ರಾತ್ರಿ 10 ಗಂಟೆ ಮೇಲೆ ಕರೀನಾ ಸೈಲೆಂಟ್​: ಪತ್ನಿಯ ಬೆಡ್​ಟೈಂ ರಹಸ್ಯ ರಿವೀಲ್​ ಮಾಡಿದ Saif Ali Khan

Published : Nov 13, 2026, 03:47 PM IST
Saif Ali Khan and Kareena Kapoor

ಸಾರಾಂಶ

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ತಮ್ಮ 14 ವರ್ಷಗಳ ದಾಂಪತ್ಯದ ಹಲವು ಇಂಟರೆಸ್ಟಿಂಗ್ ವಿಷಯಗಳನ್ನು ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ರಾತ್ರಿ 10 ಗಂಟೆಯ ನಂತರ ಕರೀನಾ ಏಕೆ ಮೌನವಾಗುತ್ತಾರೆ ಎಂಬುದರ ಗುಟ್ಟನ್ನು ಸೈಫ್ ಬಿಚ್ಚಿಟ್ಟಿದ್ದಾರೆ.

ಮುಂಬೈ: ಬಾಲಿವುಡ್ ರಾಜಮನೆತನದ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಸುಖಿ ದಾಂಪತ್ಯ ನಡೆಸುತ್ತಿದ್ದಾರೆ. ಕಪೂರ್​ ಫ್ಯಾಮಿಲಿಯ ಮಗಳು ಮುಸ್ಲಿಂ ವಿವಾಹಿತನ ಜೊತೆ ಮದುವೆಯಾದ ಬಗ್ಗೆ ಮೊದಲಿನಿಂದಲೂ ಕರೀನಾ ಟ್ರೋಲ್​ ಆಗುತ್ತಲೇ ಬಂದಿದ್ದಾರೆ. ಅದರಲ್ಲಿಯೂ ಒಂದು ಸಮಯದಲ್ಲಿ, ಮಗಳೇ ಎಂದು ಸೈಫ್ ಅಲಿ ಖಾನ್​ ಕರೀನಾ ಅವರನ್ನು ಕರೆದಿದ್ದರು. ಅದೂ ತಮ್ಮ ಮೊದಲನೆಯ ಮದುವೆಯ ಸಂದರ್ಭದಲ್ಲಿ. ಅದೇ ಮಗಳು ಎಂದವಳನ್ನೇ ಮದುವೆಯಾಗಿರುವ ಕಾರಣದಿಂದ ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದರೂ, ಅವ್ಯಾವುದಕ್ಕೂ ದಂಪತಿ ತಲೆಕೆಡಿಸಿಕೊಳ್ಳದೇ ಇದೀಗ ಈ ದಂಪತಿ ಎರಡು ಮಕ್ಕಳ ಪಾಲಕರೂ ಆಗಿದ್ದಾರೆ. ಅಂದಹಾಗೆ ಸೈಫ್​ಗೆ ಮೊದಲ ಮದುವೆಯಿಂದ ಮತ್ತಿಬ್ಬರು ಮಕ್ಕಳು ಇದ್ದಾರೆ. ಸೈಫ್ ಮತ್ತು ಕರೀನಾ ಮದುವೆಯಾಗಿ 14 ವರ್ಷಗಳಾಗಿವೆ. ಅವರು ತೈಮೂರ್ ಮತ್ತು ಜೆಹ್ ಎಂಬ ಇಬ್ಬರು ಗಂಡು ಮಕ್ಕಳ ಪೋಷಕರು.

ಇದೀಗ ಕಾಫಿ ವಿತ್ ಕರಣ್ ನ ಸೀಸನ್ 9 ರಲ್ಲಿ ಜೋಡಿ ತಮ್ಮ ದಾಂಪತ್ಯದ ಹಲವು ಇಂಟರೆಸ್ಟಿಂಗ್​ ವಿಷಯಗಳನ್ನು ರಿವೀಲ್​ ಮಾಡಿದೆ. ಕರಣ್ ಜೋಹರ್ ಗಮನಿಸಿದಂತೆ, ಸೈಫ್ ಮತ್ತು ಕರೀನಾ ಕಾಫಿ ವಿತ್ ಕರಣ್ ಸೋಫಾದಲ್ಲಿ ಎರಡು ಬಾರಿ ಒಟ್ಟಿಗೆ ಕಾಣಿಸಿಕೊಂಡ ಏಕೈಕ ದಂಪತಿ. 2010 ರಲ್ಲಿ ಸೀಸನ್ 3 ರಲ್ಲಿ ಈ ಜೋಡಿ ಮೊದಲು ಒಟ್ಟಿಗೆ ಕಾಣಿಸಿಕೊಂಡಿತು. ಈ ಸಂಚಿಕೆಯಲ್ಲಿ ಅವರ ಸಂಬಂಧ, ಕುಟುಂಬ ಮತ್ತು ಒಟ್ಟಿಗೆ ಪ್ರಯಾಣದ ಬಗ್ಗೆ ಹೆಚ್ಚು ಪ್ರಶ್ನೆ ಕೇಳಲಾಗಿತ್ತು. ಮನೆಯಲ್ಲಿ ಕರೀನಾ ಹೇಗಿರುತ್ತಾರೆ ಎಂದು ಕರಣ್​ ಕೇಳಿದಾಗ, ಸೈಫ್​ ತಮಾಷೆಯಾಗಿ ತಮ್ಮ ಬೆಡ್​ ಟೈಮ್​ ವಿಷ್ಯ ಹಂಚಿಕೊಂಡರು. ಮಲಗುವ ಸಮಯದ ನಂತರ ಅವಳು ಇದ್ದಕ್ಕಿದ್ದಂತೆ ಏಕೆ ಮೌನವಾಗುತ್ತಾಳೆಂದು ಅರ್ಥಮಾಡಿಕೊಳ್ಳಲು ವರ್ಷಗಳೇ ಬೇಕಾಯಿತು ಎಂದು ಸೈಫ್ ಬಹಿರಂಗಪಡಿಸಿದರು.

