ಕಾರಿನ ಹಿಂಬದಿ ಸೀಟುಗಳಲ್ಲಿ ನಾಯಿಗಳನ್ನು ನೋಡುವುದು ಸಾಮಾನ್ಯ ದೃಶ್ಯ. ಆದರೆ, ಪಾಕಿಸ್ತಾನದ ರಸ್ತೆಯಲ್ಲಿ ಇನ್ನೊಂದು ಚೋದ್ಯ ಕಂಡುಬಂದಿದೆ. ಕಾರಿನಲ್ಲಿ ಕುಳಿತು ಸಾಗುತ್ತಿರುವ ಸಿಂಹದ ಮರಿಯನ್ನು ಅಂಬ್ರೀನ್ ಇಬ್ರಾಹಿಂ ಎನ್ನುವವರು ರೆಕಾರ್ಡ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಾರುಗಳ ಹಿಂಬದಿ ಸೀಟಿನಲ್ಲಿ ಪುಟ್ಟ ಪುಟ್ಟ ನಾಯಿಮರಿ ಅಥವಾ ದೊಡ್ಡ ದೈತ್ಯಾಕಾರದ ನಾಯಿಗಳು ಕುಳಿತುಕೊಂಡು ಪೇಟೆ ಬೀದಿ ಸುತ್ತುವುದು ಸಾಮಾನ್ಯ. ಗಾಳಿಗೆ ಮುಖ ಒಡ್ಡಿಕೊಂಡು ಎಂಜಾಯ್ ಮಾಡುವಂತೆ ನಾಯಿಗಳು ಕುಳಿತುಕೊಳ್ಳುವ ನೋಟ ಬಹಳಷ್ಟು ಬಾರಿ ಕಾಣಸಿಗುತ್ತದೆ. ಕೆಲವೊಮ್ಮೆ, ನಾಯಿಯಂತಹ ಸಾಕುಪ್ರಾಣಿಗಳನ್ನು ಇಟ್ಟುಕೊಂಡಿರುವವರು ತಮ್ಮೊಂದಿಗೇ ಅವುಗಳನ್ನು ಅನಿವಾರ್ಯವಾಗಿಯೂ ಕರೆದೊಯ್ಯಬೇಕಾಗುತ್ತದೆ. ಆದರೆ, ಎಲ್ಲ ಸಾಕುಪ್ರಾಣಿಗಳನ್ನು ಕರೆದೊಯ್ಯಲು ಸಾಧ್ಯವಾಗುವುದಿಲ್ಲ. ನಾಯಿ ಮಾತ್ರ ಇದಕ್ಕೆ ಅಪವಾದ. ಅದು ತನ್ನ ಮನೆಯ ಜನರೊಂದಿಗೆ ಎಲ್ಲ ಕಡೆಯೂ ಓಡಾಡುತ್ತದೆ. ಅದೇ ಬೆಕ್ಕು ಹಾಗಲ್ಲ. ಸರಿಯಾಗಿ ಊಟ, ತಿಂಡಿಗೆ ಹಾಜರಾಗುತ್ತದೆ, ಬೇರೆ ಸಮಯ ಎಲ್ಲಿರುತ್ತದೆಯೋ ಗೊತ್ತೇ ಆಗುವುದಿಲ್ಲ. ಕೆಲವು ಬೆಕ್ಕುಗಳು ಮನೆ ಜನರ ಬಳಿಯೇ ಮಲಗಿರುವುದನ್ನು ಸಹ ಕಾಣಬಹುದು. ಇವೆಲ್ಲ ಬೆಕ್ಕು, ನಾಯಿಗಳ ಕತೆಯಾಯ್ತು. ಪುಟ್ಟ ಪುಟ್ಟ ಚಿರತೆ ಮರಿಗಳನ್ನೋ, ಹುಲಿ ಮರಿಗಳನ್ನೋ, ಸಿಂಹದ ಮರಿಗಳನ್ನೋ ನೋಡಿದಾಗ ನಾವೂ ಸಹ ಅವುಗಳನ್ನು ಸಾಕಿದರೆ ಹೇಗಿರುತ್ತದೆ ಎಂದುಕೊಳ್ಳುತ್ತೇವೆ.
