'ನಿಮ್ಮ ಮಗನ ಮದುವೆ ಯಾವಾಗ?' ಕೇಳಿದ ಆಂಟಿಗೆ ತಾಯಿ ಕೊಟ್ಟ ಒಂದೇ ಒಂದು ಉತ್ತರಕ್ಕೆ ಸಂಬಂಧಿಕೆ ಸುಸ್ತು, ಸೈಲೆಂಟ್ ಆಗಿ ಎಸ್ಕೇಪ್

Published : Nov 13, 2026, 05:21 PM IST
indian mother savage reply relative son marriage question viral

ಸಾರಾಂಶ

ಕುಟುಂಬದ ಕಾರ್ಯಕ್ರಮಗಳಲ್ಲಿ ಭೇಟಿಯಾಗುವ ಕೆಲವು ಸಂಬಂಧಿಕರಿಗೆ ಬೇರೆಯವರ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಕೇಳುವುದೇ ಕೆಲಸ. ಅದರಲ್ಲೂ ಮದುವೆಯಾಗದ ಯುವಕ-ಯುವತಿಯರು ಸಿಕ್ಕರೆ ಸಾಕು, ಮದುವೆ ಯಾವಾಗ? ಹುಡುಗಿ ನೋಡುತ್ತಿದ್ದೀರಾ? ಎಂಬ ಪ್ರಶ್ನೆಗಳ ಸುರಿಮಳೆಯಾಗುತ್ತದೆ.

ಕುಟುಂಬದ ಕಾರ್ಯಕ್ರಮಗಳಲ್ಲಿ ಭೇಟಿಯಾಗುವ ಕೆಲವು ಸಂಬಂಧಿಕರಿಗೆ ಬೇರೆಯವರ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಕೇಳುವುದೇ ಕೆಲಸ. ಅದರಲ್ಲೂ ಮದುವೆಯಾಗದ ಯುವಕ-ಯುವತಿಯರು ಸಿಕ್ಕರೆ ಸಾಕು, ಮದುವೆ ಯಾವಾಗ? ಹುಡುಗಿ ನೋಡುತ್ತಿದ್ದೀರಾ? ಎಂಬ ಪ್ರಶ್ನೆಗಳ ಸುರಿಮಳೆಯಾಗುತ್ತದೆ. ಇಂತಹ ಮುಜುಗರದ ಪ್ರಶ್ನೆಗಳಿಗೆ ಕೆಲವರು ಸುಮ್ಮನಿದ್ದರೆ, ಇನ್ನು ಕೆಲವರು ಜಾಣತನದಿಂದಲೇ ತಿರುಗೇಟು ನೀಡುತ್ತಾರೆ. ಇದೀಗ ಮಗನ ಮದುವೆ ಬಗ್ಗೆ ಪ್ರಶ್ನಿಸಿದ ಸಂಬಂಧಿಗೆ ತಾಯಿಯೊಬ್ಬರು ನೀಡಿದ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಗನ ಮದುವೆ ಯಾವಾಗ ಎಂದು ಕೇಳಿದ ಆಂಟಿ

ರೆಡ್ಡಿಟ್‌ನಲ್ಲಿ ವ್ಯಕ್ತಿಯೊಬ್ಬರು ತಮ್ಮ ತಾಯಿಯ ಜಾಣತನದ ಉತ್ತರದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ತಮ್ಮ ಊರಿಗೆ ತೆರಳಿದ್ದರು. ಈ ವೇಳೆ ದೂರದ ಸಂಬಂಧಿಯೊಬ್ಬರು ಅವರ ಮನೆಗೆ ಬಂದು ತಂದೆ-ತಾಯಿಯೊಂದಿಗೆ ಮಾತನಾಡುತ್ತಿದ್ದರು. ಮಾತಿನ ನಡುವೆ ಇದ್ದಕ್ಕಿದ್ದಂತೆ ಆ ಮಹಿಳೆ, 'ನಿಮ್ಮ ಮಗನ ಮದುವೆ ಯಾವಾಗ ಮಾಡಿಸುತ್ತಿದ್ದೀರಿ?' ಎಂದು ತಾಯಿಯನ್ನು ಪ್ರಶ್ನಿಸಿದ್ದಾರೆ.

