ಹೆಂಡ್ತಿಯನ್ನು ಭೇಟಿಯಾಗೋಕೆ 18 ರಾತ್ರಿ ಸಮುದ್ರದಲ್ಲೇ ಏಕಾಂಗಿಯಾಗಿ ಸಂಚರಿಸಿದ..!

Published : Mar 26, 2022, 05:06 PM IST
ಹೆಂಡ್ತಿಯನ್ನು ಭೇಟಿಯಾಗೋಕೆ 18 ರಾತ್ರಿ ಸಮುದ್ರದಲ್ಲೇ ಏಕಾಂಗಿಯಾಗಿ ಸಂಚರಿಸಿದ..!

ಸಾರಾಂಶ

ಸಪ್ತಸಾಗರ ದಾಟಿ ಪ್ರಿಯತಮೆ (Lover)ಯನ್ನು ಭೇಟಿಯಾಗಲು ಹೋಗುವ ರಾಜಕುಮಾರನ ಕಥೆ ಕೇಳಿದ್ದೀರಿ ಅಲ್ವಾ. ಬಾಲಿವುಡ್ ಸಿನಿಮಾ (Bollywood Cinema)ದಲ್ಲೂ ಇಂಥಾ ಸೂಪರ್ ಹೀರೋಗಳು ಇರ್ತಾರೆ. ಆದ್ರೆ ಇದು ರೀಲ್ ಅಲ್ಲ ರಿಯಲ್‌ (Real). ಆ ಬಗ್ಗೆ ಡೀಟೈಲಾಗಿ ನಾವ್‌ ಹೇಳ್ತೀವಿ.

ಪ್ರೀತಿ (Love)ಯೆಂಬುದು ಒಂದು ಅದ್ಭುತ ಭಾವನೆ. ಪ್ರೀತಿಯಲ್ಲಿರುವುದು ಸುಂದರ ಅನುಭವ. ಪ್ರೀತಿಗಾಗಿ ಪ್ರಪಂಚದಲ್ಲಿ ಅದೆಷ್ಟೋ ಯುದ್ಧಗಳು ನಡೆದಿವೆ. ಪ್ರೀತಿಯಲ್ಲಿದ್ದಾಗ ಜನರು ಯಾವುದೇ ಕೆಲಸವನ್ನು ಮಾಡಲು ಹಿಂಜರಿಯುವುದಿಲ್ಲ. ಪ್ರೀತಿಗಾಗಿ ಅದೆಷ್ಟೋ ಜಗಳ, ಕೊಲೆ, ಕೋಲಾಹಲಗಳೇ ನಡೆದಿವೆ. ಸಂಗಾತಿಯನ್ನು ನೋಡಲು ದೇಶ-ವಿದೇಶದಿಂದ ಓಡೋಡಿ ಬಂದವರಿದ್ದಾರೆ. ಮನೆ, ಕುಟುಂಬಸ್ಥರನ್ನು ತೊರೆದವರಿದ್ದಾರೆ. ಆದರೆ ಇಲ್ಲೊಬ್ಬ ಭೂಪ ಹೆಂಡ್ತಿಯನ್ನು ಮೀಟ್‌ (Meet) ಆಗೋಕೆ ಅದೆಂಥಾ ಸಾಹಸಕ್ಕೆ ಕೈ ಹಾಕಿದ್ದಾರೆ ನೋಡಿ.

ಸಮುದ್ರ (Occean)ವನ್ನು ದಾಟಿ ಪ್ರಿಯತಮೆಯನ್ನು ನೋಡಲು ಬಂದ ಪ್ರಿಯಕರ. ಇದೆಲ್ಲಾ ಆಗೋದು ಬಾಲಿವುಡ್‌ ಮೂವಿಯಲ್ಲಿ ಮಾತ್ರ ಅಂದ್ಕೊಂಡ್ರಾ. ಅಲ್ಲಾ ನೋಡಿ,. ನಿಜ ಜೀವನದಲ್ಲಿ ಇಲ್ಲೊಬ್ಬ ತನ್ನ ಹೆಂಡ್ತಿಯನ್ನು ನೋಡಲು ಸಮುದ್ರವನ್ನು ದಾಟಿ ಬಂದಿದ್ದಾರೆ. ಥೈಲ್ಯಾಂಡ್‌ನಿಂದ ಭಾರತಕ್ಕೆ 2,000 ಕಿ.ಮೀ ಸಮುದ್ರದ ಮೂಲಕ ಪ್ರಯಾಣಿಸಿದ್ದಾರೆ.

