ಪ್ರೀತಿಯೇ ಸುಖ ಜೀವನದ ಗುಟ್ಟು ಅಂತಾರೆ ಈ ಇಬ್ಬರು ಮಹಿಳೆಯರು! ನೀವೇನಂತೀರಿ?

By Suvarna News  |  First Published Jan 13, 2024, 1:59 PM IST

ನನ್ನ ಹೆಂಡತಿನ್ನ ಅರ್ಥ ಮಾಡಿಕೊಳ್ಳೋಕೆ ಆಗ್ತಿಲ್ಲ, ಸಲಹೆ ಕೊಡಿ ಎಂದ ವ್ಯಕ್ತಿಗೆ ಇವರೇನು ಸಲಹೆ ನೀಡಿದ್ದಾರೆ ನೋಡಿ..


ಪ್ರೀತಿ ಈ ಜಗತ್ತಿನ ಇಂಧನ. ಕಣ್ತೆರೆದು ನೋಡಿದರೆ ನಾವು ಉಸಿರಾಡುವ ಗಾಳಿ, ಕುಡಿವ ನೀರು, ಹೂ ಬಿಡುವ ಮರ ಗಿಡಗಳು, ಪ್ರಾಣಿ ಪಕ್ಷಿಗಳು ಎಲ್ಲದರ ನಡುವೆಯೂ ಪ್ರೀತಿಯನ್ನು ಕಾಣಲು, ಅನುಭವಿಸಲು ಸಾಧ್ಯ. 

ಪ್ರೀತಿಯು ಜೀವ ಜೀವಗಳ ಸಲಹುತ್ತದೆ. ಪ್ರೀತಿಯ ವ್ಯಾಖ್ಯಾನವನ್ನು ಈ ಇಬ್ಬರು ಮಹಿಳೆಯರು ವಿಭಿನ್ನ ರೀತಿಯಲ್ಲಿ ಹೇಳಿದ್ದಾರೆ ನೋಡಿ..

Tap to resize

Latest Videos

ಈ ಬಾರಿ ಝೀ ಕನ್ನಡದಲ್ಲಿ ಸಂಕ್ರಾಂತಿಯ ಜಾನಪದ ವಿಶೇಷ ಸರಿಗಮಪ ಕಾರ್ಯಕ್ರಮದಲ್ಲಿ ವಿಶೇಷ ಅಥಿತಿಯಾಗಿ ಭಾಗವಹಿಸುತ್ತಿರುವ ಮಂಜಮ್ಮ ಜೋಗತಿ ಕಾರ್ಯಕ್ರಮದಲ್ಲಿ ಪ್ರೀತಿಯ ಬಗ್ಗೆ ಚೆಂದವಾಗಿ ಮಾತನಾಡಿದ್ದಾರೆ. 

ನಾವೇನೇ ಕೆಲಸ ಮಾಡಲಿ, ಅದರಲ್ಲಿ ಪ್ರೀತಿ ಇಟ್ಟು ಮಾಡಬೇಕು. ಕಸ ಹೊಡೆದ್ರೂ ಪ್ರೀತಿಯಿಂದ ಆ ಕೆಲಸ ಮಾಡಿದಾಗ ಮನೆಯ ಮೂಲೆಮೂಲೆಯ ಧೂಳೂ ಹೊರ ಬರುತ್ತದೆ. ಟೀ ಮಾಡುವಾಗ ಪ್ರೀತಿಯಿಂದ ಅದರ ಮೇಲೆ ಗಮನವಿಟ್ಟು ಮಾಡಿದರೆ ಅದರ ರುಚಿಯೇ ಬೇರೆ. ಹಾಗೆ ಇನ್ನೊಬ್ಬರ ಜೊತೆ ಮಾತಾಡುವಾಗ ಪ್ರೀತಿ ಇರಬೇಕು. ಕೆಲಸದಲ್ಲಿ ಪ್ರೀತಿ ಇದ್ದರೆ ಅದೇ ಯಶಸ್ಸು ಎನ್ನುತ್ತಿದ್ದಾರೆ. ಮಂಜಮ್ಮ ಜೋಗತಿಯ ಈ ಮಾತುಗಳು ಸರಳವಾಗಿವೆ, ಒಮ್ಮೆ ಅದನ್ನು ಅನುಸರಿಸಿ ನೋಡಿ. ಈ ಸರಳ ಮಾತುಗಳ ಸತ್ಯ ಕಣ್ಣೆದುರು ತೆರೆದುಕೊಳ್ಳುತ್ತದೆ. 

