ಲಾಕ್‌ಡೌನ್‌ನಲ್ಲಿ ಮಕ್ಕಳಿಗೆ ಕಲಿಸುವ ಬಗ್ಗೆ ತಜ್ಞರ ಸಲಹೆಗಳು

By Suvarna News  |  First Published Jun 1, 2020, 5:03 PM IST

ಮಕ್ಕಳು ನಿಮ್ಮಿಂದ ಏನೇನು ಕಲಿಯಬಹುದು ಎಂದು ಯೋಚಿಸುತ್ತಿದ್ದೀರಾ? ಇದಕ್ಕೆ ಉತ್ತರ ಎಲ್ಲವನ್ನೂ... ಹೌದು, ನೀವು ಮಾಡುವ, ಮಾತನಾಡುವ ಪ್ರತಿಯೊಂದನ್ನೂ ಮಕ್ಕಳು ನಿಮ್ಮಿಂದ ಕಲಿಯಬಲ್ಲರು. 


ಲಾಕ್‌ಡೌನ್‌ ಜೀವನಕ್ಕೆ ಅದರದೇ ಆದ ಪ್ಲಸ್ ಹಾಗೂ ಮೈನಸ್ ಮುಖಗಳಿವೆ. ಇದನ್ನು ಎಲ್ಲ ಪೋಷಕರೂ ಒಪ್ಪುತ್ತಾರೆ. ಮಕ್ಕಳಿಗೆ ಆಡಲು ಮುಂಚಿಗಿಂತ ಹೆಚ್ಚು ಸಮಯವಿದೆ, ಆದರೆ ಹೊರ ಹೋಗುವಂತಿಲ್ಲ, ಮಕ್ಕಳಿಗೆ ಪೋಷಕರಿಂದ ಕಲಿಯಲು ಅವಕಾಶವಿದೆ, ಪೋಷಕರಿಗೇ ಸಮಯವಿಲ್ಲ, ಇದ್ದರೂ ಏನು ಹೇಳಿಕೊಡುವುದೆಂಬ ಗೊಂದಲ. ಶಾಲೆಗಳು ಮುಚ್ಚಿರುವುದರಿಂದ ತಮ್ಮ ಮಕ್ಕಳು ಕಲಿಕೆಯಲ್ಲಿ ಹಿಂದೆ ಬಿದ್ದರೆ ಎಂಬ ಭಯ, ಮಕ್ಕಳಿಗೆ ನಾವೇನು ಕಲಿಸಬಹುದು ಎಂಬುದು ತಿಳಿಯದ ಸ್ಥಿತಿ. 

ಆದರೆ, ಇಷ್ಟೊಂದು ಆತಂಕ ಪಡುವ ಅಗತ್ಯವಿಲ್ಲ. ಮಕ್ಕಳು ಹೀಗೆ ಮಾಡು ಎಂದು ಹೇಳಿದಾಗ ಮಾಡುವುದಕ್ಕಿಂತ ಪೋಷಕರು, ಶಿಕ್ಷಕರು ಏನು ಮಾಡುತ್ತಾರೆ, ಹೇಗೆ ಮಾತನಾಡುತ್ತಾರೆ ಎಂಬುದನ್ನೆಲ್ಲ ನೋಡಿ ಕಲಿಯುತ್ತಾರೆ. ಹಾಗಾಗಿ, ನಿಮ್ಮ ದಿನನಿತ್ಯದ ಜೀವನದಲ್ಲಿ, ಅದರ ಕೆಲಸಗಳಲ್ಲಿ ಮಕ್ಕಳನ್ನೂ ಸೇರಿಸಿಕೊಳ್ಳುವುದು, ಕಲಿಕೆಯನ್ನೇ ಆಟವಾಗಿಸುವುದು ಜಾಣತನ. ಮನೆಯ ಎಲ್ಲ ಸದಸ್ಯರ ಬಳಿ ಕೆಲ ಹೊತ್ತು ಹೀಗೆ ಕಳೆಯುವುದರಿಂದ ಮಕ್ಕಳಿಗೂ ಬೋರ್ ಆಗುವುದಿಲ್ಲ, ನಿಮಗೂ ಸಮಯ ಸಿಗುತ್ತದೆ. ಜೊತೆಗೆ, ಒಬ್ಬೊಬ್ಬರ ಬಳಿ ಒಂದೊಂದು ಕಲಿಯಸಿಗಬಹುದು. ಇನ್ನು ಲಾಕ್‌ಡೌನ್ ಸಂದರ್ಭದಲ್ಲಿ ಮಕ್ಕಳು ಇಡೀ ದಿನ ಕುಟುಂಬದ ಜೊತೆಗೇ ಇರುವುದರಿಂದ ದೊಡ್ಡವರೆನಿಸಿಕೊಂಡವರು ತಾವು ಬಳಸುವ ಭಾಷೆ ಬಗ್ಗೆ ಹೆಚ್ಚು ಗಮನ ವಹಿಸಬೇಕು, ಮನೆಯಲ್ಲಿ ಯಾರನ್ನೂ ಕಡೆಗಣಿಸದಂತೆ ವರ್ತಿಸಬೇಕು. ನಿಮ್ಮ ಮಕ್ಕಳು ಹೇಗಿರಬೇಕೆಂದು ಬಯಸುತ್ತೀರೋ ನೀವೂ ಹಾಗೆಯೇ ಇರುವುದು ಅದನ್ನು ಕಲಿಸುವ ಸುಲಭ ಮಾರ್ಗ!