ಕಚೇರಿಯಲ್ಲಿ Ex lover ಜೊತೆ ಕೆಲ್ಸ ಮಾಡ್ಬೇಕಿದ್ರೆ ಇದು ನೆನಪಿರಲಿ
 
ವಿಯೆಟ್ನಾಂ ವ್ಯಕ್ತಿಯೊಬ್ಬರು ಮುಂಬೈನಲ್ಲಿ ಕೆಲಸ ಮಾಡುವ ತನ್ನ ಹೆಂಡತಿ (Wife)ಯನ್ನು ಎರಡು ವರ್ಷಗಳಿಂದ ನೋಡದ ಕಾರಣ ಅವರನ್ನು ಮತ್ತೆ ಒಂದಾಗಲು ಥೈಲ್ಯಾಂಡ್‌ (Thailand)ನ ಫುಕೆಟ್‌ನಿಂದ ಭಾರತಕ್ಕೆ 2,000 ಕಿಲೋಮೀಟರ್ ಸಮುದ್ರದ ಮೂಲಕ  ಪ್ರಯಾಣಿಸಲು ಯತ್ನಿಸಿದರು. 18 ರಾತ್ರಿಗಳನ್ನು ಸಮುದ್ರದಲ್ಲಿ ಏಕಾಂಗಿಯಾಗಿ ಕಳೆದ ನಂತರ ಥಾಯ್ ಅಧಿಕಾರಿಗಳು ಅವರನ್ನು ರಕ್ಷಿಸಿದರು. ಪ್ರಿಯತಮೆಯನ್ನು ನೋಡಲು ಹೊರಟಿದ್ದ ವ್ಯಕ್ತಿ ಸೀಮಿತ ಕುಡಿಯುವ ನೀರನ್ನು ಹೊಂದಿದ್ದರು, ಸುಮಾರು 10 ಪ್ಯಾಕೆಟ್‌ಗಳ ತ್ವರಿತ ನೂಡಲ್ಸ್ ಮಾತ್ರ ಇತ್ತು. ಅದೆಲ್ಲಕ್ಕಿಂತ ಹೆಚ್ಚಾಗಿ ನ್ಯಾವಿಗೇಷನ್ ಸಿಸ್ಟಮ್ ಇರಲಿಲ್ಲ. ಹೀಗಾಗಿ ಅವರ ಪ್ರಯಾಣದಲ್ಲಿ ಅಪಾಯವೇ ಹೆಚ್ಚಿತ್ತು.

ಪ್ರಯಾಣ ಮುಂದುವರಿಸಿದ್ದರೆ ನ್ಯಾವಿಗೇಷನ್ ಸಿಸ್ಟಮ್ (Navigation System) ಇಲ್ಲದ ಕಾರಣ ದಾರಿ ತಪ್ಪುವ ಸಾಧ್ಯತೆಯಿತ್ತು. ನೀರು, ಆಹಾರವಿಲ್ಲದೆ ಕಂಗೆಡುವ ಸಾಧ್ಯತೆಯೂ ಹೆಚ್ಚಿತ್ತು.  ಸಾಂಕ್ರಾಮಿಕ ರೋಗದಿಂದಾಗಿ ಈ ವ್ಯಕ್ತಿ ಭಾರತದಲ್ಲಿ ಕೆಲಸ ಮಾಡುವ ತನ್ನ ಹೆಂಡತಿಯನ್ನು ಎರಡು ವರ್ಷಗಳಿಂದ ನೋಡಿರಲ್ಲಿಲ್ಲ. ಹೆಂಡತಿಯನ್ನು ನೋಡದೆ ಬೇಸರಗೊಂಡಿದ್ದರು. ಹೀಗಾಗಿ ವಿಯೆಟ್ನಾಂದಲ್ಲಿ ವ್ಯಕ್ತಿ ಅವಳನ್ನು ಭೇಟಿಯಾಗಲು ಸಮುದ್ರವನ್ನು ದಾಟಲು ನಿರ್ಧರಿಸಿದರು ಎಂದು ತಿಳಿದುಬಂದಿದೆ.

