ಲಿವ್ ಇನ್ ಸಂಗಾತಿ ಜೊತೆ ಸೆಕ್ಸ್‌ಗೆ ಪೆರೋಲ್ ಕೇಳಿದ ಮೂರು ಮಕ್ಕಳ ಕೈದಿ!

By Roopa Hegde  |  First Published May 10, 2024, 3:42 PM IST

ದೆಹಲಿ ಹೈಕೋರ್ಟ್ (Delhi Highcourt)ನಲ್ಲಿ ಪೆರೋಲ್ ಪ್ರಕರಣವೊಂದು ಗಮನ ಸೆಳೆದಿದೆ. ಮೂರು ಮಕ್ಕಳಿದ್ದು, ಪತ್ನಿ ಜೀವಂತವಾಗಿದ್ರೂ ಲಿವ್ ಇನ್ ಸಂಗಾತಿ ಹೊಂದಿರುವ ಕೈದಿಯೊಬ್ಬ ವಿಚಿತ್ರ ಕಾರಣಕ್ಕೆ ಪೆರೋಲ್ ಕೇಳಿದ್ದಾನೆ. ಆತನ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
 


ಕೈದಿಗೆ ಕೋರ್ಟ್ ನೀಡುವ ಷರತ್ತುಬದ್ಧ ಬಿಡುಗಡೆಯನ್ನು ಪೆರೋಲ್ ಎಂದು ಕರೆಯಲಾಗುತ್ತದೆ. ಕೈದಿಗೆ ಕೋರ್ಟ್ ಕೆಲವೊಂದು ಷರತ್ತು ವಿಧಿಸುತ್ತದೆ. ಜೈಲಿನಿಂದ ವ್ಯಕ್ತಿ ಹೊರಗೆ ಬಂದ್ರೂ ಅದನ್ನು ಪಾಲಿಸಬೇಕು. ಒಂದ್ವೇಳೆ ಅದನ್ನು ಆತ ಮರೆತಲ್ಲಿ ಇಲ್ಲವೆ ನಿಯಮ ಉಲ್ಲಂಘನೆ ಮಾಡಿದಲ್ಲಿ ಕೋರ್ಟ್ ಆತನನ್ನು ಮತ್ತೆ ಕಂಬಿ ಹಿಂದೆ ಕಳುಹಿಸುತ್ತದೆ. ಕೈದಿಗಳು ತಮಗೆ ಪೆರೋಲ್ ನೀಡುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸುತ್ತಿರುತ್ತಾರೆ. ದೆಹಲಿ ಹೈಕೋರ್ಟ್ ಮುಂದೆ ಬಂದ ಪೆರೋಲ್ ಪ್ರಕರಣವೊಂದು ಎಲ್ಲರ ಗಮನ ಸೆಳೆದಿದೆ.  ಲಿವ್ ಇನ್ ಸಂಗಾತಿ ಜೊತೆ ಶಾರೀರಿಕ ಸಂಬಂಧ (Physical Relationship) ಬೆಳೆಸಿ, ಮಕ್ಕಳನ್ನು ಪಡೆಯಲು ಕೈದಿ ಪೆರೋಲ್ ಕೇಳಿದ್ದಾನೆ.

ಪೆರೋಲ್ (Parole) ಗೆ ಅರ್ಜಿ ಸಲ್ಲಿಸಿರುವ ಕೈದಿ (Prisoner) ಸೋನು ಸೋಂಕರ್, ಜೀವಾವಧಿ (Lifetime) ಶಿಕ್ಷೆಗೆ ಒಳಗಾಗಿದ್ದಾನೆ. ಆತನಿಗೆ ಮದುವೆಯಾಗಿದೆ. ಮೊದಲ ಪತ್ನಿಗೆ ಮೂವರು ಮಕ್ಕಳಿವೆ. ಅರ್ಜಿ ಸಲ್ಲಿಸುವ ಆರಂಭದಲ್ಲಿ ಸೋನು ಸೋಂಕರ್, ತನಗೆ ಮದುವೆಯಾಗಿ ಮಕ್ಕಳಿವೆ ಎಂಬ ವಿಷ್ಯವನ್ನು ಹೇಳಿರಲಿಲ್ಲ. ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಲಿವ್ ಇನ್ ನಲ್ಲಿದ್ದ ಸೋನು ಸೋಂಕರ್, ಪೆರೋಲ್ ಪಡೆದು ಆಕೆ ಜೊತೆ ಜೀವನ ನಡೆಸುವ ಆಸೆ ಹೊಂದಿದ್ದ. ಆಕೆಯಿಂದ ಮಕ್ಕಳನ್ನು ಪಡೆಯುವ ಬಯಕೆಯಲ್ಲಿ ಪೆರೋಲ್ ಗೆ ಅರ್ಜಿ ಸಲ್ಲಿಸಿದ್ದ. ಯುವತಿ ಕೂಡ ಕಾನೂನು ರೀತಿಯಲ್ಲಿ ತಾನು ಆತನ ಪತ್ನಿಯಲ್ಲ ಎಂಬ ವಿಷ್ಯವನ್ನು ಕೋರ್ಟ್ ಮುಂದೆ ಹೇಳಿರಲಿಲ್ಲ.

