ಸೆಲೆಬ್ರಿಟಿಗಳಿಗೆ ಉಳಿದ ಮದುವೆ ಕಾರ್ಡ್ ಕಳುಹಿಸಿದ ವ್ಯಕ್ತಿ, ಒಬ್ಬರ ಪ್ರತಿಕ್ರಿಯೆಗೆ ಶಾಕ್!

By Suvarna News  |  First Published Jan 23, 2024, 1:52 PM IST

ಮದುವೆ ಸಂದರ್ಭದಲ್ಲಿ ಸಿದ್ಧಪಡಿಸಿದ ಕರೆಯೋಲೆಗಳನ್ನು ಏನ್ ಮಾಡ್ಬೇಕು ಗೊತ್ತಾಗದೆ ಸೆಲೆಬ್ರಿಟಿಗಳಿಗೆ ಈತ ಕಳುಹಿಸಿದ್ದಾನೆ. ನನ್ನ ಮದುವೆ ಆಗಿದೆ ಎಂಬುದು ಅವರಿಗೆ ಗೊತ್ತಾದ್ರೆ ಅವರ ಪ್ರತಿಕ್ರಿಯೆ ಹೇಗಿರುತ್ತೆ ಎಂಬುದನ್ನು ನೋಡುವ ಪ್ರಯತ್ನ ಮಾಡಿದ್ದಾನೆ. ಒಬ್ಬ ವ್ಯಕ್ತಿಯಿಂದ ಆತನ ಈ ಕಾರ್ಡ್ ಗೆ ರಿಯಾಕ್ಷನ್ ಸಿಕ್ಕಿದ್ದು, ಈತ ಕಂಗಾಲಾಗಿದ್ದಾನೆ. 
 


ಮದುವೆ, ಹುಟ್ಟುಹಬ್ಬದ ಪಾರ್ಟಿ ಅಥವಾ ಬೇರೆ ಯಾವುದೇ ದೊಡ್ಡ ಸಮಾರಂಭದಲ್ಲಿ ಕಾರ್ಡ್ ನೀಡಿ ಸ್ನೇಹಿತರು, ಬಂಧುಗಳನ್ನು ಆಹ್ವಾನಿಸುವ ಪದ್ಧತಿ ಇದೆ. ಈಗಿನ ದಿನಗಳಲ್ಲಿ ಇದು ಆನ್ಲೈನ್ ನಲ್ಲಿ ನಡೆಯುತ್ತದೆ ಆದ್ರೂ ಆಪ್ತರಿಗೆ ಕಾರ್ಡ್ ನೀಡಿಯೇ ಕರೆಯುವ ಸಂಪ್ರದಾಯ ಇನ್ನೂ ಚಾಲ್ತಿಯಲ್ಲಿದೆ. ಮದುವೆ ಸಮಯದಲ್ಲಿ ಅಥವಾ ಇನ್ನಾವುದೇ ಸಮಯದಲ್ಲಿ ಇದಕ್ಕಾಗಿ ಮಾಡಿದ ಕಾರ್ಡ್ ಗಳು ಬಾಕಿ ಉಳಿಯುತ್ತವೆ. ಈ ಕರೆಯೋಲೆಗಳನ್ನು ಏನು ಮಾಡ್ಬೇಕು ತಿಳಿಯೋದಿಲ್ಲ. ಅದನ್ನು ಎಸೆಯುವಂತಿಲ್ಲ. ಇಟ್ಟುಕೊಳ್ಳಲು ಸಾಧ್ಯವಾಗೋದಿಲ್ಲ. ಅನೇಕರ ಮನೆಯ ಮೂಲೆಯಲ್ಲಿ ಇದು ಬಿದ್ದಿರುತ್ತದೆ. ಇಲ್ಲೊಬ್ಬ ಈ ಕಾರ್ಡ್ ಮನೆ ಮೂಲೆ ಸೇರೋದಕ್ಕೆ ಬಿಟ್ಟಿಲ್ಲ. ಒಂದಿಷ್ಟು ಸಮಯವನ್ನು ಅದಕ್ಕೆ ಮೀಸಲಿಟ್ಟಿದ್ದಾನೆ. ಈ ಕಾರ್ಡುಗಳನ್ನು ಸೆಲೆಬ್ರಿಟಿಗಳ ಮನೆಗೆ ಕಳುಹಿಸಿದ್ದಾನೆ. 

