ಕಾಲೇಜಿಗೆ ಹೋಗೋದಾಗಿ ಸುಳ್ಳಿ ಹೇಳಿ ಓಯೋ ರೂಮಿಗೆ ಹೋದ ಮಗಳು; ಬಾಯ್‌ಫ್ರೆಂಡ್ ಸಮೇತ ತಾಯಿಗೆ ಸಿಕ್ಕಿಬಿದ್ದ ವಿಡಿಯೋ ವೈರಲ್

Published : Apr 17, 2026, 04:30 PM IST
Oyo Room viral Video

ಸಾರಾಂಶ

ಕಾಲೇಜಿಗೆ ಹೋಗುವುದಾಗಿ ಮನೆಯಲ್ಲಿ ಸುಳ್ಳು ಹೇಳಿ, ತನ್ನ ಬಾಯ್‌ಫ್ರೆಂಡ್ ಜೊತೆ ಓಯೋ ರೂಮಿಗೆ ಹೋದ ಯುವತಿಯನ್ನು ಆಕೆಯ ತಾಯಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರಲ್ಲಿ ಚರ್ಚೆ ಶುರುವಾಗಿದೆ.

ಬೆಂಗಳೂರು (ಏ.17): ಅಮ್ಮಾ ನಾನು ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟ ಮಗಳು, ಮನೆಯವರ ಕಣ್ಣಿಗೆ ಮಣ್ಣೆರಚಿ ಬಾಯ್‌ಫ್ರೆಂಡ್ ಜೊತೆಗೆ ಓಯೋ ರೂಮಿಗೆ ಹೋಗಿದ್ದಾಳೆ. ಇದರ ಬೆನ್ನಲ್ಲಿಯೇ ಗ್ರಾಮಸ್ಥರ ನೆರವಿನಿಂದ ಮಗಳು ಓಯೋ ರೂಮಿನಲ್ಲಿರುವುದು ಗೊತ್ತಾದ ಕೂಡಲೇ, ಸಹಾಯಕ್ಕೆ ಒಂದಿಬ್ಬರನ್ನು ಕರೆದುಕೊಂಡು ಅಲ್ಲಿಗೆ ಹೋಗಿದ್ದಾರೆ. ಬಾಯ್‌ಫ್ರೆಂಡ್ ಜೊತೆಗೆ ಮಗಳು ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದು, ಮುಂದೇನಾಯ್ತು ಎಂಬುದನ್ನು ವೈರಲ್ ವಿಡಿಯೋದಲ್ಲಿ ನೋಡಿ..

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾವ ವಿಡಿಯೋಗಳು ವೈರಲ್ ಆಗುತ್ತವೆ ಮತ್ತು ಯಾಕೆ ಜನಪ್ರಿಯತೆ ಪಡೆಯುತ್ತವೆ ಎಂದು ಊಹಿಸುವುದು ಕಷ್ಟ. ಪ್ರತಿದಿನ ನೂರಾರು ವಿಡಿಯೋಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಅದರಲ್ಲಿ ಕೆಲವು ನಮ್ಮನ್ನು ನಗಿಸಿದರೆ, ಇನ್ನು ಕೆಲವು ಶಾಕ್ ನೀಡುತ್ತವೆ. ಸದ್ಯ ಇಂಟರ್ನೆಟ್‌ನಲ್ಲಿ ಇಂತಹದ್ದೇ ಒಂದು ವಿಡಿಯೋ ಸಖತ್ ಸದ್ದು ಮಾಡುತ್ತಿದ್ದು, ನೆಟ್ಟಿಗರ ನಡುವೆ ಪರ-ವಿರೋಧದ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹೋಟೆಲ್ ಕೊಠಡಿಯೊಂದರಲ್ಲಿ ತನ್ನ ಪ್ರಿಯಕರನೊಂದಿಗೆ ಇದ್ದ ಯುವತಿಯನ್ನು ಆಕೆಯ ತಾಯಿ ರೆಡ್ ಹ್ಯಾಂಡ್ ಆಗಿ ಹಿಡಿದಿರುವ ದೃಶ್ಯವಿದೆ. ಈ ಘಟನೆಯು ಇಂಟರ್ನೆಟ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಏನಿದು ವೈರಲ್ ವಿಡಿಯೋ ಕಥೆ?