ಆದರೆ, ಅದು ಹೇಗೂ ಸಾಧ್ಯವಾಗದ ಮಾತು ಎಂದು ಸುಮ್ಮನಾಗುತ್ತೇವೆ. ಆದರೆ, ಸಿಂಹವನ್ನೂ ಸಾಕುಪ್ರಾಣಿಯಂತೆ ಸಾಕಿರುವ ದೃಶ್ಯವೊಂದು ಇದೀಗ ದೊರೆತಿದೆ. ಪಾಕಿಸ್ತಾನದಲ್ಲಿ ಈ ಅಪರೂಪದ ಸನ್ನಿವೇಶ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಂಹದ ಮರಿಯೊಂದು ಕಾರಿನ ಹಿಂಬದಿ ಸೀಟಿನಲ್ಲಿ ತನ್ನ ಮನೆಯ ಬಾಲಕನೊಂದಿಗೆ ಕುಳಿತು ಸಾಗುತ್ತಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದೆ.
ಗಾಳಿಗೆ ಮುಖವೊಡ್ಡಿ ತಣ್ಣಗೆ, ಆರಾಮಾಗಿ ಕುಳಿತಿರುವ ಸಿಂಹದ ಮರಿಯ (Lion Cub) ದೃಶ್ಯ ಯಾವುದೋ ರಸ್ತೆಯಲ್ಲಿ (Road) ಕಂಡುಬರುತ್ತದೆ. ಬಳಿಕ, ಸಿಗ್ನಲ್ ನಲ್ಲೂ ಅಂಬ್ರೀನ್ ಇಬ್ರಾಹಿಂ ಎಂಬುವವರ ಕ್ಯಾಮರಾ (Camera) ಕಣ್ಣಿಗೆ ದೊರೆತಿದೆ. ಕೆಂಪು ದೀಪದ ಬಳಿ ನಿಂತಿದ್ದಾಗ ಪಕ್ಕದ ಕಾರಿನವರು ವೀಡಿಯೋ (Video) ರೆಕಾರ್ಡ್ ಮಾಡಿದ್ದಾರೆ. ಸಿಂಹದ ಮರಿಯ ಪಕ್ಕದಲ್ಲೇ ಬಾಲಕನೊಬ್ಬ ಕುಳಿತಿದ್ದಾನೆ. ಆತನ ಬಳಿ, ಕಾರಿನಲ್ಲಿರುವ ಜನ “ಇದರ ಹೆಸರೇನು?’ ಎಂದು ಪ್ರಶ್ನಿಸುತ್ತಾರೆ. ಆಗ ಆತ ನೀಡುವ ಉತ್ತರ ಕೇಳಿದರೆ ಕೆಲ ವರ್ಷಗಳ ಹಿಂದೆ ಜಗತ್ತಿನಾದ್ಯಂತ ಭಾರೀ ಹಿಟ್ ಆಗಿದ್ದ “ಲಯನ್ ಕಿಂಗ್’ (Lion King) ಸಿನಿಮಾ ತಕ್ಷಣ ನೆನಪಿಗೆ ಬರುತ್ತದೆ. ಏಕೆಂದರೆ, ಪಾಕಿಸ್ತಾನದ ಈ ಸಿಂಹದ ಮರಿಯ ಹೆಸರು ಮುಫಾಸಾ (Mufasa). ಅದರ ವಯಸ್ಸು ಎಂಟು ತಿಂಗಳು (8 Month).
ಹಕೂನ ಮಟಾಟಾ ಹಾಡು
“ಲಯನ್ ಕಿಂಗ್’ ಸಿನಿಮಾದಲ್ಲಿ ಸಿಂಬ ಎನ್ನುವ ಸಿಂಹದ ಮರಿಯನ್ನು ತೋರಿಸಲಾಗಿತ್ತು. ಸಿಂಬನ ತಂದೆ ಮುಫಾಸಾ. ತಂದೆ ಮುಫಾಸಾ ಮಗ ಸಿಂಬನಿಗೆ ಜೀವನಕ್ಕೆ (Life) ಸಂಬಂಧಿಸಿದ ಅನೇಕ ಪಾಠಗಳನ್ನು ಹೇಳಿಕೊಡುವುದು ಅತ್ಯಂತ ಮನೋಜ್ಞವಾಗಿ ಮೂಡಿಬಂದಿದೆ.
