ಹೊಸ ವರ್ಷಕ್ಕೆ ಹೊಸ ಸ್ಫೂರ್ತಿ: ಈ ಐದು ಪುಸ್ತಕಗಳು ನೀಡುತ್ತವೆ ಬದುಕಿಗೆ ಪ್ರೇರಣೆ!

By Suvarna NewsFirst Published Jan 2, 2020, 11:54 AM IST
Highlights

ಹೊಸ ವರ್ಷದ ಮೊದಲ ದಿನಗಳನ್ನು ಬಹಳ ಸ್ಫೂರ್ತಿಯಿಂದಮ ಹೊಸ ಉತ್ಸಾಹದೊದಿಗೆ ಆರಂಭಿಸೋಣ. ಬದುಕಿನಲ್ಲಿ ನಿಮ್ಮ ಸ್ಫೂರ್ತಿಯನ್ನು ಹೆಚ್ಚಿಸುವ, ಪ್ರೇರಣೆಯನ್ನು ಮೂಡಿಸುವ ಐದು ಪುಸ್ತಕಗಳು ಇಲ್ಲಿವೆ...
 

ಹೊಸ ವರ್ಷ ಅಂದರೆ, ಹೊಸ ರೆಸಲ್ಯೂಶನ್‌ಗಳನ್ನು ಮಾಡುವ ಕಾಲವೂ ಹೌದು. ಅವುಗಳನ್ನು ಪಾಲಿಸದೇ ಇರೋಕೆ ನೆಪ ಹುಡುಕೋ ಕಾಲವೂ ಹೌದು! ನಮ್ಮ ಬದುಕನ್ನು ಖುಷಿ ಖುಷಿಯಾಗಿ ಮುಂದಕ್ಕೆ ಸಾಗಿಸೋಕೆ, ಇನ್ನಷ್ಟು ಉತ್ಸಾಹವನ್ನು ತುಂಬಿಸೋಕೆ ಪುಟ್ಟ ಪುಟ್ಟ ಪ್ರೇರಣೆಗಳೇ ಸಾಕು. ಅಂಥ ಪ್ರೇರಣೆಗಳನ್ನು ಕೊಡೋ ಒಂದಷ್ಟು ಸ್ಫೂರ್ತಿದಾಯಕ ಪುಸ್ತಕಗಳು ಇಲ್ಲಿವೆ. ಹೊಸ ವರ್ಷದ ಮೊದಲ ವಾರದಲ್ಲಿ ನೀವೇಕೆ ಇವುಗಳನ್ನು ಓದಬಾರದು?

ಟೈನೀ ಹ್ಯಾಬಿಟ್ಸ್‌- ಬಿ.ಜೆ.ಫಾಗ್‌

ಇದನ್ನು ಬರೆದವನು ಸಿಲಿಕಾನ್‌ ವ್ಯಾಲಿಯ ಲೆಜೆಂಡ್‌ ಅನಿಸಿದ ತಂತ್ರಜ್ಞ, ಲೇಖಕ ಬಿ.ಜೆ.ಫಾಗ್‌. ನಿಮ್ಮಲ್ಲಿ ಹಲವು ಕೆಟ್ಟ ಹವ್ಯಾಸಗಳಿರಬಹುದು. ಅವುಗಳನ್ನು ಏಕಾಏಕಿ ಬಿಡಿ ಅಂದರೆ ಕಷ್ಟ. ಆದರೆ ಕೆಲವು ಪುಟ್ಟ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ, ಇವುಗಳಿಂದ ಪಾರಾಗಬಹುದು ಅನ್ನುತ್ತದೆ ಈ ಪುಸ್ತಕ. ಮನುಷ್ಯನ ವರ್ತನೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಕಂಡುಕೊಂಡ ಸತ್ಯವಿದು. ನಮ್ಮ ಅಭ್ಯಾಸಗಳಲ್ಲೇ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದೇ ಯಶಸ್ಸಿನ ಗುಟ್ಟು ಅಂತಾನೆ ಅವನು.

