ರೀಲ್ಸ್‌ ಮಾಡೋದ ತಡೆದಿದ್ದೇ ತಪ್ಪಾಯ್ತು, ಬೆಂಗಳೂರಲ್ಲಿದ್ದ ಗಂಡನ ಮೇಲೆ ಹೀಗೆ ರಿವೇಂಜ್ ತಗೊಳ್ಳದಾ?

By Roopa Hegde  |  First Published May 27, 2024, 1:19 PM IST

ಸಾಮಾಜಿಕ ಜಾಲತಾಣ ಬಳಕೆ ಒಂದು ಚಟವಿದ್ದಂತೆ. ಅದ್ರಲ್ಲಿ ಫಾಲೋವರ್ಸ್ ಹೆಚ್ಚಾಗ್ತಿದ್ದಂತೆ ಜನರು ಅದನ್ನು ಮತ್ತಷ್ಟು ಹಚ್ಚಿಕೊಳ್ತಾರೆ. ಫಾಲೋವರ್ಸ್ ಹೆಚ್ಚಿಸಿಕೊಳ್ಳೋಕೆ ಹೊಸ ಹೊಸ ಪ್ರಯತ್ನ ಮಾಡ್ತಾರೆ. ಆದ್ರೆ ಅವರ ಈ ಅತೀ ಕೆಲವೊಮ್ಮೆ ಸಂಬಂಧ ಹಾಳುಮಾಡುತ್ತೆ. 
 


ರಾತ್ರೋರಾತ್ರಿ ಪ್ರಸಿದ್ಧಿ ಪಡೆಯುವ ಒಂದೇ ಒಂದು ಜಾಗ ಸಾಮಾಜಿಕ ಜಾಲತಾಣ (Social Media Fame). ಅನೇಕ ಪ್ರತಿಭೆಗಳು ಸಾಮಾಜಿಕ ಜಾಲತಾಣದಿಂದ ಬೆಳಕಿಗೆ ಬರ್ತಿವೆ. ಹೆಸರಿನ ಜೊತೆ ಈ ಫ್ಲಾಟ್ ಫಾರ್ಮ್ ಗಳಲ್ಲಿ ಹಣ ಗಳಿಸಲೂ ಅವಕಾಶ ಇರುವ ಕಾರಣ ಜನರಿಗೆ ರೀಲ್ಸ್ (Reels), ಶಾರ್ಟ್ (Shorts) ಹುಚ್ಚು ಹೆಚ್ಚಾಗಿದೆ. ಪ್ರತಿಯೊಬ್ಬರೂ ಇದ್ರಲ್ಲಿ ಖಾತೆ ಹೊಂದಿದ್ದು, ರೀಲ್ಸ್ ಮಾಡ್ತಾ ಪ್ರಸಿದ್ಧಿ ಪಡೆಯುತ್ತಿದ್ದಾರೆ. ಕೆಲವರು ಸ್ಕ್ರೋಲ್ (Scroll) ಮಾಡ್ತಾ ಸಮಯ ಹಾಳು ಮಾಡಿದ್ರೆ ಮತ್ತೆ ಕೆಲವರು ರೀಲ್ಸ್ ಮಾಡಿ ಹಣ ಗಳಿಸ್ತಿದ್ದಾರೆ. ಈ ಸಾಮಾಜಿಕ ಜಾಲತಾಣಗಳು ಅನೇಕರಿಗೆ ಬದುಕಲು ದಾರಿ ಮಾಡ್ಕೊಟ್ಟಿದ್ದರೆ, ಮತ್ತೆ ಕೆಲವರ ಬಾಳಲ್ಲಿ ಮುಳ್ಳಾಗಿದೆ. ರೀಲ್ಸ್, ಶಾರ್ಟ್ ಮಾಡಲು ಹೋಗಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೆ ಕೆಲವು ಜೋಡಿ ದೂರವಾಗಿದ್ದಾರೆ. ಈಗ ಇಂಥಹದ್ದೇ ಒಂದು ಘಟನೆ ಬಿಹಾರದಲ್ಲಿ ನಡೆದಿದೆ. ಪತ್ನಿ ರೀಲ್ಸ್ ಮಾಡೋದನ್ನು ಪತಿ ವಿರೋಧಿಸಿದ್ದಾನೆ. ಇದ್ರಿಂದ ಕೋಪಗೊಂಡ ಪತ್ನಿ ಮಾಡಿದ ಕೆಲಸ ಪತಿಯನ್ನು ದಂಗಾಗಿಸಿದೆ. ಪತಿ ಹಾಗೂ ಮಗಳಿಗಾಗಿ ಪತಿ ಈಗ ಪರದಾಡುತ್ತಿದ್ದಾನೆ.

