ಈಗಿನ ದಿನಗಳಲ್ಲಿ ಹೊಸ ಹೊಸ ಚಾಲೆಂಜ್ ಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ನೋಡ್ಬಹುದು. ಕೆಲವೊಂದು ವಿಚಿತ್ರವಾಗಿರುತ್ತವೆ. ಈಗ ಅಂಥಹದ್ದೇ ಒಂದು ಚಾಲೆಂಜ್ ವೈರಲ್ ಆಗಿದೆ. ಪತಿ ಜೊತೆ ಸಂಬಂಧ ಹೇಗಿದೆ ಎಂಬುದನ್ನು ಇದ್ರಿಂದ ಪತ್ತೆ ಮಾಡ್ಬಹುದಂತೆ.
ಮನೆಯಲ್ಲಿರುವ ಪತಿ – ಪತ್ನಿ ಇಬ್ಬರೂ ಮನೆ ಕೆಲಸವನ್ನು ಹಂಚಿಕೊಂಡಾಗ ಕೆಲಸ ಬೇಗ ಮುಗಿಯುತ್ತದೆ. ಆದ್ರೆ ಅನೇಕ ಪುರುಷರಿಗೆ ಮನೆಯ ಸಣ್ಣ ಕೆಲಸವೂ ಗೊತ್ತಿರೋದಿಲ್ಲ. ಹೊರಗೆ ದುಡಿಯುತ್ತೇವೆ ಎನ್ನುವ ಕಾರಣ ಹೇಳಿ ಮನೆಯಲ್ಲಿ ಸೋಮಾರಿತ ಪ್ರದರ್ಶನ ಮಾಡ್ತಾರೆ. ಅವರ ವರ್ತನೆ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ. ಈಗ ಸಾಮಾಜಿಕ ಜಾಲತಾಣದಲ್ಲೊಂದು ಹೊಸ ಟ್ರೆಂಡ್ ಶುರುವಾಗಿದೆ. ಮಹಿಳೆಯರು ತಮ್ಮ ಸಂಬಂಧ ಗಟ್ಟಿಯಾಗಿದೆಯೇ ಎಂಬುದನ್ನು ಕೆಚಪ್ ಮೂಲಕ ಪತ್ತೆ ಮಾಡ್ತಿದ್ದಾರೆ. ಇದಕ್ಕೆ ಕೆಚಪ್ ಚಾಲೆಂಜ್ ಎಂದು ಹೆಸರಿಡಲಾಗಿದೆ. ಮಹಿಳೆಯರು ಅಡುಗೆ ಮನೆಯಲ್ಲಿರುವ ಕೆಚಪ್ ಅನ್ನು ಕೆಳಗೆ ಬೀಳಿಸ್ತಾರೆ. ನಂತ್ರ ಅದನ್ನು ಸ್ವಚ್ಛಗೊಳಿಸುವಂತೆ ತಮ್ಮ ಸಂಗಾತಿಗೆ ಹೇಳ್ತಾರೆ. ಅಷ್ಟೇ ಚಾಲೆಂಜ್ ಇರೋದು. ಇಷ್ಟೇನಾ? ಇದನ್ನು ಆರಾಮವಾಗಿ ಮಾಡ್ಬಹುದು ಅಂತಾ ನೀವು ಭಾವಿಸಬಹುದು. ಆದ್ರೆ ಅನೇಕ ವಿಡಿಯೋಗಳನ್ನು ನೋಡಿದಾಗ ಇದು ಒಂದು ಚಾಲೆಂಜ್ ಹೌದು ಎನ್ನಿಸದೆ ಇರದು.
