#Feelfree: ಅವಳು ಸೆಕ್ಸ್‌ನಲ್ಲಿ ಅನುಭವಿಯಂತೆ ಕಾಣ್ತಾಳೆ, ನಂಗೆ ಮೋಸ ಆಗಬಹುದಾ?

Suvarna News   | Asianet News
Published : Apr 22, 2020, 05:42 PM ISTUpdated : Jun 04, 2020, 12:13 PM IST
#Feelfree: ಅವಳು ಸೆಕ್ಸ್‌ನಲ್ಲಿ ಅನುಭವಿಯಂತೆ ಕಾಣ್ತಾಳೆ, ನಂಗೆ ಮೋಸ ಆಗಬಹುದಾ?

ಸಾರಾಂಶ

ಹಾಗೆ ನೋಡಿದರೆ ಈಗಿನ ತಲೆಮಾರಿನ ಎಲ್ಲ ಹುಡುಗ ಹುಡುಗಿಯರೂ ಸೆಕ್ಸ್ ವಿಚಾರದಲ್ಲಿ ಮುಕ್ತವಾಗಿ ಮಾತಾಡುವುದು, ತಮ್ಮ ಆದ್ಯತೆಗಳನ್ನು ಮುಕ್ತವಾಗಿ ಪ್ರಕಟಿಸುವುದು ಸಾಮಾನ್ಯ. ಇದು ಅವರ ಗೆಳೆಯ ಗೆಳತಿಯರಿಂದ, ಇಂಟರ್‌ನೆಟ್‌ನ ಯಥೇಚ್ಛ ಲಭ್ಯತೆಯಿಂದ, ವಿದ್ಯಾಭ್ಯಾಸದಿಂದ ಸಾಧ್ಯವಾಗಿದೆ.

ಪ್ರಶ್ನೆ: ಇತ್ತೀಚಿಗೆ ನನ್ನ ಮದುವೆಗೆ ಹುಡುಗಿ ನೋಡಲಾಗಿತ್ತು. ನಾವಿಬ್ಬರೂ ಒಪ್ಪಿಗೆ ಸೂಚಿಸಿದ್ದೆವು. ನಿಶ್ಚಿತಾರ್ಥ, ಮದುವೆ ಫಿಕ್ಸ್ ಮಾಡೋಣವೆನ್ನುವಷ್ಟರಲ್ಲಿ ಲಾಕ್‌ಡೌನ್ ಆರಂಭ ಆಯ್ತು. ಮದುವೆ ಮುಂದೆ ಹೋಯ್ತು. ಬಳಿಕ ನಾವಿಬ್ಬರೂ ಫೋನ್‌ನಲ್ಲಿ ಸಂಭಾಷಣೆ ಆರಂಭಿಸಿದೆವು. ಇಬ್ಬರ ಮಾತುಕತೆಯೂ ಸೆಕ್ಸ್ ಕಡೆಗೆ ತಿರುಗಿತು. ಆಗ ನನಗೆ ಅರಿವಾಯ್ತು ಆಕೆ ಈ ವಿಷಯದಲ್ಲಿ ತುಂಬಾ ನಿರ್ಭಿಡೆ ಹೊಂದಿದ್ದಾಳೆ ಎಂಬುದು. ನಂತರ ನಾವಿಬ್ಬರೂ ಪರಸ್ಪರ ವಿಡಿಯೋ ಕಾಲ್ ಮೂಲಕ ನೋಡಿಕೊಂಡು ಸೆಕ್ಸ್ ಚಾಟ್ ಹಾಗೂ ಹಸ್ತಮೈಥುನ ಮಾಡಿಕೊಂಡಿದ್ದೇವೆ. ಆಕೆಗೆ ಸೆಕ್ಸ್‌ನಲ್ಲಿ ನನಗಿಂತ ಹೆಚ್ಚು ವಿಚಾರ ಗೊತ್ತಿದೆ. ಕೆಲವು ಶಬ್ದಗಳನ್ನು ಮುಜುಗರವಿಲ್ಲದೆ ಬಳಸುತ್ತಾಳೆ. ನನಗೆ ಈಗ ಏನು ಆತಂಕ ಎಂದರೆ, ಆಕೆಗೆ ಈಗಾಗಲೇ ಯಾರೊಂದಿಗಾದರೂ ಸೆಕ್ಸ್ ಅನುಭವ ಇದ್ದಿರಬಹುದೇ? ಇಲ್ಲವಾದರೆ ಇಷ್ಟೊಂದು ತಿಳುವಳಿಕೆ ಹೇಗೆ ಸಾಧ್ಯ? ಮದುವೆ ವಿಚಾರ ಮುಂದುವರಿಸಬೇಕೆ ಬೇಡವೆ?

