ಮನೆಯಲ್ಲಿ ಮಕ್ಕಳಿದ್ರೆ ಗಲಾಟೆ ಸಾಮಾನ್ಯ. ಎರಡು – ಮೂರು ಮಕ್ಕಳಿದ್ರೆ ಇದು ಹೆಚ್ಚಾಗುತ್ತದೆ. ಅವಳಿ ಮಕ್ಕಳಿದ್ರೆ ಅವರನ್ನು ನೋಡಿಕೊಳ್ಳೋದು ಮತ್ತಷ್ಟು ಕಷ್ಟ. ಅವಳಿ ಮಕ್ಕಳ ಪಾಲಕರು, ಅವರನ್ನು ಸಂಭಾಳಿಸೋಕೆ ಹೊಸ ಹೊಸ ಪ್ಲಾನ್ ಮಾಡ್ತಿರುತ್ತಾರೆ. ಈ ತಾಯಿ ಮಾಡಿದ ಪ್ಲಾನ್ ಈಗ ವೈರಲ್ ಆಗಿದೆ.
ಬೇರೆಯವರ ಮಕ್ಕಳನ್ನು ಸ್ವಲ್ಪ ಸಮಯ ಆಡಿಸೋಕೆ ಹಾಗೆ ಅವರನ್ನು ಮುದ್ದಾಡೋಕೆ ತುಂಬಾ ಚೆನ್ನಾಗಿರುತ್ತೆ. ಅದರಲ್ಲೂ ಅವಳಿ ಮಕ್ಕಳನ್ನು ನೋಡೋದೇ ಚೆಂದ. ಒಂದೇ ರೀತಿಯ ಇಬ್ಬರು ಮಕ್ಕಳು ಆಡ್ತಿದ್ದರೆ, ಜಗಳವಾಡ್ತಿದ್ದರೆ, ಪ್ರೀತಿ ಮಾಡ್ತಿದ್ದರೆ ಅವರನ್ನು ಮತ್ತೆ ಮತ್ತೆ ನೋಡ್ಬೇಕು ಎನ್ನಿಸುತ್ತದೆ. ಅದೇ ಬುಡಕ್ಕೆ ಬಂದ್ರೆ ಕಷ್ಟ. ಮಕ್ಕಳು ನಮ್ಮವರಾಗಿದ್ದಾಗ ಅವರನ್ನು ನೋಡಿಕೊಳ್ಳೋದು ಸವಾಲಿನ ಕೆಲಸ. ಮಕ್ಕಳನ್ನು ಪಾಲನೆ ಮಾಡೋದು ಮಕ್ಕಳಾಟವಲ್ಲ. ಮಕ್ಕಳು ಆಡ್ತಿದ್ದರೆ ಹೇಗೋ ಸಂಭಾಳಿಸಬಹುದು. ಆದ್ರೆ ಮಕ್ಕಳು ಜಗಳವಾಡ್ತಿದ್ದರೆ, ಕಿತ್ತಾಡುತ್ತಿದ್ದರೆ, ಅಳ್ತಿದ್ದರೆ ಅವರನ್ನು ಸುಮ್ಮನಿರಿಸೋಕೆ ಸುಸ್ತಾಗುತ್ತೆ. ಅದ್ರಲ್ಲೂ ಅವಳಿ ಮಕ್ಕಳಾದ್ರೆ ಕಥೆ ಮುಗಿದಂತೆ. ಮಕ್ಕಳು ಒಂದು ವಯಸ್ಸಿಗೆ ಬರುವವರೆಗೂ ಪಾಲಕರು ಹೈರಾಣವಾಗ್ತಾರೆ.