Latest Videos

undefined

ವಿಮಾನದಲ್ಲಿ ಲಗೇಜ್ ಇಡೋ ಕಂಪಾರ್ಟ್‌ಮೆಂಟ್‌ನಲ್ಲಿ ಮಲಗಿದ್ದ ಮಹಿಳೆ, ಪ್ರಯಾಣಿಕರಿಗೆ ಶಾಕ್!

ಪೆರೋಲ್ ಅರ್ಜಿ ವಿಚಾರಣೆ ನಡೆಸಿ ಕೋರ್ಟ್ ಹೇಳಿದ್ದೇನು? : ಕೈದಿ ಪೆರೋಲ್ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಭಾರತೀಯ ಕಾನೂನು ಮತ್ತು ಜೈಲು ನಿಯಮಗಳು ಕೈದಿಗಳಿಗೆ ವೈವಾಹಿಕ ಸಂಬಂಧಗಳನ್ನು ಹೊಂದಲು ಪೆರೋಲ್ ನೀಡಲು ಅನುಮತಿಸುವುದಿಲ್ಲ ಎಂದು ದೆಹಲಿ ಕೋರ್ಟ್ ಹೇಳಿದೆ. ಕಾನೂನು ರೀತಿಯಲ್ಲಿ ಮದುವೆಯಾದ ಪತ್ನಿ ಜೊತೆ ಸಂಬಂಧ ಬೆಳೆಸಲು ಪೆರೋಲ್ ಸಿಗೋದಿಲ್ಲ ಅಂದ್ಮೇಲೆ ಇನ್ನು ಲಿವ್ ಇನ್ ಸಂಗಾತಿಗೆ ಸಾಧ್ಯವೇ ಇಲ್ಲ ಎಂದಿದೆ. ಜೈಲಿನಲ್ಲಿರು ಕೈದಿ, ಲಿವ್ ಇನ್ ಸಂಗಾತಿ ಜೊತೆ ಮಕ್ಕಳನ್ನು ಪಡೆಯುವ ಅಧಿಕಾರ ಕಳೆದುಕೊಳ್ತಾನೆ ಎಂದು ಕೋರ್ಟ್ ಹೇಳಿದೆ. ಈ ಆಧಾರದ ಮೇಲೆ ಕೈದಿಗೆ ಪೆರೋಲ್ ನೀಡಲು ಸಾಧ್ಯವೇ ಇಲ್ಲ ಎಂದು ನ್ಯಾಯಮೂರ್ತಿ ಸ್ವರ್ಣ್ ಕಾಂತ ಶರ್ಮಾ ಹೇಳಿದ್ದಾರೆ.