ಉತ್ತರ: ನಿಮ್ಮ ಆತಂಕ ಕಾರಣವಿಲ್ಲದ್ದು. ಮದುವೆ ವಿಚಾರ ನೀವೇ ಪ್ರಸ್ತಾಪಿಸಿದಿರಿ. ಇಬ್ಬರೂ ಒಪ್ಪಿದಿರಿ. ನಂತರ ಖಾಸಗಿಯಾಗಿ ಮಾತಾಡಿಕೊಳ್ಳುವಾಗ, ಅವಳನ್ನು ಸೆಕ್ಸ್ ಮಾತುಕತೆಗೆ ಎಳೆದವರೂ ನೀವೇ. ಪರಸ್ಪರ ನೋಡಿಕೊಂಡು ಸುಖಪಡೋಣ ಎಂದು ವಿಡಿಯೋ ಕಾಲ್ ಆರಂಭಿಸಿದವರೂ ನೀವೇ. ನಿಮ್ಮ ಇಚ್ಛೆಗೆ ತಕ್ಕಂತೆಯೇ ಅವಳು ವರ್ತಿಸಿದ್ದಾಳೆ. ನಿಮ್ಮಿಷ್ಟಕ್ಕೆ ತಕ್ಕಂತೆ ಅವಳನ್ನು ಬಳಸಿಕೊಂಡು‌ ಈಗ ಅನುಮಾನವನ್ನು ಮಾತ್ರ ಅವಳ ಮೇಲೆ ಪಡುವುದು ಸರಿಯಲ್ಲ. ಅವಳ ಜೊತೆ ಸೆಕ್ಸ್ ಚಾಟಿಂಗ್ ಮೊದಲು ಅದರ ಅನುಭವ ನಿಮಗಿತ್ತೇ? ಇಲ್ಲವಾದರೆ ಅವಳನ್ನು ಹಾಗೆ ಆರೋಪಿಸುವ ಕಾರಣ ಏನಿದೆ?

ವಿಡಿಯೋ ಕಾಲಿಂಗ್‍ನಲ್ಲೇ ಎಷ್ಟೆಲ್ಲ ಮೋಜು-ಮಸ್ತಿ ಮಾಡ್ಬಹುದು ಗೊತ್ತಾ? ...

ಅವಳು ತುಂಬಾ ಅನುಭವಿಯಂತೆ ಕಾಣಿಸ್ತಾಳೆ ಎಂದಿದ್ದೀರಿ. ಹಾಗೆ ನೋಡಿದರೆ ಈಗಿನ ತಲೆಮಾರಿನ ಎಲ್ಲ ಹುಡುಗ ಹುಡುಗಿಯರೂ ಸೆಕ್ಸ್ ವಿಚಾರದಲ್ಲಿ ಮುಕ್ತವಾಗಿ ಮಾತಾಡುವುದು, ತಮ್ಮ ಆದ್ಯತೆಗಳನ್ನು ಮುಕ್ತವಾಗಿ ಪ್ರಕಟಿಸುವುದು ಸಾಮಾನ್ಯ. ಇದು ಅವರ ಗೆಳೆಯ ಗೆಳತಿಯರಿಂದ, ಇಂಟರ್‌ನೆಟ್‌ನ ಯಥೇಚ್ಛ ಲಭ್ಯತೆಯಿಂದ, ವಿದ್ಯಾಭ್ಯಾಸದಿಂದ ಸಾಧ್ಯವಾಗಿದೆ. ಅನುಮಾನ ಪಡಬೇಡಿ. ಇನ್ನು ಮದುವೆ‌ ಮಾತು, ಅದು ಈಗೇಕೆ. ಈ ಟೈಮ್‌ನಲ್ಲಿ ಖುಷಿಯಾಗಿರಿ. ಪ್ರೀತಿ ಕಾಪಾಡಿಕೊಳ್ಳಿ. 


