
ಸಾಮಾಜಿಕ ಜಾಲತಾಣ (Social Media)ಗಳು, ಜನರ ಜೀವನ (Life)ದ ಒಂದು ಭಾಗದಂತಾಗಿದೆ. ಇದ್ರಲ್ಲಿ ಹಂಚಿಕೊಳ್ಳದ ಸಂಗತಿಗಳಿಲ್ಲ. ಕೆಲವರು,ಜನರಿಗೆ ಮಾದರಿಯಾಗುವ ವಿಷ್ಯ ಹಂಚಿಕೊಂಡರೆ ಮತ್ತೆ ಕೆಲವರು ತಮ್ಮ ನೋವು,ಸಂತೋಷವನ್ನು ಹೇಳಿಕೊಳ್ತಾರೆ. ಮತ್ತೆ ಕೆಲವರು ತಮ್ಮ ಜೀವನದಲ್ಲಿ ನಡೆದ ಅತ್ಯಂತ ಗುಪ್ತ ವಿಷ್ಯವನ್ನೂ ಇದ್ರಲ್ಲಿ ಹೇಳಿ ನಿರಾಳರಾಗ್ತಾರೆ. ಪ್ರತಿಯೊಂದು ಸಂಬಂಧ(Relationship)ವೂ ಸೂಕ್ಷ್ಮವಾಗಿರುತ್ತದೆ. ವಿವಾಹೇತರ ಸಂಬಂಧ ಬೆಳೆಸುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಮಾಜಿ ಸಂಗಾತಿ ಮೇಲಿನ ಕೋಪಕ್ಕೆ,ನೋವಿಗೆ ಅಥವಾ ಇನ್ನಾವುದೋ ಕಾರಣಕ್ಕೆ ಪೂರ್ವಾಪರ ಆಲೋಚನೆ ಮಾಡದೆ ಇನ್ನೊಬ್ಬರ ಜೊತೆ ಸಂಬಂಧ ಬೆಳೆಸುವುದು ಸೂಕ್ತವಲ್ಲ. ಆ ಕ್ಷಣ ತಿಳಿಯದೆ ಕಳೆದು ಹೋಗಿರುತ್ತದೆ. ಆದ್ರೆ ಜೀವನ ಪರ್ಯಂತ ಆ ಕ್ಷಣ ನಿಮ್ಮನ್ನು ಕಾಡುತ್ತದೆ. ಆ ಕೆಟ್ಟ ಗಳಿಗೆ ಮರೆಯಲು ಸಾಧ್ಯವಾಗುವುದಿಲ್ಲ. ನೆರಳಿನಂತೆ ನಮ್ಮನ್ನು ಬೆನ್ನು ಹತ್ತುವುದಿದೆ. ಅನೇಕರು ಅದರಿಂದ ಹೊರ ಬರಲಾಗದೆ ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ. ಹಾಗಾಗಿ ಯಾವುದೇ ಅಪರಿಚಿತ ವ್ಯಕ್ತಿ ಜೊತೆ ಶಾರೀರಿಕ ಸಂಬಂಧ ಬೆಳೆಸುವ ಮುನ್ನ, ಸಾವಿರಾರು ಬಾರಿ ಯೋಚಿಸುವ ಅಗತ್ಯವಿದೆ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ಅನುಭವಿಸಿದ ಯಾತನೆಯನ್ನು ಎಲ್ಲರ ಮುಂದಿಟ್ಟಿದ್ದಾಳೆ. ಆಕೆ ಕಥೆ ಏನು ಎಂಬುದನ್ನು ನಾವಿಂದು ಹೇಳ್ತೆವೆ.
