ಮದುವೆಗೆ ಮುನ್ನ ಸಂಭೋಗ ಬೆಳೆಸಲ್ವಂತೆ ಈ ಹುಡುಗಿ!

By Suvarna News  |  First Published Aug 9, 2022, 5:49 PM IST

ಮದುವೆ, ದಾಂಪತ್ಯದ ಬಗ್ಗೆ ಪ್ರತಿಯೊಬ್ಬರಿಗೂ ಅವರದೆ ಆದ ಆದರ್ಶಗಳಿರುತ್ತವೆ. ಭಾರತದಲ್ಲಿ ಈಗ್ಲೂ ಕೆಲ ಸಂಪ್ರದಾಯಗಳಿವೆ. ಆದ್ರೆ ವಿದೇಶದಲ್ಲಿ ಇದಕ್ಕೆ ಹೆಚ್ಚಿನ ಮಹತ್ವವಿಲ್ಲ ಎಂದು ನಾವಂದುಕೊಂಡಿದ್ದೇವೆ. ಆದ್ರೆ ಅಲ್ಲೂ ನಮ್ಮ ಪದ್ಧತಿ ಪಾಲಿಸುವ ಕೆಲವರಿದ್ದಾರೆ.
 


ಭಾರತದಲ್ಲಿ ಮೊದಲ ರಾತ್ರಿ,ಶಾರೀರಿಕ ಸಂಬಂಧಕ್ಕೆ ಸಂಬಂಧಿಸಿದಂತೆ ಈಗ್ಲೂ ಮುಚ್ಚುಮರೆಯಿದೆ. ಸೆಕ್ಸ್ ವಿಷ್ಯಗಳನ್ನು ಬಹಿರಂಗವಾಗಿ ಜನರು ಮಾತನಾಡುವುದಿಲ್ಲ. ಆದ್ರೆ ಭಾರತ ಈ ವಿಷ್ಯದಲ್ಲಿ ಬದಲಾಗ್ತಿದೆ.  ಹಿಂದಿನ ಕಾಲದಲ್ಲಿ ಮದುವೆಯಾಗದೆ ಶಾರೀರಿಕ ಸಂಬಂಧ ಬೆಳೆಸ್ತಿರಲಿಲ್ಲ. ಆದ್ರೀಗ  ಮದುವೆ ಮೊದಲೇ ಶಾರೀರಿಕ ಸಂಬಂಧ ಬೆಳೆಸುವುದು ಹಾಗೆ ಮಕ್ಕಳನ್ನು ಪಡೆಯುವುದು ಕೂಡ ಮಾಮೂಲಿ ಎನ್ನುವಂತಾಗಿದೆ. ಈ ಮಧ್ಯೆ ವಿದೇಶದಲ್ಲಿರುವ ಹುಡುಗಿಯೊಬ್ಬಳು ಎಲ್ಲರ ಗಮನ ಸೆಳೆದಿದ್ದಾರೆ. ವಿದೇಶದಲ್ಲಿ ಮದುವೆಗಿಂತ ಮೊದಲು ಸೆಕ್ಸ್ ಕಾಮನ್. ಹಾಗೆಯೇ ಒನ್ ನೈಟ್ ಸ್ಟ್ಯಾಂಡ್ ಕೂಡ ಹೆಚ್ಚಾಗಿದೆ. ಆದ್ರೆ ಈ ಹುಡುಗಿ ಮಾತ್ರ ಅದೆಲ್ಲದಕ್ಕೂ ತದ್ವಿರುದ್ಧವಾಗಿದ್ದಾಳೆ. 

ವಿದೇಶ (Abroad) ದಲ್ಲಿ ಹುಟ್ಟಿ ಬೆಳೆದ್ರೂ ಭಾರತ (India) ದ ಸಂಪ್ರದಾಯವನ್ನು ಹುಡುಗಿ ಇಷ್ಟಪಡ್ತಿದ್ದಾಳೆ. ತಂದೆ – ತಾಯಿ ಭಾರತದ ಸಂಪ್ರದಾಯ ಕುಟುಂಬದಿಂದ ಬಂದವರು. ಅಲ್ಲಿನ ಸಂಸ್ಕೃತಿ (culture), ಪದ್ಧತಿ ನನಗೆ ಇಷ್ಟವಾಗುತ್ತದೆ ಎನ್ನುವ ಹುಡುಗಿ, ಮದುವೆಗಿಂತ ಮೊದಲು ಶಾರೀರಿಕ ಸಂಬಂಧ ಬೆಳೆಸಲು ನಾನು ಸಿದ್ಧವಿಲ್ಲ ಎಂದಿದ್ದಾಳೆ. ವಿವಾಹಕ್ಕೆ ಎಷ್ಟೇ ವರ್ಷವಾಗ್ಲಿ ನಾನು ಕಾಯ್ತೇನೆ ಎನ್ನುತ್ತಾಳೆ ಆಕೆ. 