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

ಹೆಂಡತಿಯನ್ನು ಅರ್ಥ ಮಾಡಿಕೊಳ್ಳಲಾಗುತ್ತಿಲ್ಲವೇ?
ಇನ್ನೊಂದೆಡೆ ಸಮೃದ್ಧಿ ಯೋಗದ ಸಂಸ್ಥಾಪಕಿ ಡಾ. ರಾಜೇಶ್ವರಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಪ್ರೀತಿ ಎಂದರೆ ಹೆಣ್ಣುಮಕ್ಕಳ ಮೂಲಭೂತ ಅಗತ್ಯ ಎಂದಿದ್ದಾರೆ. ಪತಿ ತನ್ನ ಪತ್ನಿಯೊಂದಿಗೆ ಸುಖವಾಗಿರಲು ಏನು ಮಾಡಬೇಕೆಂದು ಅವರು ತಿಳಿಸಿದ್ದಾರೆ. 
ನನ್ನ ಹೆಂಡತಿನ್ನ ಅರ್ಥ ಮಾಡಿಕೊಳ್ಳೋಕೆ ಆಗ್ತಿಲ್ಲ, ಸಲಹೆ ಕೊಡಿ ಎಂದ ವ್ಯಕ್ತಿಗೆ   ಅರ್ಥ ಮಾಡಿಕೊಳ್ಳೋಕೆ ಹೋಗ್ಬೇಡಿ, ಪ್ರೀತಿ ಮಾಡಿ ಎಂದವರು ಕರೆ ನೀಡಿದ್ದಾರೆ. ಈ ಬಗ್ಗೆ ಗಂಡಸರಿಗೆ ಒಳ್ಳೆಯ ಕಿವಿಮಾತನ್ನು ಹೇಳಿರುವ ಅವರು, 'ಹೆಂಡತೀನ ಅರ್ಥ ಮಾಡಿಕೊಳ್ಳೋಕೆ ಹೋಗೋದನ್ನು ಮೊದಲು ನಿಲ್ಲಿಸಿ, ಹೆಂಡತಿ, ತಾಯಿ, ಅಕ್ಕತಂಗಿ ಯಾರೇ ಇರಲಿ- ಹೆಣ್ಣು ಮಕ್ಕಳನ್ನು ಪ್ರೀತಿ ಮಾಡಿ. ಅವರನ್ನು ಖುಷಿಯಾಗಿಟ್ಟುಕೊಳ್ಳೋಕೆ ಅವರನ್ನು ಇದ್ದಂತೆಯೇ ಒಪ್ಪಿಕೊಂಡು ಪ್ರೀತಿ ಮಾಡಿ' ಎಂದಿದ್ದಾರೆ.

ಹಾಗೆಯೇ ಹೆಂಗಸರಿಗೂ ಈ ವಿಚಾರವಾಗಿ ಅವರು ಟಿಪ್ಸ್ ಕೊಟ್ಟಿದ್ದಾರೆ. 'ಗಂಡನಿಗೆ ಹೆಂಡತಿಯು ಐ ಲವ್ಯೂ ಹೇಳಿದರೆ ಸಾಲದು, ಆಕೆ ಗಂಡನನ್ನು ಅರ್ಥ ಮಾಡಿಕೊಳ್ಳಬೇಕು- ಐ ಅಂಡರ್‌ಸ್ಟ್ಯಾಂಡ್ ಯು ಅನ್ನಬೇಕು. ಆದರೆ, ಗಂಡಸರು ಹೆಂಗಸರನ್ನು ಪ್ರೀತಿ ಮಾಡ್ಬೇಕು. ಐ ಲವ್ಯೂ ಅನ್ಬೇಕು. ಆಗಲೇ ಎಲ್ಲರೂ ಸಂತೋಷದಿಂದಿರಬಹುದು. ' 

ನಿಮ್ಮ ಗಂಡ ಸೋಂಬೇರಿ ಅಂತ ನಿಮಗೆ ಅನಿಸಿದ್ಯಾ? ಹಾಗಾದ್ರೆ ಈ ರಾಶಿಯವರೇ ಇರಬೇಕು!

ಹೆಂಡತಿಯ ಸಮಸ್ಯೆಗೆ ಪರಿಹಾರ ಕೊಡ್ಬೇಡಿ!
ಇನ್ನು ಹೆಂಡತಿ ತನ್ನ ನೋವನ್ನು ಹೇಳಿಕೊಳ್ಳಲು ಬಂದಾಗ ಗಂಡನಾದವನು ಏನು ಮಾಡಬೇಕೆಂದು ಕೂಡಾ ಅವರು ತಿಳಿಸಿದ್ದಾರೆ. 
ಹೆಂಡತಿ ಸಮಸ್ಯೆ ಹೇಳಿಕೊಂಡರೆ, ಪರಿಹಾರ ಕೊಡ್ಬೇಡಿ, ಕೊಟ್ರೆ ನೀವು ಕೆಟ್ಟವರಾಗ್ತೀರಿ. ಬದಲಿಗೆ ಅವರ ಮಾತನ್ನು ಕೇಳಿ ಸಾಕು ಎಂದಿದ್ದಾರೆ. ಮೊನ್ನೆ ಕತ್ರೀನಾ ಕೈಫ್ ಕೂಡಾ ತಾನು ಮನೆಗೆ ಹೋದಾಗ ಪತಿ ವಿಕ್ಕಿ ತನ್ನೆಲ್ಲ ಮಾತುಗಳಿಗೆ ಕಿವಿಯಾಗುತ್ತಾನೆ. ಅದರಿಂದಲೇ ನಾನು ಸದಾ ಸಂತೋಷವಾಗಿಯೂ, ಶಾಂತವಾಗಿಯೂ ಇರಲು ಸಾಧ್ಯ ಎಂದಿದ್ದರು. ಅಂದರೆ, ಕೇಳುವ ಕಿವಿ ಹೆಂಗಸರಿಗೆ ಬಹಳ ಮುಖ್ಯವೆಂದಾಯಿತು. ಇದನ್ನು ಪ್ರತಿ ಗಂಡಸರೂ ಅರ್ಥ ಮಾಡಿಕೊಂಡರೆ ಸಂಸಾರದಲ್ಲಿ ಸಂತೋಷ ತುಂಬಿರುತ್ತದೆ. ಏನಂತೀರಿ?

 

click me!