ಗುಡ್‌ಬೈ ಥಿಂಗ್ಸ್‌: ಆನ್‌ ಮಿನಿಮಲಿಸ್ಟ್‌ ಲಿವಿಂಗ್‌- ಫುಮಿಯೋ ಸಸಾಕಿ

ಜಾಹೀರಾತುಗಳಿಗೆ ಮರುಳಾಗಿ, ಅವರಿವರು ಹೇಳಿದ್ದಕ್ಕೆ ತಲೆಬಾಗಿ ಬೇಕಿದ್ದದ್ದುಬೇಡದೆ ಇದ್ದದ್ದು ಎಲ್ಲವನ್ನೂ ಮನೆಯಲ್ಲಿ ತಂದು ತುಂಬಿಕೊಂಡಿದ್ದೇವೆ ನಾವು. ಬಳಸುವುದಕ್ಕಿಂತ ಬಳಸದಿರುವುದೇ ಹೆಚ್ಚು. ಸಂತೋಷವಾಗಿರುವುದು ಬಹಳ ಸರಳ. ಈ ಕೃತಿಯ ಲೇಖಕ ಬರೀ ಒಂದು ಚಾಪೆ, ಒಂದೆರಡು ಪ್ರತಿ ಬಟ್ಟೆ, ಅಗತ್ಯ ಸಾಮಗ್ರಿಗಳಲ್ಲೇ ತೃಪ್ತ. ಕಲೆದ ಒಂದು ವರ್ಷದಲ್ಲಿ ನಾವು ಬಳಸದೆ ಇರುವುದನ್ನು ಇಟ್ಟುಕೊಳ್ಳುವುದಕ್ಕಿಂತ ಕೊಟ್ಟುಬಿಡುವುದೇ ವಾಸಿ ಎನ್ನುತ್ತಾನೆ ಆತ. ಇದು ಅವನ ಸಂತೃಪ್ತ ಜೀವನದ ಕತೆಯೂ ಹೌದು.

ಥಿಂಕಿಂಗ್‌ ಫಾಸ್ಟ್‌ ಆ್ಯಂಡ್‌ ಸ್ಲೋ- ಡೇನಿಯಲ್‌ ಕಹ್ನೆಮನ್‌

ಯಾವಾಗ ಕೆಲಸ ಬಿಡಬೇಕು, ಯಾವಾಗ ಮದುವೆ ಆಗಬೇಕು, ಹೊಸ ಬ್ಯುಸಿನೆಸ್‌ ಶುರು ಮಾಡಬೇಕಾ ಬೇಡವಾ- ಹೀಗೆ ಅನೇಕ ನಿರ್ಧಾರಗಳನ್ನು ನಾವು ಜೀವನದಲ್ಲಿ ತೆಗೆದುಕೊಳ್ಳಬೇಕಾಗುತ್ತೆ. ಕೆಲವೊಮ್ಮೆ ನಮ್ಮ ಬುದ್ಧಿವಂತಿಕೆಯಿಂದ, ಕೆಲವೊಮ್ಮೆ ತುಂಬಾ ಯೋಚನೆ ಮಾಡಿ, ಕೊಲವೊಮ್ಮೆ ತಕ್ಷಣವೇ ರಿಯಾಕ್ಟ್ ಮಾಡುತ್ತ- ಹೀಗೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ. ನಮ್ಮ ಮನಸ್ಸು ಯಾವ ಕ್ಷಣದಲ್ಲಿ ಹೇಗೆ ನಿರ್ಧಾರ ಮಾಡುತ್ತೆ, ನಾವು ಹೇಗೆ ಯೋಚಿಸಬೇಕು ಅನ್ನೋದು ಎಲ್ಲರ ಪ್ರಶ್ನೆ. ಅದನ್ನು ಈ ನೊಬೆಲ್‌ ಪುರಸ್ಕೃತ ಮನೋವಿಜ್ಞಾನಿ ಡೇನಿಯಲ್‌ ಕಹ್ನೆಮನ್‌ ಸೊಗಸಾಗಿ ವಿವರಿಸಿದ್ದಾರೆ.