Tap to resize

Latest Videos

35 ವರ್ಷದ ಮಹಿಳೆಗೆ ಒನ್ ನೈಟ್ ಸ್ಟ್ಯಾಂಡ್ ಹೆಸರು ಕೇಳಿದ್ರೆ ಭಯವಾಗುತ್ತದೆಯಂತೆ. ಯಾವುದೇ ಸ್ನೇಹಿತರ ಜೊತೆ ಸಂಬಂಧವಿಲ್ಲ ಎನ್ನುತ್ತಾಳೆ ಆಕೆ. ಆಕೆಗೆ ಈಗ ತನ್ನ ಜೀವನ ಸಂಗಾತಿ ಹುಡುಕಾಟ ನಡೆಸ್ತಿದ್ದಾಳಂತೆ. ಭಾರತದ ಸಾಂಪ್ರದಾಯಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ನಾನು ಖುಷಿಪಡುತ್ತೇನೆ ಎನ್ನುತ್ತಾಳೆ ಈಕೆ.  ಭಾರತ ನನ್ನ ತಂದೆ-ತಾಯಿ ಬೆಳೆದ ದೇಶ. ಮದುವೆಗೆ ಮುನ್ನ ಸೆಕ್ಸ್ ಭಾರತದಲ್ಲಿ ಇನ್ನೂ ನಿಷಿದ್ಧ ಎಂದಿದ್ದಾಳೆ ಆಕೆ.  2009ರಲ್ಲಿ ಆಕೆ ಕಾಲೇಜಿಗೆ ಹೋಗ್ತಿದ್ದ ಸಂದರ್ಭದಲ್ಲಿ ತಂದೆ ಆಕೆಗೆ ಅರೆಂಜ್ ಮ್ಯಾರೇಜ್ ಬಗ್ಗೆ ಹೇಳ್ತಿದ್ದರಂತೆ. ನಾನು ನಿನಗೆ ಮದುವೆ ಮಾಡ್ತೇನೆ ಎಂದು 23ನೇ ವಯಸ್ಸಿನಲ್ಲಿಯೇ ಮಾತು ಶುರು ಮಾಡಿದ್ದರಂತೆ. ಅನೇಕ ಮದುವೆ ವೆಬ್ಸೈಟ್ ಗಳಿದ್ದು, ಅದ್ರಲ್ಲಿ ಸೂಕ್ತ ವರನ ಹುಡುಕಾಟ ನಡೆಸ್ತೇನೆ ಎಂದಿದ್ದರಂತೆ.  

ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ನಾನು ಭಾರತೀಯ ಮೂಲದವಳೆಂದು ಬರೆಯುವಂತೆ ತಂದೆ ಹೇಳ್ತಿದ್ದರು ಎನ್ನುತ್ತಾಳೆ ಮಹಿಳೆ. ಅಮೆರಿಕಾದಲ್ಲಿರುವ ಆದ್ರೆ ಭಾರತೀಯ ಮೂಲದ ವ್ಯಕ್ತಿಗೆ ನನ್ನನ್ನು ಮದುವೆ ಮಾಡುವ ಆಸೆ ತಂದೆಗಿತ್ತು ಎಂದಿದ್ದಾಳೆ ಮಹಿಳೆ. ನ್ಯೂಜರ್ಸಿಯ ಮನೆಯಲ್ಲಿ ಅನೇಕ ವೈದ್ಯರು ಹಾಗೂ ವಕೀಲರನ್ನು ಭೇಟಿ ಮಾಡಿಸುವ ಪ್ರಯತ್ನವನ್ನು ತಂದೆ ಮಾಡಿದ್ದರಂತೆ. ಆದ್ರೆ ನನಗೆ ಒಪ್ಪಿಗೆ ಇರಲಿಲ್ಲ. ತಂದೆಯದ್ದು ಅರೆಂಜ್ ಮ್ಯಾರೇಜ್. ಅವರು ಅನೇಕ ಸವಾಲುಗಳನ್ನು ಎದುರಿಸಿದ್ದರು. ನನಗೂ ಅದೇ ರೀತಿ ಪರಿಸ್ಥಿತಿ ಎದುರಾಗಬಹುದು ಎನ್ನುವ ಕಾರಣಕ್ಕೆ ನಾನು ತಂದೆ ನಿರ್ಧಾರ ಒಪ್ಪಿರಲಿಲ್ಲ ಎನ್ನುತ್ತಾಳೆ ಮಹಿಳೆ. 

