
ವಿವಾಹಿತ (Married) ರ ಮಧ್ಯೆ ಭಿನ್ನಾಭಿಪ್ರಾಯಗಳು ಬರುವುದು ಸಾಮಾನ್ಯ. ದಂಪತಿ (Couple) ಪರಸ್ಪರ ಹೊಂದಿಕೊಂಡು ಹೋಗುವುದು ಅನಿವಾರ್ಯವಾಗುತ್ತದೆ. ನಾವು ಬಯಸಿದ್ದೆಲ್ಲ ನಮಗೆ ಸಿಗಲು ಸಾಧ್ಯವಿಲ್ಲ. ಈ ಸತ್ಯ (Truth) ವನ್ನು ಅರಿತು ನಡೆಯಬೇಕಾಗುತ್ತದೆ. ಅನೇಕ ಬಾರಿ ಮನಸ್ಸು ಐಷಾರಾಮಿ ಬದುಕನ್ನು ಬಯಸುತ್ತದೆ. ಅನೇಕ ಮಹಿಳೆಯರು ಐಷಾರಾಮಿ ಜೀವನಕ್ಕೆ ಹಾತೊರೆಯುತ್ತಾರೆ. ಆದ್ರೆ ಪತಿಯ ಆರ್ಥಿಕ ಸ್ಥಿತಿ ಬಗ್ಗೆ ಅರಿಯಲು ಹೋಗುವುದಿಲ್ಲ. ಪತಿ ತನಗಿಷ್ಟದ ವಸ್ತುವನ್ನು ಕೊಡಿಸಿಲ್ಲ ಎಂಬ ಕಾರಣವನ್ನಿಟ್ಟುಕೊಂಡು ದ್ವೇಷ ಸಾಧಿಸಲು ಶುರು ಮಾಡ್ತಾರೆ. ಗಲಾಟೆ, ಕಿರಿಕಿರಿ ನೀಡ್ತಾರೆ. ಕಷ್ಟಪಟ್ಟು ಮನೆ ಸಂಭಾಳಿಸಿಕೊಂಡು ಹೋಗುವ ಪತಿಗೆ, ಪತ್ನಿಯ ವರ್ತನೆ ವಿಪರೀತ ಹಿಂಸೆ ನೀಡುತ್ತದೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಬಗ್ಗೆ ಹೇಳಿಕೊಂಡ ವ್ಯಕ್ತಿಯ ಜೀವನದಲ್ಲೂ ಇದೆ ಆಗಿದೆ. ಪತ್ನಿ ಜೊತೆ ಮಲಗಲು ಆತ ಭಯ ಪಡ್ತಿದ್ದಾನೆ. ಪತ್ನಿಯ ಕೋಪ, ತಾತ್ಸಾರ, ದ್ವೇಷ ಆತನಿಗೆ ನುಂಗಲಾಗದ ತುಪ್ಪವಾಗಿದೆ. ಅಷ್ಟಕ್ಕೂ ಆತ ಪತ್ನಿ ಜೊತೆ ಮಲಗಲು ಏಕೆ ಹೆದರುತ್ತಿದ್ದಾನೆ ಎಂಬುದನ್ನು ನಾವಿಂದು ಹೇಳ್ತೇವೆ.
ಆತನ ವಿವಾಹಿತ ವ್ಯಕ್ತಿ. ಮದುವೆಯಾಗಿ ತುಂಬಾ ಸಮಯ ಕಳೆದಿಲ್ಲ. ಈಗ್ಲೇ ಆತನ ದಾಂಪತ್ಯದಲ್ಲಿ ಕತ್ತಲು ಮೂಡಿದೆ. ಪತ್ನಿ ಆತನನ್ನು ದ್ವೇಷಿಸುತ್ತಾಳಂತೆ. ಇದೇ ಕಾರಣಕ್ಕೆ ಅವಳ ಜೊತೆ ಮಲಗಲು ಹೆದರುತ್ತಿದ್ದಾನೆ ವ್ಯಕ್ತಿ. ಅವಳಿಗೆ ಐಷಾರಾಮಿ ಬದುಕನ್ನು ನೀಡಲು ಸಾಧ್ಯವಾಗದೆ ಅವಳ ಬಾಳನ್ನು ನಾನು ಹಾಳು ಮಾಡಿದ್ದೇನೆ ಎಂದು ಆಕೆ ಭಾವಿಸಿದ್ದಾಳೆ ಎನ್ನುತ್ತಾನೆ ವ್ಯಕ್ತಿ. ಪ್ರತಿ ದಿನ ಪತಿಯನ್ನು ರೇಗಿಸುವುದು ಮಾತ್ರವಲ್ಲದೆ ದಿನವಿಡೀ ಪತಿಯನ್ನು ಹೀಯಾಳಿಸುತ್ತಾಳಂತೆ. ಮಧ್ಯ ರಾತ್ರಿ ಫೋನ್ ಕರೆಗಳು ಬರುತ್ತವೆ ಎಂಬ ನೆಪ ಹೇಳಿ ಆತ ಕೋಣೆ ಬದಲಿಸಿದ್ದಾನಂತೆ. ಆಕೆ ನನ್ನನ್ನು ದ್ವೇಷಿಸುವ ಕಾರಣ ಆಕೆ ಜೊತೆ ಮಲಗಲು ನನಗೆ ಆಗ್ತಿಲ್ಲ ಎನ್ನುತ್ತಾನೆ ಆತ.