ನನ್ನ ಒಂದು ನಗುವಿಗಾಗಿ ಅವಳು ತಲೆ ಬೋಳಿಸಿಕೊಂಡಿದ್ದಳು!

Latest Videos

undefined

ಈ ಬಗ್ಗೆ ಮೋಟಿವೇಶನಲ್ ಸ್ಪೀಕರ್ ರಶ್ಮಿ ಸೋಯಿನ್ ಕೊಟ್ಟಿರುವ ಕೆಲ ಸಲಹೆಗಳು ಇಲ್ಲಿವೆ. 

- ಸ್ಕ್ರೀನ್ ಟೈಂ ಕಡಿಮೆ ಮಾಡಿ
ಈ ಸಲಹೆ ಪಟ್ಟಿಯ ಮೊದಲ್ಲಿರಲು ಒಂದು ಕಾರಣವಿದೆ. ಏಕೆಂದರೆ ಮಕ್ಕಳು ಕಿರಿಕಿರಿ ಮಾಡುತ್ತಾರೆಂದಾಗ, ಬೋರ್ ಎಂದಾಗ ಅವರಿಗೆ ಟಿವಿ ಅಥವಾ ಫೋನ್‌ನಲ್ಲಿ ಕಾರ್ಟೂನ್ ಹಾಕಿಕೊಡುವ ಅಭ್ಯಾಸ ಇಂದಿನ ಬಹುತೇಕ ಪೋಷಕರದು. ಇನ್ನು ಊಟ ಮಾಡಿಸಲಂತೂ ಸ್ಕ್ರೀನ್ ಬೇಕೇ ಬೇಕು. ಇದರಿಂದ ತಾವು ಸ್ವಲ್ಪ ಆರಾಮಾಗಿರಬಹುದೆಂಬ ಯೋಚನೆ. ಆದರೆ, ಮಕ್ಕಳ ಸ್ಕ್ರೀನ್ ಟೈಂ ಕಡಿಮೆ ಮಾಡಿ ಅವರನ್ನು ಹೆಚ್ಚು ಹೆಚ್ಚು ದೈಹಿಕ ಶ್ರಮ ಬೇಡುವ, ತಲೆ ಖರ್ಚು ಮಾಡಬೇಕಾದ ಆಟಗಳಲ್ಲಿ, ಕೆಲಸಗಳಲ್ಲಿ ತೊಡಗಿಸಿ. ಪಜಲ್ ಗೇಮ್‌ಗಳು ಉತ್ತಮ. ಇದರಿಂದ ಅವರ ಮೆದುಳು ಪ್ಯಾಸಿವ್ ಇಂದ ಆ್ಯಕ್ಟಿವ್ ಸ್ಟೇಟ್‌ಗೆ ಬರುತ್ತದೆ. ಜೊತೆಗೆ ಮಕ್ಕಳೂ ಹೆಚ್ಚು ಕಾಲ ಎಂಗೇಜ್ ಆಗಿರಲು ಸಾಧ್ಯವಾಗುತ್ತದೆ. 

