ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಲವ್ ಸ್ಟೋರಿ ತುಂಬಾ ಕಾಮನ್. ಸೋಷಿಯಲ್ ಮೀಡಿಯಾ, ಆನ್‌ಲೈನ್ ಗೇಮ್, ಡೇಟಿಂಗ್ ಎಪ್ಲಿಕೇಷನ್‌ಗಳ ಮೂಲಕ ಭೇಟಿಯಾಗಿ ಡೇಟ್ ಮಾಡಿ ಮಾತಾಡಿ ಮದುವೆಯಾಗುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಪರಿಚಿತರಾಗಿ ಆತ್ಮೀಯರಾಗುವ ಬಹಳಷ್ಟು ಜೋಡಿ ಮದುವೆಯಾಗಿ ಸಂತೋಷವಾಗಿದ್ದಾರೆ. ಸೋಲ್ ಮೇಟ್‌ನ್ನು ಹುಡುಕುವಲ್ಲಿ ಈಗ ಸೋಷಿಯಲ್ ಮೀಡಿಯಾ ಕೂಡಾ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದೇ ರೀತಿಯ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಜೋಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಿತರಾಗಿ ಮದುವೆಯಾಗಿದ್ದಾರೆ. ಮೆಟಾವರ್ಸ್ ಮೂಲಕ ಈ ಜೋಡಿಯ ರಿಸೆಪ್ಶನ್ ಕಾರ್ಯಕ್ರಮ ನಡೆಯಲಿದ್ದು ಪ್ರಪಂಚದಾದ್ಯಂತದಿಂದ ಅವರ ಸಂಬಂಧಿ ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ತಮಿಳುನಾಡಿನ ಜೋಡಿ ಸೋಷಿಯಲ್ ಮಿಡಿಯಾದಲ್ಲಿ ವೆಡ್ಡಿಂಗ್ ರಿಸೆಪ್ಶನ್ ಕೂಡಾ ನಡೆಸಿದ್ದಾರೆ. ಜೋಡಿಗಳು ವರ್ಚುವಲ್ ಆಗಿ ಲಾಗಿನ್ ಆಗಲಿದ್ದು ಸಂಬಂಧಿ, ಅತಿಥಿಗಳೆಲ್ಲರೂ ಇದೇ ರೀತಿ ಲಾಗಿನ್ ಆಗಲಿದ್ದಾರೆ. ದಿನೇಶ್ ಎಸ್‌ಪಿ ಹಾಗೂ ಜನಗನಂದಿನಿ ರಾಮಸ್ವಾಮಿ ಅವರ ರಿಸೆಪ್ಶನ್ ಹೋಗ್ವಾರ್ಟ್ಸ್ ಕ್ಯಾಸ್ಟಲ್‌ನ ವರ್ಚುವಲ್ ಕ್ವಾರ್ಟರ್‌ನಲ್ಲಿ ನಡೆಯಲಿದೆ. ಮೆಟಾವರ್ಸ್ ಸ್ಥಳದಲ್ಲಿ ಎಲ್ಲರೂ ಭೇಟಿಯಾಗಲಿದ್ದಾರೆ. ಈ ಜೋಡಿ ಫೆಬ್ರವರಿ 6ರಂದು ಮದುವೆಯಾಗಲಿದ್ದಾರೆ. ಜನಗನಂದಿನಿ ಸಾಫ್ಟ್‌ವೇರ್ ಡೆವಲಪರ್ ಆಗಿದ್ದು, ದಿನೇಶ್ ಐಐಟಿ ಮದ್ರಾಸ್‌ನಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮಿಳುನಾಡಿನ ಶಿವಲಿಂಗಪುರಂ ಗ್ರಾಮದಲ್ಲಿ ಇವರ ಮದುವೆ ನಡೆಯಲಿದೆ. ಈ ಐಡಿಯಾ ದಿನೇಶ್ ಅವರದ್ದು, ಇದಕ್ಕೆ ವಧು ಕೂಡಾ ಸಮ್ಮತಿಸಿದ್ದಾರೆ.
ಖರ್ಚುವೆಚ್ಚ ತಗ್ಗಿಸಿದ ವಿವಾಹದ ಹೊಸ ಟ್ರೆಂಡ್, ಮಧ್ಯಮ ವರ್ಗಕ್ಕಿದು ವರ!
ಕ್ರಿಪ್ಟೋಕರೆನ್ಸಿ ಹಾಗೂ ಬ್ಲಾಕ್‌ಚೈನ್ ಟೆಕ್ ಆಸಕ್ತಿಹೊಂದಿದ್ದ ದಿನೇಶ್ ಎಥೇರಿಯಂ ಕುರಿತು ಸಂಶೋಧನೆ ನಡೆಸುತ್ತಿದ್ದರು. ವರ್ಚುವಲ್ ಪ್ರಪಂಚದ ಸಾಮಾನ್ಯ ವಿಚಾರವಾಗಿರುವುದು ಬ್ಲಾಕ್ ಚೈನ್. ಇದರಿಂದಾಗಿ ರಿಸೆಪ್ಶನ್ ಮೆಟಾವರ್ಸ್‌ನಲ್ಲಿ ನಡೆಸುವ ಐಡಿಯಾ ಬಂತು ಎಂದಿದ್ದಾರೆ ದಿನೇಶ್. ಈ ಜೋಡಿ ಆರಂಭದಲ್ಲಿ ಭೇಟಿಯಾಗಿದ್ದು ಇನ್‌ಸ್ಟಗ್ರಾಮ್‌ನಲ್ಲಿ.