ವಿಡಿಯೋದೊಂದಿಗೆ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಯುವತಿಯೊಬ್ಬಳು ಮನೆಯಲ್ಲಿ ಕಾಲೇಜಿಗೆ ಹೋಗುವುದಾಗಿ ಸುಳ್ಳು ಹೇಳಿ ತನ್ನ ಪ್ರೇಮಿಯೊಂದಿಗೆ ಹೋಟೆಲ್ ರೂಮ್‌ಗೆ ಹೋಗಿದ್ದಾಳೆ. ಆದರೆ ಮಗಳ ಮೇಲೆ ಮೊದಲೇ ಅನುಮಾನ ಹೊಂದಿದ್ದ ತಾಯಿ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲದೆ, ಸ್ಥಳೀಯ ಪೊಲೀಸರನ್ನೂ ಜೊತೆಗೆ ಕರೆದುಕೊಂಡು ಹೋಟೆಲ್ ರೂಮ್‌ಗೆ ನುಗ್ಗಿದ್ದಾರೆ. ಹೋಟೆಲ್ ಕೊಠಡಿಯ ಬಾಗಿಲು ತೆರೆಯುತ್ತಿದ್ದಂತೆಯೇ ತಾಯಿ ಮತ್ತು ಪೊಲೀಸರು ಒಳಗೆ ಪ್ರವೇಶಿಸಿದ್ದಾರೆ.

ರೂಮಿನೊಳಗೆ ಮಗಳು ಮತ್ತು ಆಕೆಯ ಪ್ರಿಯಕರ ಇರುವುದನ್ನು ಕಂಡ ತಾಯಿ ವಿಪರೀತ ಕೋಪಗೊಂಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ, ತಾಯಿ ತನ್ನ ಮಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ ಮತ್ತು ಆಕೆಗೆ ಕೆನ್ನೆಗೆ ಬಾರಿಸುತ್ತಾರೆ. ಅಷ್ಟಕ್ಕೇ ನಿಲ್ಲದೆ ಆಕೆಯ ಜೊತೆಗಿದ್ದ ಯುವಕನಿಗೂ ಧರ್ಮದೇಟು ನೀಡುತ್ತಾರೆ. ಹೋಟೆಲ್ ರೂಮ್‌ನಲ್ಲಿ ವಾತಾವರಣ ತೀರಾ ಉದ್ವಿಗ್ನಗೊಂಡಿರುವುದನ್ನು ನಾವು ಕಾಣಬಹುದು. ಅಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಕೋಪಗೊಂಡ ತಾಯಿಯನ್ನು ಸಮಾಧಾನಪಡಿಸಲು ಮತ್ತು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಾರೆ. ಈ ಇಡೀ ಹೈಡ್ರಾಮಾವನ್ನು ರೂಮಿನಲ್ಲಿದ್ದ ಯಾರೋ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಈಗ ಅದು 'ಎಕ್ಸ್' (ಟ್ವಿಟ್ಟರ್) ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

 

 

ನಿಜವೋ ಅಥವಾ ಸುಳ್ಳೋ? ನೆಟ್ಟಿಗರ ಚರ್ಚೆ:

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ಎರಡು ಬಣಗಳಾಗಿ ವಿಂಗಡಣೆಯಾಗಿದ್ದಾರೆ. ಕೆಲವರು ಇದು ನಿಜವಾದ ಘಟನೆ ಎಂದು ನಂಬಿ ಕಮೆಂಟ್ ಮಾಡುತ್ತಿದ್ದಾರೆ. ‘ಮನೆಯವರಿಗೆ ಸುಳ್ಳು ಹೇಳಿ ಇಂತಹ ಕೆಲಸ ಮಾಡಿದರೆ ತಕ್ಕ ಶಾಸ್ತಿಯೇ ಆಗುತ್ತದೆ’, 'ನಂಬಿಕೆಗೆ ದ್ರೋಹ ಬಗೆದರೆ ಕೊನೆಗೆ ಇಂತಹ ಮುಜುಗರದ ಪರಿಸ್ಥಿತಿ ಎದುರಿಸಬೇಕಾಗುತ್ತದೆ' ಎಂದು ಕೆಲವರು ಪೋಷಕರ ಶಿಸ್ತನ್ನು ಬೆಂಬಲಿಸಿದ್ದಾರೆ.

