ಪತಿ ಸಾವಿನ ನಂತ್ರ ಮಹಿಳೆ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದ್ರಲ್ಲಿ ಲೈಂಗಿಕ ಬಯಕೆ ಕೂಡ ಒಂದು. ಅದನ್ನು ಹತ್ತಿಕ್ಕೋದು ಅನೇಕರಿಗೆ ಸಾಧ್ಯವಿಲ್ಲ. ಇನ್ನೊಂದು ಮದುವೆಯಾಗದೆ ದೈಹಿಕ ಆಸೆ ತೀರಿಸಿಕೊಂಡು, ಸಂತೋಷದ ಜೀವನ ಕಳೆಯಬೇಕೆಂದ್ರೆ ನೀವು ಹೀಗೂ ಮಾಡ್ಬಹುದು.
ಪತಿಯನ್ನು ಕಳೆದುಕೊಂಡ ಮಹಿಳೆಯನ್ನು ನಮ್ಮ ಸಮಾಜ ನೋಡುವ ದೃಷ್ಟಿ ಈಗಲೂ ಸುಧಾರಿಸಿಲ್ಲ. ಕೆಲವರು ಕರುಣೆ ತೋರಿದ್ರೆ ಮತ್ತೆ ಕೆಲವರು ಅನುಮಾನಿಸುತ್ತಾರೆ. ಆಕೆ ಏನೇ ಮಾಡಿದ್ರೂ, ಯಾರ ಜೊತೆ ಮಾತನಾಡಿದ್ರೂ ಅದಕ್ಕೊಂದು ಸಂಬಂಧ ಕಟ್ಟಿ ಆಡಿಕೊಳ್ಳುವವರಿದ್ದಾರೆ. ಸಮಾಜಕ್ಕೆ ಹೆದರಿ ಅನೇಕ ಮಹಿಳೆಯರು ತಮ್ಮ ಆಸೆಗಳನ್ನು ಕಟ್ಟಿಡುತ್ತಾರೆ. ಅದ್ರಲ್ಲಿ ಭೋಪಾಲ್ ನ ಸೀಮಾ ಕೂಡ ಒಬ್ಬರು.
ಭೋಪಾಲ್ (Bhopal) ನ ಎರಡು ಮಕ್ಕಳ ತಾಯಿಯಾದ ಸೀಮಾ ತಮ್ಮ 29 ನೇ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡರು. ಮಕ್ಕಳನ್ನು ಬೆಳೆಸುವ ಜವಾಬ್ದಾರಿ (Responsibility) ಹೊತ್ತ ಸೀಮಾ, ಕೆಲಸ ಮಾಡುವುದು ಅನಿವಾರ್ಯವಾಯ್ತು. ದೈಹಿಕ ಆಸೆಯನ್ನು ಸಂಪೂರ್ಣವಾಗಿ ಹತ್ತಿಕ್ಕಿದ್ದ ಸೀಮಾ, ಕಂಪ್ಯೂಟರ್ ಕಲಿತು, ಸೈಬರ್ ಕೆಫೆಯಲ್ಲಿ ಕೆಲಸಕ್ಕೆ ಸೇರಿಕೊಂಡಳು.
ವಧು 25 ವರ್ಷದೊಳಗಿದ್ದರೆ ಮದುವೆಯಾಗುವ ಜೋಡಿಗೆ 11 ಸಾವಿರ ರೂ, ಹೊಸ ಯೋಜನೆ ಜಾರಿ!
