3ನೇ ಮದ್ವೆಯಾಗುವ ಪ್ಲಾನ್‌ಲ್ಲಿದ್ದಾರಾ ಸಲ್ಮಾನ್ ಸೋದರ: ಅರ್ಬಾಜ್ ಮಾತಿಗೆ ಶಾಕ್ ಆದ ಭಾರ್ತಿ ಸಿಂಗ್

By Anusha Kb  |  First Published Jan 30, 2024, 11:48 AM IST

ಕಾಮಿಡಿಯನ್ ಭಾರತಿ ಸಿಂಗ್ ಅವರು, ತನ್ನನ್ನು ಎರಡನೇ ಮದ್ವೆಗೆ ಕರೆಯದೇ ಇರುವ ಬಗ್ಗೆ ಸಲ್ಮಾನ್ ಸೋದರ ಅರ್ಬಾಜ್ ಖಾನ್ ಕಾಲೆಳೆದಿದ್ದಾರೆ. ಈ ವೇಳೆ ಕಾಮಿಡಿಯನ್ ಭಾರ್ತಿ ಸಿಂಗ್ ಅವರಿಗೆ ಹಾಸ್ಯಮಯವಾಗಿ ಉತ್ತರಿಸಿದ ಅರ್ಬಾಜ್ ಖಾನ್, ನಿಮ್ಮನ್ನು ಮುಂದಿನ ಮದ್ವೆಗೆ ಕರೆಯುವುದಾಗಿ ಹೇಳಿದ್ದಾರೆ. ಇದನ್ನು ಕೇಳಿ ಅಲ್ಲಿದ್ದವರೆಲ್ಲಾ ಶಾಕ್ ಆಗಿದ್ದಾರೆ.


ಕನ್ನಡದಂತೆ ಹಿಂದಿ ಬಿಗ್ಬಾಸ್ ಫಿನಾಲೆ ಕೂಡ ಮೊನ್ನೆ ಮೊನ್ನೆ ನಡೆದು ಹೋಯ್ತು, ಹಿಂದಿ ಬಿಗ್ಬಾಸ್ ಸಿನಿಮಾ ಹೋಸ್ಟ್ ಮಾಡುವ ವೇಳೆ ನಟ ಸಲ್ಮಾನ್ ಖಾನ್ ಇಬ್ಬರು ಸೋದರರಾದ ಅರ್ಬಾಜ್ ಖಾನ್, ಸೋಹೈಲ್ ಖಾನ್ ಮುಂತಾದವರು ಭಾಗವಹಿಸಿದ್ದರು ಅಲ್ಲದೇ ಬಿಗ್ಬಾಸ್ ಸ್ಟೇಜ್ ಮೇಲೆಯೂ ಕಾಣಿಸಿಕೊಂಡಿದ್ದರು.  ಇದೇ ಶೋದಲ್ಲಿ ಕಾಮಿಡಿಯನ್ ಭಾರತಿ ಸಿಂಗ್ ಅವರು ಭಾಗವಹಿಸಿದ್ದು, ತನ್ನನ್ನು ಎರಡನೇ ಮದ್ವೆಗೆ ಕರೆಯದೇ ಇರುವ ಅರ್ಬಾಜ್ ಖಾನ್ ಕಾಲೆಳೆದಿದ್ದಾರೆ. ಈ ವೇಳೆ ಕಾಮಿಡಿಯನ್ ಭಾರ್ತಿ ಸಿಂಗ್ ಅವರಿಗೆ ಹಾಸ್ಯಮಯವಾಗಿ ಉತ್ತರಿಸಿದ ಅರ್ಬಾಜ್ ಖಾನ್, ನಿಮ್ಮನ್ನು ಮುಂದಿನ ಮದ್ವೆಗೆ ಕರೆಯುವುದಾಗಿ ಹೇಳಿದ್ದಾರೆ. ಇದನ್ನು ಕೇಳಿ ಅಲ್ಲಿದ್ದವರೆಲ್ಲಾ ಶಾಕ್ ಆಗಿದ್ದಾರೆ.

ಅರ್ಬಾಜ್ ಖಾನ್ ಮಾತು ಕೇಳಿದ ಭಾರ್ತಿ ಸಿಂಗ್, ಕೂಡಲೇ ಅರ್ಬಾಜ್ ಸೋದರ ಹಾಗೂ ಬಿಗ್ಬಾಸ್ ಹೋಸ್ಟ್ ಸಲ್ಮಾನ್ ಖಾನ್ ಜೊತೆ, ಅರ್ಬಾಜ್ ಖಾನ್ ಹಾಗೂ ಶುರಾ ಖಾನ್ ಅವರ 2ನೇ ಮದ್ವೆ ಬಗ್ಗೆ ಹಾಗೂ 2ನೇ ಮದ್ವೆಯ ಸಂದರ್ಭದಲ್ಲಿ ತಾವು ತಮ್ಮ ಸೋದರನಿಗೆ ನೀಡಿದ ಸಲಹೆ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಭಾರ್ತಿ ಸಿಂಗ್ ಪ್ರಶ್ನೆಗೆ ಹಾಸ್ಯಮಯವಾಗಿ ಉತ್ತರಿಸಿದ ಸಲ್ಮಾನ್ ಖಾನ್, 'ಇಲ್ಲ ಅವರು ನನ್ನ ಮಾತನ್ನು ಕೇಳುವುದೇ ಇಲ್ಲ ಒಂದು ವೇಳೆ ಕೇಳುವುದಾದರೆ...' ಎಂದು ಪ್ರತಿಕ್ರಿಯಿಸಿದ್ದಾರೆ.

