ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನೋಡಿ ಅಭ್ಯಾಸವಾಗಿರುವವರಿಗೆ ಅತ್ತೆ - ಸೊಸೆ ಸಂಬಂಧವೆಂದರೆ ಪರಸ್ಪರ ದ್ವೇಷ ಸಾಧಿಸಲೆಂದೇ ಇರುವವರು ಎಂಬ ಭಾವನೆ ಮೂಡುವುದು ಸಹಜ. ಕೆಲವರ ನಿಜ ಜೀವನದಲ್ಲೂ ಅತ್ತೆ ಸೂಸೆ ಸಂಬಂಧ ವಿರುದ್ಧ ದಿಕ್ಕಿನಲ್ಲಿ ಇರುವುದು ಸಹಜ. ಆದರೆ ಇದಕ್ಕೆ ಅಪವಾದವೆಂಬಂತೆ ಇಂಡೋ-ಇಟಾಲಿಯನ್ ಅತ್ತೆ - ಸೊಸೆ ಜೋಡಿಯೊಂದು ತಮ್ಮ ಅವಿನಾಭಾವ ಸಂಬಂಧದಿಂದಾಗಿ ನೆಟ್ಟಿಗರ ಹೃದಯ ಗೆದ್ದಿದೆ. ಇಟಾಲಿಯನ್ ದೇಶದ ಯೂಟ್ಯೂಬರ್ (Italian YouTuber) ಗಿಯುಲಿಯಾ ರಫೆಲ್ಲೋ ಜೈನ್(giulia raffaello jain ) ಹಾಗೂ ಆಕೆಯ ಭಾರತೀಯ ಅತ್ತೆ (mother-in-law) ಲೀನಾ ಜೈನ್ (Leena Jain) ಈಗ ಸುದ್ದಿಯಲ್ಲಿದ್ದಾರೆ.
undefined
ಅತ್ತೆಯನ್ನು ಅಮ್ಮ ಎಂದೇ ಸಂಭೋದಿಸಿಸುವ 33 ವರ್ಷದ ಗಿಯುಲಿಯಾ "ಅಮ್ಮ ಬಹಳ ಮುಕ್ತ ಮನಸ್ಸಿನವರು. ನಾನು ಅವರೊಂದಿಗೆ ಯಾವುದೇ ವಿಚಾರವಾಗಿ ಬೇಕಾದರೂ ಮಾತನಾಡಬಹುದು. ನಮಗಿಬ್ಬರಿಗೆ ನೃತ್ಯ ಮಾಡುವುದು, ವ್ಯಾಯಾಮ ಮಾಡುವುದು, ಆರೋಗ್ಯಕರ ಆಹಾರವನ್ನು ಸೇವಿಸುವುದು ಮತ್ತು ಜೊತೆಯಾಗಿ ಹೊರ ಹೋಗುವುದು ಎಂದರೆ ಬಹಳ ಇಷ್ಟ," ಎಂದು ತಿಳಿಸಿದ್ದಾರೆ.
Katrina -Vicky wedding: ಸೊಸೆ ಆಗೋಳ ಬಗ್ಗೆ ದೊಡ್ಡೋರಿಗಿಲ್ಲ ಖುಷಿ!
