ಕೆಲವೊಂದು ಕ್ಷುಲ್ಲಕ ವಿಷ್ಯಕ್ಕೆ ನಡೆಯುವ ಗಲಾಟೆ ತಾರಕಕ್ಕೇರುತ್ತೆ. ಕೋರ್ಟ್ ಮೆಟ್ಟಿಲೇರಿ, ಜನರು ಜೈಲಿಗೆ ಹೋಗಿ ಬರ್ತಾರೆ. ಮನೆಯಲ್ಲಿ ಆರಾಮವಾಗಿರಬೇಕಿದ್ದ ದಂಪತಿ ಕೂಡ ವಿಚಿತ್ರ ಕಾರಣಕ್ಕೆ ಕಿತ್ತಾಡಿಕೊಂಡು ಸುದ್ದಿಯಾಗಿದ್ದಾರೆ.
ದೊಡ್ಡವರಾಗ್ತಿದ್ದಂತೆ ನಾವು ಜವಾಬ್ದಾರಿಯಿಂದ ವರ್ತಿಸ್ತೇವೆ ಎನ್ನುವ ಮಾತಿದೆ. ಇದು ಎಲ್ಲ ಸಮಯದಲ್ಲಿ, ಎಲ್ಲರಿಗೂ ಅನ್ವಯಿಸೋದಿಲ್ಲ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎನ್ನುವ ಹಾಗೆ, ನಮ್ಮ ಕೆಲ ಸ್ವಭಾವ ಎಂದೂ ಬದಲಾಗೋದಿಲ್ಲ. ವಯಸ್ಸು ಅರವತ್ತರ ಗಡಿದಾಟುತ್ತಿದ್ದಂತೆ ಕೆಲವರು ಮತ್ತೆ ಮಕ್ಕಳಾಗ್ತಾರೆ. ಸಣ್ಣ ಸಣ್ಣ ವಿಷ್ಯಕ್ಕೆ ಗಲಾಟೆ, ಕಿರಿಕಿರಿ ಶುರು ಮಾಡ್ತಾರೆ. ಎಂದೋ ನಡೆದ ಘಟನೆ ಬಗ್ಗೆ ಮಾತನಾಡ್ತಾ, ಶಾಪ ಹಾಕ್ತಾ ಸಮಯ ಕಳೆಯುವವರಿದ್ದಾರೆ. ಇಬ್ಬರ ಮಧ್ಯೆ ಗಲಾಟೆ ಶುರುವಾದಾಗ ಅದು ಈಗಿನದ್ದಕ್ಕಿಂತ ಹಿಂದಿನ ಘಟನೆಗಳಿಗೆ ಬದಲಾಗೋದೇ ಹೆಚ್ಚು. ಹಿಂದೆ ಹೀಗೆ ಮಾಡಿದ್ರಿ, ಹಾಗೆ ಮಾಡಿದ್ರಿ ಎಂದೇ ಜಗಳ ತಾರಕಕ್ಕೇರುತ್ತದೆ. ದಂಪತಿ ಮಧ್ಯೆ ಇಂಥ ಜಗಳ ನಡೆಯೋದು ಹೆಚ್ಚು. ಹದಿನೈದು ವರ್ಷಗಳ ಹಿಂದೆ ಬರ್ತ್ ಡೇ ವಿಶ್ ಮಾಡದ ಪತಿ ಅಥವಾ ಇಪ್ಪತ್ತು ವರ್ಷಗಳ ಹಿಂದೆ ಪರ್ಸ್ ನಿಂದ ಹಣ ತೆಗೆದಿದ್ದ ಪತ್ನಿ ಕ್ರಮ ಖಂಡಿಸಿ ತಮ್ಮ ಐವತ್ತನೇ ವಯಸ್ಸಿನಲ್ಲಿ ಜಗಳ ಮಾಡುವವರಿದ್ದಾರೆ. ಇಂಥ ಘಟನೆಗೆ ಈಗ ಮತ್ತೊಂದು ಸೇರ್ಪಡೆ ಆಗಿದೆ. ಇಲ್ಲಿ ಪತ್ನಿ ಒಂದು ಕೈ ಮುಂದೆ ಹೋಗಿದ್ದಾಳೆ. ಹತ್ತಲ್ಲ – ಇಪ್ಪತ್ತಲ್ಲ ಬರೋಬ್ಬರಿ ಅರವತ್ತು ವರ್ಷಗಳ ಹಿಂದೆ ನಡೆದ ಘಟನೆಗೆ ಕೋಪಗೊಂಡ ಮಹಿಳೆ, ಪತಿ ಮೇಲೆ ಹಲ್ಲೆ ನಡೆಸಿದ್ದಾಳೆ.
ಪತಿ ಮೇಲೆ ಮಾರಣಾಂತಿಕ ಹಲ್ಲೆ : ಘಟನೆ ಫ್ಲೋರಿಡಾ (Florida) ದಲ್ಲಿ ನಡೆದಿದೆ. 71 ವರ್ಷದ ಮಹಿಳೆ ಬರ್ತಾ ಯಾಲ್ಟರ್, 60 ವರ್ಷ ಹಿಂದಿನ ಸಂಬಂಧಕ್ಕೆ ಕೋಪ (Anger) ಗೊಂಡು ಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ.
ಹನಿಮೂನ್ ಬೆಡ್ರೂಮ್ ಫೋಟೋ ಶೇರ್ ಮಾಡಿ ಹಲ್ಚಲ್ ಸೃಷ್ಟಿಸಿದ್ದ ನಟಿಯಿಂದ 2ನೇ ಗಂಡನಿಗೂ ಡಿವೋರ್ಸ್?
