
ಬಿ. ಆರ್. ಸುವರ್ಣ ಶರ್ಮ
ನಾವೆಷ್ಟೇ ಪ್ರಯತ್ನ ಪಟ್ಟರೂ ಮತ್ತೆ ಮತ್ತೆ ದುಃಖದಲ್ಲಿ ಬೀಳುತ್ತೇವೆ, ಮತ್ತೆ ಮತ್ತೆ ‘ನೀನು-ನಾನು-ಅವರು’ ಎಂಬ ದ್ವಂದ್ವದಲ್ಲಿ ಬಿದ್ದು, ಅಹಂಗೆ ಆದ ಗಾಯಕ್ಕೆ ಉಪ್ಪು ಹಾಕುತ್ತ ರೊಚ್ಚಿಗೇಳಿಸುತ್ತೇವೆ. ಎಲ್ಲೋ ಪ್ರಜ್ವಲಿಸಿ ಮಾಯವಾಗುವ ಆ ಆನಂದದ ಬೆಳಕನ್ನ ಹಿಡಿಡಿದಿಟ್ಟುಕೊಳ್ಳೋದ್ರಲ್ಲಿ ವಿಫಲರಾಗಿರುತ್ತೇವೆ. ನಮ್ಮ ಅಜ್ಞಾನದ ಕತ್ತಲಲ್ಲಿ ಕೂತು ಬೆಳಕ ಅರಸುತ್ತಲೇ ಇರುತ್ತೇವೆ. ನಾವು ಎಲ್ಲಿಂದ ಬಂದೆವು, ನಮ್ಮ ಮೂಲ ಯಾವುದು, ಎಂಬ ಅರಿವಿಲ್ಲದೆ, ಮನೆಯಿಂದ ದೂರಾದ ಪುಟ್ಟಮಗುವಿನಂತೆ, ಅಮ್ಮನನ್ನು ಅರಸುತ್ತಾ, ಬೀದಿ ಬೀದಿಗಳಲ್ಲಿ ಅಳುತ್ತಾ ಅಲೆಯುತ್ತಿರುತ್ತೇವೆ. ದಾರಿಯ ತುಂಬಾ ಕಲ್ಲು ಮುಳ್ಳುಗಳು ಎಂದು ಎಲ್ಲವನ್ನೂ ದೂಷಿಸುತ್ತಾ ಇನ್ನಷ್ಟುಸಂಕಟದಿಂದ ಬಿಕ್ಕಳಿಸುತ್ತೇವೆ.
ಸಮಸ್ಯೆಗಳ ಪರಿಹಾರಕ್ಕೆ ಮಾಡಿ ಈ ವ್ರತ, ತಿಳಿಯಿರಿ ಇದರ ಲಾಭ!
ತಾಯ ಮಡಿಲನ್ನು ಅರಸುವ ಮಗುವಿಗೂ, ಇನ್ನೂ ಶರಣಾಗತಿ ಹೊಂದದ ಸಾಧಕನಿಗೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಮನಸ್ಸೇ ಹಾಗೇ ತನ್ನ ಹಮ್ಮನ್ನು, ಎಂದಿಗೂ ಬಿಟ್ಟುಕೊಡಲು ತಯಾರಿರುವುದಿಲ್ಲ. ಇನ್ನು ಶರಣಾಗತಿಯ ವಿಷಯ ಕೇಳಬೇಕೆ, ಅದು ನಿಮ್ಮ ಪೂರ್ಣತ್ವವನ್ನು ಕೇಳುತ್ತದೆ. ಅದಕ್ಕೆ ನಿಮ್ಮ ಅಹಂಕಾರದ ಕಪ್ಪವನ್ನು ಕೊಡಬೇಕಾಗುತ್ತದೆ. ಮತ್ತಿದು ಅತ್ಯಂತ ಧೈರ್ಯಶಾಲಿಗೆ ಮಾತ್ರ ಸಾಧ್ಯವಾಗುವಂತದ್ದು, ಆ ಧೈರ್ಯವನ್ನೇ ಶರಣಾಗತಿಯು ಕೇಳುವುದು.