ಅವಳಿ (Twins) ಮಕ್ಕಳಲ್ಲಿ ಒಬ್ಬರು ಅತೀ ಚುರುಕಿದ್ರೆ ಮತ್ತೊಬ್ಬರು ಸೈಲೆಂಟ್ ಆಗಿರ್ತಾರೆ. ತುಂಟಾಟ ಮಾಡುವ ಮಕ್ಕಳು, ಸುಮ್ಮನಿರುವ ಮಕ್ಕಳನ್ನು ಗೋಳೋಯ್ಯೋದು ಸಾಮಾನ್ಯ. ಕೆಲವೊಮ್ಮೆ ಅವರನ್ನು ಸಂಭಾಳಿಸೋದು ಬಹಳ ಕಷ್ಟವಾಗುತ್ತದೆ. ಸಾಮಾಜಿಕ ಜಾಲತಾಣ (Social network) ದಲ್ಲಿ ಅವಳಿ ಮಕ್ಕಳು ತುಂಟಾಟ, ಡಾನ್ಸ್, ಕಿತ್ತಾಟಗಳ ವಿಡಿಯೋಗಳನ್ನು ನಾವು ನೋಡ್ತಿರುತ್ತೇವೆ. ಈಗ ಅಂತಹದ್ದೇ ವಿಡಿಯೋ ಒಂದು ಎಲ್ಲರ ಗಮನ ಸೆಳೆದಿದೆ. ಟ್ವಿಟರ್ (Twitter) ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. The Figen ಹೆಸರಿನ ಈ ಟ್ವಿಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ನಿರಂತರವಾಗಿ ಪರಸ್ಪರ ಕೂದಲನ್ನು ಎಳೆಯುತ್ತಿದ್ದ ಅವಳಿಗಳಿಗೆ ತಾಯಿ ಪರಿಹಾರ ಕಂಡುಕೊಂಡಿದ್ದಾರೆ ಎಂದು ಶೀರ್ಷಿಕೆ ಹಾಕಲಾಗಿದೆ.
undefined
RELATIONSHIP TIPS: ಪ್ರೇಮಿಯಿಂದ ದೂರವಾಗಿದ್ದೀರಾ? ನಿಮ್ಮ ಮಾಜಿ ಹೀಗೆಲ್ಲ ಸತಾಯಿಸ್ಬೋದು
ವಿಡಿಯೋದ ಆರಂಭದಲ್ಲಿ ಅವಳಿ ಹೆಣ್ಣು ಮಕ್ಕಳು ಕಿತ್ತಾಡೋದನ್ನು ನೀವು ನೋಡ್ಬಹುದು. ಪರಸ್ಪರ ಕೂದಲನ್ನು ಹಿಡಿದು ಮಕ್ಕಳು ಗಲಾಟೆ ಮಾಡ್ತಿದ್ದಾರೆ. ಕುಳಿತಲ್ಲಿ, ನಿಂತಲ್ಲಿ ಮಗುವೊಂದು ಇನ್ನೊಂದು ಮಗುವಿನ ಕೂದಲನ್ನು ಎಳೆಯುತ್ತಿದೆ. ತಾಯಿ, ಕೂದಲು ಜಗ್ಗೋದನ್ನು ಬಿಡಿಸಿ, ಬಿಡಿಸಿ ಸುಸ್ತಾಗೋದನ್ನು ಕೂಡ ನೀವು ವಿಡಿಯೋದಲ್ಲಿ ನೋಡಬಹುದು. ಸದಾ ಕೂದಲು ಎಳೆದು ಗಲಾಟೆ ಮಾಡ್ತಿದ್ದ ಮಕ್ಕಳಿಗೆ ಅಮ್ಮ ಒಂದು ಪರಿಹಾರ ಕಂಡುಕೊಂಡಿದ್ದಾರೆ. ವಿಡಿಯೋದ ಎರಡನೇ ಭಾಗದಲ್ಲಿ ಮಕ್ಕಳಿಬ್ಬರ ತಲೆ ಕೂದಲನ್ನು ಶೇವ್ ಮಾಡಿದ್ದಾರೆ. ಸಹೋದರಿ ಕೂದಲು ಎಳೆಯಲು ಮುಂದಾಗುವ ಮಗು, ಕೈಗೆ ಕೂದಲು ಸಿಗದಿರೋ ಕಾರಣ ಆಕೆ ತಲೆ ಮೇಲೆ ಕೈ ಆಡಿಸ್ತಾಳೆ. ಆಟವಾಡುವಾಗ, ಕುಳಿತಲ್ಲಿ, ನಿಂತಲ್ಲಿ ಆಕೆ ಕೂದಲು ಎಳೆಯಲು ಹೋಗಿ, ತಲೆ ಮೇಲೆ ಕೈ ಆಡಿಸ್ತಾ, ಕನ್ಫ್ಯೂಸ್ ಆಗಿರೋದನ್ನು ನೀವು ವಿಡಿಯೋದಲ್ಲಿ ನೋಡ್ಬಹುದು.