ಘಟನೆ ಬಿಹಾರ (Bihar) ದ ಮೈನಿಜೋರು ಗ್ರಾಮದಲ್ಲಿ ನಡೆದಿದೆ. 2017ರಲ್ಲಿ ಜಿತೇಂದ್ರ  ಜಮುಯಿಯಲ್ಲಿರುವ ಕೋಚಿಂಗ್ (Coaching) ಕ್ಲಾಸ್ ಗೆ ಹೋಗ್ತಿದ್ದ. ಅಲ್ಲಿ ತಮನ್ನಾ ಪರ್ವೀನ್ ಎಂಬ ಹುಡುಗಿ ಭೇಟಿಯಾಗಿತ್ತು. ಇಬ್ಬರೂ ಪ್ರೀತಿ (Love)ಸಲು ಶುರು ಮಾಡಿದ್ದರು. ನಂತ್ರ ಮನೆಯವರ ಒಪ್ಪಿಗೆ ಮೇರೆಗೆ ಮದುವೆ ಆಗಿದ್ದರು. ಈ ನಂತ್ರ ತಮನ್ನಾ ತನ್ನ ಹೆಸರನ್ನು ಸೀಮಾ ಎಂದು ಮರುನಾಮಕರಣ ಮಾಡಿಕೊಂಡಿದ್ದಳು. ಮದುವೆಯಾದ ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಜಿತೇಂದ್ರ ಹಾಗೂ ಆತನ ಪಾಲಕರ ಜೊತೆ ಸೀಮಾ ಖುಷಿಯಿಂದ ಜೀವನ ನಡೆಸುತ್ತಿದ್ದಳು. ಈ ಮಧ್ಯೆ ಜಿತೇಂದ್ರ, ಊರು ಬಿಡುವ ಸ್ಥಿತಿ ಬಂತು. ಜಿತೇಂದ್ರ ಬೆಂಗಳೂರಿಗೆ ಬಂದು ಥ್ರೆಡ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದ. ಮನೆಯಲ್ಲಿ ಒಂಟಿಯಾಗಿದ್ದ ಸೀಮಾ, ಟೈಂಪಾಸ್ ಗೆ ಸಾಮಾಜಿಕ ಜಾಲತಾಣ ಬಳಕೆ ಶುರು ಮಾಡಿದ್ದಳು. ಇನ್ಸ್ಟಾಗ್ರಾಮ್ (Instagram), ಫೇಸ್ಬುಕ್ (FaceBook) ನಲ್ಲಿ ಖಾತೆ ತೆರೆದಿದ್ದಳು. 

Latest Videos

undefined

LOVE STORY : 10 ರೂ. ನೋಟ್ ಮೇಲೆ ಪ್ರೇಮ ನಿವೇದನ, ಲವ್ ಜಿಹಾದ್‌‌ ಎಂದ‌ ನೆಟ್ಟಿಗರು!

ಈ ಖಾತೆಯಲ್ಲಿ ಸೀಮಾ ವಿಡಿಯೋ ಹಾಕಲು ಶುರು ಮಾಡಿದ್ದಳು. ಆರಂಭದಲ್ಲಿ ಕಡಿಮೆ ಇದ್ದ ಫಾಲೋವರ್ಸ್ ನಿಧಾನವಾಗಿ ಹೆಚ್ಚಾದ್ರು. ಇನ್ಸ್ಟಾಗ್ರಾಮ್ ನಲ್ಲಿ 10 ಸಾವಿರ ಹಾಗೂ ಫೇಸ್ಬುಕ್ ನಲ್ಲಿ ಆರು ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಸೀಮಾ ಹೊಂದಿದ್ದಾಳೆ. ಆಕೆ ನಿತ್ಯ ಒಂದಿಷ್ಟು ವಿಡಿಯೋಗಳನ್ನು ಇಲ್ಲಿ ಪೋಸ್ಟ್ ಮಾಡ್ತಿರುತ್ತಾಳೆ. 

