ನಾನೇನು ಇಲಿ ತರ ಕಾಣ್ತೀನಾ ಎನ್ನುತ್ತಲೇ ಬ್ರೇಕಪ್ ಮಾಡ್ಕೊಂಡ ಹುಡುಗಿ! ಹುಡುಗ ಕಕ್ಕಾಬಿಕ್ಕಿ

By Suvarna News  |  First Published Apr 6, 2024, 3:43 PM IST

ಈಗಿನ ದಿನಗಳಲ್ಲಿ ಬ್ರೇಕ್ ಅಪ್ ಗೆ ದೊಡ್ಡ ಕಾರಣ ಬೇಕಾಗಿಲ್ಲ. ಸಣ್ಣಪುಟ್ಟ ಕಾರಣಕ್ಕೂ ಸಂಬಂಧ ಮುರಿದು ಬೀಳುತ್ತೆ. ಈಗ ವೈರಲ್ ಆಗಿರುವ ಸುದ್ದಿ ಇದಕ್ಕೆ ಸಾಕ್ಷ್ಯ. ಬಾಯ್ ಫ್ರೆಂಡ್ ಹೊಗಳಿಕೆಯನ್ನೇ ಗರ್ಲ್ ಫ್ರೆಂಡ್ ಬ್ರೇಕ್ ಅಪ್ ಗೆ ಬಳಸಿಕೊಂಡಿದ್ದಾಳೆ.
 


ಪ್ರೀತಿಸುವ ವ್ಯಕ್ತಿ ನಿಮಗೆ ಎಷ್ಟೇ ಆಪ್ತರಾಗಿರಲಿ ನಿಮ್ಮ ಎಲ್ಲ ಮಾತನ್ನು ಅವರು ಸ್ವಾಗತಿಸಬೇಕೆಂದೇನಿಲ್ಲ. ಅನೇಕ ಬಾರಿ ನೀವು ಶುದ್ಧ ಮನಸ್ಸಿನಿಂದ ಹೇಳಿದ ಮಾತನ್ನೂ ಅವರು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇದೆ. ವಿಶ್ವದಲ್ಲಿ ಕೆಲ ಜನರು ವಿಚಿತ್ರ ಸ್ವಭಾವವನ್ನು ಹೊಂದಿರುತ್ತಾರೆ. ನೀವು ಎಷ್ಟೇ ಒಳ್ಳೆಯವರಾಗಿರಿ ಅವರು ನಿಮ್ಮನ್ನು ತಪ್ಪಾಗಿಯೇ ತಿಳಿದುಕೊಳ್ತಾರೆ. ನಿಮ್ಮ ಮಾತಿಗೆ ಬೇರೆಯೇ ಅರ್ಥ ಕಲ್ಪಿಸುತ್ತಾರೆ. ಇಂಥ ಜನರ ಜೊತೆ ಜೀವನ ನಡೆಸೋದು ಸುಲಭವಲ್ಲ. ಅದು ಒಂದು ಸವಾಲಿನ ಸಂಗತಿ. ಅಂಥವರನ್ನು ನೀವು ಮನಸ್ಸಿನಿಂದ  ಹೊಗಳಿದ್ರೂ ಅವರು ನಿಮ್ಮ ಮಾತನ್ನು ಕೆಟ್ಟದಾಗಿ ಭಾವಿಸಿ ನಿಮ್ಮ ಜೊತೆ ಜಗಳ ಶುರು ಮಾಡ್ತಾರೆ.

