ಮೊದಲ ರಾತ್ರಿಯೇ ಗರ್ಲ್ ಫ್ರೆಂಡ್ ಫೋಟೋ ತೋರಿಸಿ, ಹೆಣ್ಣಿನ ಬಾಳಲ್ಲಿ ಆಟವಾಡಿದ ಪತಿರಾಯ!

By Suvarna News  |  First Published Jul 23, 2022, 4:35 PM IST

ಮದುವೆಗೆ ಮುನ್ನ ಸಂಗಾತಿ ಬಗ್ಗೆ ಸ್ವಲ್ಪ ಮಾಹಿತಿ ಕಲೆ ಹಾಕುವುದು ಅನಿವಾರ್ಯ. ಮದುವೆ ಫಿಕ್ಸ್ ಆಗ್ತಿದ್ದಂತೆ ತರಾತುರಿಯಲ್ಲಿ ಮದುವೆಯಾಗುವ ಬದಲು, ಇಬ್ಬರು ಅರಿಯುವ ಪ್ರಯತ್ನ ಮಾಡ್ಬೇಕು. ಸಂಗಾತಿ ಬಗ್ಗೆ ಮುಖ್ಯವಾದ ವಿಷ್ಯಗಳು ಗೊತ್ತಿಲ್ಲದೆ ಹೋದ್ರೆ ಮುಂದೆ ನರಕ ಅನುಭವಿಸಬೇಕಾಗುತ್ತದೆ. 
 


ಮದುವೆ ಇಬ್ಬರು ವ್ಯಕ್ತಿಗಳನ್ನು ಮಾತ್ರವಲ್ಲ ಎರಡು ಕುಟುಂಬಗಳನ್ನು ಬೆಸೆಯುತ್ತದೆ. ಭಾರತದಲ್ಲಿ ಈಗ್ಲೂ ಅರೇಂಜ್ಡ್ ಮ್ಯಾರೇಜ್ ಗೆ ಹೆಚ್ಚಿನ ಮಹತ್ವವಿದೆ. ತಂದೆ - ತಾಯಿ ನೋಡಿದ ವರ ಅಥವಾ ವಧುವನ್ನು ಮದುವೆಯಾಗುವ ಸಂಪ್ರದಾಯವಿದೆ. ಇತ್ತೀಚಿನ ದಿನಗಳಲ್ಲಿ ಲವ್ ಮ್ಯಾರೇಜ್ ಗೆ ಹೆಚ್ಚು ಒಲವು ತೋರುತ್ತಿರುವ ಜನರು, ತಾವು ಮದುವೆಯಾಗ್ತಿರುವ ವ್ಯಕ್ತಿ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಪ್ರಯತ್ನ ಮಾಡ್ತಾರೆ. ಮದುವೆ ಯಾವುದೇ ರೀತಿಯಲ್ಲಿ ಆಗ್ಲಿ, ಮದುವೆಗೂ ಮುನ್ನ ವಧು ಹಾಗೂ ವರ ಪರಸ್ಪರ ಅರಿತಿರಬೇಕು. ಕೆಲವು ಆಗು – ಹೋಗುಗಳ ಬಗ್ಗೆ ಅವರಿಗೆ ತಿಳಿದಿರಬೇಕು. ಅನೇಕರು ಇದ್ರ ಬಗ್ಗೆ ಆಸಕ್ತಿ ತೋರಲು ಹೋಗುವುದಿಲ್ಲ. ಮದುವೆ ನಂತ್ರ ಪರಸ್ಪರರ ಪೊಳ್ಳು ತಿಳಿಯುತ್ತದೆ. ಇದ್ರಿಂದ ಮದುವೆ ಮುರಿದು ಬೀಳುತ್ತದೆ. ಇಲ್ಲವೆ ಸಂಸಾರದಲ್ಲಿ ಸುಖ ಮಾಯವಾಗುತ್ತದೆ. 