ಹೋ ಹೋಂಗ್ ಹಂಗ್ ಎಂದು ಗುರುತಿಸಲಾದ 37 ವರ್ಷದ ವ್ಯಕ್ತಿ, ಥಾಯ್ಲೆಂಡ್‌ನಿಂದ ರಾಫ್ಟಿಂಗ್ ಬೋಟ್‌ನಲ್ಲಿ 2,000 ಕಿಲೋಮೀಟರ್ ದೂರ ಸಾಗಲು ಪ್ರಯತ್ನಿಸಿದರು. ಮುಂಬೈನಲ್ಲಿ ಕೆಲಸ ಮಾಡುವ ತನ್ನ ಹೆಂಡತಿಯನ್ನು ಭೇಟಿಯಾಗಲು ಹೋ ಅವರು ಚಂಡಮಾರುತದ ಋತುವಿನ ಆರಂಭದಲ್ಲಿ ಬಂಗಾಳ ಕೊಲ್ಲಿಯನ್ನು ದಾಟಲು ಯೋಜಿಸುತ್ತಿದ್ದರು.

Vladimir Putin: ಪುಟಿನ್ ಸೀಕ್ರೆಟ್ ಪ್ರೇಯಸಿ.. 69ರ ಅಧ್ಯಕ್ಷ.. 38ರ ಸುರ ಸುಂದರಿ !

ಥಾಯ್ ಮುಖ್ಯ ಭೂಭಾಗದಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಸಿಮಿಲಾನ್ ದ್ವೀಪಗಳ ಬಳಿ ಗಾಳಿ ತುಂಬಿದ ದೋಣಿಯಲ್ಲಿ ಹೊ ಪ್ಯಾಡ್ಲಿಂಗ್ ಮಾಡುತ್ತಿರುವುದನ್ನು ಮೀನುಗಾರಿಕಾ ದೋಣಿ ಕಂಡು ನೌಕಾಪಡೆಯ ಕಡಲ ಭದ್ರತಾ ಘಟಕಕ್ಕೆ ಎಚ್ಚರಿಕೆ ನೀಡಿತು ಮತ್ತು ಅವರನ್ನು ರಕ್ಷಿಸಲಾಯಿತು.

ಅವರು ಮಾರ್ಚ್ 2ರಂದು ಹೊ ಚಿ ಮಿನ್ಹ್ ಸಿಟಿಯಿಂದ ಬ್ಯಾಂಕಾಕ್‌ಗೆ ತೆರಳಿದರು ಮತ್ತು ವೀಸಾ ಇಲ್ಲದೆ ಭಾರತಕ್ಕೆ ವಿಮಾನವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅವರು ಕಂಡುಕೊಂಡರು.ಆದ್ದರಿಂದ, ಅವರು ದಾರಿತಪ್ಪಿ ಬ್ಯಾಂಕಾಕ್‌ನಿಂದ ಫುಕೆಟ್‌ಗೆ ಬಸ್ ತೆಗೆದುಕೊಂಡರು. ಅವರು ಗಾಳಿ ತುಂಬಬಹುದಾದ ದೋಣಿಯನ್ನು ಖರೀದಿಸಿದರು ಮತ್ತು ಮಾರ್ಚ್ 5 ರಂದು ಭಾರತಕ್ಕೆ ಪ್ಯಾಡಲ್ ಮಾಡಲು ಸಮುದ್ರಕ್ಕೆ ಹೋದರು - ಇದು ಸುಮಾರು 2,000 ಕಿಲೋಮೀಟರ್ ದೂರದಲ್ಲಿದೆ.

18 ರಾತ್ರಿಗಳನ್ನು ಸಮುದ್ರದಲ್ಲಿ ಏಕಾಂಗಿಯಾಗಿ ಕಳೆದ ನಂತರ ಥಾಯ್ ಮೀನುಗಾರರು ಅವನನ್ನು ಕಂಡುಕೊಂಡರು. ಹೆಚ್ಚಿನ ವಿಚಾರಣೆಗಾಗಿ ಹೋ ಅವರನ್ನು ಫುಕೆಟ್‌ಗೆ ಹಿಂತಿರುಗಿಸಲಾಗುತ್ತದೆ ಎಂದು ಥಾಯ್ ಅಧಿಕಾರಿಗಳು ತಿಳಿಸಿದ್ದಾರೆ. 'ನಾವು ವಿಯೆಟ್ನಾಂ ರಾಯಭಾರ ಕಚೇರಿ ಮತ್ತು ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದೇವೆ ಆದರೆ ಇನ್ನೂ ಉತ್ತರವಿಲ್ಲ' ಎಂದು ಥಾಯ್ ಮ್ಯಾರಿಟೈಮ್ ಎನ್‌ಫೋರ್ಸ್‌ಮೆಂಟ್ ಕಮಾಂಡ್ ಸೆಂಟರ್‌ನ ಕ್ಯಾಪ್ಟನ್ ಪಿಚೆಟ್ ಸಾಂಗ್ಟನ್ ಎಎಫ್‌ಪಿಗೆ ತಿಳಿಸಿದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!