ಕನ್ಯಾದಾನವು ಪುರುಷ ಪ್ರಧಾನವಾಗಿದೆ ಎಂಬ ದೂರುಗಳು ಹಲವೆಡೆಯಿಂದ ಕೇಳಿ ಬರುತ್ತಿವೆ. ಈ ನಡುವೆ ಅಲಹಾಬಾದ್ ಹೈಕೋರ್ಟ್ ಹಿಂದೂ ವಿವಾಹ ಕಾಯ್ದೆಯಡಿ ವಿವಾಹದಲ್ಲಿ ಕನ್ಯಾದಾನ ಅನಿವಾರ್ಯವಲ್ಲ ಎಂದಿದೆ. 

ಹಿಂದೂ ವಿವಾಹವನ್ನು ಶಾಸ್ತ್ರೋಕ್ತವಾಗಿ ನಡೆಸಲು ಸಪ್ತಪದಿಯಿದ್ದರೆ ಸಾಕು, ಮತ್ತು ಹಿಂದೂ ವಿವಾಹ ಕಾಯಿದೆಯಡಿಯಲ್ಲಿ ವಿವಾಹವನ್ನು ನೆರವೇರಿಸಲು ಕನ್ಯಾದಾನ ಅನಿವಾರ್ಯವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 7 ಹಿಂದೂ ವಿವಾಹದ ಅತ್ಯಗತ್ಯ ಸಮಾರಂಭವಾಗಿ ಸಪ್ತಪದಿಯನ್ನು ಮಾತ್ರ ಹೇಳುತ್ತದೆ ಎಂದು ನ್ಯಾಯಾಲಯ ವಿವರಿಸಿದೆ. ಕೇವಲ ಹಿಂದೂ ವಿವಾಹ ಕಾಯ್ದೆಯಲ್ಲಿ ಕನ್ಯಾದಾನ ಇಲ್ಲ ಎಂಬುದಲ್ಲ, ಈಗ ಹಲವು ಮಹಿಳೆಯರು ಹೆಣ್ಣನ್ನು ದಾನವೆಂದು ಕೊಡುವ ಈ ಆಚರಣೆ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. 

ದೃಷ್ಟಿ ಇಲ್ದಿದ್ರೇನಂತೆ, ದೂರದೃಷ್ಟಿಯಿಂದ 50 ಕೋಟಿ ರೂ. ಕಂಪನಿ ಕಟ್ಟಿದ ಬೊಳ್ಳ

ಹೆಣ್ಣು ದಾನದ ವಸ್ತುವೇ?
ಈ ಹಿಂದೆ ಆಲಿಯಾ ಭಟ್ ಜಾಹೀರಾತೊಂದು ಕನ್ಯಾದಾನದ ವಿಷಯವಾಗಿ ಮಾತನಾಡಿ ಚರ್ಚೆಗೆ ಕಾರಣವಾಗಿತ್ತು. ಅದರಲ್ಲಿ ಆಲಿಯಾ ಪ್ರೀತಿಯಿಂದ ಹೆತ್ತು ಬೆಳೆಸಿದ ಮಗಳು ದಾನದ ವಸ್ತುವೇ ಎಂದು ಪ್ರಶ್ನಿಸಿದ್ದರು. ಜೊತೆಗೆ, ಜಾಹೀರಾತು, ಕನ್ಯಾದಾನವಲ್ಲ, ಕನ್ಯಾಮಾನವೆಂದು ಈ ಹೆಸರು ಬದಲಿಸಬೇಕು, ಹೆಣ್ಣಿನ ತಂದೆತಾಯಿ ಗಂಡಿನ ಕೈಗೆ ವಧುವಿನ ಕೈ ಇಡುವಂತೆ, ವರನ ಪೋಷಕರು ಕೂಡಾ ತಮ್ಮ ಮಗನನ್ನು ವಧುವಿನ ಪೋಷಕರ ಕೈಗೆ ಕೊಡುವಂತೆ ಚಿತ್ರಿಸಲಾಗಿತ್ತು. 