ಪ್ರಶ್ನೆ: ನಮಗಿಬ್ಬರಿಗೂ ಮದುವೆಯಾಗಿ ಐದು ತಿಂಗಳಾದವು. ಲೈಂಗಿಕವಾಗಿ ಹೆಚ್ಚು ಸಕ್ರಿಯರಾಗಿದ್ದೇವೆ. ಒಂದು ರಾತ್ರಿ, ನಮ್ಮ ಲೈಂಗಿಕ ಚಟುವಟಿಕೆಗಳನ್ನೆಲ್ಲ ಇನ್ಯಾರೋ ಕೇಳಿಸಿಕೊಳ್ಳುತ್ತಿದ್ದಾರೆ ಎಂಬ ಭಾವನೆ ಬಂತು. ಮರುದಿನ ನೋಡಿದರೆ, ನಮ್ಮಿಬ್ಬರ ಪ್ರೇಮಚೇಷ್ಟೆಗಳನ್ನು ಹೆಂಡತಿ ರೆಕಾರ್ಡ್ ಮಾಡಿಕೊಂಡು ಅವಳ ಗೆಳತಿಗೆ ಕಳಿಸುತ್ತಿರುವುದು ಗೊತ್ತಾಯಿತು. ಹಾಗೇ ಆ ಗೆಳತಿಯ ಆಡಿಯೋ ರೆಕಾರ್ಡ್‌ಗಳೂ ಇವಳಿಗೆ ಬರುತ್ತಿದ್ದವು. ಇದು ಗೊತ್ತಾದ ಮೇಲೆ ಸೆಕ್ಸ್‌ನಲ್ಲಿ ಮೊದಲಿನ ಆಸಕ್ತಿ ಮೂಡುತ್ತಿಲ್ಲ. ಅವರಿಬ್ಬರಿಗೂ ಹೀಗೆ ಯಾಕೆ ಮಾಡುತ್ತಿರಬಹುದು?

ಅವನಲ್ಲಿ, ಇವಳಿಲ್ಲಿ...ಆದರೂ, ಪ್ರೀತಿ ಬಾಡದಂತೆ ಏನು ಮಾಡಬೇಕು? ...

ಉತ್ತರ: ಇದಕ್ಕೆ ಇಂಗ್ಲಿಷ್‌ನಲ್ಲಿ ವೊವೆಯರಿಸ್ಮ್ ಎನ್ನುತ್ತಾರೆ. ಎಂದರೆ ಇಣುಕುಕಾಮ ಎಂದರ್ಥ. ಕೆಲವರು ಇನ್ನೊಬ್ಬರ ಲೈಂಗಿಕ ಕ್ರಿಯೆ ವೀಕ್ಷಿಸುವುದರಲ್ಲಿ, ಅವರ ಸೆಕ್ಸ್‌ ವೇಳೆ ಉಂಟಾಗುವ ಶಬ್ದಗಳನ್ನು ಆಲಿಸುವುದರಲ್ಲಿ ವಿಚಿತ್ರ ಸುಖ ಅನುಭವಿಸುತ್ತಾರೆ. ನಿಮ್ಮ ಹೆಂಡತಿಯ ಗೆಳತಿಗೆ ಅದು ಇರಬಹುದು. ನಿಮ್ಮ ಹೆಂಡತಿಗೂ ಇದೆ ಎಂಬ ಅವಸರದ ತೀರ್ಮಾನಕ್ಕೆ ಬರಬೇಡಿ. ಇದ್ದರೂ ತಪ್ಪೇನಲ್ಲ. ಒಬ್ಬೊಬ್ಬರ ಸೆಕ್ಸ್ ಅಭಿರುಚಿಗಳು ಒಂದೊಂದು ವಿಧವಾಗಿ ಇರುತ್ತವೆ. ನಿಮ್ಮ ಹೆಂಡತಿಯಲ್ಲಿ ಈ ಪ್ರವೃತ್ತಿ ಇದೆಯಾ ಎಂಬುದನ್ನು ತಿಳಿಯಲು ಅವರ ಮೊಬೈಲ್ ಇಣುಕಿ ನೋಡುವುದು ಮಾರ್ಗವಲ್ಲ. ಒಟ್ಟಿಗೆ ಕೂತು, ಮುಕ್ತವಾಗಿ ಮಾತಾಡಿ, ಅವಳ ಆದ್ಯತೆ ಏನು ಎಂದು ಅರ್ಥ ಮಾಡಿಕೊಳ್ಳಿ. ಅದಕ್ಕೆ ತಕ್ಕಂತೆ ನೀವೂ ವರ್ತಿಸಿದರೆ ನಿಮಗೂ ಸುಖ ಅಲ್ಲವೇ?

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!