- ಮಕ್ಕಳಲ್ಲಿ ಸಮಸ್ಯೆಗೆ ಪರಿಹಾರ ಕೇಳಿ
ಮಕ್ಕಳನ್ನು ಸಾಧ್ಯವಾದಷ್ಟು ಯೋಚನೆಗೆ ಹಚ್ಚಿ. ನಿಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಮಕ್ಕಳಲ್ಲಿ ಪರಿಹಾರ ಕೇಳಿ. ಅವರಲ್ಲಿ ಪರಿಹಾರ ಕೇಳುವುದರಿಂದ ಅವರಿಗೆ ನೀವು ಹೆಚ್ಚು ಬೆಲೆ ಕೊಡುತ್ತೀರಿ ಎನಿಸುವುದರ ಜೊತೆಗೆ ಹೆಚ್ಚು ಜವಾಬ್ದಾರರಾದಂತೆ ಬಗೆಯುತ್ತಾರೆ. ಜೊತೆಗೆ, ಪರಿಹಾರ ಹುಡುಕಲು ಲಾಜಿಕಲ್ ರೀಸನಿಂಗ್‌ಗೆ ಕೆಲಸ ಕೊಡುತ್ತಾರೆ. ಉದಾಹರಣೆಗೆ ನಿಮಗೆ 2 ಗಂಟೆಗೆ ಮೀಟಿಂಗ್ ಇದೆ ಎಂದುಕೊಳ್ಳಿ. ಅದಕ್ಕೂ ಮುನ್ನ ಎರಡು ಮುಖ್ಯ ಕೆಲಸಗಳು ಆಗಬೇಕಿದೆ. ಹೇಗೆ ಟೈಂ ಮ್ಯಾನೇಜ್ ಮಾಡಬಹುದೆಂಬುದನ್ನು ಮಕ್ಕಳ ಬಳಿ ಪ್ರಶ್ನಿಸಿ. ಅವರು ಹೇಳುವ ಪರಿಹಾರವನ್ನು ಕಡೆಗಣಿಸದೆ ಆಲಿಸಿ. ಇದು ಅವರ ಮೆದುಳಿನ ಬೆಳವಣಿಗೆಗೂ ಸಹಾಯಕ ಜೊತೆಗೆ ಸ್ವತಃ ಇಂಥ ಸಮಸ್ಯೆಗಳನ್ನು ಹೇಗೆ ನಿಭಾಯಿಸಬಹುದೆಂಬ ಅರಿವೂ ಆಗುತ್ತದೆ. 

- ಡು ಇಟ್ ಯುವರ್‌ಸೆಲ್ಫ್
ಡಿಐವೈ ಎಂದ ಮಾತ್ರಕ್ಕೆ ಮನೆಯಲ್ಲೇ ಕ್ರಾಫ್ಟ್, ಆರ್ಟ್ ಮಾಡುತ್ತಿರಿ ಎಂದಲ್ಲ, ಮಗುವು ಮನೆಯಲ್ಲೇ ಮಾಡಬಹುದಾದ ಚಟುವಟಿಕೆಯೂ ಸೇರುತ್ತದೆ. ಸರಳವಾದವು ಎಂದರೆ ಕಾರ್ಡ್‌ಬೋರ್ಡ್ ಅಥವಾ ರಟ್ಟಿನಲ್ಲಿ ವಿವಿಧ ಆಕಾರಗಳನ್ನು ಕತ್ತರಿಸುವುದು, ಬಳಿಕ ಮಕ್ಕಳಿಗೆ ಅವನ್ನು ಬೇರೆ ಬೇರೆ ಆಕಾರಕ್ಕೆ ಅನುಗುಣವಾಗಿ ಬೇರ್ಪಡಿಸಿ ಜೋಡಿಸಲು ಇಲ್ಲವೇ ದಾರವೊಂದಕ್ಕೆ ಕಟ್ಟಲು ಹೇಳುವುದು, ಇದಕ್ಕೆ ಸಂಖ್ಯೆಗಳು ಹಾಗೂ ಆಲ್ಫಾಬೆಟ್ಟನ್ನು ಕೂಡಾ ಬಳಸಬಹುದು. ಮತ್ತೊಂದು  ಚಟುವಟಿಕೆ ಎಂದರೆ ಕಡ್ಲೆಕಾಳು ಹಾಗೂ ತೊಗರಿಬೇಳೆಯನ್ನು ಮಿಕ್ಸ್ ಮಾಡಿ ಅದನ್ನು ಬೇರ್ಪಡಿಸಲು ಮಕ್ಕಳಿಗೆ ಹೇಳುವುದು. ಇದರಲ್ಲಿ ಹೆಚ್ಚು ವೆರೈಟಿ ಸೇರಿಸಬಹುದು. ಇದರಿಂದ ಮಗುವಿನ ಫೈನ್ ಮೋಟಾರ್ ಸ್ಕಿಲ್ಸ್ ಬೆಳವಣಿಗೆಯಾಗುತ್ತದೆ. ಇಂಥ ಹತ್ತು ಹಲವು ಚಟುವಟಿಕೆಗಳನ್ನು ನೀವು ಮನೆಯಲ್ಲೇ ಕಂಡುಕೊಳ್ಳಬಹುದು. 

