ಹೆಣ್ಣಿಗಿಂತ ಪ್ರೆಷರ್​ ಕುಕ್ಕರೇ ಬೆಸ್ಟ್​ ಎಂದು ಅದನ್ನೇ ಮದ್ವೆಯಾದ ಭೂಪ! ಮುಂದಾಗಿದ್ದೇ ಬೇರೆ...

Published : Feb 17, 2025, 03:46 PM ISTUpdated : Feb 17, 2025, 04:04 PM IST
ಹೆಣ್ಣಿಗಿಂತ ಪ್ರೆಷರ್​ ಕುಕ್ಕರೇ ಬೆಸ್ಟ್​ ಎಂದು ಅದನ್ನೇ ಮದ್ವೆಯಾದ ಭೂಪ! ಮುಂದಾಗಿದ್ದೇ ಬೇರೆ...

ಸಾರಾಂಶ

ಮದುವೆ ಒತ್ತಡ ತಾಳಲಾರದ ಇಂಡೋನೇಷ್ಯಾದ ಖೋಯಿರುಲ್ ಅನಮ್ ಎಂಬಾತ ರೈಸ್ ಕುಕ್ಕರ್‌ ಜೊತೆ ಮದುವೆಯಾಗಿ, ಮತ್ತೆ ವಿಚ್ಛೇದನ ನೀಡಿದ್ದಾನೆ. ಪ್ರಚಾರಕ್ಕಾಗಿ ಈ ನಾಟಕವಾಡಿ, ಕುಕ್ಕರ್ ಅಡುಗೆ ಮಾಡುತ್ತದೆಯೇ ಹೊರತು ತನಗೆ ಬೇಕಾದುದನ್ನು ಕೊಡುವುದಿಲ್ಲ ಎಂದು ತಮಾಷೆ ಮಾಡಿದ್ದಾನೆ. ಈ ವಿಚಿತ್ರ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮದುವೆಯಾಗದವರಿಗೆ ಮದುವೆಯಾಗಿಲ್ಲ ಎನ್ನುವ ಕೊರಗು, ಮದ್ವೆಯಾದವರಿಗೆ ನೂರೊಂದು ಕೊರಗು ಎನ್ನುವ ಮಾತಿದೆ. ಮದ್ವೆಯಾಗುವ ಮನಸ್ಸು ಮಾಡುವ ಹೆಣ್ಣುಮಕ್ಕಳಿಗೆ ಗಂಡ, ಅವನ ಮನೆಯವರು, ಅತ್ತೆ-ಮಾವನ ಮನೆಯ ಚಿಂತೆಯಾದರೆ, ಗಂಡಿಗೆ ಹೆಣ್ಣು ಹೊಂದಿಕೊಂಡು ಹೋಗುತ್ತಾಳೋ ಇಲ್ಲವೋ ಚಿಂತೆ. ಅದೇ ಕಾರಣಕ್ಕೆ ಕೆಲವು ಹೆಣ್ಣು ಮತ್ತು ಗಂಡು ಇಬ್ಬರೂ ಮದುವೆಯ ಉಸಾಬರಿಯೇ ಬೇಡ ಎನ್ನುತ್ತಾರೆ. ಅದೇನೇ ಇರಲಿ, ಇಲ್ಲೊಬ್ಬ ಮಾತ್ರ ಹೆಣ್ಣಿಗಿಂತ ಪ್ರೆಷರ್​ ಕುಕ್ಕರೇ ಬೆಸ್ಟ್​ ಎಂದುಕೊಂಡು ಅದನ್ನೇ  ಮದುವೆಯಾಗಿರುವ ಘಟನೆ ನಡೆದಿದೆ. 

ಇಂಡೋನೇಷ್ಯಾದ ವ್ಯಕ್ತಿ ಖೋಯಿರುಲ್ ಅನಮ್ ತನ್ನ ರೈಸ್ ಕುಕ್ಕರ್‌ನೊಂದಿಗೆ ಮದುವೆಯಾಗಿ ಸುದ್ದಿಯಾಗಿದ್ದಾನೆ. ಈ ಹಿಂದೆ ಇಂಥದ್ದೇ ಘಟನೆಗಳು ನಡೆದದ್ದು ಇವೆ. ಪ್ರಾಣಿಗಳ ಜೊತೆ ಮದುವೆಯಾದವರು ಇದ್ದಾರೆ. ಇನ್ನೂ ಮುಂದಕ್ಕೆ ಹೋಗಿರುವ ಇಬ್ಬರು ಹುಡುಗಿಯರು ಹುಡುಗರ ಸಹವಾಸವೇ ಬೇಡ ಎಂದು ತಮ್ಮನ್ನು ತಾವೇ ಮದುವೆಯಾಗಿರುವ ಘಟನೆಗಳೂ ನಡೆದಿವೆ. ಜೊತೆಗೆ ಹನಿಮೂನ್​ಗೆ ಕೂಡ ತಾವೊಬ್ಬರೇ ಹೋಗಿದ್ದಾರೆ. ಇನ್ನು ಈ ಕುಕ್ಕರ್​ವಾಲನ ವಿಷಯಕ್ಕೆ ಬರುವುದಾದರೆ, ಇವನೇನೂ ನಿಜವಾಗಿ ಕುಕ್ಕರ್​ ಜೊತೆ ಮದುವೆಯಾಗಿಲ್ಲ, ಬದಲಿಗೆ ಎಲ್ಲವೂ ಲೈಕ್​ಗೋಸ್ಕರ ಅಷ್ಟೇ. ಕುಕ್ಕರ್​ಗೆ ಶೃಂಗಾರ ಮಾಡಿ ಅದರ ಜೊತೆ ಮದುವೆಯಾಗಿ ಸಕತ್​ ಸದ್ದು ಮಾಡುತ್ತಿದ್ದಾನೆ. ಹೆಣ್ಣಿನ ಜೊತೆ  ಮದುವೆಯಾದರೆ ಆಕೆ ಉಲ್ಟಾ ಉತ್ತರ ಕೊಡುತ್ತಾಳೆ, ನನಗೆ ಅನ್ನ ಬೇಯಿಸಿ ಹಾಕ್ತಾಳೋ ಇಲ್ಲವೋ ಗೊತ್ತಿಲ್ಲ. ಅದೇ ಕಾರಣಕ್ಕೆ ಅನ್ನ ಮಾಡುವ ಪ್ರೆಷರ್​ ಕುಕ್ಕರನ್ನೇ ಮದ್ವೆಯಾಗುತ್ತೇನೆ ಎಂದು ಹೇಳಿ ಸಾಕಷ್ಟು ವೈರಲ್​ ಆದ.