ಸಾಮಾನ್ಯವಾಗಿ ಅರೇಂಜ್ಡ್ ಮ್ಯಾರೇಜ್ (Arranged Marriage) ನಲ್ಲಿ ಸುಳ್ಳು (Lie) ಹೇಳುವುದನ್ನು ನಾವು ನೋಡಬಹುದು. ಅನೇಕ ಮದುವೆಗಳು ಸುಳ್ಳಿನ ಮೇಲೆ ನಡೆದಿರುತ್ತವೆ. ಪಾಲಕರ ಒತ್ತಾಯಕ್ಕೆ ಮದುವೆಯಾಗುವವರೂ ಇದ್ದಾರೆ. ಪರಸ್ಪರ ಅರಿತುಕೊಳ್ಳಲು ಸಮಯ ನೀಡುವುದಿಲ್ಲ. ಮದುವೆಗೆ ಮುನ್ನ ವ್ಯಕ್ತಿಯ ಸ್ವಭಾವ, ಆತ ಹೇಗೆ ನಡೆದುಕೊಳ್ಳುತ್ತಿದ್ದಾನೆ, ಆತ ತನಗೆ, ತನ್ನ ಮಾತಿಗೆ ಮಹತ್ವ ನೀಡಬಲ್ಲನಾ ಎಂಬುದನ್ನು ಅರಿಯಬೇಕಾಗುತ್ತದೆ. ಇಲ್ಲವೆಂದ್ರೆ ಮಹಿಳೆಯೊಬ್ಬಳು ಅನುಭವಿಸಿದ ಸಂಕಷ್ಟವನ್ನು ನೀವೂ ಅನುಭವಿಸಬೇಕಾಗುತ್ತದೆ. ಈ ಮಹಿಳೆಗೆ ಪತಿಯ ಗರ್ಲ್ ಫ್ರೆಂಡ್ ವಿಲನ್. ಮದುವೆಯಾದ್ರೂ ಗರ್ಲ್ ಫ್ರೆಂಡ್ ಜೊತೆ ವಾಸಿಸುವ ಬಯಕೆ ವ್ಯಕ್ತಪಡಿಸಿರುವ ಪತಿ, ಪತ್ನಿಗೆ ಹಿಂಸೆ ನೀಡ್ತಿದ್ದಾನಂತೆ. ಮೊದಲ ರಾತ್ರಿಯೇ ನಮ್ಮ ಕನಸು ನುಚ್ಚು ನೂರಾಯ್ತು ಎನ್ನುತ್ತಾಳೆ ಮಹಿಳೆ. ಆಕೆ ಕಥೆ ಏನು ಎಂಬುದನ್ನು ನಾವಿಂದು ಹೇಳ್ತೇವೆ.

Tap to resize

Latest Videos

ಮದುವೆಯ ಮೊದಲು ಹೀಗಿರಲ್ಲಿಲ್ಲ, ಮ್ಯಾರೀಡ್‌ ಲೈಫ್ ಕಷ್ಟ ಅನಿಸೋದ್ಯಾಕೆ ?

