ಕಿಪಿ ಕೀರ್ತಿ ತರಹದವರೇ ಮೂರು ಜನರನ್ನು ಮೇಂಟೇನ್ ಮಾಡ್ತಿದ್ದಾರೆ, ಇನ್ನು ಹೈ-ಲೆವೆಲ್ ಫಿಗರ್ ಎಷ್ಟು ಜನರನ್ನು ಮೇಂಟೇನ್ ಮಾಡಬಹುದು ಎಂದು ಹುಡುಗರು ತಿಳಿದುಕೊಳ್ಳುವುದು ತಪ್ಪು ಕಲ್ಪನೆ ಎಂದು ಮಹಿಳೆಯೊಬ್ಬರು ಸಲಹೆ ನೀಡಿದ್ದಾರೆ. ಹೈ ಲೆವೆಲ್ ಫಿಗರ್‌ಗಳು ಸಿಂಗಲ್ ಆಗಿರುವ ಸಾಧ್ಯತೆಗಳೇ ಹೆಚ್ಚು ಎಂದು ಅವರು ಹೇಳಿದ್ದಾರೆ.
ಕಿಪಿ ಕೀರ್ತಿ ಅಂಥವಳೇ 3 ಜನರನ್ನು ಮೇಂಟೇನ್ ಮಾಡ್ತಿದ್ದಾಳೆ. ಇನ್ನು ಹೈ-ಲೆವೆಲ್ ಫಿಗರ್ ಎಷ್ಟು ಹುಡುಗರನ್ನು ಮೆಂಟೇನ್ ಮಾಡಬಹುದು ಎಂದು ಅವರಿಗೆ ಯಾರೂ ಲವ್ ಮಾಡೋದಕ್ಕೆ ಟ್ರೈ ಮಾಡೊಲ್ಲ. ಆದರೆ, ಹುಡುಗರು ಹೀಗೆ ತಿಳಿದುಕೊಳ್ಳುವುದು ತಪ್ಪು ಕಲ್ಪನೆ ಎಂದು ಒಬ್ಬ ಹೈಕ್ಲಾಸ್ ಮಹಿಳೆ ಸಲಹೆ ಕೊಟ್ಟಿದ್ದಾರೆ.
ಸಾಮಾನ್ಯವಾಗಿ ಹುಡುಗರು ಟೀನೇಜ್‌ಗೆ ಬಂದ ನಂತರವೇ ಜೀವನದ ಜವಾಬ್ದಾರಿಯನ್ನು ಅರಿತುಕೊಳ್ಳದೇ ಲವ್ ಮಾಡಲಾರಂಭಿಸುತ್ತಾರೆ. ಆದರೆ, ಇಂತಹ ಶೇ.98 ಪ್ರೇಮ ಪ್ರಕರಣಗಳು ಫೇಲ್ಯೂರ್ ಆಗುತ್ತವೆ. ಪ್ರೀತಿಸಲು ಸರಿಯಾದ ವಯಸ್ಸು ಎಂದರೆ ಶಿಕ್ಷಣ ಮುಗಿಸಿ ಕೆಲಸ ಸಿಕ್ಕಿದ ನಂತರ ಅಥವಾ ವೃತ್ತಿಪರ ಶಿಕ್ಷಣ ಮಾಡುವಾಗ ಪ್ರೀತಿ ಮಾಡಿದರೆ ಅಂತಹ ಪ್ರೇಮ ಪ್ರಕರಣಗಳಲ್ಲಿ ಶೇ.30 ಸಕ್ಸಸ್ ಆಗಬಹುದು. ಆಗಲೂ ಹುಡುಗರು ಹೈಕ್ಲಾಸ್ ಹುಡುಗಿಯರನ್ನು ಲವ್ ಮಾಡುವುದಕ್ಕೇ ಹೋಗುವುದಿಲ್ಲ. ನಮ್ಮ ರೇಂಜ್‌ಗೆ ಸರಿ ಹೋಗಲ್ಲ ಎಂದುಕೊಳ್ಳುತ್ತಾರೆ. ಆದರೆ, ಹುಡುಗರ ಈ ಕಲ್ಪನೆಯನ್ನು ತಪ್ಪು ಎಂದು ಇಲ್ಲೊಬ್ಬ ಆಂಟಿ ಹೇಳಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಸಂಧ್ಯಾ ಟಾಕೀಸ್ ಎಂಬ ಖಾತೆಯಿಂದ ಸಂಧ್ಯಾ ಉಷಾಕಾಂತ್ ಎನ್ನುವ ಮಹಿಳೆಯೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮಾತನಾಡಿದ ಈ ಮಹಿಳೆ, ನಾನು ಜಸ್ಟ್ ಒಂದು ರೀಲ್ ನೋಡಿದೆ, ಅದಲ್ಲಿ ಒಬ್ಬ ಹುಡುಗ ಹೀಗೆ ಹೇಳ್ತಾನೆ. ಕಿಪಿ ಕೀರ್ತಿ ತರಹದವಳೇ 3 ಜನ ಹುಡುಗರನ್ನು ಮೇಂಟೇನ್ ಮಾಡ್ತಿದ್ದಾಳೆ. ಇನ್ನು ಹೈ-ಲೆವೆಲ್ ಫಿಗರ್ ಎಷ್ಟು ಜನರನ್ನು ಮೆಂಟೇನ್ ಮಾಡಿರಬೇಡಾ? ಎಂದು ಹೇಳಿಕೊಂಡಿದ್ದಾನೆ. ಹೇ... ಅಯ್ಯೋ..., ತಪ್ಪಪ್ಪಾ... ಅದು ನಿಮ್ಮ ತಪ್ಪು ಕಲ್ಪನೆ. ಹೈಲೆವೆಲ್ ಫಿಗರ್ ತುಂಬಾ ಹೈ ಲೆವೆಲ್ ಫಿಗರ್ ಅವರು ಕಾಳು ಹಾಕಿದ್ರೂ ನನಗೆ ಸಿಗೊಲ್ಲ ಎಂದುಕೊಂಡು ಅರ್ಧ ಜನ ಆ ಹುಡುಗಿಗೆ ಲವ್ ಮಾಡೋದಕ್ಕೆ ಟ್ರೈ ಮಾಡಲು ಹೋಗೊಲ್ಲ. ಇನ್ನು ಅರ್ಧ ಜನ ಈ ಹೈ ಲೆವೆಲ್ ಫಿಗರ್‌ಗೆ ಆಲ್ರೆಡಿ ಇಬ್ಬ ಬಾಯ್ ಫ್ರೆಂಡ್ ಇರ್ತಾನೆ ಎಂದುಕೊಂಡು, ಅವರೂ ಟ್ರೈ ಮಾಡುವುದಕ್ಕೆ ಹೋಗುವುದಿಲ್ಲ. ಹಾಗಾಗಿ ಇಂತಹ ಹೈ ಲೆವೆಲ್ ಫಿಗರ್ ಸಿಂಗಲ್ ಆಗಿ ಇರೋ ಚಾನ್ಸೇ ಹೆಚ್ಚಾಗಿರುತ್ತವೆ. ಎಕ್ಸ್‌ಪೀರಿಯನ್ಸ್ ಮೇಲೆ ಹೇಳ್ತಿದಿನಿ ಕಣ್ಲಾ..., ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರೇಮಿಯೊಂದಿಗೆ ಸಿಕ್ಕಿಬಿದ್ದ ಎರಡು ಮಕ್ಕಳ ತಾಯಿಗೆ ಲವರ್ ಜೊತೆ ಮದ್ವೆ ಮಾಡಿದ ಗಂಡ
ಸಂಧ್ಯಾ ಅವರು ಹಂಚಿಕೊಂಡಿರುವ ಈ ವಿಡಿಯೋವನ್ನು 4.54 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಸುಮಾರು 21 ಸಾವಿರ ಜನರು ಲೈಕ್ಸ್ ಮಾಡಿದ್ದಾರೆ. 25 ಸಾವಿರಕ್ಕೂ ಹೆಚ್ಚು ಜನರು ಇದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಬಹುತೇಕರು ಇವರಿಗೆ ನೀವಿನ್ನೂ ಸಿಂಗಲ್ಲಾ.? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಧ್ಯಾ ಅವರು ಪುಣ್ಯತ್ಮರೆಗಳೇ ನಾನು ಸಿಂಗಲ್ ಅಂಥ ಡಿಎಂ ಮಾಡಿ ಕೇಳಬೇಡಿ. ನಂಗೆ ಮದುವೆ ಆಗಿ 20 ವರ್ಷ ಆಯಿತು. ಯಾಕೆ ಕೇಳಿದ್ರೆ ಯಾರೋ ಧೈರ್ಯ ಮಾಡಿ ಪ್ರಪೋಸ್ ಮಾಡಿದ. ಗಿರೀಶ್ ಅಂಥ ನನ್ನ ಗಂಡ' ಎಂದು ಹೇಳಿಕೊಂಡಿದ್ದಾರೆ.
ಜೊತೆಗೆ, ಈ ವಿಡಿಯೋಗೆ ತರಹೇವಾರಿ ಕಾಮೆಂಟ್‌ಗಳು ಕೂಡ ಬಂದಿವೆ. ಅದರಲ್ಲಿ ಒಬ್ಬರು 'ಅದ್ಭುತ ಸಂದೇಶ ಕೊಟ್ಟಿದ್ದೀರಾ ಇನ್ನಾದ್ರೂ ಮುಂದಿನ ಪೀಳಿಗೆ ದಾರಿದೀಪ ರೀ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಯುವಕ ನಮ್ಮೂರಲ್ಲಿ ಹೈ ಲೆವೆಲ್ ಫಿಗರ್ ಅನ್ಕೊಂದು ಎರಡು ಹುಡಗೀರನ್ನ ಮಿಸ್ ಮಾಡಿಕೊಂಡುಬಿಟ್ಟೆ. ಈಗಲೂ ನಾನು ಸಿಂಗಲ್ ಆಗಿದ್ದೀನಿ. ಇನ್ಮೇಲಾದ್ರೂ ಟ್ರೈ ಮಾಡ್ತೀನಿ ನಮ್ಮಮ್ಮನಿಗೆ ಸೊಸೆ ಆಗಿ ಬರಲಿ. ಸಲಹೆ ಕೊಟ್ಟಿದ್ದಕ್ಕೆ ಥ್ಯಾಕ್ಸ್ ಅಕ್ಕಾ' ಎಂದು ಹೇಳಿಕೊಂಡಿದ್ದಾನೆ.
ಇದನ್ನೂ ಓದಿ: ವಾವ್! ಸೀರೆಲಿ ಎಷ್ಟು ಮುದ್ದು ಮುದ್ದಾಗಿ ಕಾಣಿಸ್ತಿದ್ದಾರೆ ನಿವೇದಿತಾ ಗೌಡ