Tap to resize

Latest Videos

ರಾಮಮಂದಿರಕ್ಕೆ ಜೊತೆಯಾಗಿ ಬಂದ್ರು ಮಾಜಿ ಪ್ರೇಮಿಯತ್ತ ತಲೆಯೆತ್ತಿಯೂ ನೋಡದ ಕತ್ರೀನಾ

ಅರ್ಬಾಜ್ ಖಾನ್ ಅವರು ಮೇಕಪ್ ಅರ್ಟಿಸ್ಟ್ ಶುರಾ ಖಾನ್ ಅವರನ್ನು ಕಳೆದ ವರ್ಷ ಡಿಸೆಂಬರ್ 24 ರಂದು ಮದ್ವೆಯಾಗಿದ್ದರು.  ಸಲ್ಮಾನ್ ಸೋದರಿ ಅರ್ಪಿತಾ ಖಾನ್ ಮನೆಯಲ್ಲಿ ಈ ವಿವಾಹ ನಡೆದಿತ್ತು.ಇನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಮಾತ್ರ ಮದ್ವೆಯಾಗದೇ ಖುಷಿ ಖುಷಿಯಾಗಿ ಜೀವನ ಕಳೆಯುತ್ತಿದ್ದಾರೆ.  ಇವರ ಹೆಸರು ಆಗಾಗ ಹಲವು ನಟಿಯರ ಹೆಸರಿನೊಂದಿಗೆ ಥಳುಕು ಹಾಕಿಕೊಳ್ಳುತ್ತಲೇ ಇರುತ್ತದೆ. ಆದರೆ ಸಲ್ಮಾನ್ ಸೋದರರಿಬ್ಬರು ಮಾತ್ರ ಮದ್ವೆಯಾಗಿದ್ದರೂ ವಿಚ್ಛೇದನ ಪಡೆದುಕೊಂಡಿದ್ದಾರೆ. ಅದರಲ್ಲಿ ಅರ್ಬಾಜ್‌ ಖಾನ್ ವಿಚ್ಛೇದನದ ನಂತರ ಮತ್ತೊಂದು ಮದ್ವೆಯಾಗಿದ್ದಾರೆ. ತಮ್ಮ ಸೋದರರಿಬ್ಬರ ಮುರಿದು ಬಿದ್ದ ಮದ್ವೆ ಬಗ್ಗೆ ಈ ಹಿಂದೆ ಕಪಿಲ್ ಶರ್ಮಾ ಶೋದಲ್ಲೂ ಸಲ್ಮಾನ್ ಖಾನ್ ಮಾತನಾಡಿದ್ದರು. 

ಅರ್ಬಾಜ್ ಪತ್ನಿಗೆ ಅತ್ತಿಗೆ ಅತ್ತಿಗೆ ಅಂತ ಕರೆದ ಪಪಾರಾಜಿಗಳು: ನಾಚಿ ಗಂಡನ ಹಿಂದೆ ಅಡಗಿದ ಶುರಾ ಖಾನ್

ಈ ಹಿಂದೆ ಕಪಿಲ್ ಶರ್ಮಾ ಶೋದಲ್ಲಿ ಕಪಿಲ್ ಅವರು ನಿಮ್ಮ ಸೋದರರಾದ ಅರ್ಬಾಜ್ ಖಾನ್ ಹಾಗೂ ಸೋಹೈಲ್ ಖಾನ್ ಅವರನ್ನು ಮದ್ವೆಯಾಗುವಂತೆ ಒತ್ತಾಯಿಸುವುದಿಲ್ಲವೇ ಎಂದು ಸಲ್ಮಾನ್ ಖಾನ್ ಅವರನ್ನು ಕೇಳಿದ್ದರು. ಇದಕ್ಕೆ ಉತ್ತರಿಸಿದ ಸಲ್ಮಾನ್ ಖಾನ್, ನನ್ನ ಮಾತನ್ನು ಅವರು ಕೇಳುತ್ತಲೇ ಇರಲಿಲ್ಲ, ಆದರ ಈಗ ಕೇಳುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಸಲ್ಮಾನ್ ಖಾನ್ ಮತ್ತೊರ್ವ ಸೋದರ ಸೋಹೈಲ್ ಖಾನ್ ಅವರು ಫ್ಯಾಷನ್ ಡಿಸೈನರ್‌ ಸೀಮಾ ಸಜ್ದೇಹ್ ಅವರನ್ನು 1998ರಲ್ಲಿ ಮದ್ವೆಯಾಗಿದ್ದರು. ಇವರಿಗೆ ನಿರ್ವಾನ್ ಹಾಗೂ ಯೋಗನ್ ಎಂಬ ಇಬ್ಬರು ಮಕ್ಕಳಿದ್ದಾರೆ. 2022ರ ಮೇನಲ್ಲಿ ಇವರಿಬ್ಬರು ವಿಚ್ಛೇದನ ಪಡೆದಿದ್ದಾರೆ. ವಿಚ್ಛೇದನ ಆಗುವ ಮೊದಲೇ ಐದು ವರ್ಷಗಳ ಕಾಲ ತಾವಿಬ್ಬರು ದೂರವಾಗಿದ್ದೆವು ಎಂದು ಟಿವಿ ಶೋವೊಂದರಲ್ಲಿ ಹೇಳಿಕೊಂಡಿದ್ದಾರೆ. 

ರವೀನಾ ಟಂಡನ್‌ ಪುತ್ರಿ ಜೊತೆ ಸುತ್ತಾಡುತ್ತಿರುವ ಅರ್ಬಾಜ್‌ ಖಾನ್ ಮಲೈಕಾ ಪುತ್ರ: ಡೇಟಿಂಗ್‌ನಲ್ಲಿದ್ದಾರ ಈ ಸ್ಟಾರ್ ಕಿಡ್‌

click me!