ಡೇಟಿಂಗ್ ಆ್ಯಪ್‌ನಲ್ಲಿ ಪ್ರೀತಿ ಆರಂಭ, ಕೆನಾಡದಿಂದ ಓಡೋಡಿ ವಧು ನೋಡಿ ಭಾರತದ ಯುವಕ ಕಂಗಾಲು

Published : Nov 15, 2026, 01:45 PM IST
rajasthan neemrana 61 year old canadian woman marriage refusal dating app case

ಸಾರಾಂಶ

ಡೇಟಿಂಗ್ ಆ್ಯಪ್ ಮೂಲಕ ಪರಿಚಯಾಗಿ ಶುರುವಾದ ಪ್ರೀತಿ ಮದುವೆ ಅರ್ಥ ಪಡೆದಿದೆ. ಭಾರತದ ಯುವಕನ ಮದುವೆಯಾಗಲು ಕೆನಾಡದಿಂದ ಓಡೋಡಿ ಬಂದಿದ್ದಾಳೆ. ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಯುವಕ ಕಂಗಾಲಾಗಿದ್ದು ಮಾತ್ರವಲ್ಲ, ಮದುವೆಯಾಗಲ್ಲ ಎಂದಿದ್ದಾನೆ.

ಪಾಣಿಪತ್ (ನ.15) ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದೆ. ಮಾತುಕತೆ ಆರಂಭಗೊಂಡಿದೆ. ಫೋಟೋ ನೋಡಿದ್ದಾರೆ. ಇಬ್ಬರಿಗೂ ಇಷ್ಟವಾಗಿದೆ. ಪ್ರೀತಿ ಶುರುವಾಗಿದೆ. ಒಂದು ವರ್ಷ ಚಾಟಿಂಗ್, ಕಾಲಿಂಗ್ ಮುಂದುವರಿದಿದೆ. ಕೊನೆಗೂ ಇಬ್ಬರು ಮದುವೆಗೆ ಮುಂದಾಗಿದ್ದಾರೆ. ಭಾರತದ ಯುವಕನ ಹುಡುಕಿಕೊಂಡು ಕೆನಾಡದಿಂದ ಬಂದ ವಧು ರಾಜಸ್ಥಾನ ತಲುಪಿದ್ದಾಳೆ. ಆದರೆ ವಧುವನ್ನು ಮೊದಲ ಬಾರಿಗೆ ಭೇಟಿಯಾದ ಯುವಕ ಈ ಮದುವೆ ಸಾಧ್ಯವಿಲ್ಲ ಎಂದಿದ್ದಾನೆ. ಕೆನಾಡ ರಾಯಭಾರ ಕಚೇರಿಗೆ ವಧು ದೂರು ನೀಡಿದ್ದಾಳೆ. ಇತ್ತ ಪೊಲೀಸರು ಈ ಪ್ರಕರಣ ಪರಿಹರಿಸುವುದು ಹೇಗೆ ಎಂದು ತಲೆಕೆಡಿಸಿಕೊಂಡಿದ್ದಾರೆ.

ಟ್ವಿಸ್ಟ್ ಮೇಲೆ ಟ್ವಿಸ್ಟ್

ಹರ್ಯಾಣದ ಪಾಣಿಪತ್ ಮೂಲದ 31 ವರ್ಷದ ನಿತಿನ್ ಡೇಟಿಂಗ್ ಆ್ಯಪ್ ಮೂಲಕ ಸರ್ಚ್ ಮಾಡುತ್ತಿರುವಾಗ ಕೆನಾಡ ಮಹಿಳೆಯೊಬ್ಬರ ಪರಿಚಯವಾಗಿದೆ. ಆ್ಯಪ್‌ನಲ್ಲಿ ಪೋಸ್ಟ್ ಮಾಡಿದ ಫೋಟೋ ನೋಡಿ ಫುಲ್ ಥ್ರಿಲ್ ಆಗಿದ್ದಾನೆ. ಪರಿಚಯ ಮಾಡಿಕೊಂಡಿದ್ದಾನೆ. ಆಕೆ ಕೆನಾಡ ನಿವಾಸಿ. ನಿತಿನ್ ಮನೆ ಪಾಣಿಪತ್. ಹರ್ಯಾಣದಿಂದ ನೇರವಾಗಿ ಕನೆಡಾ ಎಂದು ಖುಷಿಪಟ್ಟಿದ್ದಾನೆ. ಮಾತುಕತೆ ಮುಂದುವರಿದಿದೆ. ಚಾಟಿಂಗ್, ಕಾಲಿಂಗ್ ಪ್ರತಿ ದಿನ ಹೆಚ್ಚಾಗಿದೆ.