Pick me girl ಏನಿದು ಟ್ರೆಂಡ್ ತಿಳಿಯಿರಿ
ಬಳಕೆದಾರರನ್ನು ಸೆಳೆದಿದೆ ಈ ವಿಡಿಯೋ : ಟ್ವಿಟರ್ ನಲ್ಲಿ ವೈರಲ್ ಆದ ವಿಡಿಯೋ ಬಳಕೆದಾರರ ಗಮನ ಸೆಳೆದಿದೆ. ಕೂದಲು ಎಳೆದುಕೊಂಡು ಅಳ್ತಾ, ಗಲಾಟೆ ಮಾಡ್ತಿದ್ದವರು, ಕೂದಲು ಕತ್ತರಿಸಿದ ಮೇಲೆ ಸ್ವಲ್ಪ ಶಾಂತವಾಗಿರೋದನ್ನು ನೀವು ನೋಡ್ಬಹುದು. ತಾಯಿ ಐಡಿಯಾಕ್ಕೆ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿಯವರೆಗೆ ಈ ವಿಡಿಯೋವನ್ನು 2 ಲಕ್ಷ 79 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. 3 ಸಾವಿರಕ್ಕಿಂತ ಹೆಚ್ಚು ಲೈಕ್ಸ್ ಬಂದಿದ್ದು, 627ಕ್ಕೂ ಹೆಚ್ಚು ಬಾರಿ ಇದನ್ನು ರೀ ಟ್ವಿಟ್ ಮಾಡಲಾಗಿದೆ.
ಬಳಕೆದಾರರು ಒಂದೊಂದು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಕ್ಯಾಮರಾ ಬಂದ್ ಮಾಡಿ, ಮಕ್ಕಳನ್ನು ಸಂಭಾಳಿಸಿ ಅಂತಾ ಒಬ್ಬರು ಕಮೆಂಟ್ ಮಾಡಿದ್ದಾರೆ. ಅವಳಿ ಮಕ್ಕಳನ್ನು ಹೇಗೆ ನಿಭಾಯಿಸ್ತೀರಿ ಎನ್ನುವ ಬಗ್ಗೆ ನನಗೂ ಮಾಹಿತಿ ನೀಡಿ ಎಂದು ಇನ್ನೊಬ್ಬರು ಕೇಳಿಕೊಂಡಿದ್ದಾರೆ. ಈ ಬಗ್ಗೆ ಯೋಚನೆ ಮಾಡಿರಲಿಲ್ಲ, ಇದು ಬುದ್ಧಿವಂತಿಕೆ ಕೆಲಸವೆಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಸ್ಮಾರ್ಟ್ ಅಮ್ಮ ಅಂತಾ ಒಬ್ಬರು ಹೇಳಿದ್ರೆ ಒಳ್ಳೆ ನಿರ್ಧಾರ ಎಂದು ಇನ್ನೊಬ್ಬರು ಹೇಳಿದ್ದಾರೆ. ಇನ್ನು ಕೆಲವರು ಕೂದಲು ಕತ್ತರಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
Mother found a radical solution for twins who constantly pull each other's hair.pic.twitter.com/w4mWqYpndY
— The Figen (@TheFigen_)