ಕ್ರಿಕೆಟರ್ ದೀಪಕ್ ಚಾಹರ್ ಮನೆಯಲ್ಲಿ ಶೀಘ್ರದಲ್ಲೇ ಮದುವೆ ಸಂಭ್ರಮ? ಸಹೋದರಿ ಮಾಲ್ತಿ ಜನ್ಮದಿನದಂದೇ ಸಿಕ್ತು ಸೂಚನೆ

Published : Nov 14, 2026, 10:00 PM IST
deepak chahar sister malti chahar

ಸಾರಾಂಶ

ಟೀಮ್ ಇಂಡಿಯಾದ ಬೌಲರ್ ದೀಪಕ್ ಚಾಹರ್ ಅವರ ಸಹೋದರಿ ಮಾಲ್ತಿ ಚಾಹರ್ ಅವರ ಹುಟ್ಟುಹಬ್ಬದಂದು ದೀಪಕ್ ಹಂಚಿಕೊಂಡ ಪೋಸ್ಟ್ ಕುತೂಹಲ ಮೂಡಿಸಿದೆ. ಪೋಸ್ಟ್‌ನಲ್ಲಿ ತಂಗಿಗೆ ಒಳ್ಳೆಯ ಪತಿ ಸಿಗಲಿ ಎಂದು ಹಾರೈಸಿದ್ದು, ಮದುವೆಯ ಬಗ್ಗೆ ಸುಳಿವು ನೀಡಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ದೀಪಕ್ ಚಾಹರ್ (Deepak Chahar) ಮನೆಯಲ್ಲಿ ಶೀಘ್ರದಲ್ಲೇ ಮದುವೆ ಸಂಭ್ರಮ ಮನೆಮಾಡಲಿದೆಯೇ? ಹೀಗೊಂದು ಕುತೂಹಲ ಇದೀಗ ಅಭಿಮಾನಿಗಳಲ್ಲಿ ಮೂಡಿದೆ. ನಟಿ ಹಾಗೂ ದೀಪಕ್ ಚಾಹರ್ ಅವರ ಸಹೋದರಿ ಮಾಲ್ತಿ ಚಾಹರ್ (Malti Chahar) ಇಂದು ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ವಿಶೇಷ ದಿನದಂದು ದೀಪಕ್ ಹಂಚಿಕೊಂಡಿರುವ ಪೋಸ್ಟ್‌ ಸೋಶೀಯಲ್‌ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಸಹೋದರಿ ಮಾಲ್ತಿ ಅವರ ಜನ್ಮದಿನವನ್ನು ಸ್ಮರಣೀಯವಾಗಿಸಲು ದೀಪಕ್ ಚಾಹರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮಾಷೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಾಲ್ತಿ ಯಾರೊಂದಿಗೋ ಫೋನ್‌ನಲ್ಲಿ ಮಾತನಾಡುತ್ತಿರುವಾಗ, ದೀಪಕ್ ಹಿಂದಿನಿಂದ ಬಂದು ಅವರನ್ನು ಬೆಚ್ಚಿಬೀಳಿಸುತ್ತಾರೆ. ತಕ್ಷಣವೇ ಮಾಲ್ತಿ ಜೋರಾಗಿ ಕಿರುಚಿ, ಬಳಿಕ ನಗಲು ಆರಂಭಿಸುತ್ತಾರೆ.

ವಿಡಿಯೋದಲ್ಲಿ ಅಣ್ಣ-ತಂಗಿಯ ನಡುವಿನ ಸುಂದರ ಬಾಂಧವ್ಯ ಮತ್ತು ಮಸ್ತಿ ಎದ್ದು ಕಾಣುತ್ತಿದ್ದು, ಅಭಿಮಾನಿಗಳ ಮನಗೆದ್ದಿದೆ. ಆದರೆ, ಈ ವಿಡಿಯೋಗಿಂತಲೂ ಹೆಚ್ಚಾಗಿ ದೀಪಕ್ ಚಾಹರ್ ಬರೆದಿರುವ ಕ್ಯಾಪ್ಶನ್ (Caption) ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲಿ ಅವರು ಸಹೋದರಿಗೆ ವರನನ್ನು ಹುಡುಕುವ ಬಗ್ಗೆ ಸುಳಿವು ನೀಡಿದ್ದಾರೆ. 'ಹ್ಯಾಪಿ ಬರ್ತ್‌ಡೇ ಸಿಸ್ಟರ್ ಮಾಲ್ತಿ ಚಾಹರ್... ದೇವರು ಈ ವರ್ಷ ನಿನಗೊಬ್ಬ ಒಳ್ಳೆಯ ಪತಿಯನ್ನು ಕರುಣಿಸಲಿ' ಎಂದು ದೀಪಕ್ ಚಾಹರ್ ಬರೆದುಕೊಂಡಿದ್ದಾರೆ.

