ತುಟಿಗೆ ತುಟಿ ಬೆಸೆಯೋದು ಅಂದಾಗ ಕಚಗುಳಿ ಅನಿಸಬಹುದು. ಆದರೆ ತುಟಿಯಲ್ಲಿ ತುಟಿ ಇಟ್ಟು ಚುಂಬಿಸೋದರಿಂದ ಬೇರೆ ಪ್ರಯೋಜನಗಳೂ ಇವೆ.
ಚುಂಬನದಲ್ಲಿ (kissing) ಎಷ್ಟು ವಿಧ ಅನ್ನೋದು ನಾಟಿ ಪ್ರಶ್ನೆ. ಆದರೆ ಚುಂಬಿಸಿದಾಗ ಏನಾಗುತ್ತೆ ಅನ್ನೋದು ರೊಮ್ಯಾಂಟಿಕ್ (romance) ಪ್ರಶ್ನೆ. ಅದರಲ್ಲೂ ಹಣೆ, ಕೆನ್ನೆಗೆ ಮುತ್ತು ಕೊಟ್ಟಾಗ ಅಗುವ ಅನುಭವಕ್ಕೂ, ತುಟಿಗೆ ತುಟಿ ಬೆಸೆದಾಗ ಆಗುವ ಅನುಭವಕ್ಕೂ ತುಂಬ ವ್ಯತ್ಯಾಸ ಇದೆ. ಅದಕ್ಕೆ ಕಾರಣವೂ ಇದೆ. ತುಟಿಗಳ ಚರ್ಮ ಬಹಳ ತೆಳು. ಚರ್ಮದ ಕೆಳಗೆ ಬಹಳಷ್ಟು ನರತಂತುಗಳು ಇರುತ್ತವೆ. ತುಟಿಗಳಲ್ಲಿರುವ ಸಂವೇದನಾ ನರಗಳು ಬಹಳ ಚುರುಕು. ನವಿರಾದ ಸ್ಪರ್ಶವನ್ನೂ ಇವು ಗ್ರಹಿಸಬಲ್ಲವು. ತುಸುವೇ ಬೆಚ್ಚಗಿನ ಉಸಿರಿಗೂ ಸ್ಪಂದಿಸಬಲ್ಲವು. ವಾಸ್ತವದಲ್ಲಿ ತುಟಿಗಳನ್ನು ಮಿದುಳಿಗೆ ಸಂಪರ್ಕಿಸುವ ನರಗಳ ಸಂಖ್ಯೆ, ಮಿದುಳನ್ನು ದೇಹದ ಬೇರೆ ಯಾವುದೇ ಭಾಗಕ್ಕೆ ಸಂಪರ್ಕಿಸುವ ನರಗಳ ಸಂಖ್ಯೆಗಿಂತ ಹೆಚ್ಚಂತೆ.
ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಅಂದರೆ ಈ ಚುಂಬನ ಕಾಂಸೆಪ್ಟ್ ಮೊದಲು ಚಿಂಪಾಂಜಿಗಳಿಂದ ಆರಂಭ ಆಯಿತಂತೆ. ಚಿಂಪಾಂಜಿಗಳು ಬಾಯಿಂದ ಬಾಯಿಗೆ ಆಹಾರ ನೀಡುವ ಸಮಯದಲ್ಲಿ ಲಿಪ್ ಟು ಲಿಪ್ ಕಿಸ್ ಅನುಭವ ಪಡೆದವು ಅಂತ ಜೀವ ವಿಕಾಸ ಥಿಯರಿಯೊಂದು ಹೇಳುತ್ತೆ. ಜೊತೆಗೆ ತಾಯಿ ಚಿಂಪಾಂಜಿ ಮಗು ಚಿಂಪಾಜಿಗೆ ಜಗಿದು ಆಹಾರ ತಿನಿಸುವಾಗ ಪ್ರೀತಿಯಲ್ಲಿ ತನ್ನ ತುಟಿಗಳಿಂದ ಮಗುವಿನ ತುಟಿ ಸ್ಪರ್ಶಿಸಿತು ಅನ್ನೋ ಒಂದು ಥಿಯರಿ ಇದೆ.
undefined
ಆದರೆ ಮನುಷ್ಯರಲ್ಲಿ ಈ ಕಾನ್ಸೆಪ್ಟ್ ಯಾವಾಗ ಶುರುವಾಯ್ತು ಅನ್ನೋ ಬಗ್ಗೆ ಕರೆಕ್ಟಾಗಿ ಮಾಹಿತಿ ಸಿಗಲ್ಲ. ಆದರೆ ಅದರ ಪ್ರಯೋಜನವನ್ನಂತೂ ಮನುಷ್ಯ ಅನುಭವಿಸುತ್ತಲೇ ಇದ್ದಾನೆ.
ಚುಂಬನ ಅಂದರೆ ಪ್ರೀತಿಯ ಸಂಕೇತ, ಲೈಂಗಿಕತೆಯ ಸಂಕೇತ ಅನ್ನೋದೆಲ್ಲ ಗೊತ್ತು. ಇದಲ್ಲದೇ ಚುಂಬನವು ತೂಕವನ್ನು ಕಡಿಮೆ ಮಾಡಿ, ವೈಟ್ ಮ್ಯಾನೇಜ್‌ಮೆಂಟ್‌ಗೆ ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿ ಕೊಟ್ಟಿವೆ. ಇದು ರಿಯಲ್ ಅಂತ ಕೂಡ ಸಾಬೀತಾಗಿದೆ. ವೈಟ್ ಲಾಸ್‌ಗೆ ಪ್ರಯತ್ನಿಸುತ್ತಿರುವ ಕಪಲ್ಸ್ ಈ ಪ್ರಯೋಗ ಮಾಡಬಹುದು.
ಚುಂಬನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಪರಿಣಾಮ, ಆತಂಕ, ಖಿನ್ನತೆ ಮುಂತಾದವು ಕಡಿಮೆಯಾಗುತ್ತವೆ. ಇದು ದೇಹವನ್ನು ಚೆನ್ನಾಗಿ ಇಡುತ್ತದೆ, ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
ಮಿತಿಮೀರಿದ ಲೈಂಗಿಕತೆ ತರಬಹುದು ಆರೋಗ್ಯಕ್ಕೇ ಕುತ್ತು!
ಇದಲ್ಲದೇ ಚುಂಬನವು ಮುಖದ ಸ್ನಾಯುಗಳಿಗೆ ವ್ಯಾಯಾಮ ಒದಗಿಸುತ್ತದೆ. ಪರಿಣಾಮ, ಮುಖದಲ್ಲಿನ ಕೊಬ್ಬಿನ ಪ್ರಮಾಣವು ಕಡಿಮೆಯಾಗುತ್ತದೆ. ಮುಖದ ಸ್ನಾಯುಗಳು ಚೆನ್ನಾಗಿರುತ್ತವೆ. ಮುಖದ ಸೌಂದರ್ಯ ವೃದ್ಧಿಯಾಗುತ್ತದೆ.
ಚುಂಬಿಸುವ ಆ ಸಮಯದಲ್ಲಿ ದೇಹದಲ್ಲಿ ಕೆಲವು ಹಾರ್ಮೋನ್ ಸ್ರವಿಸುವಿಕೆ ಹೆಚ್ಚಾಗುತ್ತದೆ. ಇವುಗಳಲ್ಲಿ ಹಲವು ಮನಸ್ಸನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತವೆ. ಸರಳವಾಗಿ ಈ ಹಾರ್ಮೋನ್‌ಗಳನ್ನು ಹ್ಯಾಪಿ ಹಾರ್ಮೋನ್ (Happy Harmone) ಎನ್ನುತ್ತಾರೆ. ಇವುಗಳ ಪರಿಣಾಮ ಮನಸ್ಸನ್ನು ಸುಸ್ಥಿತಿಯಲ್ಲಿಡುತ್ತದೆ. ಶರೀರವು ಆರೋಗ್ಯವಾಗಿರುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತದೊತ್ತಡ ನಿಯಂತ್ರಣಕ್ಕೆ ಹಾರ್ಮೋನುಗಳೂ ಕಾರಣವಾಗುತ್ತವೆ. ಚುಂಬನವು ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುವ ಕೆಲವು ಹಾರ್ಮೋನುಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ.
ಚುಂಬಿಸುವ ಕಾರಣ ಬಾಯಿಯಲ್ಲಿ ಲಾಲಾರಸದ ಪ್ರಮಾಣ ಹೆಚ್ಚುತ್ತದೆ. ಬಾಯಿಯಲ್ಲಿ ಸಂಗ್ರಹವಾದ ರೋಗಾಣು ಸಾಯುತ್ತವೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ದಂತಕ್ಷಯ, ವಸಡು ಸೋಂಕು ಕಡಿಮೆಯಾಗುತ್ತದೆ.
ಮೈಗ್ರೇನ್ (Migraine) ನೋವಿನ ಪ್ರಮಾಣ ಕಡಿಮೆ ಆಗುತ್ತದೆ. ನಿಯಮಿತವಾಗಿ ಚುಂಬಿಸುವವರಿಗೆ ತಲೆನೋವು ಕಡಿಮೆ ಎಂದು ಸಂಶೋಧನೆ (Research) ಹೇಳುತ್ತದೆ. ಜೊತೆಗೆ ಆರೋಗ್ಯಕರ ಲೈಂಗಿಕತೆಯನ್ನು (Healthy Sex) ಹೊಂದುವುದು ಆರೋಗ್ಯಕರ ಜೀವನಕ್ಕೆ ಬಹಳ ಮುಖ್ಯ. ಚುಂಬನವು ಲೈಂಗಿಕತೆಯ ಮೊದಲ ಹಂತ. ಆದ್ದರಿಂದ ಸಂಗಾತಿಗಳು ಪರಸ್ಪರ ಲೈಂಗಿಕ ಸಂಬಂಧವು ಆನಂದದಾಯಕವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಚುಂಬನದ ಮೂಲಕ ಅರಿಯಲು ಮತ್ತು ಅನುಭವಿಸಲು ಸಾಧ್ಯವಿದೆ.
ಚಾಕಲೇಟ್ ಪ್ರಿಯರಿಗೊಂದು ಚಾಲೆಂಜ್, ಒಂದು ತಿಂಗಳು ತಿನ್ನದಿದ್ದರೆ ಏನಾಗುತ್ತೆ ನೋಡಿ!