Valentines Day: ಮದುವೆ ಪ್ರಮಾಣಪತ್ರವನ್ನು ತನ್ನ ಕೈಗೆ ಹಚ್ಚೆ ಹಾಕಿಸ್ಕೊಂಡು ಪತ್ನಿಗೆ ಸರ್‌ಪ್ರೈಸ್‌ ನೀಡಿದ ಪತಿ..!

By BK Ashwin  |  First Published Feb 16, 2023, 6:46 PM IST

ವ್ಯಕ್ತಿಯೊಬ್ಬರು ತನ್ನ ಹೆಂಡತಿಯನ್ನು ಅಚ್ಚರಿಗೊಳಿಸಲು ತನ್ನ ಮದುವೆಯ ಪ್ರಮಾಣಪತ್ರವನ್ನು ತನ್ನ ಕೈ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಈ ಪೋಸ್ಟ್ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ಪ್ರತಿಕ್ರಿಯೆಯೂ ಬರುತ್ತಿದೆ.


ಥಾಯ್ಲೆಂಡ್‌ (ಫೆಬ್ರವರಿ 16, 2023): ವ್ಯಾಲೆಂಟೈನ್ಸ್‌ ಡೇ ಅಥವಾ ಪ್ರೇಮಿಗಳ ದಿನದಂದು ತನ್ನ ಗರ್ಲ್‌ಫ್ರೆಂಡ್‌ ಅಥವಾ ಪತ್ನಿ, ಪಾರ್ಟ್‌ನರ್‌ಗೆ ಏನಾದರೂ ಸರ್‌ಪ್ರೈಸ್‌ ಕೊಡೋದು, ಉಡುಗೊರೆ ಕೊಡಿಸೋದು - ಈತರ ಏನಾದ್ರೂ ಸಾಮಾನ್ಯವಾಗಿರುತ್ತದೆ. ತಮ್ಮ ಹತ್ತಿರವಿರುವ ಯಾರನ್ನಾದರೂ ಸರ್‌ಪ್ರೈಸ್‌ ಮಾಡಿದರೆ ಅದರಿಂದ ಇನ್ನೊಬ್ಬರಿಗಾಗೋ ಸಂತೋಷವನ್ನು ಗಮನಿಸಿ ನೋಡಿ. ಆ ಖುಷಿಯ ಪಾರಕ್ಕೆ ಸಾಟಿಯೇ ಇಲ್ಲ. ಅಂತಹ ಒಂದು ರೊಮ್ಯಾಂಟಿಕ್ ಗೆಸ್ಚರ್‌ನಲ್ಲಿ, ವ್ಯಕ್ತಿಯೊಬ್ಬರು ತನ್ನ ಹೆಂಡತಿಯನ್ನು ಅಚ್ಚರಿಗೊಳಿಸಲು ತನ್ನ ಮದುವೆಯ ಪ್ರಮಾಣಪತ್ರವನ್ನು ತನ್ನ ಕೈ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಈ ಪೋಸ್ಟ್ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ಪ್ರತಿಕ್ರಿಯೆಯೂ ಬರುತ್ತಿದೆ.

ಥಾಯ್ಲೆಂಡ್‌ ಮೂಲದ ವ್ಯಕ್ತಿ ತನ್ನ ಹೆಂಡತಿಗಾಗಿ ತನ್ನ ಜೀವನವನ್ನು ಮೀಸಲಿಡುವುದಾಗಿ ಈ ಸಂದೇಶ ನೀಡಿದ್ದ, ವ್ಯಾಲೆಂಟನ್ಸ್‌ ಡೇಗೆ ತನ್ನ ಹೆಂಡತಿಗೆ ಈ ರೀತಿ ಸರ್‌ಪ್ರೈಸ್‌ ನೀಡಿದ್ದಾನೆ. ಈ ಟ್ಯಾಟೂ ಫೋಟೋಗಳನ್ನು ಟ್ಯಾಟೂ ಪಾರ್ಲರ್‌ನವರು ಪೋಸ್ಟ್‌ ಮಾಡಿದ್ದು, ಪುರುಷನ ಮುಂಗೈ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಮದುವೆ ಪ್ರಮಾಣ ಪತ್ರದ ಜೀವಮಾನದ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