ಗಿಯುಲಿಯಾ ನನ್ನಂತೆಯೇ ಇದ್ದಾಳೆ. ನಿಮ್ಮ ಮಗ ಶ್ರೆಯಾಂಸ್ (Shreyans) ಗಿಂತ ಹೆಚ್ಚಾಗಿ ಗಿಯುಲಿಯಾ ನಿಮ್ಮದೇ ಮಗಳಂತೆ ಇದ್ದಾಳೆ ಎಂದು ಜನರು ಹೇಳುತ್ತಾರೆ" ಎಂದು 53 ವರ್ಷದ ಅತ್ತೆ ಲೀನಾ ಸಂತಸ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ 2016ರಲ್ಲಿ ಡೇಟಿಂಗ್ ಅಪ್ಲಿಕೇಶನ್ ಒಂದರಲ್ಲಿ ಗಿಯುಲಿಯಾ ಮತ್ತು ಶ್ರೆಯಾಂಸ್ ಮೊದಲು ಪರಿಚಯವಾಗಿದ್ದರು. ಅದಾಗಿ ಒಂದು ವರ್ಷದ ಬಳಿಕ ಕೆಲಸದ ನಿಮಿತ್ತ ಬರ್ಲಿನ್ ಗೆ (Berlin) ತೆರಳಿದಾಗ ಮೊದಲ ಬಾರಿಗೆ ಭೇಟಿಯಾಗಿದ್ದರು. ಅವರ ಮೊದಲ ಭೇಟಿಯಲ್ಲಿ ಬರೋಬ್ಬರಿ 6 ಗಂಟೆಗಳನ್ನು ಜೊತೆಯಲ್ಲೇ ಕಳೆದರು. " ತುಂಬಾ ಜನ ಇದು ಮೊದಲ ನೋಟದಲ್ಲೇ ಪ್ರೀತಿಯೇ ಎಂದು ನನ್ನನ್ನು ಕೇಳುತ್ತಾರೆ, ಆದರೆ ನಾನು ಹೇಳುತ್ತೇನೆ, 'ಇದು ಮೊದಲ ಸಂಭಾಷಣೆಯ ಪ್ರೀತಿ" ಎಂದು ಗಿಯುಲಿಯಾ ಹೇಳಿದ್ದಾರೆ.
ಅತ್ತೆ ಜಯಾ ಬಚ್ಚನ್‌ಗೆ ಶತ್ರು, ಸೊಸೆ ಐಶ್ವರ್ಯಾಗೆ ಕ್ಲೋಸ್ ಫ್ರೆಂಡ್!
ವಿದೇಶಿಯಾಗಿದ್ದರೂ ಶ್ರೆಯಾಂಸ್‌ರ ಕುಟುಂಬದೊಂದಿಗೆ ಗಿಯುಲಿಯಾ ಬಲುಬೇಗ ಹೊಂದಿಕೊಂಡಿದ್ದಾಳೆ. ಮಗ ಶ್ರೆಯಾಂಸ್ ನಮಗೆ ಗಿಯುಲಿಯಾ ಬಗ್ಗೆ ಹೇಳಿದಾಗ, ನನ್ನ ಪತಿ ಸ್ವಲ್ಪ ಗೊಂದಲಕ್ಕೊಳಗಾದರು. ಅವರು ಕುಟುಂಬಕ್ಕೆ ಹೊಂದಿಕೊಂಡಿರುವ ಹುಡುಗಿ ಸೊಸೆಯಾಗಿ ಬರಬೇಕು ಅಂದುಕೊಂಡಿದ್ದರು. ವಿದೇಶಿ ಆಗಿರುವುದರಿಂದ ಆಕೆ ಮಾಂಸಾಹಾರಿಯಾಗಿರಬಹುದು ಎಂದು ಭಾವಿಸಿದ್ದರು. ಆದರೆ ಯಾವಾಗ ಗಿಯುಲಿಯಾಳನ್ನು ಅವರು ಭೇಟಿಯಾದರೋ ನನ್ನ ಪತಿಗೆ ಆಕೆ ಇಷ್ಟವಾಗಿಬಿಟ್ಟಳು ಎಂದು ಲೀನಾ ಹೇಳಿದ್ದಾರೆ.
ಸೆಕ್ಸ್ ಹುಚ್ಚಿ ಎಂದು ಹೊಸದಾಗಿ ಮದ್ವೆಯಾಗಿದ್ದ ರೇಖಾಗೆ ಚಪ್ಪಲಿ ಎತ್ತಿದ ಅತ್ತೆ
ಶ್ರೇಯ್ ನನ್ನೊಂದಿಗೆ ಮಾತನಾಡುವಂತೆ ಮಾಡಿದ ಒಂದು ವಿಷಯವೆಂದರೆ ನಾನು ಸಸ್ಯಾಹಾರಿಯಾಗಿರುವುದು. ತನ್ನ ತಂದೆ ಶ್ರೆಯಾಂಸ್ ಜತೆಗಿನ ಸಂಬಂಧವನ್ನು ಒಪ್ಪಿಕೊಂಡಾಗ ಸಾಂಸ್ಕೃತಿಕ ಘರ್ಷಣೆಗಳು ಉಂಟಾಗಬಹುದೆಂದು ನನ್ನ ತಾಯಿಗೆ ಆತಂಕವಿತ್ತು. ಆದರೆ ಮೊದಲ ಬಾರಿಗೆ ತಾಯಿ ಶ್ರೇಯ್ ನನ್ನು ಭೇಟಿಯಾದಾಗ. ಅವಳು ಶ್ರೇಯ್ ನನ್ನು ತುಂಬಾ ಬಿಗಿಯಾಗಿ ಅಪ್ಪಿಕೊಂಡಳು. ಮಾತ್ರವಲ್ಲ ಶ್ರೇಯ್ ನ ಕನ್ನಡಕನ್ನು ಮುರಿದುಬಿಟ್ಟಳು ಎಂದು ಗಿಯುಲಿಯಾ ಜೋರಾಗಿ ನಕ್ಕರು.