ಮೂರು ದಿನ ಅವಳು- ಮೂರು ದಿನ ಇವಳು... ಇನ್ನೊಂದು ದಿನ? ಇಬ್ಬರು ಹೆಂಡಿರ ಮುದ್ದಿನ ಗಂಡನ ವಿಚಿತ್ರ ಕಥೆ ಕೇಳಿ!

ಅವನ ಆಸೆ ಈಡೇರಿತು. ಸಕತ್​ ಸುದ್ದಿಯಾಗಿ ತಣ್ಣಗಾಗುತ್ತಿದ್ದಂತೆಯೇ ಮತ್ತೊಮ್ಮೆ ಸದ್ದು ಮಾಡಬೇಕಲ್ಲ, ಅದೇ ಕಾರಣಕ್ಕೆ ಕುಕ್ಕರ್​ಗೆ ಡಿವೋರ್ಸ್​ ಕೊಟ್ಟೂ ಸುದ್ದಿಯಾದ! ಮೊದಲಿಗೆ  ವಿವಾಹ ಸಮಾರಂಭವನ್ನು ನಡೆಸಿ, ತಾನು ಮತ್ತು ಕುಕ್ಕರ್​ ಅನ್ನು  ಸಾಂಪ್ರದಾಯಿಕ ಮದುವೆಯ ಉಡುಪಿನಲ್ಲಿ ಅಲಂಕರಿಸಿ ಅದರ ಫೋಟೋ ಹಾಕಿದ್ದ ಯುವಕ, ಕೊನೆಗೆ ಡಿವೋರ್ಸ್​ ಸುದ್ದಿ ಕೊಟ್ಟಿದ್ದಾನೆ.  ಈ ಕುಕ್ಕರ್​ ನಿಜಕ್ಕೂ ನ್ಯಾಯಯುತ, ವಿಧೇಯ, ಪ್ರೀತಿಯ ಮತ್ತು ಅಡುಗೆಯಲ್ಲಿ ಉತ್ತಮ ಆಗಿದ್ದುದು ನನ್ನ ಭಾಗ್ಯ. ಇಂಥ ಹೆಣ್ಣು ಎಲ್ಲಿಯೂ ಸಿಗುವುದಿಲ್ಲ ಎನ್ನುವುದು ತಿಳಿಯಿತು ಎಂದಿದ್ದಾನೆ ಈ ಪತಿರಾಯ!

ಕೊನೆಗೆ ಡಿವೋರ್ಸ್​ಗೆ ಕಾರಣಕ್ಕೂ ನೀಡಿರುವ ಆತ,  ಇದು ಅನ್ನ ಮಾಡುವಲ್ಲಿ ಫೇಮಸ್​, ಅಡುಗೆನೂ ಮಾಡುತ್ತೆ. ಆದರೆ ಮದುವೆಯಾದ ಮೇಲೆ ನನಗೆ ಏನು ಮುಖ್ಯವಾಗಿ ಬೇಕೋ ಅದನ್ನು ಕೊಡುವುದಿಲ್ಲ. ಅದಕ್ಕಾಗಿ ಡಿವೋರ್ಸ್​ ಕೊಡುತ್ತಿದ್ದೇನೆ ಎಂದಿದ್ದಾನೆ. ಒಟ್ಟಿನಲ್ಲಿ  ಹಾಸ್ಯಮಯ ಸನ್ನಿವೇಶ ಎಲ್ಲರನ್ನೂ ನಗಿಸುವ ಜೊತೆಗೆ, ಈತ ಸಕತ್​ ಫೇಮಸ್​ ಕೂಡ ಆಗಿದ್ದಾನೆ. ಹಲವಾರು ವಿವಾಹಿತರು ಕಮೆಂಟ್​ ಮಾಡಿದ್ದು, ನಮಗೆ ಈ ಯೋಚನೆ ಮೊದಲೇ ಬಂದಿದ್ದರೆ, ನಾವೂ ಅದರ ಜೊತೆನೇ ಮದ್ವೆಯಾಗ್ತಿದ್ವಿ ಎಂದು ತಮಾಷೆ ಮಾಡಿದ್ದಾರೆ. 

ಇವ್ರಿಗೆ ಮೊಸರು ತರಲು ಹೇಳಿದ್ದೇ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು: ಯೋಗರಾಜ್​ ಭಟ್ಟರ ಪತ್ನಿ ಮಾತು ಕೇಳಿ...

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