ಪ್ರತಿಯೊಬ್ಬ ವ್ಯಕ್ತಿಯೂ, ಜ್ಞಾನದ ಮೆಟ್ಟಿಲನ್ನು ಏರಿ , ಭಕ್ತಿಯ ನದಿಯನ್ನು ಸೇರಿ, ವೈರಾಗ್ಯದ ಕಡಲಿನಲ್ಲಿ ಕರಗಿಹೋಗಬೇಕು. ವಿಶ್ವಕ್ಕೆ, ವಿಶ್ವನಾಥನಿಗೆ ತನ್ನನ್ನು ತಾನು ಅರ್ಪಿಸಿಕೊಂಡ ವ್ಯಕ್ತಿ, ತನ್ನ ಇಡೀ ಬದುಕನ್ನ ಶ್ರೇಷ್ಠ ಶಕ್ತಿಗೆ ಅರ್ಪಿಸಿ, ವೈರಾಗ್ಯದ ನಗು ಬೀರುತ್ತಾ, ಸದಾ ಸುಖಿಯಾಗಿರುತ್ತಾನೆ. ನಂತರ ಜೀವನದಲ್ಲಿ ನಡೆಯುವುದೆಲ್ಲಾ ಶುದ್ಧ ಪವಾಡ. ಇದರರರ್ಥ ನಾವು ಏನೂ ಮಾಡದೆಯೇ ನಿಷ್ಕಿ್ರಯರಾಗಬೇಕೆಂದಲ್ಲ. ನಮ್ಮ ಕೆಲಸವನ್ನು ನಾವು ನಿಷ್ಠೆಯಿಂದ ಮಾಡಿ, ಮಿಕ್ಕ ಆಗು ಹೋಗುಗಳಿಗೆಲ್ಲಾ ತಲೆ ಕೆಡಿಸಿಕೊಳ್ಳದೆ, ಚಿಂತೆಗಳಿಗೆಲ್ಲಾ ಫುಲ್‌ಸ್ಟಾಪ್ ಹಾಕಿ, ಭಗವಂತನ ತಾಯಿ ಮಡಿಲನ್ನು ಮುದ್ದಾಗಿ ಸೇರುವುದು.
ಸಣ್ಣ ಧೂಳಿನ ಕಣ ಸಿಟ್ಟು ಬರಿಸುತ್ತೆ; ಈ ಸಮಯದಲ್ಲಿ ನಾವು ಮಾಡಬೇಕಾಗಿದ್ದೇನು?
ಯಾವುದೇ ಋುಣಾತ್ಮಕ ಚಿಂತೆಗಳಿಲ್ಲದೆ, ನಿಶ್ಚಿಂತೆಯಿಂದ ಜೀವನದ ಪ್ರತಿ ಕ್ಷಣವನ್ನ ಸವಿಯುವುದು, ಈಗಿನ ಸಂಧರ್ಭಕ್ಕೆ ಅತ್ಯಂತ ಅವಶ್ಯಕತೆ ಇರುವಂತಹ ವಿಷಯ.
ಸಮರ್ಪಣೆ ಎಂಬುದು ಮನುಷ್ಯನನ್ನು ಮತ್ತಷ್ಟುಮಾನವೀಯತೆಯ ಕಡೆಗೆ,ದೈವತ್ವದ ಕಡೆಗೆ ಕೊಂಡೊಯ್ಯುತ್ತದೆ.