ಸಣ್ಣ ಪಟ್ಟಣದ, ಮಧ್ಯಮ ವರ್ಗದ ಕುಟುಂಬದಿಂದ ಬಂದ ಸೀಮಾ ಹೆಚ್ಚು ಓದಿದವಳಲ್ಲ. ಶಾಲೆ ಮುಗಿಯುತ್ತಿದ್ದಂತೆ ಮನೆ ಕೆಲಸವನ್ನು ಕಲಿತ ಮಗಳಿಗೆ ಪಾಲಕರು ಮದುವೆ ಮಾಡಿದ್ದರು. ತನ್ನ 22ನೇ ವಯಸ್ಸಿನಲ್ಲಿ ಸಂಸಾರದ ಹೊರೆ ಹೊತ್ತ ಸೀಮಾ ದಾಂಪತ್ಯ ಸುಖಕರವಾಗಿತ್ತು. ಎರಡು ಮಕ್ಕಳ ತಾಯಿಯಾದ ಸೀಮಾ, ಮದುವೆಯಾದ 7 ವರ್ಷಕ್ಕೇ ತನ್ನ ಪತಿಯನ್ನು ಕಳೆದುಕೊಂಡಳು. ಜ್ವರದಿಂದ ಬಳಲಿದ ಪತಿ ಕೆಲವೇ ದಿನಗಳಲ್ಲಿ ಕೊನೆಯುಸಿರೆಳೆದಿದ್ದರು. ಸೀಮಾ ಬದುಕು ಆಗ ಸಂಪೂರ್ಣ ಸ್ತಬ್ಧವಾಗಿತ್ತು. ಆತ್ಮೀಯ ಸ್ನೇಹಿತನೂ ಆಗಿದ್ದ ತನ್ನ ಗಂಡನನ್ನು ಕಳೆದುಕೊಂಡ ಸೀಮಾ, ಮುಂದಿನ ಜೀವನಕ್ಕೆ ಅಣಿಯಾಗುವುದು ಅನಿವಾರ್ಯವಾಗಿತ್ತು. ತನ್ನ ಚಿಕ್ಕಪ್ಪನ ಕಂಪ್ಯೂಟರ್ ಸೆಂಟರ್‌ನಲ್ಲಿ ಕೆಲಸ ಕಲಿತ ಸೀಮಾ, ಅಲ್ಲಿಯೇ ಕೆಲಸ ಗಿಟ್ಟಿಸಿಕೊಂಡಳು.
ಬೆಳಿಗ್ಗೆ ಮಕ್ಕಳನ್ನು ಸಿದ್ಧಪಡಿಸಿ, ತಾನೂ ಕಚೇರಿಗೆ ಹೋಗಿ, ವಾಪಸ್ ಮನೆಗೆ ಬಂದ್ಮೇಲೆ ಮನೆ ಕೆಲಸ ಮಾಡಿ ಮಲಗುವುದು ಸೀಮಾ ದಿನಚರಿಯಾಗಿತ್ತು. ಇದಕ್ಕೆ ಸೀಮಾ ಎಷ್ಟು ಹೊಂದಿಕೊಂಡಿದ್ದಳೆಂದ್ರೆ ಆಕೆ ತನ್ನ ಲೈಂಗಿಕ ಬಯಕೆಯನ್ನು ಸಂಪೂರ್ಣ ಹತ್ತಿಕ್ಕಿದ್ದಳು. ಆದ್ರೆ ಮನಸ್ಸು ಅಸಮಾಧಾನಗೊಂಡಿತ್ತು. ಅನಾವಶ್ಯಕ ವಿಷ್ಯಕ್ಕೆ ಕೋಪಗೊಳ್ಳುತ್ತಿದ್ದ ಸೀಮಾಗೆ ಇದ್ರ ಕಾರಣ ತಿಳಿದಿರಲಿಲ್ಲ.
ಬಾಲ್ಯದ ಘಟನೆಗಳಿಂದಲೇ ಮೂಡಿತೇ ಕೀಳರಿಮೆ? ಹೇಗೆ ಗುರುತಿಸಿ, ನಿವಾರಿಸಿಕೊಳ್ಳೋದು?