ಈಗಾಗಲೇ ಮದುವೆಯಾಗಿದ್ದು, ಮೂರು ಮಕ್ಕಳನ್ನು ಹೊಂದಿರುವ ವ್ಯಕ್ತಿ, ಮೊದಲ ಪತ್ನಿಗೆ ವಿಚ್ಛೇದನ ನೀಡದೆ, ಲಿವ್ ಇನ್ ಸಂಗಾತಿಯಿಂದ ಮಕ್ಕಳನ್ನು ಪಡೆಯುವ ಮೂಲಭೂತ ಹಕ್ಕನ್ನು ಹೊಂದಿರೋದಿಲ್ಲ. ಇಂಥ ಕಾರಣಕ್ಕೆ ಕೈದಿಗೆ ಪೆರೋಲ್ ನೀಡಿದ್ರೆ ಕೋರ್ಟ್ ಮುಂದೆ ಪೆರೋಲ್ ಅರ್ಜಿಗಳೇ ತುಂಬಿರುತ್ತವೆ ಎಂದು ಕೋರ್ಟ್ ಹೇಳಿದೆ. ಕೈದಿಗಳು ವಿವಾಹಿತ ಸಂಗಾತಿ ಜೊತೆ ತಾವೂ ಲಿವ್ ಇನ್ ಸಂಗಾತಿ ಹೊಂದಿದ್ದೇವೆ ಎಂಬ ಕಾರಣ ನೀಡಿ ಪೆರೋಲ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಕೋರ್ಟ್ ಹೇಳಿದೆ. ಸೋನು ಸೋಂಕರ್ ಗೆ ಕೋರ್ಟ್ ಹಿಂದೆ ಪೆರೋಲ್ ನೀಡಿತ್ತು. ಈ ಸಮಯದಲ್ಲಿ ಆತ ಇನ್ನೊಬ್ಬ ಮಹಿಳೆ ಜೊತೆ ವಾಸ ಶುರುಮಾಡಿದ್ದ ಎಂಬುದನ್ನು ಕೋರ್ಟ್ ಪತ್ತೆ ಮಾಡಿದೆ. 

ಕ್ರಿಕೆಟ್​ ಬಾಲ್​ ಡ್ರೆಸ್​ನಲ್ಲಿ ನಟಿ ಜಾಹ್ನವಿ ಕಪೂರ್​ ಮಿಂಚಿದ್ರೆ ನೆಟ್ಟಿಗರು ಈ ರೀತಿಯೆಲ್ಲಾ ಹೇಳೋದಾ?

ಯಾವ ರೀತಿ ಸಿಗುತ್ತೆ ಪೆರೋಲ್ ?: ಪೆರೋಲ್ ನಲ್ಲಿ ಎರಡು ವಿಧವಿದೆ. ಒಂದು ಕಸ್ಟಡಿ ಪೆರೋಲ್ (Custody Perole). ಇನ್ನೊಂದು ನಿಯಮಿತ ಪೆರೋಲ್ (Regualr Perole). ಕಸ್ಟಡಿ ಪೆರೋಲ್ ನಲ್ಲಿ ಆರೋಪಿ ಪೊಲೀಸ್ ಕಸ್ಟಡಿಯಲ್ಲಿ ಇರುತ್ತಾನೆ. ಕುಟುಂಬದ ಬಂಧುಗಳ ಸಾವು ಅಥವಾ ಕುಟುಂಬದ ಮದುವೆಯಲ್ಲಿ ಈ ಪೆರೋಲ್ ಸಿಗುತ್ತದೆ. ಆರೋಪಿಗೆ ಗರಿಷ್ಠ 6 ಗಂಟೆಗಳ ಕಾಲ ಪೆರೋಲ್ ಸಿಗುತ್ತದೆ. ಇನ್ನು ನಿಯಮತಿ ಪೆರೋಲ್ ನಲ್ಲಿ ಶಿಕ್ಷೆಗೆ ಒಳಗಾದ ಅಪರಾಧಿ ನಿಯಮಿತ ಪೆರೋಲ್‌ಗೆ ಅರ್ಜಿ ಸಲ್ಲಿಸಬಹುದು, ಅಪರಾಧಿಯು ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿರಬೇಕು. ಅಪರಾಧಿಯು ಉತ್ತಮ ನಡತೆಯನ್ನು ಹೊಂದಿರಬೇಕು , ಮೊದಲು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರೆ ಮತ್ತು ಬಿಡುಗಡೆಯಾದ ನಂತರ ಯಾವುದೇ ಅಪರಾಧವನ್ನು ಮಾಡಿಲ್ಲದಿದ್ದರೆ ಕೆಲವು ವಿಶೇಷ ಸಂದರ್ಭಗಳಲ್ಲಿ ಕನಿಷ್ಠ ಒಂದು ತಿಂಗಳ ಕಾಲ ಪೆರೋಲ್ ಸಿಗುತ್ತದೆ. ಆಪ್ತರ ಸಾವು, ಮದುವೆ, ಪತ್ನಿ ಗರ್ಭಿಣಿಯಾದ ಸಮಯದಲ್ಲಿ ಇದು ಸಿಗುತ್ತದೆ. 
 

click me!