ಫ್ಲೋರಿಡಾದ ಬರ್ತಾ ಯಾಲ್ಟರ್ಗೆ ಪತಿಯ ಅರವತ್ತು ವರ್ಷ ಹಿಂದೆ ಬರೆದಿದ್ದ ಪತ್ರವೊಂದು ಸಿಕ್ಕಿದೆ. ಅದ್ರಲ್ಲಿ ಆತ ಟರ್ಕಿ (Turkey) ಮಹಿಳೆ ಜೊತೆ ಸಂಬಂಧದಲ್ಲಿದ್ದ ಎಂಬುದು ಗೊತ್ತಾಗಿದೆ. ಆದ್ರೆ ಬರ್ತಾ ಯಾಲ್ಟರ್ ಮದುವೆಯಾಗಿ 52 ವರ್ಷ ಕಳೆದಿದೆ. ಅಂದ್ರೆ ಮದುವೆಗಿಂತ ಎಂಟು ವರ್ಷ ಮೊದಲು ಆಕೆ ಪತಿ ಸಂಬಂಧದಲ್ಲಿದ್ದ ಎಂಬುದು ಸ್ಪಷ್ಟ.
ಸಿಕ್ಕಾಪಟ್ಟೆ ಹಠ ಮಾಡೋ ಮಕ್ಕಳ ಜೊತೆ ಹೀಗ್ ಬಿಹೇವ್ ಮಾಡಿ, ಯಾವಾಗ್ಲೂ ಕೂಲ್ ಆಗಿರ್ತಾರೆ!
ಪತಿಯ ಹಳೆ ಸಂಬಂಧ ಬರ್ತಾ ಯಾಲ್ಟರ್, ಮಾನಸಿಕ ಸ್ಥಿಮಿತ ಕಳೆದುಕೊಳ್ಳುವಂತೆ ಮಾಡಿದೆ. ಆಕೆ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ದಿಂಬಿನಿಂದ ಆತನ ಹತ್ಯೆಗೆ ಪ್ರಯತ್ನ ನಡೆಸಿದ್ದಾಳೆ. ಉತ್ತರ ಮಿಯಾಮಿ ಬೀಚ್‌ನ ಪೂರ್ವ ಬೀಚ್ ಪ್ರದೇಶದಲ್ಲಿರುವ ಮನೆಯಲ್ಲಿ ಈ ದಾಳಿ ನಡೆದಿದೆ. ದುರ್ಬಲ ವ್ಯಕ್ತಿಗೆ ಗಾಯಗಳಾಗಿವೆ. ಅವನ ಎರಡೂ ತೋಳುಗಳು ಮತ್ತು ಹೊಟ್ಟೆಯ ಮೇಲೆ ಗಾಯವಾಗಿದೆ.
ಬರ್ತಾ ಯಾಲ್ಟರ್, ಪತಿಗೆ ಇದ್ರ ಬಗ್ಗೆ ಪ್ರಶ್ನೆ ಕೇಳಿದ್ದಾಳೆ. ಟರ್ಕಿ ಮಹಿಳೆ ಪತ್ರಕ್ಕೆ ಉತ್ತರ ನೀಡಿದ್ದಾಗಿ ಪತಿ ಒಪ್ಪಿಕೊಂಡಿದ್ದಾನೆ. ಅಲ್ಲಿಂದ ಗಲಾಟೆ ಶುರುವಾಗಿದೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ವಿಚಾರಣೆ ವೇಳೆ, ಮಹಿಳೆ ಪರ ವಕೀಲರು, ದಂಪತಿ ಮಧ್ಯೆ ಗಲಾಟೆ ಶುರುವಾಗಿತ್ತು. ಅದೇ ಇಷ್ಟೆಲ್ಲ ಆಗಲು ಕಾರಣ ಎಂದಿದ್ದಾರೆ. ಆದ್ರೆ ಬರ್ತಾ ಯಾಲ್ಟರ್ ಪತಿ ಹತ್ಯೆಗೆ ಪ್ರಯತ್ನ ನಡೆಸಿರಲಿಲ್ಲ ಎಂದಿದ್ದಾರೆ. ಬರ್ತಾ ಯಾಲ್ಟರ್ ಪತಿ ಪರ ವಕೀಲರು ಇದನ್ನು ನಿರಾಕರಿಸಿದ್ದಾರೆ. ಬರ್ತಾ ಯಾಲ್ಟರ್, ಪತಿಯ ಮುಖಕ್ಕೆ ದಿಂಬು ಹಿಡಿದಿದ್ದಾಳೆ. ವೃದ್ಧ ವ್ಯಕ್ತಿ, ಉಸಿರುಗಟ್ಟಿ ಸಾವನ್ನಪ್ಪುವ ಸಾಧ್ಯತೆ ಇತ್ತು ಎಂದಿದ್ದಾರೆ. ಇದಲ್ಲದೆ ಬರ್ತಾ ಯಾಲ್ಟರ್, ಪತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾಳೆ ಎಂಬ ಆರೋಪವೂ ಇದೆ. ಇದೆಲ್ಲ ಹೇಯ ಕೃತ್ಯ ಎಂದು ವಕೀಲರು ಹೇಳಿದ್ದಾರೆ. ಬರ್ತಾ ಯಾಲ್ಟರ್ ಪತಿ ದಾಳಿಯಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.