ಪ್ರೀತಿ ಕುರುಡು, ಪ್ರೀತಿಗೆ ಕಣ್ಣಿಲ್ಲ ಎಂಬ ಮಾತುಗಳನ್ನು ನಾವು ಆಗಾಗ ಕೇಳುತ್ತಿರುತ್ತವೆ. ಈ ಮಾತಿಗೆ ನಿದರ್ಶನವೆಂಬಂತಹ ಹಲವು ಘಟನೆಗಳು ನಮ್ಮಲ್ಲಿ ನಡೆಯುತ್ತಿರುತ್ತವೆ. ಈಗ ಅದೇ ರೀತಿ ಇನಿಯನ ಮೇಲಿನ ಪ್ರೀತಿ ಸಾಬೀತುಪಡಿಸಿಕೊಳ್ಳಲು ಹದಿ ಹರೆಯದ ಹುಡುಗಿಯೊಬ್ಬಳು ತನ್ನ ಬದುಕನ್ನೇ ಅಪಾಯಕ್ಕೆ ಒಡ್ಡಿದಂತಹ ಘಟನೆಯೊಂದು ಅಸ್ಸಾಂನ ಸುಲ್ಕುಚಿಯಲ್ಲಿ ನಡೆದಿದೆ.
ಅಸ್ಸಾಂ: ಪ್ರೀತಿ ಕುರುಡು, ಪ್ರೀತಿಗೆ ಕಣ್ಣಿಲ್ಲ ಎಂಬ ಮಾತುಗಳನ್ನು ನಾವು ಆಗಾಗ ಕೇಳುತ್ತಿರುತ್ತವೆ. ಈ ಮಾತಿಗೆ ನಿದರ್ಶನವೆಂಬಂತಹ ಹಲವು ಘಟನೆಗಳು ನಮ್ಮಲ್ಲಿ ನಡೆಯುತ್ತಿರುತ್ತವೆ. ಈಗ ಅದೇ ರೀತಿ ಇನಿಯನ ಮೇಲಿನ ಪ್ರೀತಿ ಸಾಬೀತುಪಡಿಸಿಕೊಳ್ಳಲು ಹದಿ ಹರೆಯದ ಹುಡುಗಿಯೊಬ್ಬಳು ತನ್ನ ಬದುಕನ್ನೇ ಅಪಾಯಕ್ಕೆ ಒಡ್ಡಿದಂತಹ ಘಟನೆಯೊಂದು ಅಸ್ಸಾಂನ ಸುಲ್ಕುಚಿಯಲ್ಲಿ ನಡೆದಿದೆ. ಈಕೆ ತನ್ನ ಇನಿಯನ ಮೇಲಿನ ಪ್ರೀತಿ ಸಾಬೀತುಪಡಿಸುವುದಕ್ಕಾಗಿ ತನ್ನ ದೇಹಕ್ಕೆ ಹೆಚ್‌ಐವಿ ಪೀಡಿತ ಗೆಳೆಯನ ರಕ್ತವನ್ನು ಇಂಜೆಕ್ಟ್ ಮಾಡಿಕೊಂಡಿದ್ದಾಳೆ. ಈ ಆಘಾತಕಾರಿ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ಅಸ್ಸಾಂನ ಕಳಿಂಗ ನ್ಯೂಸ್ ಪ್ರಕಾರ, ಅಸ್ಸಾಂನ ಸತ್ದೊಲಾದ ಹಜೋ ನಿವಾಸಿಯಾದ ಹೆಚ್‌ಐವಿ ಪೀಡಿತ ವ್ಯಕ್ತಿಯೊಬ್ಬ 15 ವರ್ಷದ ಅಪ್ರಾಪ್ತೆಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ, ಅದೂ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಮೂಲಕ. ದಿನ ಕಳೆಯುತ್ತಾ ಹೋದಂತೆ ಇವರ ಪ್ರೀತಿ ಗಾಢವಾಗುತ್ತಾ ಹೋಗಿದೆ. ಅವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಯಲ್ಲಿ ಬೆರೆತಿದ್ದರು. ತರುಣಿ ಈ ಆಘಾತಕಾರಿ ನಿರ್ಧಾರ ಕೈಗೊಳ್ಳುವುದಕ್ಕೂ ಮೊದಲು, ಈ ಜೋಡಿ ಕಳೆದ ಮೂರು ವರ್ಷಗಳಿಂದ ಜೊತೆಯಾಗಿಯೇ ಜೀವಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಈ ಹಿಂದೆಯೂ ಕೂಡ ಯುವತಿ ಹಲವು ಬಾರಿ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಲು ಯತ್ನಿಸಿದ್ದಳು ಎಂದು ವರದಿಯಾಗಿದೆ. ಆದಾಗ್ಯೂ, ಹುಡುಗಿ ಓಡಿ ಹೋಗುತ್ತಿದ್ದಂತೆ ಅವಳನ್ನು ಯಾವಾಗಲೂ ಅವಳ ಪೋಷಕರು ಮನೆಗೆ ಕರೆತರುತ್ತಿದ್ದರು.