ಬೆಡ್​​ಟೈಮ್​ ಸೀಕ್ರೆಟ್​ ಹಂಚಿಕೊಂಡ ಸೈಫ್​

ನಾವು ಮಲಗಿದ್ದರೂ, ರಾತ್ರಿ 10 ಗಂಟೆ ಆಗುತ್ತಿದ್ದಂತೆಯೇ ಅವಳು ಮಾತನಾಡುವುದನ್ನು ಸ್ಟಾಪ್​ ಮಾಡುತ್ತಾಳೆ. ನನಗೆ ಇದು ಮೊದಲಿಗೆ ಅರ್ಥವೇ ಆಗುತ್ತಿರಲಿಲ್ಲ ಎನ್ನುತ್ತಾ ಬೆಡ್​ಟೈಮ್​ ವಿಷ್ಯ ಹೇಳಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳಲು ಸೈಫ್ ಅವರಿಗೆ ಒಂದೆರಡು ವರ್ಷಗಳು ಬೇಕಾಯಿತಂತೆ. "ಅದನ್ನು ಅರ್ಥಮಾಡಿಕೊಳ್ಳಲು ನನಗೆ ಒಂದೆರಡು ವರ್ಷಗಳು ಬೇಕಾಯಿತು ಎಂದಿದ್ದಾರೆ. 10 ಗಂಟೆಯ ಬಳಿಕ ನಾನು ಏನಾದರೂ ಮಾತನಾಡಿದರೆ ಹಾಂ, ಹೂಂ ಅಷ್ಟೇ ಹೇಳಿ ಸುಮ್ಮನಾಗುತ್ತಿದ್ದಳು. ನನಗೆ ನಾನು ಏನಾದ್ರೂ ಸಮಸ್ಯೆ ಮಾಡಿದ್ನಾ? ಅವಳಿಗೆ ಏನಾದ್ರೂ ಹೇಳಿದ್ನಾ ಎಂದೆಲ್ಲಾ ಸಂದೇಹ ಕಾಡುತ್ತಿತ್ತು. ಆದರೆ ಎರಡು ವರ್ಷಗಳ ಬಳಿಕ ಇದು ಅರ್ಥವಾಯಿತು ಎಂದಿದ್ದಾರೆ ಸೈಫ್​. ಬೆಳಗಿನ ಸಮಯದಲ್ಲಿ ಈಗೆ ಫುಲ್​ ಉಲ್ಟಾ ಇರುತ್ತಾಳೆ ಎಂದರು.

ಅಷ್ಟಕ್ಕೂ 10 ಗಂಟೆಗೆ ಸರಿಯಾಗಿ ಅವಳಿಗೆ ಮಲಗಬೇಕು. ಅದಕ್ಕಾಗಿ ಅವಳು ಸೈಲೆಂಟ್​ ಆಗಿಬಿಡುತ್ತಾಳೆ. ಏನು ಕೇಳಿದರೂ ಉತ್ತರ ಹೇಳಲ್ಲ. ಆದರೆ ಬೆಳಗ್ಗೆ ಆಗುತ್ತಿದ್ದಂತೆಯೇ ಫುಲ್ ಜಾಲಿ ಮೂಡ್​ನಲ್ಲಿ ಇರುತ್ತಾಳೆ ಎಂದು ಸೈಫ್​ ಗುಟ್ಟು ಹೇಳಿದರು. "ಬೆಳಿಗ್ಗೆ ಹೆಚ್ಚಿನ ಸಮಯ ಫೋನ್‌ ಸಂಭಾಷಣೆಗಳಲ್ಲೇ ಕಳೆದು ಹೋಗುತ್ತದೆ ಎಂದಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಟ ವರುಣ್ ಆರಾಧ್ಯ ಜೊತೆ ಬ್ರೇಕಪ್​ನಿಂದ ಸದ್ದು ಮಾಡಿದ್ದ ರೀಲ್ಸ್ ಸ್ಟಾರ್ ವರ್ಷಾ ಕಾವೇರಿ ಕೊಟ್ರು ಗುಡ್​ನ್ಯೂಸ್​
ನಿತ್ಯಾಳ ರೋಲ್​ ಡಮ್ಮಿ ಮಾಡಿ ಸಾಯಿಸಿದ್ರಿ, ಈಗ ನಿಧಿ ಸರದಿನಾ? Karna Serial ವಿರುದ್ಧ ರೊಚ್ಚಿಗೆದ್ದ ವೀಕ್ಷಕರು