ಕನ್ಯಾದಾನವು ಹಿಂದೂ ವಿವಾಹಗಳಲ್ಲಿ ಒಂದು ಸಾಂಪ್ರದಾಯಿಕ ಆಚರಣೆಯಾಗಿದ್ದು, ಇದರಲ್ಲಿ ತಂದೆ ತನ್ನ ಮಗಳನ್ನು ವರನಿಗೆ ಧಾರೆ(ದಾನ) ಎರೆದು ಕೊಡುತ್ತಾನೆ. ಸಮಾಜದಲ್ಲಿ ಅನೇಕ ಮಹಿಳೆಯರು ಅಂತಹ ಆಚರಣೆಯ ಪ್ರಾಬಲ್ಯವನ್ನು ಪ್ರಶ್ನಿಸಿದ್ದಾರೆ, ಅದು ಸರಳವಾದ ಪುರುಷ ಪ್ರಧಾನವಾಗಿ ಕಾಣುತ್ತದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಕೆಲಸಕ್ಕೆ ಒತ್ತಡ ಹೇರುವ ಮ್ಯಾನೇಜರ್ ಕೊಲೆಗೆ ಗೂಂಡಾಗಳನ್ನು ನೇಮಿಸಿದ ಉದ್ಯೋಗಿಗಳು; ಶಾಕಿಂಗ್ ವಿಡಿಯೋ ವೈರಲ್

ಕೊಟ್ಟ ಹೆಣ್ಣು ಕುಲಕ್ಕೆ ಹೊರಗಾ?
ಹೆಣ್ಣು ಗಂಡು ಸಮಾನ ಎಂಬ ಮಟ್ಟಿಗೆ ಸಮಾಜ ಬದಲಾಗಿರುವಾಗ, ಈಗಲೂ ಕೊಟ್ಟ ಹೆಣ್ಣು ಕುಲಕ್ಕೆ ಹೊರಗಾಗುವುದು ಹೇಗೆ? ಈಗ ಹೆಚ್ಚಿನ ವಿವಾಹದ ಬಳಿಕ ಗಂಡಹೆಂಡತಿ ಇಬ್ಬರೇ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಾರೆ. ಹೆಣ್ಣು ಹೇಗೆ ವರನ ತಂದೆತಾಯಿಯನ್ನು ತನ್ನವರು ಎಂದು ನೋಡುತ್ತಾಳೋ, ಗಂಡೂ ಹಾಗೆಯೇ ವಧುವಿನ ಪೋಷಕರ ಜವಾಬ್ದಾರಿಯನ್ನೂ ತೆಗೆದುಕೊಳ್ಳುತ್ತಾನೆ. ಪತಿ ಪತ್ನಿ ಇಬ್ಬರೂ ದುಡಿಯುತ್ತಾರೆ. ಸಾಕಷ್ಟು ಹೆಣ್ಣುಮಕ್ಕಳು ತಮ್ಮ ತಂದೆತಾಯಿಯ ಆರ್ಥಿಕ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ. ಹೆಣ್ಣುಮಕ್ಕಳು ಕೂಡಾ ಗಂಡಿನಂತೇ ಮನೆಯ ಆರ್ಥಿಕ ಆಧಾರವಾಗುತ್ತಿದ್ದಾರೆ. ಅವರಷ್ಟೇ ಪ್ರೀತಿಯಿಂದ ಬೆಳೆದು ಬಂದಿರುತ್ತಾರೆ. ಹಾಗಿದ್ದ ಮೇಲೆ ಕೊಟ್ಟ ಹೆಣ್ಣು ಎಂದಿಗೂ ಕುಲಕ್ಕೆ ಹೊರಗಾಗಲು ಸಾಧ್ಯವಿಲ್ಲ. ಈ ಹಳೆಯ ವ್ಯಾಖ್ಯಾನ ಬದಲಾಗಬೇಕಿದೆ. ಗಂಡೋ ಹೆಣ್ಣೋ ಮಕ್ಕಳೆಂದರೆ ಎಲ್ಲ ಒಂದೇ ಎಂದು ಬೆಳೆಸುವ ಪೋಷಕರಿರುವಾಗ- ಬೆಳೆದ ಮೇಲೆ ಮಾತ್ರ ಹೆಣ್ಣನ್ನು ವಿವಾಹದಲ್ಲಿ 'ದಾನ'ವಾಗಿ ಕೊಡುವುದು ಎಷ್ಟು ಸಮಂಜಸ?