‘ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿ ಚಾತ್ಮನಿ
ಈಕ್ಷತೆ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ ’
‘ನಿಜವಾದ ಯೋಗಿಯು ಎಲ್ಲ ಜೀವಿಗಳಲ್ಲೂ ನನ್ನನ್ನು ಕಾಣುತ್ತಾನೆ ಮತ್ತು ನನ್ನಲ್ಲಿ ಎಲ್ಲಾ ಜೀವಿಗಳನ್ನು ಕಾಣುತ್ತಾನೆ
ಆತ್ಮ ಸಾಕ್ಷಾತ್ಕಾರ ಪಡೆದ ಮಾತನ್ನು ಪಡೆದ ಮನುಷ್ಯನು ನನ್ನನ್ನು ಎಲ್ಲೆಲ್ಲಿಯೂ ಕಾಣುತ್ತಾನೆ’ ಎಂದು ಶ್ರೀ ಕೃಷ್ಣ ಹೇಳಿರುವಂತೆ, ಎಲ್ಲೆಲ್ಲಿಯೂ ಭಗವಂತನನ್ನು ಕಾಣುವ ಮನುಷ್ಯ ಅತ್ಯಂತ ವಿಧೇಯನಾಗಿರುತ್ತಾನೆ. ಎಲ್ಲರಲ್ಲೂ ಎಲ್ಲದರಲ್ಲೂ ಪ್ರೀತಿ ತೋರಿಸುವ ಒಲವಿನ ಕಾರಂಜಿಯಾಗಿರುತ್ತಾನೆ. ಬದುಕನ್ನ ಒಂದು ವರದಂತೆ ಸ್ವೀಕರಿಸಿ, ಪ್ರಪಂಚಕ್ಕೆ ಓರ್ವ ಅಮೂಲ್ಯ ವ್ಯಕ್ತಿಯಾಗುತ್ತಾನೆ. ‘ಎಲ್ಲ ಗೊಂದಲಗಳ ಬಿಡು, ನಾನು ನಿನ್ನ ಜೊತೆಗೇ ಇದ್ದೇನೆ ಎಂಬುದನ್ನ ಎಂದಿಗೂ ಮರೆಯದಿರು’ ಎನ್ನುತ್ತಿದ್ದಾನೆ ಭಗವಂತ.
ಮದ್ವೆಯಾಗೋವಾಗ ಗಂಡಿನ ಸಂಬಳ ಕೇಳಿದ್ರೆ ಸಾಲದು, ವ್ಯಕ್ತಿತ್ವದೆಡೆಗೂ ಇರಲಿ ಗಮನ
ಬನ್ನಿ! ಎಲ್ಲ ಚಿಂತೆಗಳನ್ನೂ ಬಿಟ್ಟುಬಿಡೋಣ, ನಮ್ಮನ್ನು ನಾವೇ ಅವನಿಗೆ ಕೊಟ್ಟುಬಿಡೋಣ!
ಒಂದು ಮೈಂಡ್ ಗೇಮ್
ಮನಸ್ಸು ರಿಲ್ಯಾಕ್ಸ್ ಆಗಲು, ಉದ್ವೇಗದಿಂದ ಶಮನಗೊಳ್ಳಲು ಒಂದು ಸಿಂಪಲ್ ಮೈಂಡ್ ಗೇಮ್ ಇದೆ. ಗಾಳಿ, ಬೆಳಕು ಚೆನ್ನಾಗಿರುವ ಜಾಗದಲ್ಲಿ ಕುಳಿತುಕೊಳ್ಳಿ. ದೀರ್ಘವಾಗಿ ಉಸಿರಾಡಿ. ನಿಮ್ಮ ಸುತ್ತಮುತ್ತ ಕೇಳುವ ಆರು ಶಬ್ದಗಳನ್ನು ಗುರುತಿಸಿ. ಹದಿನೈದು ಸೆಕೆಂಡ್‌ಗಳಷ್ಟುಕಾಲ ನಿಮ್ಮ ಗಮನ ಆ ಶಬ್ದಗಳ ಮೇಲಿರಲಿ. ಆಮೇಲೆ ನಿಮ್ಮ ಕಣ್ಣಿಗೆ ಕಾಣುವ ಮೂರು ವಸ್ತುಗಳನ್ನು ಗಮನವಿಟ್ಟು ನೋಡಿ. ಒಂದು ವಸ್ತುವಿನ ಮೇಲೆ ನಿಮ್ಮ ಸಂಪೂರ್ಣ ಗಮನ ಹರಿಯಬಿಡಿ. ಈಗ ನಿಮ್ಮ ಒಳಗಿನ ಒಂದು ಫೀಲ್ ಅಥವಾ ಭಾವನೆಯನ್ನು ಗುರುತಿಸಿ. ಆ ಭಾವನೆಯನ್ನೂ ಸೂಕ್ಷ್ಮವಾಗಿ ಆಳವಾಗಿ ನೋಡಿ. ನಿಧಾನಕ್ಕೆ ಆ ಸ್ಥಿತಿಯಿಂದ ಹೊರಬನ್ನಿ. ಈಗ ನಿಮ್ಮ ಮನಸ್ಥಿತಿ ಗಮನಿಸಿ, ಮನಸ್ಸು ಕೂಲ್ ಆಗಿರೋದು ನಿಮ್ಮ ಗಮನಕ್ಕೆ ಬರುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.