ಆದ್ರೆ ಒಂದು ದಿನ ಸೈಬರ್ ಕೆಫೆಯಲ್ಲಿ ಕಂಪ್ಯೂಟರ್ ಆಫ್ ಮಾಡುವಾಗ ಸೀಮಾ ಕಣ್ಣಿಗೆ ಲೈಂಗಿಕ ಕಥೆಯ ಸೈಟ್ ಒಂದು ಕಣ್ಣಿಗೆ ಬಿತ್ತು. ಅದನ್ನು ನೋಡಿ ಭಯಗೊಂಡ ಸೀಮಾ ತಕ್ಷಣ ಅದನ್ನು ಆಫ್ ಮಾಡಿದ್ದಳು. ಆದ್ರೆ ಅದ್ರಿಂದ ದೂರವಿರಬೇಕೆಂದು ಎಷ್ಟು ಬಯಸಿದ್ರೂ ಮನಸ್ಸು ಅದ್ರ ಬಗ್ಗೆ ಸೆಳೆಯುತ್ತಿತ್ತು. 33 ವರ್ಷಗಳನ್ನು ಹಾಗೆ ಕಳೆದಿದ್ದ ಸೀಮಾ, ಮರುದಿನ ಧೈರ್ಯ ಮಾಡಿ ಕಂಪ್ಯೂಟರ್ ಓಪನ್ ಮಾಡಿ ಲೈಂಗಿಕ ಕಥೆಯನ್ನು ಓದಿದ್ದಳು. ಪ್ರತಿ ದಿನ ಕೆಫೆ ಶುರುವಾಗುವ ಮುನ್ನವೇ ಬರ್ತಿದ್ದ ಸೀಮಾ, ಕಥೆಗಳನ್ನು ಓದುತ್ತಿದ್ದಳು. ಅದು ಆಕೆಗೆ ಹೊಸ ಹುರುಪನ್ನು ನೀಡಿತ್ತು. ಆದ್ರೆ ವಿಧವೆ ಇದನ್ನೆಲ್ಲ ಓದುತ್ತಾಳೆ ಎಂದು ಜನ ಆಡಿಕೊಂಡ್ರೆ ಎನ್ನುವ ಭಯ ಆಕೆಗಿತ್ತು. ಹಣ ಕೂಡಿಹಾಕಿ ಒಂದು ಸ್ಮಾರ್ಟ್ಫೋನ್ ಖರೀದಿ ಮಾಡಿದ ಸೀಮಾ, ರಾತ್ರಿ ಮಕ್ಕಳು ಮಲಗಿದ ಮೇಲೆ ಕಥೆ ಓದಲು ಶುರು ಮಾಡಿದ್ದಳು.
ಒಂದು ದಿನ ಸೀಮಾ ಬದುಕು ಬದಲಿಸುವ ವಿಷ್ಯ ಗೊತ್ತಾಯ್ತು. ಸೀಮಾ, ಸೆಕ್ಸ್ ಟಾಯ್ಸ್ ಬಗ್ಗೆ ತಿಳಿದುಕೊಂಡಳು. ಮಕ್ಕಳ ಬಟ್ಟೆಯನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡಬಹುದು ಎಂಬುದನ್ನು ತಿಳಿದ ಸೀಮಾ, ಡಿಲ್ಡೋವನ್ನು ಬುಕ್ ಮಾಡಿದಳು. ಮಧ್ಯಮ ವರ್ಗದ ಮಹಿಳೆ ಸೀಮಾಗೆ ಇದ್ರ ಬಗ್ಗೆ ಕುತೂಹಲದ ಜೊತೆ ಆತಂಕವಿತ್ತು. ಡಿಲ್ಡೋ ಡಿಲೆವರಿ ಆಗುವ ದಿನ ಮನೆಯಲ್ಲೇ ಇದ್ದ ಸೀಮಾ, ಮುಖ ಮುಚ್ಚಿಕೊಂಡು ಡಿಲೆವರಿ ಬಾಯ್ ನಿಂದ ಇದನ್ನು ಪಡೆದಳು. ಅದನ್ನು ತೆರೆದು ನೋಡುವ ಹಾಗೂ ಬಳಸುವ ಉತ್ಸಾಹ ಸೀಮಾಗೆ ದುಪ್ಪಟ್ಟಾಗಿತ್ತು.
ಡಿಲ್ಡೋ ನನ್ನ ನೀರಸ ಜೀವನಕ್ಕೆ ಅನಿರೀಕ್ಷಿತ ರೋಮಾಂಚನವನ್ನು ತಂದಿದೆ. ನನ್ನ ಮನಸ್ಸು ಬಹಳ ವರ್ಷಗಳ ನಂತ್ರ ಮತ್ತೆ ಉತ್ಸಾಹದಿಂದ ತುಂಬಿದೆ. ಅಮರ್ ಗೆ ಮೋಸ ಮಾಡದೆ, ಮಕ್ಕಳಿಗೆ ತಾಯಿಯಾಗಿ ನಾನು ನನ್ನ ಜೀವನ ಆನಂದಿಸುತ್ತಿದ್ದೇನೆ. ನನ್ನ ಕುಟುಂಬಕ್ಕೆ ಕಾರಣ ತಿಳಿದಿಲ್ಲ. ಆದ್ರೆ ನನ್ನ ಸಂತೋಷ ನೋಡಿ ಅವರು ಸಮಾಧಾನಗೊಂಡಿದ್ದಾರೆ.