ನಿಮ್ಮ ಅತ್ತೆ-ಮಾವಂದಿರನ್ನು ಮೆಚ್ಚಿಸಲು ಬಯಸುವಿರಾ? ಇಲ್ಲಿದೆ 5 ಸರಳ ಮಾರ್ಗ
"ಭಾರತ ಹಾಗೂ ಇಟಾಲಿಯನ್ ಸಂಸ್ಕೃತಿಗಳಲ್ಲಿ ಸಾಮ್ಯತೆ ಇದೆ. ರೋಮ್‌ನ ಟ್ರಾಫಿಕ್ ದೆಹಲಿಯಷ್ಟೇ ಕೆಟ್ಟದಾಗಿದೆ. ಇಟಲಿಯಲ್ಲೂ ಸಹ ಬೀದಿ ಬದಿಯ ಆಹಾರದ ಕಾರ್ಟ್‌ಗಳು ಇವೆ. ನಾವು ಕೌಟುಂಬಿಕ ಸಭೆಗಳನ್ನು ಇಷ್ಟ ಪಡುತ್ತೇವೆ. ಭಾರತದಲ್ಲಿಯಂತೆಯೇ ಇಟಲಿಯಲ್ಲೂ ಗಾಸಿಪ್ ಸೆಶನ್‌ಗಳು ನಡೆಯುತ್ತವೆ. ಇಟಲಿಯಲ್ಲೂ ಸಹ ಅತ್ತೆ - ಸೊಸೆಯಂದಿರ ತಿಕ್ಕಾಟಗಳು ಇವೆ," ಎನ್ನುತ್ತಾರೆ ಗಿಯುಲಿಯಾ.
ಗಿಯುಲಿಯಾ ಮತ್ತು ಶ್ರೇಯಾಂಸ್ ಜೂನ್ 22 ರಂದು ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ವಿವಾಹವಾಗಿದ್ದಾರೆ. ಗಿಯುಲಿಯಾ ಅವರ ಪೋಷಕರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು, ಆದರೆ ಸಾಂಕ್ರಾಮಿಕ ರೋಗದಿಂದಾಗಿ ಶ್ರೇಯ್ ಅವರ ಪೋಷಕರು ಮದುವೆಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಮುಂದಿನ ವರ್ಷ ಇವರು ಇಟಾಲಿಯನ್ ಮತ್ತು ಭಾರತೀಯ ಸಂಪ್ರದಾಯದಂತೆ (indian culture) ಮದುವೆಯಾಗಲು ಯೋಚಿಸಿದ್ದಾರೆ.
ಗಿಯುಲಿಯಾಗೆ ಸೀರೆಗಳೆಂದರೆ ಇಷ್ಟ. ಭಾರತೀಯ ಉಡುಪು ಮತ್ತು ಫ್ಯಾಷನ್ ಅವಳಿಗೆ ಅಚ್ಚುಮೆಚ್ಟು. ಆದರೆ ನಾನು ಜರ್ಮನಿಯಲ್ಲಿ ಭಾರತೀಯ ಉಡುಗೆಗಳನ್ನು ಧರಿಸಲು ಸಾಧ್ಯವಿಲ್ಲ ಏಕೆಂದರೆ ಭಾರತೀಯ ಬಟ್ಟೆಗಳು ಹಲವು ಬಣ್ಣಗಳನ್ನು ಹೊಂದಿವೆ. ಜರ್ಮನಿಯಲ್ಲಿ ನಾವು ಕಪ್ಪು ಮತ್ತು ಬಿಳಿ ಮತ್ತು ನೀಲಿ ಬಣ್ಣವನ್ನು ಧರಿಸುತ್ತೇವೆ ಎಂದಿದ್ದಾರೆ.