ಪ್ರೇಮಲೋಕ ನಟಿ ಜೂಹಿ ಹಾಗೂ ಪತಿಯನ್ನು ಇರಾ ಖಾನ್ ಮದ್ವೆಗೆ ಜೊತೆಯಾಗಿ ಬಂದಿದ್ದು, ಇವರಿಬ್ಬರನ್ನು ಜೊತೆಯಲ್ಲಿ ನೋಡಿದ ಜನ ಅಸಂಬದ್ಧ ಕಾಮೆಂಟ್ ಮಾಡಿದ್ದಾರೆ. ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಅಮೀರ್ ಖಾನ್ ಪುತ್ರಿ ಇರಾ ಖಾನ್ ಹಾಗೂ ಫಿಟ್ನೆಸ್ ಎಕ್ಸ್‌ಫರ್ಟ್ ನೂಪುರ್ ಶಿಖರೆ ಮದುವೆಯ ನಂತರ ಅದ್ದೂರಿಯಾಗಿ ಮುಂಬೈನಲ್ಲಿ ಅರತಕ್ಷತೆ ಇರಿಸಿಕೊಂಡಿದ್ದು, ಈ ಸಮಾರಂಭಕ್ಕೆ ಬಾಲಿವುಡ್ ತಾರೆಯರು ಸೇರಿದಂತೆ ಉದ್ಯಮ ಹಾಗೂ ಕ್ರೀಡಾ ಲೋಕದ ತಾರೆಯರು ಆಗಮಿಸಿ ನೂತನ ವಧುವರರಿಗೆ ಹಾರೈಸಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಾದ ಶಾರುಖ್ ಖಾನ್, ಗೌರಿ ಖಾನ್, ಸಲ್ಮಾನ್ ಖಾನ್, ಜಾಕಿ ಶ್ರಾಫ್, ಕ್ರಿಕೆಟಿಗ ಶಿಖರ್ ಧವನ್, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ರಣ್‌ಬೀರ್ ಕಪೂರ್, ಹೀಗೆ ಅನೇಕ ಗಣ್ಯಾತಿಗಣ್ಯರು ಆಗಮಿಸಿದ್ದರು. ಅದೇ ರೀತಿ ನಟಿ ಜೂಹಿ ಚಾವ್ಲಾ ಕೂಡ ತಮ್ಮ ಪತಿ ಉದ್ಯಮಿ ಜೇಯ್ ಮೆಹ್ತಾ ಅವರ ಜೊತೆ ಆಗಮಿಸಿದ್ದರು, ಎಲ್ಲ ಸೆಲೆಬ್ರಿಟಿಗಳಂತೆ ಪಪಾರಾಜಿಗಳು ಈ ಹಿರಿಯ ಜೋಡಿಯ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದು, ವೀಡಿಯೋ ನೋಡಿದ ಜನ ಕೆಲವರು ಜೂಹಿ ಹಾಗೂ ಪತಿ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಸರಿಯಾಗಿ ಜೂಹಿ ಅಭಿಮಾನಿಗಳು ಕೆಲ ನಿಂದಕರಿಗೆ ತಿರುಗೇಟು ನೀಡಿದ್ದು ಈ ವೀಡಿಯೋ ಈಗ ಸಖತ್ ವೈರಲ್ ಆಗಿದೆ.
