್ತು ನಮ್ಮ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇವೆ" ಎಂದು ಅಂಜಲಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಸೂಫಿ ಮಲಿಕ್ ಹಾಗೂ ಅಂಜಲಿ ಚಕ್ರಾ ಅಮೆರಿಕ ಮೂಲಕ ಮುಸ್ಲಿಂ-ಹಿಂದು ಸಲಿಂಗಿ ಜೋಡಿಯಾಗಿದೆ. 2019ರಲ್ಲಿ ಇವರ ಅದ್ಭತ ಕಪಲ್ ಫೋಟೋಶೂಟ್ ಮೂಲಕ ಜಗತ್ತಿನಲ್ಲಿ ವೈರಲ್ ಆಗಿದ್ದರು.