ನಾದಿನಿಯೊಂದಿಗೆ ಓಡಿಹೋದ ಭಾವ, ಸಿಟ್ಟಿಗೆದ್ದ ಭಾಮೈದ ಆತನ ತಂಗಿ ಕರ್ಕೊಂಡು ಎಸ್ಕೇಪ್.!

Published : Sep 17, 2025, 02:40 PM IST
Man Elopes with wifes sister

ಸಾರಾಂಶ

ಉತ್ತರ ಪ್ರದೇಶದ ಬರೇಲಿಯಲ್ಲಿ, ಗಂಡನೊಬ್ಬ ತನ್ನ ಹೆಂಡತಿಯ ತಂಗಿಯೊಂದಿಗೆ ಓಡಿಹೋಗಿದ್ದಾನೆ. ಇದಕ್ಕೆ ಪ್ರತೀಕಾರವಾಗಿ, ಆತನ ಹೆಂಡತಿಯ ತಮ್ಮ, ಗಂಡನ ತಂಗಿಯನ್ನೇ ಕರೆದುಕೊಂಡು ಪರಾರಿಯಾಗಿದ್ದು, ನಂತರ ಎರಡೂ ಕುಟುಂಬಗಳು ಸಂಧಾನ ಮಾಡಿಕೊಂಡು ಪ್ರಕರಣವನ್ನು ಸುಖಾಂತ್ಯಗೊಳಿಸಿವೆ.

ಹೆಂಡ್ತಿ ತಂಗಿ ಜೊತೆ ಓಡಿ ಹೋದ ಗಂಡ

ಬರೇಲಿ: ಸಿನಿಮೀಯಾ ಶೈಲಿಯ ಘಟನೆಯೊಂದು ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಗಂಡನೋರ್ವ ಹೆಂಡ್ತಿ ತಂಗಿ ಜೊತೆ ಓಡಿ ಹೋಗಿದ್ದು, ಈತನಿಗೆ ಬುದ್ಧಿ ಕಲಿಸಲು ಆತ ಓಡಿ ಹೋದ ಮರುದಿನವೇ ಆತನ ಬಾಮೈದ ಅಂದರೆ ಹೆಂಡ್ತಿ ತಮ್ಮ (ಭಾವನ ತಂಗಿ) ಆತನ ತಂಗಿಯನ್ನು ಹಾರಿಸಿಕೊಂಡು ಹೋದಂತಹ ಘಟನೆ ನಡೆದಿದೆ. ಆದರೆ ನಂತರ ಎರಡು ಕುಟುಂಬದವರು ಮಧ್ಯೆ ಪ್ರವೇಶಿಸಿ ಸಂಧಾನ ನಡೆಸಿದ ನಂತರ ಈ ಪ್ರಕರಣ ಸುಖಾಂತ್ಯಗೊಂಡಿದೆ ಎಂದು ವರದಿಯಾಗಿದೆ.

ಗಂಡನ ತಂಗಿ ಜೊತೆ ಓಡಿ ಹೋದ ಹೆಂಡ್ತಿ ತಮ್ಮ

ದೇವೇರಿಯನ್ ಪೊಲೀಸ್ ಠಾಣೆ ವ್ಯಾಪ್ತಿಯ ಕಮಲುಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಆರು ವರ್ಷಗಳ ಹಿಂದೆ ಮದುವೆಯಾಗಿದ್ದ ಎರಡು ಮಕ್ಕಳ ತಂದೆಯೂ ಆಗಿರುವ 28 ವರ್ಷದ ಕೇಶವ್ ಕುಮಾರ್ ಎಂಬಾತ ಕಳೆದ ತಿಂಗಳು ಆಗಸ್ಟ್ 23ರಂದು ತನ್ನ 19 ವರ್ಷದ ನಾದಿನಿ ಕಲ್ಪನಾ ಜೊತೆ ಪರಾರಿಯಾಗಿದ್ದಾನೆ. ಇದು ಎರಡು ಕುಟುಂಬದದಲ್ಲಿ ದೊಡ್ಡ ಕಲಹವನ್ನು ಸೃಷ್ಟಿಸಿದೆ. ಈ ಘಟನೆಯಿಂದ ಕುಪಿತಗೊಂಡ ಕೇಶವ್‌ಕುಮಾರ್‌ನ ಬಾಮೈದ ಅಂದರೆ ಹೆಂಡ್ತಿ ತಮ್ಮ 22 ವರ್ಷದ ರವೀಂದ್ರ ಎಂಬಾತ ಕೇಶವ್‌ಕುಮಾರ್‌ನ 19 ವರ್ಷದ ತಂಗಿಯನ್ನು ಕರೆದುಕೊಂಡು ಓಡಿ ಹೋಗಿದ್ದಾನೆ.