ಹಳೆ ಸಂಬಂಧ ಮುರಿದಾಗ ನಡೆದಿತ್ತು ತಪ್ಪು : ಸಾಮಾನ್ಯವಾಗಿ ಪ್ರೀತಿ ಮುರಿದು ಬಿದ್ದಾಗ ಜೀವನ ಸಾಕೆನ್ನಿಸುವುದು ಸಹಜ. ಅದರಿಂದ ಹೊರ ಬರಲು ನಾನಾ ಪ್ರಯತ್ನ ನಡೆಯುತ್ತದೆ. ಒಂಟಿಯಾಗಿದ್ದವರಿಗೆ ಒಬ್ಬರ ಹೆಗಲಿನ ಅವಶ್ಯಕತೆಯಿರುತ್ತದೆ. ಆ ಸಂದರ್ಭದಲ್ಲಿ ಹೆಚ್ಚು ನೆರವಾಗುವ,ಸಾಂತ್ವಾನ ಹೇಳುವ ವ್ಯಕ್ತಿ ಮೇಲೆ ಮನಸ್ಸು ವಾಲುತ್ತದೆ. ಇದೇ ತಪ್ಪನ್ನು ಮಹಿಳೆ ಮಾಡಿದ್ದಾಳೆ. ಆಕೆಗೆ ಆಗ 35 ವರ್ಷ ವಯಸ್ಸಾಗಿತ್ತಂತೆ. ಹಳೆ ಸಂಬಂಧ ಮುರಿದು ಬಿದ್ದ ನೋವಿನಲ್ಲಿದ್ದಳಂತೆ. ಹಿಂದಿನ ಸಂಬಂಧದಲ್ಲಿ ಸಿಕ್ಕ ಸುಳ್ಳು ಭರವಸೆಗಳು ಮತ್ತು ಕನಸುಗಳಿಂದ ಮನಸ್ಸು ಚೂರಾಗಿತ್ತಂತೆ. ಒಂದು ದಿನ ಆಕೆ ತನ್ನ ಸ್ನೇಹಿತನ ಮೂಲಕ ಬ್ರಿಯಾನ್ ಎಂಬ ವ್ಯಕ್ತಿಯನ್ನು ಭೇಟಿಯಾದಳಂತೆ. ಬ್ರಿಯಾನ್,ನನ್ನ ಮೇಲೆ ಆಸಕ್ತಿ ತೋರಿಸಿದ್ದ. ಇದ್ರಿಂದ ನಾನು ಎಲ್ಲವನ್ನೂ ಮರೆತು ಆತನ ಜೊತೆ ಒಂದಾದೆ ಎನ್ನುತ್ತಾಳೆ ಮಹಿಳೆ.
Parenting Tips : ಮಕ್ಕಳ ಜೀವನ ಹಾಳು ಮಾಡುತ್ತೆ ಪಾಲಕರ ಅತಿಯಾದ ಮುದ್ದು
ವಿವಾಹಿತನ ಜೊತೆ ಸೆಕ್ಸ್ : ಬ್ರಿಯಾನ್ ಗೆ ಮದುವೆಯಾಗಿದೆ.ಆತನಿಗೆ ಮಕ್ಕಳಿವೆ ಎಂಬುದು ಮಹಿಳೆಗೆ ಗೊತ್ತಿತ್ತಂತೆ. ಆದ್ರೆ ಆತನ ಪತ್ನಿ ಬಗ್ಗೆ ಆಲೋಚಿಸುವ ಮನಸ್ಥಿತಿಯಲ್ಲಿ ಈಕೆ ಇರಲಿಲ್ಲವಂತೆ. ನನ್ನ ನೋವು ನನಗೆ ಹೆಚ್ಚಾಗಿತ್ತು. ನನಗೊಂದು ಆಸರೆ ಬೇಕಿತ್ತು. ಭವಿಷ್ಯದ ಬಗ್ಗೆ ಆಲೋಚಿಸುವ ತಾಳ್ಮೆ ನನಗಿರಲಿಲ್ಲ ಎನ್ನುತ್ತಾಳೆ ಮಹಿಳೆ. ಬ್ರಿಯಾನ್ ಹಾಗೂ ಮಹಿಳೆ ಮಧ್ಯೆ ಒಂದು ತಿಂಗಳು ಸಂಬಂಧದಲ್ಲಿದ್ದರಂತೆ. ಅನೇಕ ಬಾರಿ ಆತನ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಳಂತೆ. ಪತ್ನಿಗೆ ಈ ವಿಷ್ಯ ಗೊತ್ತಾದ್ರೆ ಎಂಬ ಭಯ,ಬ್ರಿಯಾನ್ ಗೆ ಕಾಡಿತ್ತಂತೆ. ನೋಡಲು ಅಷ್ಟು ಸುಂದರವಾಗಿಲ್ಲದ ಬ್ರಿಯಾನ್,ಪ್ರಾಮಾಣಿಕನಾಗಿದ್ದ. ನನಗಿಂತ ಹಿರಿಯ ಬ್ರಿಯಾನ್,ನನಗೆ ಸಾಕಷ್ಟು ಉಡುಗೊರೆಗಳನ್ನು ನೀಡಿದ್ದ ಎನ್ನುತ್ತಾಳೆ ಮಹಿಳೆ.
