ಚೀನಾದ ಕಂಪನಿಯೊಂದು ಹೊಸ ಬೌನ್ಸಿಂಗ್ ಬೆಡ್ ಅನ್ನು ಬಿಡುಗಡೆ ಮಾಡಿದೆ, ಇದು ರಿಮೋಟ್ ಕಂಟ್ರೋಲ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಹಾಸಿಗೆಯನ್ನು ಪರೀಕ್ಷಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ಅಲ್ಲಿ ಮಹಿಳೆಯೊಬ್ಬರು ನಗುತ್ತಾ ಅದನ್ನು ಬಳಸುತ್ತಿದ್ದಾರೆ.
ಭಾರತ ಹಾಗೂ ಚೀನಾ ನಡುವೆ ಸಾಕಷ್ಟು ವಿಚಾರಗಳಲ್ಲಿ ಭಿನ್ನತೆ ಇದ್ದರೂ, ಒಂದು ವಿಚಾರದಲ್ಲಿ ಎರಡೂ ದೇಶಗಳ ನಡುವೆ ಸಮಾನ ಅಂಶವಿದೆ. ಅದರು ಜನಸಂಖ್ಯೆ. ವಿಶ್ವದ ಅತಿಹೆಚ್ಚು ಜನಸಂಖ್ಯೆ ಇರೋ ದೇಶಗಳು ಭಾರತ ಹಾಗೂ ಚೀನಾ. ಈ ಎರಡೂ ದೇಶದ ಜನರು ಸಾಕಷ್ಟು ವಿಚಾರಗಳಲ್ಲಿ ಸೋಂಬೇರಿ ಅನಿಸಿದರೂ, ಸೆಕ್ಸ್ ವಿಚಾರದಲ್ಲಿ ಮಾತ್ರ ಮಿಂಚಿನ ಕಾರ್ಯಾಚರಣೆಯಲ್ಲಿರುತ್ತಾರೆ. ಈಗ ಸೆಕ್ಸ್ ವಿಚಾರದಲ್ಲೂ ಜನರನ್ನು ಸೋಂಬೇರಿ ಮಾಡುವ ಬೆಡ್‌ಅನ್ನು ಚೀನಾ ನಿರ್ಮಾಣ ಮಾಡಿದೆ.
ಚೀನಾದ ಸಿಮ್ಮನ್ಸ್ ಗ್ರೂಪ್ ಸ್ಲೀಪ್ ಟೆಕ್ನಾಲಜಿ ಕಂಪನಿ ಲಿಮಿಟೆಡ್ ಬೌನ್ಸಿಂಗ್ ಬೆಡ್ ಅನ್ನೋ ಹೊಸ ಕಾನ್ಸೆಪ್ಟ್ ಹಾಸಿಗೆಯನ್ನು ಬಿಡುಗಡೆ ಮಾಡಿದೆ. ಅದನ್ನು ಟ್ರಯಲ್ ಮಾಡೋ ಸಲುವಾಗಿ ಹಲವು ಮಾಲ್‌ಗಳಲ್ಲಿ ಬೌನ್ಸಿಂಗ್ ಬೆಡ್‌ಗಳನ್ನು ಇಡಲಾಗಿದೆ. ಮಹಿಳೆಯೊಬ್ಬರು ಈ ಬೌನ್ಸಿಂಗ್ ಬೆಡ್‌ಅನ್ನು ಟೆಸ್ಟ್ ಮಾಡುತ್ತಿರುವ ತಮಾಷೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದನ್ನು ಎಕ್ಸ್ ಹಾಗೂ ರೆಡಿಟ್ ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ತಮಾಷೆಯ ಕಾಮೆಂಟ್ಸ್‌ಗಳು ಬಂದಿವೆ. ದಂಪತಿಗಳ ನಡುವಿನ ರೋಮಾನ್ಸ್‌ಅನ್ನು ಇನ್ನಷ್ಟು ಹೀಟ್‌ಅಪ್ ಮಾಡಲು ಸಹಾಯವಾಗುತ್ತದೆ ಎನ್ನುವ ಕಾರಣಕ್ಕೆ ಈ ಬೆಡ್ ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ರಿಮೂಟ್ ಕಂಟ್ರೋಲ್ ಸಹಾಯದಲ್ಲಿ ಈ ಬೆಡ್ ಬೌನ್ಸ್ ಆಗುತ್ತದೆ. ಸೊಂಟದ ಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ಬೌನ್ಸ್ ಆಗಬೇಕು ಎಂದು ನಾವು ನಿರ್ಧಾರ ಮಾಡಿದರೆ ಸಾಕಾಗುತ್ತದೆ. ಯಾವ ಪ್ರಮಾಣದಲ್ಲಿ ಬೆಡ್ ಬೌನ್ಸ್ ಆಗಬೇಕು ಅನ್ನೋದನ್ನ ರಿಮೋಟ್‌ಅಲ್ಲಿ ಕಂಟ್ರೋಲ್ ಮಾಡಬಹುದಾಗಿದೆ.