ಈ ಪೋಸ್ಟ್ ನೋಡಿದ ಅಭಿಮಾನಿಗಳು ಮಾಲ್ತಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದು, ಇವರಿಬ್ಬರನ್ನು 'ಬೆಸ್ಟ್ ಬ್ರದರ್-ಸಿಸ್ಟರ್' ಎಂದು ಕೊಂಡಾಡಿದ್ದಾರೆ. ಜೊತೆಗೆ, "ಮಾಲ್ತಿ ನಿಜವಾಗಿಯೂ ಈ ವರ್ಷ ಮದುವೆಯಾಗುತ್ತಿದ್ದಾರೆಯೇ?" ಎಂದು ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಪ್ರಶ್ನಿಸುತ್ತಿದ್ದಾರೆ.

ಗ್ಲಾಮರಸ್ ಅವತಾರದಲ್ಲಿ ಮಿಂಚಿದ ಮಾಲ್ತಿ ಚಾಹರ್

ಇತ್ತ ಮಾಲ್ತಿ ಚಾಹರ್ ಸಹ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಲವಾರು ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮಗೆ ತಾವೇ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅತ್ಯಂತ ಸ್ಟೈಲಿಶ್ ಮತ್ತು ಸಿಜ್ಲಿಂಗ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಮಾಲ್ತಿ ಅವರ ಕಿಲ್ಲರ್ ಅಂದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮಾಲ್ತಿ ಚಾಹರ್ ಕೇವಲ ಕ್ರಿಕೆಟಿಗನ ಸಹೋದರಿ ಮಾತ್ರವಲ್ಲದೆ, ಸ್ವಂತ ಪ್ರತಿಭೆಯಿಂದ ಗುರುತಿಸಿಕೊಂಡಿದ್ದಾರೆ. ಮಾಲ್ತಿ ಅವರು ಒಬ್ಬ ಪ್ರತಿಭಾವಂತ ನಟಿಯಾಗಿರುವುದರ ಜೊತೆಗೆ ನಿರ್ದೇಶಕಿಯೂ (Director) ಹೌದು. ಅವರು ಪ್ರತಿಷ್ಠಿತ 'ಮಿಸ್ ಇಂಡಿಯಾ' ಸೌಂದರ್ಯ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು. ಅಲ್ಲದೆ, ಬಾಲಿವುಡ್ ನಟ ಸಲ್ಮಾನ್ ಖಾನ್ ನಿರೂಪಣೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' (Bigg Boss) ನಲ್ಲೂ ಕಾಣಿಸಿಕೊಂಡಿದ್ದು, ಅವರ ಬಿಗ್ ಬಾಸ್ ಪಯಣ ಸಾಕಷ್ಟು ಸುದ್ದಿಯಾಗಿತ್ತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದುವೆಯಾದ ನಾಲ್ಕೇ ತಿಂಗಳಲ್ಲಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ನೀಡಿದ ನಟಿ ಶರ್ಮಿಳಾ ಮಾಂಡ್ರೆ!
'ನಾನು ಸತ್ತರೆ ನೋಡಲು ಬರುತ್ತೀಯಾ?" ಆ ಪ್ರಶ್ನೆ ಕೇಳಿದ್ದ ನಟಿ ಸಿಲ್ಕ್ ಸ್ಮಿತಾ ಅಂತ್ಯಕ್ರಿಯೆಗೆ ಹೋಗಿದ್ರಾ ಈ ಸ್ಟಾರ್?