ಒಂದು ವರ್ಷದಿಂದ ರಿಲೇಶನ್‌ಶಿಪ್

ಪರಿಚಯ, ಗೆಳತನವಾಗಿ, ಪ್ರೀತಿಗೆ ತಿರುಗಿತ್ತು. ಪ್ರೀತಿ ಗಾಢವಾಯಿತು. ಕೆನಡಾದ ಮಹಿಳೆಗೆ ಮದುವೆಯಾಗುವ ತುಡಿತ. ಯುವಕ ನಿತಿನ್‌ಗೆ ಕೆನಡಾ-ಭಾರತ ಹೇಗೆ ಎಂಬ ಆತಂಕ. ತನಗೆ ಕೆನಡಾ ಹೋಗಿ ಆಕೆಯ ಮದುವೆ ಮಾಡಿ ಭಾರತಕ್ಕೆ ಕರೆತರುವುದು ದುಬಾರಿ. ಹೀಗಾಗಿ ಚಿಂತೆಗೆ ಬಿದ್ದಿದ್ದ. ಪ್ರೀತಿಗಾಗಿ ಕೆನಡಾ ಮಹಿಳೆ ನಾನೇ ಬರುತ್ತೇನೆ ಎಂದಿದ್ದಾಳೆ. ಅಷ್ಟೊತ್ತಿಗೆ ನಿತಿನ್ ಮತ್ತಷ್ಟು ಖುಷಿಯಾಗಿದ್ದಾನೆ.

ಕೆನಾಡದಿಂದ ದೆಹಲಿಗೆ ಬಂದಿಳಿದ ವಧು

ಪ್ರೀತಿ ಮದುವೆ ಅರ್ಥ ಪಡೆದಿದೆ. ಮದುವೆ ಮಾತುಕತೆ ಶುರುವಾಗಿದೆ. ಪೋಷಕರಿಗೆ, ಕುಟುಂಬಸ್ಥರಿಗೆ ಹೇಳಿಲ್ಲ. ಕೆನಾಡ ಯುವತಿ ಜೊತೆ ಪ್ರೀತಿ ಎಂದರೆ ಎಲ್ಲರು ತಮಾಷೆ ಮಾಡುತ್ತಾರೆ. ಹೀಗಾಗಿ ಆಕೆಯನ್ನು ಕರೆದುಕೊಂಡು ಮನೆಗೆ ತೆರಳಿ ಪ್ರೀತಿ ಬಿಚ್ಚಿಡಲು ನಿತಿನ್ ಮುಂದಾಗಿದ್ದಾನೆ. ಇತ್ತ ಕೆನಾಡದಿಂದ ವಧು ಮದುವೆಯಾಗಿ ಆಗಮಿಸಿದ್ದಾಳೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ತನ್ನ ಪ್ರೀತಿಯ ಸಂಗಾತಿಯನ್ನು ಬರಮಾಡಿಕೊಳ್ಳಲು ನಿತಿನ್ ಹಾಜರಾಗಿದ್ದ.

ಕಾದು ನಿಂತಿದ್ದ ನಿತಿನ್ ಕಂಗಾಲು

ಕಾದು ನಿಂತಿದ್ದ ನಿತಿನ್ ಉತ್ಸಾಹ, ಕುತೂಹಲ ಹೆಚ್ಚಾಗಿತ್ತು. ಕಳೆದ ಒಂದು ವರ್ಷದಿಂದ ಫೋನ್ ಮೂಲಕ ಮಾತನಾಡಿದ್ದ. ಆದರೆ ಮೊದಲ ಬಾರಿ ಭೇಟಿಯಿಂದ ಕುತೂಹಲ, ಖುಷಿ ಹೆಚ್ಚಾಗಿತ್ತು. ಕೆನಾಡದಿಂದ ಬಂದ ತನ್ನ ಸಂಗಾತಿ ತನ್ನ ಹತ್ತಿರ ಬರುತ್ತಿದ್ದಂತೆ ನಿತಿನ್ ಕಂಗಾಲಾಗಿದ್ದಾನೆ. ದಿಕ್ಕೇ ತೋಚದಂತಾಗಿದೆ. ಕಾರಣ ಆಕೆಯ ವಯಸ್ಸು ಬರೋಬ್ಬರಿ 61. ಮದುವೆ ಎಂದು ಬಂದಾಗಿದೆ. ಏನು ಮಾಡಲಿ ಅನ್ನೋ ಚಿಂತೆಯಲ್ಲಿದ್ದ ನಿತಿನ್ ನೇರವಾಗಿ 61ರ ಮದುಕಿ ಕರೆದುಕೊಂಡು ರಾಜಸ್ಥಾನದ ತನ್ನ ಸಂಬಂಧಿಕರ ಫ್ಲ್ಯಾಟ್‌ಗೆ ತೆರಳಿದ್ದಾನೆ. ಈ ಫ್ಲ್ಯಾಟ್‌ನಲ್ಲಿ ಎರಡು ದಿನ ಕಳೆದಿದ್ದಾನೆ. ಕೆನಾಡದ ತನ್ನ ಸಂಗಾತಿಯನ್ನು ಇಲ್ಲೇ ಇರಲು ಹೇಳಿದ್ದಾನೆ.