ಮನೆಯಲ್ಲಿ ಕೆಚಪ್ (Ketchup), ಹಾಲು ಸೇರಿದಂತೆ ಯಾವುದೇ ಆಹಾರ ಪದಾರ್ಥ ಕೆಳಗೆ ಬಿದ್ದಾಗ ಅದನ್ನು ಕ್ಲೀನ್ (Clean) ಮಾಡೋದು ಸುಲಭವಲ್ಲ. ನೆಲದ ಮೇಲಲ್ಲದೆ ಅತ್ತ ಇತ್ತ ಅದು ಅಂಟಿರುತ್ತದೆ. ಕ್ಲೀನ್ ಆಗಿ ಸ್ವಚ್ಛಗೊಳಿಸದೆ ಹೋದ್ರೆ ವಾಸನೆ ಬರಲು ಶುರುವಾಗುತ್ತದೆ. ಆದ್ರೆ ಈ ಚಾಲೆಂಜ್ (Challenge) ನಲ್ಲಿ ಪತಿ ಹೇಗೆ ಕ್ಲೀನ್ ಮಾಡ್ತಾನೆ ಎನ್ನುವುದಕ್ಕಿಂತ ಕ್ಲೀನ್ ಮಾಡ್ತಾನಾ ಇಲ್ವಾ ಎಂಬುದೂ ಪ್ರಮುಖವಾಗಿದೆ.
ಬೆಳಗಾವಿ ಡಬಲ್ ಮರ್ಡರ್: ಮದುವೆಯಾಗಿ 30 ದಿನಕ್ಕೆ ಓಡಿಹೋದ ಹೆಂಡ್ತಿಯನ್ನು ಪ್ರಿಯಕರನೊಂದಿಗೆ ಕೊಲೆಗೈದ ಗಂಡ
ಟಿಕ್ ಟಾಕ್ ನಲ್ಲಿ ಮಹಿಳೆಯೊಬ್ಬಳು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾಳೆ. ಆಕೆ ಕೆಚಪ್ ಕೆಳಗೆ ಬೀಳಿಸ್ತಾಳೆ. ನಂತ್ರ ಅದನ್ನು ಸ್ವಚ್ಛಗೊಳಿಸುವಂತೆ ಬಾಯ್ ಫ್ರೆಂಡ್ ಗೆ ಹೇಳ್ತಾಳೆ. ಬಾಯ್ ಫ್ರೆಂಡ್ ಪೇಪರ್ ಟವೆಲ್ ನಿಂದ ಕೆಚಪ್ ಕ್ಲೀನ್ ಮಾಡ್ತಾನೆ. ನಂತ್ರ ಕ್ಲೀನರ್ ನಿಂದ ನೆಲವನ್ನು ಸ್ವಚ್ಛಮಾಡ್ತಾನೆ. ಆದ್ರೆ ಅಲ್ಲೊಂದು ತಪ್ಪು ಮಾಡ್ತಾನೆ. ಆತ ಬಳಸಿದ ಕ್ಲೀನರ್ ನೆಲದ ಮೇಲೆ ಮಾಡೋದಾಗಿರಲಿಲ್ಲ, ಮರದ ಫ್ಲೋರ್ ಗೆ ಹಾಕುವುದಾಗಿತ್ತು. ಆದ್ರೂ ಮಹಿಳೆ ಇದ್ರಿಂದ ಖುಷಿಯಾಗಿರೋದನ್ನು ವಿಡಿಯೋದಲ್ಲಿ ನೋಡ್ಬಹುದು. ಆಕೆ ಬಾಯ್ ಫ್ರೆಂಡ್ ಕ್ಲೀನ್ ಮಾಡಿದ ರೀತಿ ಬಹುತೇಕ ಎಲ್ಲ ಬಳಕೆದಾರರಿಗೆ ಇಷ್ಟವಾಗಿದೆ.