Latest Videos

undefined

ಇದನ್ನು ಓದಿ: ವ್ಯಾಲೆಂಟೆನ್ಸ್ ಡೇಗೆ ಹೋಟೆಲ್ ಬುಕ್ಕಿಂಗ್, ಟಾಪ್ ಸ್ಥಾನದಲ್ಲಿ ವೃಂದಾವನ,ಬೆಂಗಳೂರು!

ಮದುವೆ ಪ್ರಮಾಣಪತ್ರದ ಬರಹ ಮಾತ್ರವಲ್ಲ, ಪ್ರಮಾಣಪತ್ರದ ಹೊರಗೆ ಹೂವಿನ ಫ್ರೇಮ್‌ ಅನ್ನೂ ಹಾಕಿಸಿಕೊಂಡಿದ್ದಾನೆ. ಇಷ್ಟೇ ಅಲ್ಲ, ಜತೆಗೆ ಪ್ರಮಾಣಪತ್ರದ ಅಧಿಕೃತ ಸ್ಟ್ಯಾಂಪ್‌ ಅನ್ನೂ ಸಹ ಹಾಕಿಸಿಕೊಂಡಿದ್ದಾರೆ. 

ಈ ಪೋಸ್ಟ್ ಅನ್ನು ಇಲ್ಲಿ ನೋಡಿ..

ಥಾಯ್ ದಿನಪತ್ರಿಕೆ ಖೋಸೋಡ್ ವರದಿಯ ಪ್ರಕಾರ, ವಾಲ್ ಎಂಬ ವ್ಯಕ್ತಿ ಮಧ್ಯ ಥೈಲ್ಯಾಂಡ್‌ನ ಸರಬುರಿ ಪ್ರಾಂತ್ಯದ ಕೆಂಗ್ ಖೋಯ್‌ನಲ್ಲಿರುವ ಟ್ಯಾಟೂ ಸ್ಟುಡಿಯೋದಲ್ಲಿ ತನ್ನ ತೋಳಿಗೆ ಟ್ಯಾಟೂ ಹಾಕಿಸಿಕೊಳ್ಳಲು 8 ಗಂಟೆಗಳ ಕಾಲ ಕುರ್ಚಿಯಲ್ಲಿ ಕಾಲ ಕಳೆದಿದ್ದಾನೆ. ಇನ್ನು, ಈ ಟ್ಯಾಟೂ ನೋಡಿದ ಪತ್ನಿ ಆರಂಭದಲ್ಲಿ ಆಘಾತಕ್ಕೊಳಗಾದರು. ಆದರೆ ನಂತರ ಹಚ್ಚೆ ತನ್ನ ಪ್ರೀತಿ ಮತ್ತು ಗೌರವದ ಪುರಾವೆಯಾಗಿ ಆಕೆ ಸ್ವೀಕರಿಸಿದರು.

ಇದನ್ನೂ ಓದಿ: ಮುತ್ತಿನ ಗಮ್ಮತ್ತು..ನೀರೊಳಗೆ ಬರೋಬ್ಬರಿ 4 ನಿಮಿಷ ಚುಂಬಿಸಿ ಗಿನ್ನಿಸ್ ದಾಖಲೆ ಬರೆದ ಜೋಡಿ