ಇವುಗಳಲ್ಲಿ ಅರ್ಧಕ್ಕೂ ಹೆಚ್ಚು ಗುಣಗಳು ಅವನಲ್ಲಿದ್ದರೆ ಕಣ್ಣು ಮುಚ್ಚಿ ಕ ...

- ಗುಣಮಟ್ಟದ ಸಮಯ ಕಳೆಯಿರಿ
ಕಚೇರಿ ಹಾಗೂ ಮನೆಗೆಲಸದ ನಡುವೆ ನಿಮಗೆ ಮಕ್ಕಳಿಗೆ ಸರಿಯಾಗಿ ಪ್ರತಿಕ್ರಿಯಿಸಲು ಸಾಧ್ಯವಾಗದಿರಬಹುದು. ಆದರೆ, ಕೊಡುವಷ್ಟು ಸಮಯ ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳುವುದು ಮುಖ್ಯ. ಹೀಗಾಗಿ, ದಿನಾಂತ್ಯದಲ್ಲಿ ಮಕ್ಕಳೊಂದಿಗೆ ಕುಳಿತು ಲೂಡೋ, ಕೇರಂ, ಹಾವು ಏಣಿ, ಚೆಸ್ ಮುಂತಾದ ಆಟವನ್ನು ದಿನಕ್ಕೊಂದೊಂದರಂತೆ ಆಡಬಹುದು. ಬೋರ್ಡ್ ಗೇಮ್ ಇಲ್ಲದಿದ್ದಲ್ಲಿ ಪೇಪರ್ ಹಾಗೂ ಪೆನ್ಸಿಲ್  ಬಳಸಿ ಆಡುವ ಟಿಕ್ ಟ್ಯಾಕ್ ಟೋ, ನೇಮ್ ಪ್ಲೇಸ್ ಥಿಂಗ್ ಎನಿಮಲ್ ಮುಂತಾದ ಆಟಗಳನ್ನು ಆಡಬಹುದು. ಇವು ಖಂಡಿತಾ ನಿಮ್ಮ ಮಕ್ಕಳದಷ್ಟೇ ಅಲ್ಲ, ನಿಮಗೂ ಫೇವರೇಟ್ ಟೈಂ ಆಫ್ ದ ಡೇ ಆಗದಿದ್ದರೆ ಕೇಳಿ.

- ರೀಡ್ ರೀಡ್ ರೀಡ್
ಮಕ್ಕಳಿಗಾಗಿ ಪ್ರತಿದಿನ ಒಂದಿಷ್ಟು ಓದಿ ಹೇಳುವುದರಿಂದ ಅವರ ವೊಕ್ಯಾಬುಲರಿ ಇಂಪ್ರೂವ್ ಆಗುವ ಜೊತೆಗೆ ಅರ್ಥವನ್ನೂ ಹೇಳಿ ಅವರಿಗೆ ಸುಲಭವಾಗಿ ಅರ್ಥವಾಗುವಂತೆ ಮಾಡಲು ಸಾಧ್ಯವಿದೆ. ಇದರಿಂದ ಮಕ್ಕಳಲ್ಲೂ ಪುಸ್ತಕ ಓದುವ ಅಭ್ಯಾಸ ರೂಢಿಯಾಗುತ್ತದೆ. ಅವರ ಕಲ್ಪನಾ ಶಕ್ತಿ ವಿಸ್ತಾರವಾಗುತ್ತದೆ. ಕತೆ ಮುಗಿದ ಮೇಲೆ ಇದರಿಂದ ಅವರೇನು ಕಲಿತರು, ಯಾವ ಕ್ಯಾರೆಕ್ಟರ್ ಅವರಿಗೆ ಹೆಚ್ಚು ಇಷ್ಟವಾಯಿತು, ಯಾಕೆ, ನೀನು ಆ ಪಾತ್ರವಾಗಿದ್ದರೆ ಏನು ಮಾಡುತ್ತಿದ್ದೆ ಮುಂತಾದ ಪ್ರಶ್ನೆಗಳನ್ನು ಕೇಳಿ. ಇದರಿಂದ ಕತೆ ಅವರ ನೆನಪಿನಲ್ಲುಳಿಯುವ ಜೊತೆಗೆ ಕ್ರಿಯಾಶೀಲತೆಯೂ ಹೆಚ್ಚುತ್ತದೆ. 

click me!