ಇನ್ನೊಬ್ಬ ಮಹಿಳೆ ಕೂಡ ವಿಡಿಯೋ ಹಂಚಿಕೊಂಡಿದ್ದಾಳೆ. ಇದ್ರಲ್ಲಿ ಆಕೆ ಬಾಯ್ ಫ್ರೆಂಡ್ ಟಿಶ್ಯುವಿನಿಂದ ಕ್ಲೀನ್ ಮಾಡ್ತಿದ್ದಾನೆ. ಆದ್ರೆ ಟಿಶ್ಯುವನ್ನು ಗೋಲ್ ಮಾಡ್ತಾ ಆತ ಕ್ಲೀನ್ ಮಾಡಿದ್ದ ಕಾರಣ, ಕೆಚಪ್ ಹೋಗುವ ಬದಲು ಮತ್ತಷ್ಟು ನೆಲಕ್ಕೆ ಅಂಟಿಕೊಂಡಿದೆ. ಕೆಚಪ್ ಕ್ಲೀನ್ ಮಾಡೋ ಬದಲು ಕೆಚಪ್ ಪಾಲಿಶ್ ಮಾಡ್ತಿದ್ದಾನೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಈತನ ಕ್ಲೀನಿಂಗ್ ಶೈಲಿ, ಬಳಕೆದಾರರಿಗೆ ಇಷ್ಟವಾಗಿಲ್ಲ. ಇವರಿಬ್ಬರೇ ಅಲ್ಲ ಇನ್ನೂ ಅನೇಕರು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಲೈಂಗಿಕ ಜೀವನ ಎಂಜಾಯ್ ಮಾಡಬೇಕಂದ್ರೆ ಸಂಗಾತಿಯ ಪ್ಲೆಜರ್ ಪಾಯಿಂಟ್ ತಿಳ್ಕೊಳಿ…
ಕೆಚಪ್ ಚೆಲ್ಲಿ, ಕ್ಲೀನ್ ಮಾಡಲು ಹೇಳಿದಾಗ ಬಾಯ್ ಫ್ರೆಂಡ್ ಕ್ಲೀನ್ ಮಾಡಿದ್ರೆ ಆತ ಸಂಬಂಧವನ್ನು ಗೌರವಿಸುತ್ತಾನೆ ಎಂದರ್ಥ. ಹಾಗೆ ಆತ ಕ್ಲೀನ್ ಮಾಡಿದ ರೀತಿ, ಆತ ಮನೆ ಕೆಲಸವನ್ನು ಎಷ್ಟು ಬಲ್ಲವನಾಗಿದ್ದಾನೆ ಎಂಬುದನ್ನು ತೋರಿಸುತ್ತದೆ. ನೆಲದ ಮೇಲೆ ಬಿದ್ದಿರುವ ಕೆಚಪ್ ಕ್ಲೀನ್ ಮಾಡಲು ಬರದ ವ್ಯಕ್ತಿ, ಮನೆಯ ಸಣ್ಣಪುಟ್ಟ ಕೆಲಸ ಮಾಡಲೂ ಯೋಗ್ಯನಲ್ಲ ಎಂಬುದನ್ನು ತೋರಿಸುತ್ತದೆ. ಈ ಚಾಲೆಂಜ್ ಬಗ್ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಮನೆ ಕೆಲಸವನ್ನು ಮಾಡುವ ಮಹಿಳೆಯರನ್ನು ನಾವೇಕೆ ಪ್ರಶಂಸೆ ಮಾಡೋದಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ನಮಗೆ ಇದು ಯಾವುದೇ ಚಾಲೆಂಜ್ ಅಲ್ಲ. ನಾವೇನನ್ನು ನಿರೀಕ್ಷೆ ಮಾಡ್ತೇವೆ ಎನ್ನುವುದಾಗಿದೆ ಎಂದು ಇನ್ನೊಬ್ಬ ಮಹಿಳೆ ಬರೆದಿದ್ದಾಳೆ. ಸದ್ಯ ಕೆಚಪ್ ಚಾಲೆಂಜ್ ವೈರಲ್ ಆಗ್ತಿದ್ದು, ಪತಿ, ಬಾಯ್ ಫ್ರೆಂಡ್ ಗೆ ಕ್ಲೀನಿಂಗ್ ಟೆನ್ಷನ್ ಶುರುವಾಗಿದೆ.