ಪ್ರೀತಿ ಮುರಿದು ಬಿದ್ದಾಗ ಅವರ ವಸ್ತುಗಳನ್ನು ಆರಾಮವಾಗಿ ಎಸೆಯುತ್ತೇವೆ. ಅವರನ್ನು ಮರೆಯುವ ಪ್ರಯತ್ನ ನಡೆಸ್ತೇವೆ. ಆದ್ರೆ ಕೆಲವೊಮ್ಮೆ ನಾವು ಊಹಿಸದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಾಜಿ ಜೊತೆಯೇ ಕೆಲಸ ಮಾಡುವ ಅನಿವಾರ್ಯತೆ ಎದುರಾಗುತ್ತದೆ.
ಬ್ರೇಕ್ ಅಪ್ (Break Up)… ಇತ್ತೀಚಿನ ದಿನಗಳಲ್ಲಿ ಇದು ಸಾಮಾನ್ಯ ಎನ್ನುವಂತಾಗಿದೆ. ಎಷ್ಟೇ ಬಿಂದಾಸ್ (Bindas) ಎಂದು ತೋರಿಸಿಕೊಂಡ್ರೂ ಬ್ರೇಕ್ ಅಪ್ ಆದ್ಮೇಲೆ ಆ ಗುಂಗಿನಿಂದ ಹೊರ ಬರಲು ಸ್ವಲ್ಪ ಸಮಯ ಬೇಕು. ಸಾಮಾನ್ಯವಾಗಿ ಬ್ರೇಕ್ ಅಪ್ ಆದ್ಮೇಲೆ ಅವರು ನೆನಪು (Memory) ಬರದಿರಲಿ ಎನ್ನುವ ಕಾರಣಕ್ಕೆ ಅವರ ಫೋನ್ (Phone) ನಂಬರ್ ಡಿಲೀಟ್ ಮಾಡಿರ್ತೇವೆ. ಅವರ ಮೆಸೇಜ್ (Message) ಡಿಲೀಟ್ ಆಗಿರುತ್ತೆ. ಅವರ ಫೋಟೋ (Photo) ಹಾಗೂ ಗಿಫ್ಟ್ (Gift) ಗಳನ್ನು ಕೆಲವರು ಹಿಂದಿರುಗಿಸ್ತಾರೆ. ಮತ್ತೆ ಕೆಲವರು ಅದನ್ನು ಮನೆಯ ಯಾವುದೋ ಮೂಲೆಯಲ್ಲಿ ಇಟ್ಟಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅನ್ ಫಾಲೋ (Un Follow )ಮಾಡುವುದು ಕೂಡ ಈಗ ಸಾಮಾನ್ಯ. ಮಾಜಿಯಿಂದ ಸಂಪೂರ್ಣ ದೂರ ಉಳಿಯುವುದು ಬ್ರೇಕ್ ಅಪ್ ಆದವರ ಉದ್ದೇಶವಾಗಿರುತ್ತದೆ. ಭೂಮಿ ಗುಂಡಗಿದೆ ಸ್ವಾಮಿ, ಸಂಬಂಧ ಕಡಿದುಕೊಂಡು ಹೋದವರು ಒಂದಲ್ಲ ಒಂದು ಬಾರಿ ಸಿಕ್ಕೇ ಸಿಗ್ತಾರೆ. ಅಪರೂಪಕ್ಕೆ ಎಲ್ಲೋ ಸಿಕ್ಕಿದ್ರೆ ಮುಖ ತಿರುಗಿಸಿ ಬರಬಹುದು. ಇಲ್ಲವೆ ನಾಲ್ಕು ಮಾತನಾಡಿ ಬರಬಹುದು. ಆದ್ರೆ ಪ್ರತಿ ದಿನ ಅವರದ್ದೇ ಮುಖ ನೋಡೋದಾದ್ರೆ ಕಷ್ಟವಾಗುತ್ತದೆ. ಪ್ರೀತಿಸಿ ದೂರವಾದ ವ್ಯಕ್ತಿ ನಿಮ್ಮ ಕಚೇರಿಯಲ್ಲಿ ಉದ್ಯೋಗ ಪಡೆದಾಗ ಶಾಕ್ ಆಗುತ್ತದೆ.
ಕಚೇರಿ (Office)ಯಲ್ಲಿ ಮಾಜಿ ಜೊತೆ ವ್ಯವಹಾರ ಹೀಗಿರಲಿ
ಸಂಬಂಧ (Relationship) ವನ್ನು ಕಚೇರಿಯಲ್ಲಿ ಬಹಿರಂಗಪಡಿಸಲು ಬಿಡಬೇಡಿ : ನಿಮ್ಮ ಮಾಜಿ ನಿಮ್ಮ ಕಚೇರಿಯಲ್ಲಿಯೇ ಕೆಲಸ ಸಿಕ್ಕಿದ್ದರೆ ಅಥವಾ ಮಾಜಿ ಇರುವ ಕಚೇರಿಗೆ ನೀವು ಹೊಸದಾಗಿ ಕೆಲಸಕ್ಕೆ ಸೇರಿದ್ದರೆ ಆ ಸಂದರ್ಭವನ್ನು ನೀವು ಜಾಗರೂಕರಾಗಿ ಎದುರಿಸಬೇಕು. ಯಾವುದೇ ಕಾರಣಕ್ಕೂ ನಿಮ್ಮಿಬ್ಬರ ಹಳೆ ಸಂಬಂಧ ನಿಮ್ಮ ಸಹೋದ್ಯೋಗಿಗಳಿಗೆ ತಿಳಿಯದಂತೆ ನೋಡಿಕೊಳ್ಳಬೇಕು. ನಿಮ್ಮ ಮಾಜಿ ಬಗ್ಗೆ ಯಾರ ಬಳಿಯೂ ಹೇಳಬೇಡಿ. ಯಾಕೆಂದ್ರೆ ನಿಮ್ಮ ಈ ಮಾತು ಗಾಸಿಫ್ ವಿಷ್ಯವಾಗಬಹುದು. ಆಗ ಒಂದೇ ಕಚೇರಿಯಲ್ಲಿ ಕೆಲಸ ಮಾಡುವುದು ಮತ್ತಷ್ಟು ಕಷ್ಟವಾಗುತ್ತದೆ. ಹಾಗಾಗಿ ಕಚೇರಿಗೆ ಹೊಸದಾಗಿ ಸೇರಿದ್ದರೆ ನಿಮ್ಮ ಗುಟ್ಟನ್ನು ಬಿಟ್ಟುಕೊಡಬೇಡಿ.