ಪ್ರೇಮ ಲೋಕ, ಶಾಂತಿ ಕ್ರಾಂತಿ, ಕಿಂದರಿ ಜೋಗಿ ಮುಂತಾದ ಕನ್ನಡ ಸಿನಿಮಾಗಳಲ್ಲಿ ರವಿಚಂದ್ರನ್ ಜೋಡಿಯಾಗಿ ನಟಿಸಿದ್ದ 90ರ ದಶಕದ ನಟಿ ಜೂಹಿ ಚಾವ್ಲಾ, ಪ್ರಸ್ತುತ ಜೂಹಿ ಚಾವ್ಲಾ ಅವರಿಗೆ 62 ವರ್ಷ52 ವರ್ಷಗಳಾದರೆ ಅವರ ಪತಿ ಉದ್ಯಮಿ ಜೇಹ್ ಮೆಹ್ತಾ ಅವರಿಗೆ 62 ವರ್ಷಗಳು ಈ ಜೋಡಿಯ ಮಧ್ಯೆ ಇರುವ ಅಂತರ ಕೇವಲ ಆರು ವರ್ಷಗಳಷ್ಟೇ ಆದರೆ ಜೂಹಿ ಪತಿಗೆ ಮಾತ್ರ ಈ ವಯಸ್ಸಿನ ಸಾಮಾನ್ಯ ಜನರಂತೆ ತಲೆಕೂದಲುಗಳು ಉದುರಿ ಹೋಗಿದ್ದು, ವಯಸ್ಸು ತುಸು ಹೆಚ್ಚೆ ಕಾಣುತ್ತಿದೆ. ಇತ್ತ ಪತ್ನಿ ಜೂಹಿಗೆ ತದ್ವಿರುದ್ಧ ಎಂಬಂತೆ ವಯಸ್ಸು 40 45ರ ಹರೆಯದಂತೆ ಕಾಣುತ್ತಿದೆ. ಹೀಗಾಗಿಯೇ ಇವರಿಬ್ಬರನ್ನು ಜೊತೆಯಾಗಿ ನೋಡಿದ ಬುದ್ದಿ ಇಲ್ಲದ ಜನ ಮಾತ್ರ ಕೆಟ್ಟದಾಗಿ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ.
ಹ್ಯಾಂಡ್‌ಸಮ್ ಹುಡುಗರನ್ನೆಲ್ಲಾ ಬಿಟ್ಟು ಅಪ್ಪನ ವಯಸ್ಸಿನವನನ್ನು ಮದುವೆಯಾಗಿದ್ಲು ಈ ಬ್ಯೂಟಿ ಕ್ವೀನ್
ಕೆಲವರು ಹಣದ ಮುಂದೆ ಯಾವುದು ಮ್ಯಾಟರ್ ಅಲ್ಲ, ಎಂದರೆ ಮತ್ತೆ ಕೆಲವರು ಜೂಹಿ ಮದ್ವೆಯಾಗಿದ್ದು ವೃದ್ಧನನ್ನ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಅಪ್ಪನ ವಯಸ್ಸಿನವರೊಂದಿಗೆ ಜೂಹಿ ಮದ್ವೆಯಾಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಅಪ್ಪ ಹಾಗೂ ಮಗಳು ನೋಡಲು ಚೆಂದ ಕಾಣಿಸುತ್ತಾರೆ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ಜೂಹಿ ಹಣಕ್ಕಾಗಿ ಉದ್ಯಮಿಯನ್ನು ಮದುವೆಯಾದರು ಹೀಗೆ ಇದೆಲ್ಲಾ ಕಾಮೆಂಟ್‌ಗಳನ್ನು ನೋಡಿದ ಜೂಹಿ ಅಭಿಮಾನಿಗಳು ರೊಚ್ಚಿಗೆದ್ದಿದ್ದು, ಸರಿಯಾಗಿ ತಿರುಗೇಟು ನೀಡುತ್ತಿದ್ದಾರೆ.
ಇಲ್ಲಿ ಬಾಯಿಗೆ ಬಂದಂತೆ ಕಾಮೆಂಟ್ ಮಾಡುವವರ ತಿಳುವಳಿಕೆಗಾಗಿ ನಾನಿಲ್ಲಿ ಹೇಳುತ್ತಿದ್ದೇನೆ. ಜೂಹಿ ಚಾವ್ಲಾ ಪತಿ ಜೇಯ್ ಮೆಹ್ತಾ ಆಕೆಗಿಂತ ಕೇವಲ 6ವರ್ಷವಷ್ಟೇ ದೊಡ್ಡವರು. ಆಕೆಗೆ 56 ವರ್ಷ ಅವರ ವಯಸ್ಸಿನ ನಡುವೆ ಅಂಥಾ ಅಂತರವೇನು ಇಲ್ಲ, ಇನ್ನು ಆಕೆಯ ಪತಿ ನಟರಲ್ಲ, ಆ ವಯಸ್ಸಿನ ಸಾಮಾನ್ಯ ವ್ಯಕ್ತಿ ಕಾಣುವಂತೆಯೇ ಅವರು ಕಾಣುತ್ತಿದ್ದಾರೆ. ನನ್ನ ತಂದೆಗೆ ಅವರ 45ರ ಪ್ರಾಯಕ್ಕೆ ಕೂದಲೆಲ್ಲ ಉದುರಿದ್ದವು. 56 ವರ್ಷದಲ್ಲೇ ನನ್ನ ಚಿಕ್ಕಪ್ಪನ ಕೂದಲು ಸಂಪೂರ್ಣ ಬೆಳ್ಳಗಾಗಿದ್ದವು. ಜೇಯ್ ಮೆಹ್ತಾ ಉದ್ಯಮಿಯಾಗಿದ್ದು, ಹೇರ್ ಟ್ರಾನ್ಸ್‌ಪ್ಲಾಂಟ್‌ನ ಶೋಕಿಗಳೆಲ್ಲಾ ಅವರಿಗೆ ಬೇಕಾಗಿಲ್ಲ, ಅವರು ಏನಾಗಬೇಕೋ ಅದೇ ಆಗಿದ್ದಾರೆ. ಅಲ್ಲದೇ ವಯಸ್ಸಿಗೆ ತಕ್ಕಂತೆ ಅವರು ಇದ್ದಾರೆ ಎಂದು ವ್ಯಕ್ತಿಯೊಬ್ಬರು ಹೀಗೆ ಅಸಂಬದ್ಧ ಕಾಮೆಂಟ್ ಮಾಡುವವರಿಗೆ ತಿರುಗೇಟು ನೀಡಿದ್ದಾರೆ.