ಬಾಯಲ್ಲಿ ನೀರೂರಿಸೋ ಚಿಕನ್ ಕರಿ, ಫಿಶ್ ಫ್ರೈ; ಟ್ರಕ್ ಡ್ರೈವರ್ ಆಹಾರ ತಯಾರಿಸೋ ವೀಡಿಯೋ ಸಖತ್ ವೈರಲ್
ಅತ್ಯಂತ ಕುತೂಹಲಕರವಾಗಿ ಸಾಗುವ ಸಿನಿಮಾ, ಮಗ ಸಿಂಬ ತನ್ನ ತಂದೆ ಮುಫಾಸಾನ ಸ್ಥಾನವನ್ನು ಅಲಂಕರಿಸುವುದರೊಂದಿಗೆ ಅಂತ್ಯವಾಗುತ್ತದೆ. ಈ ಚಿತ್ರದ ಪ್ರಖ್ಯಾತ ಹಾಡು “ಹಕೂನ ಮಟಾಟಾ, ಇಟ್ ಮೀನ್ಸ್ ನೋ ವರೀಸ್’. ಮಕ್ಕಳೂ (Children) ಸೇರಿದಂತೆ ಎಲ್ಲ ನೋಡುಗರ ಮನ ಗೆದ್ದಿದ್ದ ಹಾಡು (Song) ಇದಾಗಿದೆ. ಈ ಹಾಡನ್ನೇ ಪಾಕಿಸ್ತಾನದಲ್ಲಿ (Pakistan) ಕಂಡುಬಂದಿರುವ ಮುಫಾಸಾ ಸಿಂಹದ ಮರಿಯ ವೀಡಿಯೋಕ್ಕೂ ನೀಡಿರುವುದು ಖುಷಿ ನೀಡುತ್ತದೆ.
ಪ್ರಾಣಿ ತನ್ನತನ ಮರೆಯೋದು ಖೇದ
ಪೋಸ್ಟ್ ಮಾಡಿದ ಕೆಲವೇ ಸಮಯದಲ್ಲಿ ಇದು 2 ಲಕ್ಷದ 40 ಸಾವಿರಕ್ಕೂ ಅಧಿಕ ವೀಕ್ಷಣೆಗೆ ಒಳಗಾಗಿದೆ. ಇದಕ್ಕೆ “ಮೀಟ್ ಮುಫಾಸಾ ಎಟ್ ರೆಡ್ ಲೈಟ್ ಸಿಗ್ನಲ್’ ಎಂದು ನೀಡಲಾಗಿದ್ದು, ಸಿಕ್ಕಾಪಟ್ಟೆ ಜನ ಲೈಕ್ (Like) ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಹಲವು ಕಾಮೆಂಟ್ ಗಳು “ಇದು ಸಾಕುಪ್ರಾಣಿಯಲ್ಲ, ಬಿಟ್ಟುಬಿಡಿ’ ಎನ್ನುವ ಸಲಹೆಯನ್ನೂ ಹೊತ್ತಿವೆ.
Parle-G Biscuit ಪ್ಯಾಕೆಟ್‌ನಲ್ಲಿದ್ದ ಮುದ್ದು ಮಗುವಿನ ಫೋಟೋ ಚೇಂಜ್, ಇದ್ಯಾವುದಪ್ಪಾ ಹೊಸ ಮುಖ?
ಒಬ್ಬರು, “ಕಾಡು ಪ್ರಾಣಿಗಳು (Wild Animals) ತಮ್ಮ ಸಹಜತೆ ಮರೆಯುವುದು ಖೇದಕರ. ಇದು ಮನುಷ್ಯ ಯೋಚಿಸುವುದನ್ನು ಮರೆತಂತೆ’ ಎಂದು ಹೇಳಿದ್ದಾರೆ. ಬಹಳಷ್ಟು ಜನ “ಇದು ಹೇಗೆ ಸಾಧ್ಯ? ಹೇಗೆ ಇದಕ್ಕೆ ಅನುಮತಿ ನೀಡಲಾಗಿದೆ?’ ಎಂದು ಪ್ರಶ್ನೆ ಕೇಳುತ್ತಿದ್ದಾರೆ.