ಆದ್ರೆ ಪತ್ನಿಯ ಈ ದ್ವೇಷ ತಪ್ಪಲ್ಲ ಎನ್ನುತ್ತಾನೆ ಪತಿ. ಅವಳು ಕೇಳಿದ್ದನ್ನು ನೀಡಲು ನನ್ನಿಂದ ಸಾಧ್ಯವಾಗ್ತಿಲ್ಲ. ದಿನವೂ ನನ್ನ ಬದುಕನ್ನು ನಾನೇ ಶಪಿಸುತ್ತೇನೆ. ಅವಳ ಜೊತೆಯಲ್ಲಿದ್ದಾಗ ನನಗೆ ಒಂದು ವಿಚಿತ್ರ ಭಯ ಕಾಡುತ್ತದೆ ಎನ್ನುತ್ತಾನೆ ಪತಿ. ಮುಂದೆ ಏನ್ಮಾಡ್ಬೇಕು ಎಂಬುದು ಗೊತ್ತಾಗ್ತಿಲ್ಲ ಎಂದಿದ್ದಾನೆ.
ತಜ್ಞರ ಸಲಹೆ : ಸಂಗಾತಿ ದ್ವೇಷಿಸ್ತಾರೆ ಎಂಬುದು ಗೊತ್ತಾದ್ರೆ ಅವರ ಜೊತೆಗಿರುವುದು ಕಷ್ಟ. ಐಷಾರಾಮಿ ಜೀವನದ ಕೊರತೆಯಿಂದಾಗಿ ಹೆಂಡತಿ ಪ್ರೀತಿಸುತ್ತಿಲ್ಲ ಎಂಬ ಕಾರಣ ನೋವುಂಟು ಮಾಡುತ್ತದೆ ಎನ್ನುತ್ತಾರೆ ತಜ್ಞರು.
ಮಕ್ಕಳ ಜೊತೆ ಈ ರೀತಿ ನಡೆದುಕೊಂಡ್ರೆ ಮಾನಸಿಕವಾಗಿ ಕುಗ್ಗಿ ಹೋಗ್ತಾರೆ !
ಮಾತುಕತೆ ಅನಿವಾರ್ಯ : ಪತ್ನಿಯನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ ಎಂಬುದೇ ಪತ್ನಿಯ ಅಸಮಾಧಾನಕ್ಕೆ ಕಾರಣವಾಗಿದೆ. ಇದ್ರಿಂದಲೇ ಆಕೆ ನಡವಳಿಕೆ ಬದಲಾಗಿದೆ. ಮದುವೆಯಾದ್ಮೇಲೆ ಇಬ್ಬರೂ ಬುದ್ಧಿವಂತಿಕೆಯಿಂದ ಸಂಬಂಧವನ್ನು ಕಾಪಾಡಿಕೊಂಡು ಹೋಗ್ಬೇಕು. ಹೆಂಡತಿ ಕೋಪಗೊಂಡಾಗ ಪ್ರತ್ಯೇಕ ಕೋಣೆಯಲ್ಲಿ ಮಲಗುವುದು ಪರಿಹಾರವಲ್ಲ. ಈ ಪರಿಸ್ಥಿತಿಯಲ್ಲಿ ಮಾಡಬೇಕಾದ ಉತ್ತಮ ಕೆಲಸವೆಂದರೆ ನೀವಿಬ್ಬರೂ ಪರಸ್ಪರ ಪ್ರಾಮಾಣಿಕವಾಗಿ ಮಾತನಾಡುವುದು. ಹೆಂಡತಿ ಮುಂದೆ ಪ್ರೀತಿಯನ್ನು ವ್ಯಕ್ತಪಡಿಸಿ. ಈ ಸಂಬಂಧವು ನಿಮಗೆ ಎಷ್ಟು ಮುಖ್ಯ ಎಂದು ಅವರಿಗೆ ವಿವರಿಸಿ ಎನ್ನುತ್ತಾರೆ ತಜ್ಞರು.
ಸಂಗಾತಿ ಮೇಲೆ ಅನುಮಾನ ಭೂತ ಇದ್ದಂತೆ, ಇಬ್ಬರನ್ನೂ ಕಾಡುತ್ತೆ
ಗಳಿಕೆ ಬಗ್ಗೆ ಹೆಂಡತಿಗಿರಲಿ ಮಾಹಿತಿ : ಹೆಂಡತಿಗೆ ಐಷಾರಾಮಿ ಜೀವನ ನಡೆಸುವ ಆಸೆಯಿದೆ ನಿಜ. ಆದ್ರೆ ಅದಕ್ಕೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು. ಮೊದಲು ನಿಮ್ಮ ಗಳಿಕೆ ಬಗ್ಗೆ ಪತ್ನಿಗೆ ಹೇಳಬೇಕು. ಬ್ಯಾಂಕ್ ಖಾತೆಗಳ ಬಗ್ಗೆ ನಿಮ್ಮ ಹೆಂಡತಿಗೆ ಸರಿಯಾದ ಮಾಹಿತಿಯನ್ನು ನೀಡಬೇಕು. ದುಂದುವೆಚ್ಚ ಮಾಡುವಷ್ಟು ಹಣವಿಲ್ಲ ಎಂಬುದನ್ನು ಅವರಿಗೆ ತಿಳಿಸಬೇಕು. ಹಾಗೆ ಅವರಿಗೆ ಇಷ್ಟವಾದ ದುಬಾರಿ ವಸ್ತು ನೀಡಲು ಸಾಧ್ಯವಿಲ್ಲ ಎಂದಾದ್ರೆ ಅಗ್ಗದ ವಸ್ತುವನ್ನಾದ್ರೂ ಅವರಿಗೆ ನೀಡಬೇಕು ಎನ್ನುತ್ತಾರೆ ತಜ್ಞರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.