ಟೆನ್‌ ಆಗ್ರ್ಯುಮೆಂಟ್ಸ್‌ ಫಾರ್‌ ಡಿಲೀಟಿಂಗ್‌ ಯುವರ್‌ ಸೋಶಿಯಲ್‌ ಮೀಡಿಯಾ- ಜೇರೋನ್‌ ಲಾರ್ನಿಯರ್‌

ನಾವೀಗೆ ಇಂಟರ್‌ನೆಟ್‌ ಮೇಲೆ, ಅದರಲ್ಲೂ ಫೇಸ್‌ಬುಕ್‌ ಮುಂತಾದ ಸೋಶಿಯಲ್‌ ಮೀಡಿಯಾಗಳ ಮೇಲೆ ಎಷ್ಟೊಂದು ಅಡಿಕ್ಟ್ ಆಗಿಬಿಟ್ಟಿದ್ದೇವೆ ಅಂದರೆ, ದಿನದಲ್ಲಿ ಸುಮಾರು ಎರಡೂವರೆ ಗಂಟೆಯಷ್ಟು ಸಮಯವನ್ನು ಅದರಲ್ಲೇ ಕಳೆಯುತ್ತೇವೆ!

ಅಪ್ಪನಂತಹ ಬಾಸ್ ಇದ್ರೆ ಉದ್ಯೋಗಿಗಳು ಫುಲ್ ಖುಷ್!

ಹೀಗೆ ವ್ಯರ್ಥವಾಗಿ ಕಳೆಯುವ ಈ ಸಮಯವದಲ್ಲಿ ಏನೆಲ್ಲಾ ಮಾಡಬಹುದು ಗೊತ್ತೆ? ಒಂದು ಪುಸ್ತಕದ ಸುಮಾರು 30,000 ಪದ ಓದಬಹುದು; ಒಳ್ಳೇ ಅಡುಗೆ ಮಾಡಿ ಕುಟುಂಬದ ಜೊತೆ ಊಟ ಮಾಡಬಹುದು, ಮೂರು ಸಲ ಸೈಕೋಥೆರಪಿ ಮಾಡಿಸಿಕೊಳ್ಳಬಹುದು! ನಮ್ಮನ್ನು ‘ಕಡಿಮೆ ಮಾನವೀಯ’ ವ್ಯಕ್ತಿಗಳನ್ನಾಗಿಸುತ್ತಿರುವ ಸೋಶಿಯಲ್‌ ಮೀಡಿಯಾಗಳಿಂದ ದೂರವಿರಿ ಎಂದು ಸಿಲಿಕಾನ್‌ ವ್ಯಾಲಿಯ ತಜ್ಞನೇ ಆಗಿರುವ ಈ ಕೃತಿಕಾರ ಹೇಳುತ್ತಾನೆ.

ಹೌಟು ವಿನ್‌ ಫ್ರೆಂಡ್ಸ್‌ ಅ್ಯಂಡ್‌ ಇನ್‌ಫ್ಲುಯೆನ್ಸ್‌ ಪೀಪಲ್‌- ಡೇಲ್‌ ಕಾರ್ನೆಗಿ

1936ರಲ್ಲೇ ಪ್ರಕಟವಾದ ಈ ಪುಸ್ತಕದ ಒಂದುವರೆ ಕೋಟಿಗೂ ಅಧಿಕ ಕಾಪಿಗಳು ಇದುವರೆಗೆ ಖರ್ಚಾಗಿವೆ. ಹಲವಾರು ತಲೆಮಾರುಗಳನ್ನೇ ಈ ಪುಸ್ತಕ ಪ್ರಭಾವಿಸಿದೆ. ವೈಯುಕ್ತಿಕ ಬದುಕಿನಲ್ಲಿ ಗೆಲೆಯರನ್ನು ಮಾಡಿಕೊಳ್ಳುವುದು ಹೇಗೆ ಎಂಬುದರ ಕುರಿತೂ, ಹಾಗೆಯೇ ವೃತ್ತಿ ಜೀವನದಲ್ಲಿ ಗೆಳೆತನದ ಮೂಲಕ ನಿಮ್ಮ ಪ್ರಭಾವವನ್ನು ಅಧಿಕಗೊಳಿಸಿಕೊಂಡು ಯಶಸ್ವಿಯಾಗುವುದು ಹೇಗೆ ಎಬುದರ ಕುರಿತೂ ಈ ಪುಸ್ತಕ ವಿವರಿಸುತ್ತದೆ. ಆದರೆ ಅಷ್ಟೇ ಅಲ್ಲ. ತುಂಬ ಮಾನವೀಯ ರೀತಿಯಲ್ಲಿ ಬದುಕಿನ ಪ್ರೀತಿಸುವ ವಿಧಾನವೂ ಇದರಲ್ಲಿದೆ.

click me!