ತಾಯಿಯ ಒಂದೇ ಒಂದು ಉತ್ತರಕ್ಕೆ ಆಂಟಿ ಸುಸ್ತು

ಸಂಬಂಧಿಕರ ಇಂತಹ ವೈಯಕ್ತಿಕ ಪ್ರಶ್ನೆಗಳನ್ನು ಇಷ್ಟಪಡದ ತಾಯಿ, ಯಾವುದೇ ಗಲಾಟೆ ಮಾಡದೆ ನಗುತ್ತಲೇ ಜಾಣತನದ ಉತ್ತರ ನೀಡಿದ್ದಾರೆ. 'ನಿಮ್ಮ ಮಗನ ಮದುವೆಯಾದ ನಂತರ ನಮ್ಮ ಮಗನ ಮದುವೆ ಮಾಡಿಸುತ್ತೇವೆ' ಎಂದು ಹೇಳಿದ್ದಾರೆ. ಈ ಉತ್ತರ ಕೇಳಿದ ಸಂಬಂಧಿಕೆಗೆ ಏನು ಹೇಳಬೇಕೆಂದು ತೋಚದೆ ಸುಮ್ಮನಾಗಿದ್ದಾರೆ. ಅಷ್ಟೇ ಅಲ್ಲ, ಮಾತುಕತೆಯನ್ನು ಅಲ್ಲಿಗೇ ನಿಲ್ಲಿಸಿ ಅಲ್ಲಿಂದ ತೆರಳಿದ್ದಾರೆ ಎಂದು ಯುವಕ ತನ್ನ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನೊಂದು ವಿಶೇಷವೆಂದರೆ, ಪ್ರಶ್ನೆ ಕೇಳಿದ ಮಹಿಳೆಯ ಮಗನಿಗೇ ಮದುವೆಯಾಗುವ ಆಸಕ್ತಿ ಇರಲಿಲ್ಲವಂತೆ. ಆತನ ತಾಯಿ ಮದುವೆ ಪ್ರಸ್ತಾಪಗಳನ್ನು ತಂದಾಗಲೆಲ್ಲ ಆತ ಅವುಗಳಿಂದ ತಪ್ಪಿಸಿಕೊಳ್ಳುತ್ತಿದ್ದ ಎಂದು ಯುವಕ ತಿಳಿಸಿದ್ದಾರೆ.

ರೆಡ್ಡಿಟ್‌ನಲ್ಲಿ ತಾಯಿಯ ಉತ್ತರಕ್ಕೆ ಮೆಚ್ಚುಗೆ

ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದು, ಸಂಬಂಧಿಕರ ಅನಗತ್ಯ ಪ್ರಶ್ನೆಗಳ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. 'ಇಂತಹ ಕುತೂಹಲ ತೋರಿಸುವ ಸಂಬಂಧಿಕರಿಗಿಂತ ಶತ್ರುಗಳ ಜೊತೆ ಮಾತನಾಡುವುದೇ ಒಳ್ಳೆಯದು' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು, 'ನಮ್ಮ ತಾಯಿಗೂ ಯಾರಾದರೂ ನನ್ನ ಮದುವೆ ಬಗ್ಗೆ ಕೇಳಿದರೆ, ಮದುವೆ ಆಗಬೇಕಾದಾಗ ಆಗುತ್ತದೆ. ಅದಕ್ಕಾಗಿ ನಾವು ಇಷ್ಟೊಂದು ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಹೇಳಿ ಸುಮ್ಮನಾಗಿಸುತ್ತಾರೆ' ಎಂದು ಬರೆದಿದ್ದಾರೆ. ಒಟ್ಟಿನಲ್ಲಿ, ಬೇರೆಯವರ ವೈಯಕ್ತಿಕ ಜೀವನದಲ್ಲಿ ಅನಗತ್ಯವಾಗಿ ಮೂಗು ತೂರಿಸುವ ಸಂಬಂಧಿಕರಿಗೆ ಜಗಳವಾಡದೆ, ನಗುತ್ತಲೇ ಉತ್ತರ ನೀಡಿದ ತಾಯಿಯ ಜಾಣತನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನ ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಸಿಂಪಲ್‌ ಆಗಿ ಮದುವೆಯಾದ ನಟಿ ಅಮೃತಾ ರಾವ್‌ ಸಹೋದರಿ ಪ್ರೀತಿಕಾ ರಾವ್‌, ಪತಿಯ ಮುಖ ಮರೆಮಾಚಿದ್ದೇಕೆ?
ಪುರೋಹಿತರಿಲ್ಲ, ಸಂಪ್ರದಾಯದ ಆಡಂಬರವಿಲ್ಲ: ಗ್ರೀಸ್‌ನಲ್ಲಿ ಸ್ವಯಂ ಗೌರವ ವಿವಾಹ ಆದ ಅನಿರುದ್ಧ್-ಕಾವ್ಯಾ, ಏನಿದು ವಿಶೇಷ ಮದುವೆ ಪದ್ಧತಿ?