26 ವರ್ಷದ ಮಹಿಳೆ, ಮದುವೆ ಬಗ್ಗೆ ಸಾಕಷ್ಟು ಕನಸು ಕಂಡಿದ್ದಳು. ಪತಿ ಜೊತೆ ಜೀವನ ಪರ್ಯಂತ ಸುಖವಾಗಿ ಸಮಯ ಕಳೆಯುವ ಆಸೆ ಹೊಂದಿದ್ದಳು. ಆದ್ರೆ ಮೊದಲ ರಾತ್ರಿಯೇ ಆಕೆ ಕನಸಿನ ಗೋಪುರ ಕುಸಿದು ಬಿದ್ದಿತ್ತು. ಪತಿ ಮೊದಲ ರಾತ್ರಿ ತನ್ನ ಗರ್ಲ್ ಫ್ರೆಂಡ್ ಫೋಟೋ ತೋರಿಸಿದ್ದ. ಈಕೆ ಜೊತೆ ಜೀವನ ನಡೆಸಲು ಬಯಸ್ತೇನೆ ಎಂದಿದ್ದ. ಆಕೆ ಜೊತೆ ಸಂಬಂಧದಲ್ಲಿರುವ ಪತಿ, ಪತ್ನಿಗೆ ಕಿರುಕುಳ ನೀಡ್ತಾನಂತೆ. ನನಗೆ ಮದುವೆಯಾಗಿ ಮೂರು ವರ್ಷವಾಗಿದೆ. ಮೊದಲ ರಾತ್ರಿ ಕೋಣೆಗೆ ಬಂದ ಪತಿ, ಒಂದು ಹುಡುಗಿ ಫೋಟೋ ತೋರಿಸಿ ಈಕೆ ನನ್ನ ಗರ್ಲ್ ಫ್ರೆಂಡ್, ಈಕೆಯನ್ನೇ ನಾನು ಪತ್ನಿ ಎಂದುಕೊಂಡಿದ್ದೇನೆ ಎಂದ. ಅದ್ರಿಂದ ನಮ್ಮಿಬ್ಬರ ಮಧ್ಯೆ ಗಲಾಟೆಯಾಯ್ತು. ನಾನು ಅಳುವ ಶಬ್ಧ ಕೇಳಿ ಪತಿಯ ಸಹೋದರ ಬಂದು ನನ್ನನ್ನು ರಕ್ಷಿಸಿದ್ದ. ನಂತ್ರ ನಾನು ತವರಿಗೆ ಹೋಗಿದ್ದೆ. ಮತ್ತೆ ವಾಪಸ್ ಬರಲು, ಗಂಡನ ಮನೆಯವರು ಒಪ್ಪಿರಲಿಲ್ಲ.

ಲೈಂಗಿಕ ಸುರಕ್ಷತೆಗಲ್ಲ, ನಶೆಗೆ ! ಬೇಕಾಬಿಟ್ಟಿ ಕಾಂಡೋಮ್ ಖರೀದಿಸ್ತಿರೋ ಯುವಕರು ಮಾಡ್ತಿರೋದೇನು ?

ಕೆಲ ದಿನಗಳ ನಂತ್ರ ನನ್ನ ಪತಿಯ ಸಹೋದರ ಸಾವನ್ನಪ್ಪಿದ್ದ. ಹಾಗಾಗಿ ನಾನು ಗಂಡನ ಮನೆಗೆ ವಾಪಸ್ ಬಂದಿದ್ದೆ. ಈ ಸಂದರ್ಭದಲ್ಲೂ ಗರ್ಲ್ ಫ್ರೆಂಡ್ ವಿಷ್ಯಕ್ಕೆ ಗಲಾಟೆ ನಡೆದಿತ್ತು. ಹಾಗಾಗಿ ನಾನು ಮತ್ತೆ ತವರು ಸೇರಿದ್ದೆ. ಆದ್ರೆ ಒಂದು ದಿನ ಕುಡಿದು ಬಂದ ಪತಿ ಗಲಾಟೆ ಮಾಡಿದ್ದ. ನಾನು ಪೊಲೀಸರಿಗೆ ದೂರು ನೀಡಿದ್ದ. ಪೊಲೀಸರ ಮಧ್ಯ ಪ್ರವೇಶದ ನಂತ್ರ ಇಬ್ಬರು ಒಟ್ಟಿಗೆ ವಾಸಿಸಲು ಶುರು ಮಾಡಿದ್ದೆವು. ಆದ್ರೆ ಪತಿ ತನ್ನ ಚಟ ಬಿಡಲಿಲ್ಲ. ಗರ್ಲ್ ಫ್ರೆಂಡ್ ಹೆಸರಿನಲ್ಲಿ ನನಗೆ ಹಿಂಸೆ ನೀಡ್ತಿದ್ದ. ಇದನ್ನು ಸಹಿಸಲಾಗ್ದೆ ನಾನು ಮತ್ತೆ ತವರಿಗೆ ಬಂದಿದ್ದೇನೆ. ಗಂಡನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎನ್ನುತ್ತಾಳೆ ಮಹಿಳೆ. 
 

click me!