ಈಗಾಗಲೇ ಆಗಿರುವ ಮದುವೆ (Marriage) ಕಾರ್ಡನ್ನು ಯಾರು ಸೆಲೆಬ್ರಿಟಿಗಳ ಮನೆಗೆ ಕಳಿಸ್ತಾರೆ ಹೇಳಿ? ಸೆಲೆಬ್ರಿಟಿ (Celebrity) ಗಳು, ದೊಡ್ಡ ವ್ಯಕ್ತಿಗಳು ಮದುವೆಗೆ ಬರಲಿ ಎನ್ನುವ ಕಾರಣಕ್ಕೆ ಅವರನ್ನು ಮೊದಲೇ ಆಹ್ವಾನಿಸಲಾಗುತ್ತದೆ. ಆದ್ರೆ ಈತ ಸ್ವಲ್ಪ ಭಿನ್ನವಾಗಿ ವರ್ತಿಸಿದ್ದಾನೆ. ಅವರು ಮದುವೆಗೆ ಬರೋದಿಲ್ಲ ಎನ್ನುವುದು ಈತನಿಗೆ ಗೊತ್ತಿತ್ತು. ಆದ್ರೆ ಕಾರ್ಡ್ (Card) ನೋಡಿ ಯಾವ ಸೆಲೆಬ್ರಿಟಿ ಪ್ರತಿಕ್ರಿಯೆ ನೀಡ್ಬಹುದು ಎಂಬ ಕುತೂಹಲವಿತ್ತು. ಅದಕ್ಕಾಗಿಯೇ ಮುಗಿದು ಹೋದ ಮದುವೆಯ ಕಾರ್ಡನ್ನು ಸೆಲೆಬ್ರಿಟಿಗಳ ಮನೆಗೆ ಕಳುಹಿಸಿದ್ದಾನೆ. ಸಿನಿಮಾ ನಟರು, ಆಟಗಾರರು, ಪ್ರಸಿದ್ಧ ಲಾಯರ್ಸ್, ರಾಷ್ಟ್ರಪತಿಗಳು ಸೇರಿದಂತೆ ಅನೇಕರಿಗೆ ಕಳುಹಿಸಿದ್ದ 27 ವರ್ಷದ ಬ್ರಿ. ಆತ ವರ್ಜೀನಿಯಾ ನಿವಾಸಿ. ಕಾರ್ಡುಗಳನ್ನು ಕಳಿಹಿಸಿದ ನಂತ್ರ ಅವರಿಂದ ಉತ್ತರ ಬರುತ್ತಾ ಎಂದು ಕಾದಿದ್ದಾನೆ. ಬ್ರೀ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜೀನ್ ಳನ್ನು ವಿವಾಹವಾಗಿದ್ದಾನೆ. 

Tap to resize

Latest Videos

ಭಗವಾನ್ ರಾಮನ ಸುತ್ತಲೇ ಸುತ್ತುತ್ತೆ ಈ ಮುಸ್ಲಿಂ ಬಹುಸಂಖ್ಯಾತ ಹಳ್ಳಿ

ಒಂದು ದಿನ ಬಂತು ಪ್ರತಿಕ್ರಿಯೆ : ಪ್ರತಿ ದಿನ ಸೆಲೆಬ್ರಿಟಿಗಳಿಂದ ಉತ್ತರ ಬರುತ್ತಾ ಎಂದು ಕಾಯುವುದು ಬ್ರಿಯ ಒಂದು ಕೆಲಸವಾಗಿತ್ತು. ಆದರೆ ಒಂದೂ ಪ್ರತಿಕ್ರಿಯೆ ಬಂದಿರಲಿಲ್ಲ. ಒಂದು ದಿನ ಮೇಲ್ ನೋಡಿದ ಬ್ರಿ ಕಂಗಾಲಾಗಿದ್ದಾನೆ. ಆತನಿಗೆ ಬಂದ ಮೇಲ್ ನೋಡಿ ಕಿರುಚಿಕೊಂಡಿದ್ದಾನೆ. ತನ್ನ ತಾಯಿ, ಸ್ನೇಹಿತರಿಗೆ ಕರೆ ಮಾಡಿ ಹೇಳಿದ್ದಾನೆ. ಅಷ್ಟಕ್ಕೂ ಆತನ ಮದುವೆ ಕಾರ್ಡ್ ಗೆ ಪ್ರತಿಕ್ರಿಯೆ ನೀಡಿದವರು ಮತ್ತಾರೂ ಅಲ್ಲ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ಮಿಚೆಲ್. ಬ್ರಿ, ಬರಾಕ್ ಒಬಾಮಾರಿಗೆ ಕೂಡ ಮದುವೆ ಆಮಂತ್ರಣವನ್ನು ಕಳುಹಿಸಿದ್ದ. 