ಇದನ್ನೂ ಓದಿ: ಓಯೋ ರೂಮ್ ಬಾಗಿಲು ಹಾಕೊಳ್ಳೋದನ್ನ ಮರೆತ ಜೋಡಿ; ಮೆಟ್ರೋ ನಿಲ್ದಾಣದಿಂದ ಕೂಗಿ ಹೇಳಿದ ವ್ಯಕ್ತಿ

ಆದರೆ ಇನ್ನು ಬಹುಪಾಲು ಜನರು ಇದು ಕೇವಲ ಸೋಷಿಯಲ್ ಮೀಡಿಯಾ ಪ್ರಚಾರಕ್ಕಾಗಿ, ವ್ಯೂಸ್ ಹಾಗೂ ಸಬ್‌ಸ್ಕ್ರೈಬರ್ಸ್‌ಗಳನ್ನು ಗಿಟ್ಟಿಸಿಕೊಳ್ಳಲು ಮಾಡಿದ 'ಸ್ಕ್ರಿಪ್ಟೆಡ್' ಅಥವಾ ನಕಲಿ ವಿಡಿಯೋ ಎಂದು ವಾದಿಸುತ್ತಿದ್ದಾರೆ. 'ಇವರೆಲ್ಲರೂ ತುಂಬಾ ಚೆನ್ನಾಗಿ ನಟಿಸುತ್ತಿದ್ದಾರೆ, ಆಸ್ಕರ್ ಪ್ರಶಸ್ತಿ ಕೊಡಬೇಕು, 'ವ್ಯೂಸ್‌ಗಾಗಿ ಜನರನ್ನು ಮೂರ್ಖರನ್ನಾಗಿ ಮಾಡಲು ಇಂತಹ ಡ್ರಾಮಾಗಳನ್ನು ಸೃಷ್ಟಿಸುತ್ತಾರೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಯೂಟ್ಯೂಬ್‌ಗಾಗಿ ಇಂತಹ ನಕಲಿ ಜಗಳಗಳ ವಿಡಿಯೋಗಳನ್ನು ಸೃಷ್ಟಿಸುವುದು ಒಂದು ದಂಧೆಯಾಗಿ ಮಾರ್ಪಟ್ಟಿದೆ.

ಈ ವಿಡಿಯೋ ನಿಜವೋ ಅಥವಾ ಕೇವಲ ನಾಟಕವೋ ಎಂಬುದು ಇನ್ನು ಅಧಿಕೃತವಾಗಿ ದೃಢಪಟ್ಟಿಲ್ಲ. ಆದರೂ, ಸುಳ್ಳು ಮತ್ತು ನಂಬಿಕೆ ದ್ರೋಹದ ಮೇಲಣ ಈ ವಿಡಿಯೋ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿರುವುದಂತೂ ಸುಳ್ಳಲ್ಲ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Amruthadhaare ಭೂಮಿಕಾ ಧರಿಸಿದ ಕಾಲ್ಗೆಜ್ಜೆಗೀಗ ಭಾರಿ ಡಿಮಾಂಡ್​: ಪತಿ ತೊಡಿಸಿದರೆ ಆಗುವುದೇನು?
Chankaya Niti: ಪತ್ನಿಯಾದವಳು ಗಂಡನಿಗೆ ಈ ಮೂರು ವಾಕ್ಯವನ್ನು ಎಂದಿಗೂ ಹೇಳಲೇಬಾರದು