ಒಂದರನಂತರ ಒಂದರಂತೆ ನಡೆದ ಈ ಎರಡು ಘಟನೆಗಳು ಎರಡು ಕುಟುಂಬವನ್ನು ಅವಮಾನದಿಂದ ತಲೆ ತಗ್ಗಿಸುವಂತೆ ಮಾಡಿದವು. ಅಲ್ಲದೇ ಕುಟುಂಬದವರು ಪರಸ್ಪರ ನವಾಬ್‌ಗಂಜ್‌ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಎರಡು ಕುಟುಂಬಗಳು ಪರಸ್ಪರ ಕಿತ್ತಾಡಿಕೊಂಡು ಇನ್ನಷ್ಟು ರಾಡಿ ಮಾಡುವ ಬದಲು ಪ್ರಕರಣವನ್ನು ಸುಖಾಂತ್ಯಗೊಳಿಸಲು ನಿರ್ಧರಿಸಿ ಸಂಧಾನ ನಡೆಸಲು ಮುಂದಾಗಿದ್ದಾರೆ.

ಓಡಿ ಹೋದ ಜೋಡಿಯನ್ನು ಹುಡುಕಿ ಕರೆತಂದ ಪೊಲೀಸರು: ಪ್ರಕರಣ ಸುಖಾಂತ್ಯ

ಹೀಗೆ ಓಡಿ ಹೋದ ಜೋಡಿಗಳನ್ನು ನಾವು ಸೆಪ್ಟೆಂಬರ್ 14 ಹಾಗೂ 15ರಂದು ಪತ್ತೆ ಮಾಡಿದೆವು. ಅವರ ಕುಟುಂಬದವರು ಅವರನ್ನು ಪೊಲೀಸ್ ಠಾಣೆಯಲ್ಲಿ ಭೇಟಿ ಮಾಡಿದರು. ಕುಟುಂಬ ಹಾಗೂ ಸಮುದಾಯದ ಹಿರಿಯರು ಕೂಡ ಪೊಲೀಸ್ ಠಾಣೆಗೆ ಬಂದಿದ್ದರು. ಆದರೆ ಅತೀ ಅಪರೂಪ ಎಂಬಂತೆ ಮಾತುಕತೆಯ ಸಮಯದಲ್ಲಿ ಹೊಡೆದಾಡುವ ಬದಲು ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅಚ್ಚರಿ ಎಂಬಂತೆ ಅವರನ್ನು ಜೋಡಿಯಾಗಿಯೇ ಬಿಡಲು ಯಾವುದೇ ಕಾನೂನು ಕ್ರಮ ಕೈಗೊಳ್ಳದಿರಲು ಕುಟುಂಬದವರು ನಿರ್ಧರಿಸಿದ್ದರು ಎಂದು ನವಾಬ್‌ಗಂಜ್ ಎಸ್‌ಹೆಚ್‌ಒ ಅರುಣ್‌ ಕುಮಾರ್‌ ಶ್ರೀವಾಸ್ತವ್ ಹೇಳಿದ್ದಾರೆ.

ಆದರೆ ಪ್ರಕರಣ ಹೀಗೆ ಸುಖಾಂತ್ಯಗೊಂಡಿದ್ದರು ಇದು ಈ ಗ್ರಾಮದಲ್ಲಿ ಈಗ ಟಾಕ್ ಆಫ್ ದಿ ಟೌನ್ ಆಗಿದ್ದು, ಜನ ಈ ವಿಚಾರವನ್ನೇ ಹೇಳಿಕೊಂಡು ನಗುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಎರಡೇ ಹೆರಿಗೆಯಲ್ಲಿ 7 ಮಕ್ಕಳು:ತ್ರಿವಳಿಯ ನಂತರ 4 ಮಕ್ಕಳಿಗೆ ಒಮ್ಮೆಗೆ ಜನ್ಮ ನೀಡಿದ ಗಾರೆ ಕೆಲಸ ಮಾಡ್ತಿದ್ದ ತಾಯಿ

ಇದನ್ನೂ ಓದಿ:  ಇಂದು ಚಿನ್ನದ ದರದಲ್ಲಿ ಇಳಿಕೆ: ಹೇಗಿದೆ ನೋಡಿ ನಿಮ್ಮ ನಗರಗಳಲ್ಲಿ ಇಂದು ಬೆಳ್ಳಿ ಬಂಗಾರ ದರ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