ಮಾಜಿ ರಾಷ್ಟ್ರಪತಿಗಳ ಮುದ್ರೆ ಮತ್ತು ಸಹಿ ಇರುವ ಪತ್ರ ಬ್ರಿಗೆ ಬಂದಿದೆ.  ಲಕೋಟೆಯ ಮೇಲಿನ ಎಡ ಮೂಲೆಯಲ್ಲಿ ಬರಾಕ್ ಒಬಾಮಾ  ಹೆಸರಿನ ಪಕ್ಕದಲ್ಲಿ ಅಧ್ಯಕ್ಷರ ಚಿನ್ನದ ಸ್ಟಾಂಪ್ ಇದೆ. ಇದ್ರ ಜೊತೆ ಬರಾಕ್ ಒಬಾಮಾ ಮತ್ತು ಮಿಚೆಲ್ ಸಂದೇಶವೊಂದನ್ನು ನೀಡಿದ್ದಾರೆ. 

ಪ್ರೀತಿಯ ಬ್ರಿ ಹಾಗೂ ಜಿನ್, ನಿಮ್ಮ ವಿವಾಹಕ್ಕೆ ಶುಭಕೋರುತ್ತೇವೆ. ನಿಮ್ಮ ಮದುವೆ ಪ್ರೀತಿ, ನಗು ಮತ್ತು ಸಂತೋಷದಿಂದ ಕೂಡಿರಲಿ ಎಂದು ನಾವು ಬಯಸುತ್ತೇವೆ. ಪ್ರತಿ ವರ್ಷ ನಿಮ್ಮ ಬಾಂಧ್ಯವ್ಯ ಮತ್ತಷ್ಟು ಗಟ್ಟಿಯಾಗಲಿ ಎಂದು ಪತ್ರದಲ್ಲಿ ಬರೆಯಲಾಗಿದೆ.

ನಿಮಗೆ ಗೊತ್ತಾ? ನೀವು ತಿನ್ನೋ ಈ ಆಹಾರಗಳು ಆಲ್ಕೋಹಾಲ್‌ಗಿಂತಲೂ ಡೇಂಜರಸ್!

ಈ ಪತ್ರ ನೋಡಿ ಬ್ರಿ ಖುಷಿಯಲ್ಲಿ ಕುಣಿದಾಡಿದ್ದಾನೆ. ಒಮ್ಮೆ ನನಗೆ ಆಘಾತವಾಯ್ತು. ಶಾಕ್ ನಿಂದ ಹೊರಗೆ ಬರಲು ಸಮಯ ಹಿಡಿತು ಎಂದು ಬ್ರಿ ಹೇಳಿದ್ದಾನೆ. ಸಾಮಾಜಿಕ ಜಾಲತಾಣ ಟಿಕ್ ಟಾಕ್ ನಲ್ಲಿ ತನ್ನ ಕಥೆಯನ್ನು ಬ್ರಿ ಹೇಳಿಕೊಂಡಿದ್ದಾನೆ. ಇದು ಕೆಲವೇ ಗಂಟೆಯಲ್ಲಿ ವೈರಲ್ ಆಗಿದೆ. ಹತ್ತು ಲಕ್ಷಕ್ಕೂ ಹೆಚ್ಚು ಬಾರಿ ಈ ವಿಡಿಯೋವನ್ನು ಬಳಕೆದಾರರು ನೋಡಿದ್ದಾರೆ. ಸಾಕಷ್ಟು ಪ್ರತಿಕ್ರಿಯೆ ಇದಕ್ಕೆ ಸಿಕ್ಕಿದೆ. 

click me!