ಹೆಣ್ಣು ಮತ್ತು ಹೊಗಳಿಕೆ ಎರಡೂ ಒಂದು ನಾಣ್ಯದ ಎರಡು ಮುಖವಿದ್ದಂತೆ. ಹೊಗಳಿಕೆ ಕೇಳಿದ್ರೆ ಹೆಣ್ಮಕ್ಕಳು ಉಬ್ಬಿ ಹೋಗ್ತಾರೆ. ಸದಾ ಹೊಗಳಿಕೆಯನ್ನು ಅವರು ಇಷ್ಟಪಡ್ತಾರೆ. ಯಾವುದೇ ಡ್ರೆಸ್ (Dress) ಧರಿಸಲಿ ಅದಕ್ಕೆ ಕಮೆಂಟ್ ಕೇಳಲು ಅವರು ಇಚ್ಛಿಸುತ್ತಾರೆ. ಆದ್ರೆ ಇದೇ ಹೊಗಳಿಕೆ ಒಬ್ಬ ವ್ಯಕ್ತಿ ಪ್ರೀತಿ (Love) ಕಳೆದುಕೊಳ್ಳಲು ಕಾರಣವಾಗಿದೆ. ಆತ ತನ್ನ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

Tap to resize

Latest Videos

ಮದುವೆಯಾಗದ ಜೋಡಿ ಕೈ ಹಿಡಿದು ನಡೆಯಲು ನಿರ್ಬಂಧ ಇರೋ ದೇಶದಲ್ಲಿ 17 ವರ್ಷದ ನಂತ್ರ ಒಂದಾದ್ರು ಅಮ್ಮ –ಮಗಳು

ಹೊಗಳಿಕೆಯನ್ನು ತಪ್ಪಾಗಿ ತಿಳಿದ ಗರ್ಲ್ ಫ್ರೆಂಡ್ (Girlfriend) : ರೆಡ್ಡಿಟ್ ನಲ್ಲಿ ವ್ಯಕ್ತಿ ತನ್ನ ಕಥೆಯನ್ನು ಹಂಚಿಕೊಂಡಿದ್ದಾನೆ. ಆತನ ಗರ್ಲ್ ಫ್ರೆಂಡ್ ಒಂದು ದಿನ ಸುಂದರವಾಗಿ ರೆಡಿಯಾಗಿದ್ದಳು. ಹೇಗೆ ಕಾಣ್ತೇನೆ ಅಂತಾ ಬಾಯ್ ಫ್ರೆಂಡ್ ಗೆ ಕೇಳಿದ್ದಾಳೆ. ಆತ ಆಕೆಯನ್ನು ಹೊಗಳಿದ್ದಾನೆ. ಆದ್ರೆ ಆತನ ಹೊಗಳಿಕೆಯನ್ನು ತೆಗಳಿಕೆಯಾಗಿ ಸ್ವೀಕರಿಸಿದ ಹುಡುಗಿ ಜಗಳ ಮಾಡಿ ಆತನನ್ನು ಬಿಟ್ಟು ಹೋಗಿದ್ದಾಳೆ. ಸಣ್ಣ ಮಾತಿಗೆ ಇಬ್ಬರ ಸಂಬಂಧ ಮುರಿದುಬಿದ್ದಿದೆ. 

ರೆಡ್ಡಿಟ್ ನಲ್ಲಿ ತನ್ನ ಕಥೆ ಬರೆದ ವ್ಯಕ್ತಿ ಪ್ರಕಾರ, ಪೋಲ್ಕಾ ಡಾಟ್ ಡ್ರೆಸ್ ನೊಂದಿಗೆ ಹುಡುಗಿ ಅದಕ್ಕೆ ಮ್ಯಾಚ್ ಆಗುವ ಬ್ಯಾಗ್ ಧರಿಸಿದ್ದಳು. ಅಲ್ಲದೆ ಬೋ ಹಾಕಿದ್ದಳು. ರೂಮಿನಿಂದ ಹೊರಬಂದ ಹುಡುಗಿ ನಾನು ಹೇಗೆ ಕಾಣ್ತೇನೆ ಎಂದು ಬಾಯ್ ಫ್ರೆಂಡ್ ಗೆ ಕೇಳಿದ್ದಾಳೆ. ಆತ ನೀನು ತುಂಬಾ ಮುದ್ದಾಗಿ ಕಾಣ್ತಿದ್ದೀಯಾ, ಮಿನ್ನಿ ಮೌಸ್ ನಂತೆ ಎಂದು ಹೇಳಿದ್ದಾನೆ. ಇಷ್ಟು ಹೇಳ್ತಿದ್ದಂತೆ ಗರ್ಲ್ ಫ್ರೆಂಡ್ ಕೋಪ ನೆತ್ತಿಗೇರಿದೆ. ನನ್ನನ್ನು ಇಲಿ ಅಂತ ಕರೆಯುತ್ತೀಯಾ, ನಾನೇನು ಗಟಾರದಲ್ಲಿ ವಾಸವಾಗಿದ್ದೇನಾ ಎಂದು ಕೂಗಾಡಿದ್ದಾಳೆ. ಆಗ್ಲೂ ಆಕೆ ತಮಾಷೆ ಮಾಡುತ್ತಾಳೆ ಎಂದುಕೊಂಡ ವ್ಯಕ್ತಿ, ಇಲ್ಲ, ನೀನು ಸುಂದರವಾಗಿ ಕಾಣುತ್ತಿದ್ದೀಯಾ. ಡಿಸ್ನಿ ಪಾತ್ರದ ಮಿನ್ನಿ ಮೌಸ್‌ ನಂತೆ ಕಾಣ್ತಿದ್ದೀಯಾ ಎಂದು ತನ್ನ ಮಾತನ್ನು ಸಮರ್ಥಿಸಿಕೊಂಡಿದ್ದಾನೆ.