Chinese invention: The Bouncing Bed – spicing things up for couples!
pic.twitter.com/60ZT7zlIc0
ಮಹಿಳೆಯೊಬ್ಬರು ಬೆಡ್‌ಅನ್ನು ಪರೀಕ್ಷೆ ಮಾಡುವ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಈ ಕ್ಲಿಪ್‌ನಲ್ಲಿ, ಒಬ್ಬ ಮಹಿಳೆ ಹಾಸಿಗೆಯ ಮೇಲೆ ಮಲಗಿರುವುದನ್ನು ಕಾಣಬಹುದು, ಸೇಲ್ಸ್ ವ್ಯಕ್ತಿಯೊಬ್ಬ ತನ್ನ ರಿಮೋಟ್ ಮೂಲಕ ಬೆಡ್‌ಅನ್ನು ಬೌನ್ಸ್ ಮಾಡುತ್ತಾ ಅದನ್ನು ನಿಯಂತ್ರಣ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
ರಿಮೋಟ್ ಬನ್ ಒತ್ತುತ್ತಿದ್ದಂತೆ ಮಹಿಳೆ ಬೆಡ್‌ನಲ್ಲಿ ಬೌನ್ಸ್ ಆಗಲು ಶುರು ಮಾಡುತ್ತಾಳೆ. ಇದರ ಬೆನ್ನಲ್ಲಿಯೇ ಆಕೆ ನಗಲು ಶುರು ಮಾಡುತ್ತಾಳೆ. ಬೆಡ್‌ನ ಪಕ್ಕದಲ್ಲಿಯೇ ನಿಂತ ಇನ್ನೊಬ್ಬ ಮಹಿಳೆ ತನ್ನ ರಿಯಾಕ್ಷನ್ ಸೆರೆಯಾಗದಂತೆ ನಗುತ್ತಲೇ ಮುಖ ಮುಚ್ಚಿಕೊಂಡಿದ್ದಾರೆ. ಹಾಸಿಗೆ ಕ್ರಮೇಣ ಲಯಬದ್ಧವಾಗಿ ಮೇಲಕ್ಕೆ ಮತ್ತು ಕೆಳಕ್ಕೆ ಪುಟಿಯುತ್ತಿದ್ದಂತೆ ಮಹಿಳೆ ಅದರಿಂದ ಹೊರಬರಲು ಪ್ರಯತ್ನಿಸುತ್ತಾಳೆ, ಆದರೆ ಅದನ್ನು ಇನ್ನೂ ಒಂದೆರಡು ನಿಮಿಷಗಳ ಕಾಲ ಟ್ರೂ ಮಾಡುವಂತೆ ಹೇಳತ್ತಾರೆ. ಅದಕ್ಕೆ ಆಕೆ ನಗುತ್ತಲೇ ಪ್ರಯತ್ನ ಮಾಡುತ್ತಾಳೆ. ಈ ಬೆಡ್ ಮಾರಾಟಕ್ಕಿದೆಯೇ ಅಥವಾ ಪ್ರದರ್ಶನಕ್ಕೆ ಇಡಲಾಗಿರುವ ಮೂಲಮಾದರಿಯೇ ಎಂಬುದು ಸ್ಪಷ್ಟವಾಗಿಲ್ಲವಾದರೂ, ಅಂತರ್ಜಾಲದಲ್ಲಿ ನೆಟಿಜನ್‌ಗಳು ಈ ಬೆಡ್ ಬಗ್ಗೆ ಭಾರೀ ಕಾಮೆಂಟ್ ಮಾಡಿದ್ದಾರೆ.
AI ಘಿಬ್ಲಿ ಇಮೇಜ್‌ನಿಂದ ಗರ್ಭಿಣಿಯರ ಫೋಟೋ ಎಡವಟ್ಟು; ಮನುಷ್ಯರೇ ಪರ್ಫೆಕ್ಟ್ ಅನ್ನೋದು ಪ್ರೂವ್ ಆಗೋಯ್ತು!
ಇದನ್ನು ನನ್ನ ಬೆಳಗ್ಗಿನ ಅಲಾರಾಂಗೆ ಪೇರ್ ಮಾಡಿ ನಾನು ಯೂಸ್ ಮಾಡಬಹುದೇ? ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 1960-80ರ ಅವಧಿಯಲ್ಲಿ ಅಮೆರಿಕಾದ ಮೋಟೆಲ್‌ಗಳಲ್ಲಿ ಇಂಥದ್ದೇ ರೀತಿಯ ವ್ಯವಸ್ಥೆಗಳಿದ್ದವು ಅನ್ನೋದನ್ನು ನೆನಪಿಸಿಕೊಂಡಿದ್ದಾರೆ.
ಇದು ಚೀನಾಕ್ಕಿಂತ ಹೆಚ್ಚಾಗಿ ಜಪಾನ್‌ಗೆ ಅಗತ್ಯವಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಇನ್ನೂ ಕೆಲವರು ಜನರು ಸೋಂಬೇರಿ ಇರುತ್ತಾರೆ. ಆದರೆ, ಇಷ್ಟೆಲ್ಲಾ ಸೋಂಬೇರಿಗಳಾಗಬಾರದು ಎಂದು ಕಾಮೆಂಟ್ ಮಾಡಿದ್ದಾರೆ. 'ಚೀನಾವನ್ನು ನಾವು ಇಷ್ಟಪಡಲು ಮತ್ತೊಂದು ಕಾರಣ ಸಿಕ್ಕಿದೆ', ಈಗ ಬರೀ ಎರಡು ನಿಮಷಕ್ಕೆ ಒಂದೊಂದು ಮಂಚ ಮುರಿಯುತ್ತದೆ', 'ಯಾರೂ ನಿರೀಕ್ಷೆಯೇ ಮಾಡದ ಇಂಥ ಪ್ರಾಡಕ್ಟ್‌ಗಳನ್ನು ಚೀನಾ ಮಾತ್ರ ಇನ್ವೆಂಟ್‌ಮಾಡಲು ಸಾಧ್ಯ' ಎಂದು ಕಾಮೆಂಟ್ ಮಾಡಲಾಗಿದೆ.
ಭಾರತದ ಮೊದಲ ಹೈಡ್ರೋಜನ್ ರೈಲು ಇಂದಿನಿಂದ ಸಂಚಾರ ಆರಂಭ! ಇದರ ವಿಶೇಷತೆಗಳೇನು?