ತಾಯಿಯ ನೆನಪಿಗೆ ಮಗ ಮಾಡಿದ್ದನ್ನ ಕಂಡು ಹೆಮ್ಮೆಪಡ್ತಿದ್ದಾರೆ ಈ ಊರಿನ ಜನ!
ಎದುರು ಬದುರಾದಾಗ ಓಡಿ ಹೋಗುವ ಅಗತ್ಯವಿಲ್ಲ : ಒಂದೇ ಕಚೇರಿ ಎಂದ್ಮೇಲೆ ಮೀಟಿಂಗ್ ಸೇರಿದಂತೆ ಕೆಲ ಸಂದರ್ಭದಲ್ಲಿ ಒಟ್ಟಿಗಿರಬೇಕಾಗುತ್ತದೆ. ಆ ಸಮಯವನ್ನು ತಪ್ಪಿಸಿಕೊಳ್ಳಬೇಡಿ. ಅವರನ್ನು ಎದುರಿಸಿ. ಅವರ ಜೊತೆ ಸಾಮಾನ್ಯ ಸಹೋದ್ಯೋಗಿಯಂತೆ ಮಾತನಾಡಿ.
ಹಳೆಯ ಗಾಯವನ್ನು ಕೆದಕಬೇಡಿ : ನಿಮ್ಮಿಬ್ಬರ ಮಧ್ಯೆ ಇದ್ದ ಸಂಬಂಧ ಖಾಸಗಿ ವಿಷ್ಯ. ಅದಕ್ಕೂ ಕೆಲಸಕ್ಕೂ ಸಂಬಂಧವಿಲ್ಲ. ಕಚೇರಿಯಲ್ಲಿ ಅಥವಾ ಹೊರಗೆ ಯಾವುದೇ ಹಳೆ ವಿಷ್ಯವನ್ನು ಮಾತನಾಡಲು ಹೋಗಬೇಡಿ. ಕೆಲಸಕ್ಕೆ ಬೇಕಾದ ವಿಷ್ಯ ಮಾತ್ರ ಮಾತನಾಡಿ ಸುಮ್ಮನಾಗಿ. ಇದ್ರಿಂದ ಇಬ್ಬರ ನೋವು ಮತ್ತೆ ಹೆಚ್ಚಾಗಬಹುದು.
ಮದುವೆ ಮಕ್ಕಳಾಟವಲ್ಲ, ಜೊತೆಯಾಗಿ ಆಡಿದರೆ ಜಯ ನಿಮ್ಮದೇ !
ಒಟ್ಟಿಗೆ ಕೆಲಸ ಮಾಡದಿರಲು ಪ್ರಯತ್ನಿಸಿ : ಒಂದೇ ಟೀಮ್ ನಲ್ಲಿ ನೀವಿಬ್ಬರೂ ಇದ್ದರೆ ಬೇರೆ ಟೀಂಗೆ ಹೋಗುವ ಪ್ರಯತ್ನ ಮಾಡಿ. ಒಂದೇ ಟೀಂನಲ್ಲಿದ್ದರೆ ಇಬ್ಬರ ಮಧ್ಯೆ ಭೇಟಿ ಮತ್ತು ಮಾತುಕತೆ ಹೆಚ್ಚಾಗುತ್ತದೆ. ಬೇರೆ ಟೀಂನಲ್ಲಿದ್ದರೆ ಇಬ್ಬರೂ ಸಾಕಷ್ಟು ದೂರವಿರುತ್ತೀರಿ.
ಮಾಜಿಯ ಜೋಕ್ ಗಳನ್ನು ನಿರ್ಲಕ್ಷ್ಯಿಸಿ : ಅನೇಕ ಬಾರಿ ಮಾಜಿ ನಿಮ್ಮ ಕಾಲೆಳೆಯುವ ಪ್ರಯತ್ನ ನಡೆಸಬಹುದು. ಸಹೋದ್ಯೋಗಿಗಳ ಮುಂದೆ ಪ್ರೀತಿಯ ಮೋಸದ ವಿಷ್ಯಗಳನ್ನು ಹೇಳಿ ನಿಮ್ಮ ಕೋಪ ಹೆಚ್ಚು ಮಾಡ್ಬಹುದು. ಆ ಸಂದರ್ಭದಲ್ಲಿ ನಕ್ಕು ಸುಮ್ಮನಾಗಿ. ಕೋಪ ಮಾಡಿಕೊಂಡರೆ ಸಮಸ್ಯೆ ಹೆಚ್ಚಾಗುತ್ತದೆ ಎಂಬುದು ನೆನಪಿರಲಿ.