ಆದ್ರೆ ಆಕೆ ಕೋಪ ಇಳಿಯಲಿಲ್ಲ. ಬಾಯ್ ಫ್ರೆಂಡ್ ಗೆ ಬಾಯಿಗೆ ಬಂದಂತೆ ಬೈದಿದ್ದಾಳೆ. ನೀನು ಇಲಿ, ನೀನು ಗಟಾರದಲ್ಲಿ ವಾಸಮಾಡುತ್ತೀಯಾ ಎಂದಿದ್ದಾಳೆ. ಆಕೆ ಕೂಗ್ತಿದ್ದರೆ ಈತ ಕಾರಿನ ಕೀ ಕೈನಲ್ಲಿ ಹಿಡಿದು ದಂಗಾಗಿ ನಿಂತಿದ್ದ. ಕಿರುಚಾಡುತ್ತ ಹುಡುಗಿ ಅಲ್ಲಿಂದ ಹೊರಟು ಹೋಗಿದ್ದಾಳೆ. ಮರುದಿನ ಕರೆ ಮಾಡಿದ್ರೆ ನಂಬರ್ ಬ್ಲಾಕ್ ಮಾಡಿದ್ದಳು ಎನ್ನುತ್ತಾನೆ ವ್ಯಕ್ತಿ.

ಕೆಲಸಕ್ಕೆ ಸಮಯ ನೀಡ್ಬೇಕು ಅಂತಾ ಪತಿಗೆ ಎರಡನೇ ಮದುವೆ ಮಾಡಿಸಿದ ಖ್ಯಾತ ಗಾಯಕಿ!

ನನಗೆ ನಾನೇನು ತಪ್ಪು ಮಾಡಿದೆ ಎಂಬುದೇ ಗೊತ್ತಾಗಲಿಲ್ಲ. ಆಕೆ ಈ ಸಣ್ಣ ಕಾರಣಕ್ಕೆ ನನ್ನ ಸಂಬಂಧ ಮುರಿದುಕೊಂಡಿದ್ದಾಳೆ ಎಂದು ಹುಡುಗ ಪೋಸ್ಟ್ ಮಾಡಿದ್ದಾನೆ. ಆತನ ರೆಡ್ಡಿಟ್ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಪ್ರೀತಿ ಸಂಬಂಧ ಮುರಿದುಕೊಳ್ಳಲು ಒಂದು ಕಾರಣ ಬೇಕಾಗಿತ್ತು. ಈ ಕಾರಣವನ್ನೇ ದೊಡ್ಡದು ಮಾಡಿ ಆಕೆ ನಿನ್ನ ಸಂಬಂಧ ಕಡಿದುಕೊಂಡಿದ್ದಾಳೆ ಎಂದು ಅನೇಕರು ಹೇಳಿದ್ದಾರೆ.

click me!