ಈ ಮಧ್ಯೆ, ಥಾಯ್ಲೆಂಡ್‌ ಮೂಲದ ವಾಲ್‌ಗೆ ಟ್ಯಾಟೂ ಹಾಕಿದ ಈ ಟ್ಯಾಟೂ ಕಲಾವಿದ ತಾನು ಈ ಹಿಂದೆ ಮದುವೆ ಪ್ರಮಾಣಪತ್ರದ ಟ್ಯಾಟೂವನ್ನು ಯಾರಿಗೂ ಹಾಕಿಲ್ಲ ಎಂದು ಶೇರ್‌ ಮಾಡಿಕೊಂಡಿದ್ದಾನೆ. ವ್ಯಾಲೆಂಟೈನ್ಸ್‌ ಡೇಗೆ ಹೂವು, ಚಿನ್ನ ಅಥವಾ ಇತರೆ ಬೆಲೆಬಾಳುವ ವಸ್ತು, ಡ್ರೆಸ್‌ - ಈತರದ ಗಿಫ್ಟ್‌ ಕೊಡಿಸುವುದು ಸಾಮಾನ್ಯ. ಆದರೆ, ವಾಲ್‌ ಎಂಬ ವ್ಯಕ್ತಿ ತನ್ನ ಹೆಂಡತಿಗೆ ಅಪರೂಪದ ಉಡುಗೊರೆ ನೀಡುವ ಮೂಲಕ ಸರ್‌ಪ್ರೈಸ್‌ ಮಾಡಲು ತನ್ನ ಮ್ಯಾರೇಜ್‌ ಸರ್ಟಿಫಿಕೇಟ್‌ ಅನ್ನೇ ಟ್ಯಾಟೂ ಹಾಕಿಸಿಕೊಂಡಿದ್ದಾನೆ. 

ಮದುವೆ ಪ್ರಮಾಣಪತ್ರದ ಟ್ಯಾಟೂ ಫೋಟೋಗಳು ಫೇಸ್‌ಬುಕ್‌ನಲ್ಲಿ ಹೆಚ್ಚು ವೈರಲ್ ಆಗಿದೆ. ಹಲವು ನೆಟ್ಟಿಗರು ಇದನ್ನು ಮೆಚ್ಚಿಕೊಂಡಿದ್ದು, ಇನ್ನು ಹಲವು ಬಳಕೆದಾರರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ‘’ಕಾರ್ಯಗಳು ಪದಗಳಿಗಿಂತ ಜೋರಾಗಿ ಹೇಳುತ್ತವೆ ಎಂದು ಕರೆಯಲ್ಪಡುವುದು ಇದಕ್ಕೇ. ಪ್ರೀತಿಯ ಈ ಪುರಾವೆಯು ಚಪ್ಪಾಳೆಗೆ ಅರ್ಹವಾಗಿದೆ’’ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಹಾಗೆ, "ಅಂತಹ ಆಳವಾದ ಪ್ರೀತಿಯಿಂದ, ಅವರ ಸಂತೋಷವು ಶಾಶ್ವತವಾಗಿ ಉಳಿಯುತ್ತದೆ ಎಂದು ನಾನು ಭಾವಿಸುತ್ತೇನೆ’’ ಎಂದು ಮತ್ತೊಬ್ಬರು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: ದುಬೈ; ಕ್ರಿಕೆಟಿಗ ಕ್ರಿಸ್ ಗೇಲ್ ಜೊತೆ ನಟಿ ದೀಪಿಕಾ ದಾಸ್… ಫೋಟೋ ವೈರಲ್

ಈ ಹಿಂದೆ ಒಬ್ಬ ವ್ಯಕ್ತಿ ತನ್ನ ತೋಳಿನ ಮೇಲೆ ತನ್ನ ಪತ್ನಿಯ ಭಾವಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದ. ಈ ವಿಡಿಯೋವನ್ನು ಟ್ಯಾಟೂ ಕಲಾವಿದ ಮಹೇಶ್ ಚವಾಣ್ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆತ ತನ್ನ ಹುಟ್ಟುಹಬ್ಬದಂದು ತನ್ನ ಪತ್ನಿಯನ್ನು ಈ ಮೂಲಕ ಆಶ್ಚರ್ಯ ಚಕಿತರಾಗುವಂತೆ ಮಾಡಿದ್ದ. 

click me!