ಇಬ್ಬರೂ ಒಪ್ಪಿ,ಒಂದು ತಿಂಗಳ ನಂತ್ರ ದೂರವಾಗಿದ್ದರಂತೆ. ಈ ವಿಷ್ಯವನ್ನು ಯಾರಿಗೂ ಹೇಳಬಾರದು ಎಂಬ ನಿರ್ಧಾರಕ್ಕೆ ಬಂದಿದ್ದರಂತೆ. ಆ ನಂತ್ರ ಒಮ್ಮೆಯೂ ಇಬ್ಬರು ಭೇಟಿಯಾಗಿರಲಿಲ್ಲವಂತೆ.
Relationship Tips : ಪತ್ನಿಗೆ ಲೈಂಗಿಕ ಸುಖ ಸಿಕ್ಕಿದೆಯೇ ಎಂದು ತಿಳಿಯುವುದು ಹೇಗೆ?
ಎರಡು ವರ್ಷಗಳ ನಂತ್ರ ಕಾಡಿದ ನೋವು : ಬ್ರಿಯಾನ್ ಮರೆತ ಮಹಿಳೆ ಹೊಸ ಸಂಬಂಧದಲ್ಲಿ ಖುಷಿಯಾಗಿದ್ದಳಂತೆ. ಎಂಗೇಜ್ಮೆಂಟ್ ಗೆ ಸಿದ್ಧತೆ ನಡೆದಿತ್ತಂತೆ. ಕಚೇರಿಯಲ್ಲೂ ಉನ್ನತ ಸ್ಥಾನದಲ್ಲಿದ್ದ ಮಹಿಳೆಗೆ ಶಾಕ್ ಸಿಕ್ಕಿತ್ತಂತೆ. ಎರಡು ವರ್ಷಗಳ ನಂತ್ರ ಕಚೇರಿ ಬಾಸ್ ಬದಲಾಗಿದ್ದರಂತೆ. ಹೊಸದಾಗಿ ಬಂದ ಬಾಸ್ ಬ್ರಿಯಾನ್. ಆತನನ್ನು ನೋಡಿ ಶಾಕ್ ಆದ ಮಹಿಳೆ,ಮತ್ತೆ ಹಳೆ ಸಂಬಂಧ ಬೆಳಕಿಗೆ ಬಂದರೆ ಎಂಬ ಭಯದಲ್ಲಿದ್ದಳಂತೆ. ಒಂದು ದಿನ ರೂಮಿಗೆ ಕರೆದ ಬ್ರಿಯಾನ್,ನಮ್ಮ ಸಂಬಂಧವನ್ನು ಕಚೇರಿಯಲ್ಲಿ ಹೇಳಬೇಡ ಎಂದಿದ್ದನಂತೆ. ಆತನನ್ನು ನೋಡಿದ ತಕ್ಷಣ ಹಳೆ ನೆನಪು ಕಾಡ್ತಿದ್ದ ಕಾರಣ ಮಹಿಳೆ ಮಹತ್ವದ ನಿರ್ಧಾರ ಕೈಗೊಂಡಳಂತೆ. ಕೆಲಸ ಬಿಟ್ಟಿದ್ದಳಂತೆ. ಇದಕ್ಕೆ ಬ್ರಿಯಾನ್ ಕಾರಣವೆಂದು ಆಕೆ ಆತನಿಗೆ ಹೇಳಿದ್ದಳಂತೆ. ಹಳೆಯ ತಪ್ಪು ನನ್ನನ್ನು ಜೀವನ ಪೂರ್ತಿ ಕಾಡಲಿದೆ ಎಂಬ ಸತ್ಯ ನನ್ನ ಅರಿವಿಗೆ ಬಂದಿದೆ ಎಂದು ಮಹಿಳೆ ಹೇಳಿದ್ದಾಳೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.