ನಿತಿನ್ ಈ ಮದುವೆ ಸಾಧ್ಯವಿಲ್ಲ ಎಂದು ಹೇಳಲು ಆಗುತ್ತಿಲ್ಲ, ಇತ್ತ ಮದುವೆ ಮಾತುಕತೆ, ಪೋಷರ ಭೇಟಿ ಯಾವುದು ಇಲ್ಲ. ಹೀಗಾಗಿ ಕೆನಡಾದ, ಮದುವೆಗೆ ಮೀನಮೇಷ ಎಣಿಸುತ್ತಿರುವುದೇಕೆ ಎಂದು ಕೇಳಿದ್ದಾಳೆ. 61ರ ಮದುಕಿಯನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಕೊನೆಗೂ ಹೇಳಿದ್ದಾನೆ. ಈ ಮಾತು ಕೇಳಿ ಕೆನಾಡದ ವಧು ಕಂಗಾಲಾಗಿದ್ದಾಳೆ. ಮಾತುಕತೆ ಜಟಾಪಟಿಯಾಗಿದೆ. ಕೆನಾಡದ 61ರ ಮಹಿಳೆ ಕೆನಾಡ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದಾಳೆ. ರಾಯಭಾರ ಕಚೇರಿ ಅಧಿಕಾರಿಗಳು ರಾಜಸ್ಥಾನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣವೇ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇತ್ತ ಯುವಕನ ವಿರುದ್ದ ದೂರು ದಾಖಲಾಗಿದೆ. ಹೀಗಾಗಿ ಪೊಲೀಸರು ವಶಕ್ಕೆ ಪಡೆದು ಜಾಮೀನಿನ ಮೂಲಕ ಬಿಡುಗಡೆ ಮಾಡಿದ್ದಾರೆ.

ಇಬ್ಬರು ಮದುವೆಗೆ ಒಪ್ಪಿಕೊಂಡ ಸಾಕ್ಷ್ಯಗಳಿವೆ. ಕಾನೂನು ಪ್ರಕಾರ ಯುವಕನ ತಪ್ಪಿದೆ. ಪ್ರೀತಿಸಿ ವಂಚಿಸಿದ ಪ್ರಕರಣ ಇದಾಗಿದೆ. ಆದರೆ ಮಹಿಳೆ ತನ್ನ ವಯಸ್ಸು ಮುಚ್ಚಿಟ್ಟಿದ್ದಳು. ಆತ ಕೇಳಿಲ್ಲ, ನಾನು ಹೇಳಿಲ್ಲ ಎಂದಿದ್ದಾಳೆ. ಚಿಕ್ಕ ಯುವಕನಿಗೆ 61 ಮಹಿಳೆ ಜೋಡಿಯಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಕಾನೂನಿನ ಅಡಿಯಲ್ಲಿ ಯುವಕನ ತಪ್ಪು ಎದ್ದು ಕಾಣುತ್ತಿದೆ. ಇದು ಪೊಲೀಸರ ತಲೆನೋವಿಗೆ ಕಾರಣವಾಗಿದೆ. ಈ ಸಮಸ್ಯೆಗೆ ಮಾತುಕತೆ ಮೂಲಕ ಪರಿಹಾರ ಸಾಧ್ಯವೇ, ಅಥವಾ ಕಾನೂನು ಪ್ರಕಾರ ಮುಂದುವರಿಯಬೇಕಾ ಅನ್ನೋ ಗೊಂದಲಕ್ಕೆ ಸಿಲುಕಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನವವಿವಾಹಿತ ದಂಪತಿ ಕೋಣೆಯಲ್ಲಿ ಇರಲೇಬೇಕಾದ 5 ವಸ್ತುಗಳು; ಮದ್ವೆಗೆ ಇವುಗಳನ್ನೇ ಕೊಡಿ
ಪವನ್ ಕಲ್ಯಾಣ್‌ರಿಂದ ಬೇರೆಯಾದ ಅನ್ನಾ ಬಗೆಗಿನ ನಂಬಲಸಾಧ್ಯವಾದ ಸೀಕ್ರೆಟ್ ಹೊರಹಾಕಿದ ಅಣ್ಣ ನಾಗಬಾಬು!