1 ಲಕ್ಷ ರೂ.ಬಾಂಡ್ಗೆ ಸಹಿ; ಜೈಲು ಸೇರಿದ್ದ ಶಾರುಖ್ ಪುತ್ರನನ್ನು ಬಿಡಿಸಲು ಮಾಡಿದ ಸಹಾಯ ನೆನೆದ ಜೂಹಿ ಚಾವ್ಲಾ
ಮತ್ತೊಂದೆಡೆ ದುಡ್ಡಿಗಾಗಿ ಜೂಹಿ ಅವರನ್ನು ಮದ್ವೆಯಾದರು ಎಂದು ಕಾಮೆಂಟ್ ಮಾಡಿದವರಿಗೂ ಕೆಲವರು ತಿರುಗೇಟು ನೀಡಿದ್ದು, ವಿವಾಹಕ್ಕೂ ಮೊದಲೇ ಜೂಹಿ ಪ್ರಸಿದ್ಧ ನಟಿಯಾಗಿದ್ದರು. ಅವರ ಬಳಿ ಬೇಕಾದಷ್ಟು ದುಡ್ಡಿತ್ತು. ದುಡ್ಡಿಗೋಸ್ಕರ ಅವರು ಉದ್ಯಮಿಯನ್ನು ಮದುವೆಯಾಗುವ ಅಗತ್ಯವಿರಲಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಮದುವೆ ಸಂಬಂಧಕ್ಕೆ ಮನಸ್ಸು ಮುಖ್ಯವೇ ಹೊರತು ವಯಸ್ಸಲ್ಲ ಎಂಬುದನ್ನು ಅನೇಕರು ಸಾಬೀತುಪಡಿಸಿ ತೋರಿಸಿದ್ದಾರೆ. ಚೆಂದವಿದ್ದು ಒಳ್ಳೆಯ ವ್ಯಕ್ತಿತ್ವವೇ ಇಲ್ಲದಿದ್ದರೆ ಆ ಸಂಬಂಧವೂ ಬಹುಕಾಲ ಸಾಗದು ಎನ್ನುವುದು ಕೆಲ ಸಂಸಾರಿಗಳ ಅನುಭವದ ಮಾತು. ಆದರೆ ದೂರದಿಂದ ನಿಂತು ನೋಡುವವರಿಗೆ ಚೆಂದ ಕಾಣಿಸದೇ ಇದ್ದರೂ ತಮ್ಮ ವ್ಯಕ್ತಿತ್ವದಿಂದಲೇ ಸಾವಿರಾರು ಜನರ ಸೆಳೆದ ಅನೇಕರು ನಮ್ಮ ನಡುವೆ ಇದ್ದಾರೆ. ಹೀಗಾಗಿ ಸೌಂದರ್ಯ ನೋಡುವ ಕಣ್ಣಿಗಷ್ಟೇ ಆದರೆ ಜೀವನಪೂರ್ತಿ ಜೊತೆಯಾಗಿ ಸಾಗಲು ಸೌಂದರ್ಯದ ಜೊತೆ ಉತ್ತಮ ವ್ಯಕ್ತಿತ್ವವೂ ಬೇಕು ಏನಂತೀರಾ?