What ???????? pic.twitter.com/5VSTrgnkic
— Saba🔪 (@abeyyarsun)ಆದಾಗ್ಯೂ ಈ ಬಾರಿ ಆಕೆ ಯಾರೂ ಊಹಿಸದ ನಿರ್ಧಾರ ಕೈಗೊಂಡಿದ್ದಳು. ಆಕೆ ತನ್ನ ಹೆಚ್‌ಐವಿ ಪೀಡಿತ ಗೆಳೆಯನ ರಕ್ತವನ್ನು ಸಿರಿಂಜ್‌ನಿಂದ ತೆಗೆದುಕೊಂಡ ಬಾಲಕಿ ಅದೇ ಸಿರಿಂಜ್ ಮೂಲಕ ತನ್ನ ದೇಹಕ್ಕೆ ಚುಚ್ಚಿಕೊಂಡಿದ್ದಾಳೆ.
8 ವರ್ಷದ ಬಾಲಕಿ ಮೇಲೆ ರೇಪ್ ಮಾಡಿದಾತ HIV ಪಾಸಿಟಿವ್, ಬಾಲಕಿಗೂ ಟೆಸ್ಟ್!
ಸದ್ಯ ವೈದ್ಯರು ಬಾಲಕಿಯ ಮೇಲೆ ನಿಗಾ ಇಟ್ಟಿದ್ದು, ಹಜೋ ಪೊಲೀಸರು ಆಕೆಯ ಪ್ರಿಯಕರನನ್ನು ವಶಕ್ಕೆ ಪಡೆದಿದ್ದಾರೆ. ಹುಡುಗಿಯ ಕುಟುಂಬವು ಕೂಡ ಆಕೆಯ ಪ್ರೇಮಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಜನರು ಒಂದೊಂದು ತರ ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೇ ಹದಿಹರೆಯದವರು ಮುಂದಾಗುವ ಪರಿಣಾಮಗಳ ಬಗ್ಗೆ ಯೋಚಿಸದೆ ಯಾವುದೇ ಹಂತಕ್ಕೂ ಹೇಗೆ ಹೋಗಬಹುದು ಎಂಬುದನ್ನು ನೋಡಿ ಜನರು ಗಾಬರಿಗೊಂಡಿದ್ದಾರೆ. ಪ್ರೀತಿಯೂ ಒಂದು ಕಾಯಿಲೆ. ಎಂತಹ ಕಾಯಿಲೆ ಎಂದರೆ ಇಷ್ಟೊಂದು ಕೆಟ್ಟ ಕಾಯಿಲೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಕ್ಯಾನ್ಸರ್ ಬೆನ್ನಲ್ಲೇ HIVಗೂ ಸಿಕ್ತು ಔಷಧಿ, ಲಸಿಕೆಯ ಒಂದೇ ಡೋಸ್, ಏಡ್ಸ್‌ನಿಂದ ಮುಕ್ತಿ!