ಪ್ರೀತಿ ಇರ್ಬೇಕು, ಕಾಳಜಿ ಇರ್ಬೇಕು ನಿಜ. ಆದ್ರೆ ಅತಿಯಾದ್ರೆ ಏನ್ ಚಂದ ನೀವೇ ಹೇಳಿ?

24ನೇ ವಯಸ್ಸಿನಿಂದ 29ನೇ ವಯಸ್ಸಿನವರೆಗೂ ವಾಲ್ ಸ್ಟ್ರೀಟ್ ನಲ್ಲಿ ಈಕೆ ಕೆಲಸ ಮಾಡಿದ್ದಳಂತೆ. ಈ ವೇಳೆ ಅನೇಕ ಪುರುಷರು ಆಕರ್ಷಿತರಾಗಿದ್ದರಂತೆ. ಆದ್ರೆ ಅವರೆಲ್ಲ ನನ್ನನ್ನು ಪ್ರೀತಿಸೋದಿಲ್ಲ, ಬರೀ ಹಾಸಿಗೆ ಮೇಲೆ ನೋಡಲು ಬಯಸ್ತಾರೆ ಎಂಬುದು ನನಗೆ ಗೊತ್ತಾಗಿತ್ತು ಎನ್ನುತ್ತಾಳೆ ಮಹಿಳೆ. 

ಪುರುಷರಿಗೆ ಮಾತ್ರ… ಸೆಕ್ಸ್ ಲೈಫ್ ಸುಧಾರಿಸುವ 5 ಮಾರ್ಗಗಳು

ಈವರೆಗೆ ಅನೇಕ ಹುಡುಗರು ಸಿಕ್ಕಿದ್ದಾರೆ. ಆದ್ರೆ ಯಾರೂ ಪ್ರೀತಿಗೆ ಅರ್ಹರಲ್ಲ. ನಾನಿನ್ನು ವರ್ಜಿನ್ ಎಂಬುದನ್ನು ಕೇಳಿಯೇ ಕೆಲವರು ಮುಂದೆ ಬರ್ತಿಲ್ಲ. ನನ್ನ ಆದರ್ಶವನ್ನು ನಾನು ಎಂದಿಗೂ ಬಿಡಲಾರೆ ಎಂದು ಮಹಿಳೆ ಹೇಳಿದ್ದಾಳೆ. ಕೆಲ ತಿಂಗಳ ಹಿಂದೆ ಭಾರತಕ್ಕೆ ಬಂದ ಸಂದರ್ಭದಲ್ಲಿ ನನಗೆ ಮದುವೆಯಾಗಿದೆ ಎಂದು ತಂದೆ ಸುಳ್ಳು ಹೇಳಿದ್ದರು. ನಾನಿನ್ನೂ ಮದುವೆಯಾಗದಿರುವುದು ಅವರಿಗೆ ಮುಜುಗರದ ವಿಷ್ಯ. ಆದ್ರೆ ನನಗೆ ಒಳ್ಳೆಯ ಸಂಗಾತಿ ಸಿಗಬೇಕು. ನಾನು ಈಗಿನ ಯುವಕರಿಗೆ ಮಾದರಿಯಾಗಲು ಬಯಸ್ತೇನೆ. ಬೇರೆಯವರ ಒತ್ತಾಯಕ್ಕೆ ಮದುವೆ, ಸಂಬಂಧ ಬೆಳೆಸುವ ಅಗತ್ಯವಿಲ್ಲವೆಂಬುದು ನನ್ನ ಅಭಿಪ್ರಾಯ ಎನ್ನುತ್ತಾಳೆ ಮಹಿಳೆ. 

click me!