ಜನರು ಭೇಟಿಯಾಗಿ ಆಟವಾಡಲು ಸಾಧ್ಯವಿರುವಂತಹ ಟಾರ್ಡಿವರ್ಸ್ ಡಿಸೈನ್ ಮಾಡುತ್ತಿದ್ದ ಕ್ವಾಟಿಕ್ಸ್ ಟೆಕ್‌ನ ವಿಘ್ನೇಶ್ ಸೆಲ್ವರಾಜ್ ಅವರನ್ನು ದಿನೇಶ್ ಸಮೀಪಿಸಿದ್ದರು. ದಿನೇಶ್ ಹಾಗೂ ಜನಗನಂದಿನಿ ಮದುವೆ ರಿಸೆಪ್ಶನ್‌ನಲ್ಲಿ ಅತಿಥಿಗಳು ಭಾರತದ ಸಂಪ್ರದಾಯಿಕ ಉಡುಗೆ ಅಥವಾ ವೆಸ್ಟರ್ನ್ ಡ್ರೆಸ್‌ಗಳನ್ನು ತಮ್ಮ ಅವತಾರಕ್ಕೆ ಬಳಸಿಕೊಳ್ಳಬಹುದು. ವಧೂ, ವರರಿಗೆ ಅತಿಥಿಗಳು ಗೂಗಲ್ ಪೇ ಅಥವಾ ಕ್ರಿಪ್ಟೋ ಮೂಲಕ ಗಿಫ್ಟ್ ಕೂಡಾ ನೀಡಬಹುದಾಗಿದೆ.
ಕಳೆದ ವರ್ಷ ಅಮೆರಿಕದ ಜೋಡಿ ಈ ರೀತಿಯಾಗಿ ಮದುವೆಯಾದ ಮೊದಲ ಜೋಡಿಯಾಗಿದ್ದರು. ಇದು ಸಾಮಾನ್ಯ ಮದುವೆಯ ಜೊತೆಜೊತೆಗೇ ನಡೆದಿತ್ತು. ಟ್ರೆಸಿ ಹಾಗೂ ಡೇವ್ ಅವರ ವಿವಾಹವನ್ನು ಅಮೆರಿಕ ಮೂಲಕ ವಿರ್ಬೆಲಾ ನಡೆಸಿತ್ತು.
ಬಾಲಿವುಡ್ ಚೆಲುವೆ ಇನ್ನು ಬೆಂಗಳೂರಿನ ಸೊಸೆ, ನಂಬಿಯಾರ್ ಮಲಯಾಳಿಯಾ?
ಪಬ್ ಜೀ ಲವ್
ಪಶ್ಚಿಮ ಬಂಗಾಳದ (West Bengal) ಧುಪ್ಗುರಿ ನಿವಾಸಿ ಸೈನೂರ್ ಆಲಂ (Sainur Alam) ನಿಯಮಿತವಾಗಿ ಪಬ್ಜಿ ಆಡುತ್ತಿದ್ದರು. ಆಟ ಆಡುವಾಗ ಕರ್ನಾಟಕದ (Karnataka) ಫ್ರಿಜಾ (Friza) ಎಂಬ ಮಹಿಳೆಯ ಪರಿಚಯವಾಗಿತ್ತು. ಆಟ ಆಡುವಾಗ ಇಬ್ಬರೂ ಮೊದಲು ಸ್ನೇಹಿತರಾದರು. ನಂತರ, ಅವರು ತಮ್ಮ ಭಾವನೆಗಳನ್ನು ಅರಿತುಕೊಂಡಾಗ, ಅವರು ಫೋನ್ ನಂಬರ್ಸ್ ವಿನಿಮಯ ಮಾಡಿಕೊಂಡರು ಮತ್ತು ಗಂಟೆಗಳ ಕಾಲ ಫೋನ್ನಲ್ಲಿ ಪರಸ್ಪರ ಮಾತನಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಇಬ್ಬರೂ ಪರಸ್ಪರ ತಮ್ಮ ಭಾವನೆಗಳನ್ನು ಅರಿತು ಪ್ರೇಮ ನಿವೇದನೆ ಮಾಡಿದ್ದರು, ಆದರೆ ಈ ಮೊದಲು ಇವರಿಬ್ಬರೂ ಯಾವುತ್ತು ಮುಖಾಮುಖಿಯಾಗಿರಲಿಲ್ಲ. ಫ್ರಿಜಾ ಬೆಂಗಳೂರಿನಿಂದ ಬಾಗ್ದೋಗ್ರಾ ಮೂಲಕ ವಿಮಾನದಲ್ಲಿ ಧುಪ್ಗುರಿಗೆ (Dhupguri) ಬಂದಿಳಿದಿದ್ದರು. ಮನೆಯ ಕಾಲಿಂಗ್ ಬೆಲ್ ಸದ್ದು ಕೇಳಿ ಬಾಗಿಲು ತೆರೆದಿದ್ದ ಸೈನೂರ್‌ಗೆ ಅಚ್ಚರಿ ಕಾದಿತ್ತು. ಪಬ್ ಜಿ ಆಟದ ಮೂಲಕ ಪರಿಚಯವಾಗಿದ್ದ ಗೆಳತಿ ತನ್ನ ಮನೆ ಮುಂದೆ ನಿಂತಿದನ್ನು ನೋಡಿ ಸೈನೂರ್ ಶಾಕ್ ಆಗಿದ್ದರು.