ಮಕ್ಕಳ ಬೆಳೆಸುವಾಗ ಗಂಡ-ಹೆಂಡತಿ ನಿಲುವು ಒಂದೇ ಆಗಿರಬೇಕು, ಇಲ್ಲದಿದ್ದರೆ ಮಕ್ಕಳೇನಾಗುತ್ತಾರೆ?

ಆರಂಭದಲ್ಲಿ ಸುಮ್ಮನಿದ್ದ ಜಿತೇಂದ್ರ, ಪತ್ನಿ ವಿಡಿಯೋ ಹೆಚ್ಚಾಗ್ತಿದ್ದಂತೆ ಟೆನ್ಷನ್ ಗೆ ಒಳಗಾಗಿದ್ದಾನೆ. ರೀಲ್ಸ್ ಹಾಗೂ ಫೇಸ್ಬುಕ್ ಗೆ ವಿಡಿಯೋ ಪೋಸ್ಟ್ ಮಾಡದಂತೆ ಪತ್ನಿಗೆ ಸಲಹೆ ನೀಡಿದ್ದಾನೆ. ಆದ್ರೆ ಸೀಮಾಗೆ ಇದು ಇಷ್ಟವಿರಲಿಲ್ಲ. ಇದೇ ವಿಷ್ಯಕ್ಕೆ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಇಬ್ಬರ ಮಧ್ಯೆ ಇದು ದೊಡ್ಡ ಸಮಸ್ಯೆಯಾಗಿತ್ತು. ಆಗಾಗ ಜಗಳವಾಗ್ತಿತ್ತು. ಕಳೆದ ವಾರ ಕೂಡ ಗಂಡ – ಹೆಂಡತಿ ಇದೇ ವಿಷ್ಯಕ್ಕೆ ಕಿತ್ತಾಡಿಕೊಂಡಿದ್ದಾರೆ. ವಿಡಿಯೋ ಮಾಡದಂತೆ ಜಿತೇಂದ್ರ, ಸೀಮಾಗೆ ತಾಕೀತು ಹಾಕಿದ್ದಾನೆ. ಇದ್ರಿಂದ ಕೋಪಗೊಂಡ ಸೀಮಾ, ತನ್ನ ಮಗಳ ಜೊತೆ ಮನೆಬಿಟ್ಟು ಹೋಗಿದ್ದಾಳೆ. ದೇವಸ್ಥಾನಕ್ಕೆ ಹೋಗೋದಾಗಿ ಹೇಳಿದ್ದ ಸೀಮಾ ವಾಪಸ್ ಬಂದಿಲ್ಲ. ಇದ್ರಿಂದ ಜಿತೇಂದ್ರ ಕಂಗಾಲಾಗಿದ್ದಾನೆ. ತನ್ನ ಪತ್ನಿ ಹಾಗೂ ಮಗಳ ಹುಡುಕಾಟಕ್ಕೆ ಶುರು ಮಾಡಿದ್ದಾನೆ. ಪತ್ನಿ ಹುಡುಕಿಕೊಡುವಂತೆ ಆತ ಮನವಿ ಮಾಡಿದ್ದಾನೆ. ಆದ್ರೆ ಪೊಲೀಸ್ ಠಾಣೆಗೆ ಯಾವುದೇ ಲಿಖಿತ ದೂರು ನೀಡಿಲ್ಲ. ಲಿಖಿತ ದೂರು ನೀಡಿದ್ರೆ ಕ್ರಮಕೈಗೊಳ್ಳೋದಾಗಿ ಪೊಲೀಸರು ಹೇಳಿದ್ದಾರೆ. 

click me!