ಸಂಬಂಧ ಚೆನ್ನಾಗಿರಬೇಕು ಎಂದಾದರೆ, ಸಂಗಾತಿಗಳಿಬ್ಬರೂ ಪ್ರಬುದ್ಧತೆ ಹೊಂದಿರಬೇಕು. ಬದಲಾವಣೆಯನ್ನು ಸ್ವೀಕರಿಸುವ ಮುಕ್ತ ಮನಸ್ಥಿತಿ ಇರಬೇಕು. ಆದರೆ, ನಿಮ್ಮ ಸಂಗಾತಿ ಹಾಗಿಲ್ಲದೇ ಹೋದರೆ ಅವರಿಗಿಂತ ಭಾವನಾತ್ಮಕವಾಗಿ ಸಾಕಷ್ಟು ಬೆಳವಣಿಗೆ ಹೊಂದಿದ್ದೇವೆ ಎನ್ನುವ ಅನಿಸಿಕೆ ನಿಮ್ಮಲ್ಲಿ ಮೂಡಬಹುದು.
ಸಂಬಂಧದಲ್ಲಿ ಹೊಂದಾಣಿಕೆಯ ಜತೆಗೆ, ಒಂದೇ ರೀತಿಯ ವೇವ್ ಲೆಂಗ್ತ್ ಇದ್ದರೆ ಅನುಕೂಲ. ಆಗ ಸಂಘರ್ಷಗಳು ಕಡಿಮೆಯಾಗಬಲ್ಲವು. ಹಾಗೆ ನೋಡಿದರೆ, ನಿಖರವಾದ ಸಮಾನ ಮನಸ್ಸು ಬೇರೆ ಬೇರೆ ವ್ಯಕ್ತಿಗಳಲ್ಲಿರುವುದು ಸಾಧ್ಯವಿಲ್ಲ. ಪ್ರತಿಯೊಬ್ಬರ ಭಾವನೆ, ನಿಲುವುಗಳು ಬೇರೆಯೇ ಆಗಿರುತ್ತವೆ. ಆದರೂ ಒಂದಿಷ್ಟು ಸಮಾನ ಧೋರಣೆಗಳು ಇರುತ್ತವೆ. ಮೌಲ್ಯಗಳು ಒಂದೇ ಆಗಿರುತ್ತವೆ. ಮೌಲ್ಯಗಳೇ ವಿಭಿನ್ನವಾಗಿದ್ದರೆ ವ್ಯಕ್ತಿತ್ವದಲ್ಲಿ ಅತಿಯಾದ ವ್ಯತ್ಯಾಸ ಕಂಡುಬರುತ್ತದೆ. ಆದರೆ, ಮೌಲ್ಯಗಳು ಒಂದೇ ರೀತಿಯಲ್ಲಿರುವಾಗ ಸಮಾನ ಮನಸ್ಕ ಭಾವನೆ ತನ್ನಿಂತಾನೇ ಮೂಡುತ್ತದೆ. ಯಾವುದೇ ಸಂಬಂಧ ಚೆನ್ನಾಗಿರಲು ಇದು ಅಗತ್ಯ. ಇಲ್ಲವಾದರೆ, ಸಂಗಾತಿಗಿಂತ ನಮ್ಮ ಭಾವನೆಗಳ ಲೋಕವೇ ಬೇರೆಯಾಗಿದೆ ಎನಿಸಲು ಶುರುವಾಗುತ್ತದೆ. ಭಾವನೆಗಳ ಪಯಣದಲ್ಲಿ ಸಂಗಾತಿಯಿಂದ ನಾವು ತುಂಬ ಮುಂದಿದ್ದೇವೆ ಎಂದು ಭಾಸವಾಗುತ್ತದೆ. ಅಷ್ಟೇ ಅಲ್ಲ, ಪ್ರಬುದ್ಧತೆಯನ್ನೂ ಹೊಂದಿದ್ದೇವೆ ಎನಿಸುತ್ತದೆ. ಆದರೆ, ಸಂಗಾತಿ ಮಾತ್ರ ನಿಂತಲ್ಲೇ ನಿಂತಿರುವಂತೆ ಕಂಡುಬಂದು ವ್ಯತ್ಯಾಸಗಳು ಕಿರಿಕಿರಿ ಮೂಡಿಸುತ್ತವೆ. ನಿಮ್ಮ ಸಂಗಾತಿಯೊಂದಿಗೆ ನಿಮಗೂ ಈ ಭಾವನೆ ಕಾಡಿದೆಯಾ? ಅವರಿಗಿಂತ ನೀವು ಮುಂದಿದ್ದೀರಾ? ಅದನ್ನು ಕೆಲವು ಲಕ್ಷಣಗಳ ಮೂಲಕ ಸುಲಭವಾಗಿ ಗುರುತಿಸಬಹುದು.
• ಜೀವನಶೈಲಿ ಮೊದಲಿಗಿಂತ ಭಾರೀ ಬದಲಾಗಿದೆ (Change in Lifestyle)
ಭಾವನಾತ್ಮಕವಾಗಿ (Emotional) ಬೆಳೆಯುತ್ತ ಹೋದಂತೆ ಆದ್ಯತೆಗಳು (Priorities) ಬದಲಾಗುತ್ತವೆ. ಬದಲಾವಣೆ ಜಗದ ನಿಯಮ. ಇದನ್ನು ಒಪ್ಪಿಕೊಳ್ಳದೆ ಗತ್ಯಂತರವಿಲ್ಲ. ನಿಮ್ಮ ಗುರಿಯ (Aim) ಕಡೆಗೆ, ನಿಮ್ಮ ಏಳಿಗೆಯ ಕುರಿತು ಗಮನ ಹರಿಸುತ್ತ ಹೋದಂತೆಲ್ಲ ಆದ್ಯತೆಗಳು ಬದಲಾಗಿ ಜೀವನಶೈಲಿಯೂ ಅದಕ್ಕೆ ತಕ್ಕಂತೆ ಬದಲಾಗುತ್ತದೆ. ಇದರಿಂದಾಗಿ ನಮ್ಮವರ ಬಗೆಗಿನ ಪ್ರೀತಿ ಕಡಿಮೆಯಾಗಬೇಕೆಂದೇನೂ ಇಲ್ಲ. ಆದರೆ, ಅವರ ತಪ್ಪು-ಒಪ್ಪುಗಳ ಬಗ್ಗೆ ಸ್ಪಷ್ಟತೆ ಮೂಡುತ್ತದೆ. ವ್ಯತ್ಯಾಸಗಳು (Difference) ಗೋಚರವಾಗುತ್ತವೆ. ಆಗ ಉಂಟಾಗುವ ಸಮಸ್ಯೆಗಳ ಕುರಿತು ಪರಸ್ಪರ ಮಾತನಾಡಿ, ಬಗೆಹರಿಸುತ್ತ ಮುಂದೆ ಸಾಗಿದಾಗಲೇ ಸಾಂಗತ್ಯ (Relationship) ಬೆಳೆಯುತ್ತದೆ. ಅದಿಲ್ಲವಾದರೆ, ನಾವೇ ಬೇರೆ ಅವರೇ ಬೇರೆ ಎನಿಸುತ್ತದೆ.
Relationship Tips: ಕೋಪದಲ್ಲಾದರೂ ಇಂಥ ಮಾತುಗಳನ್ನ ಎಂದಿಗೂ ಆಡ್ಬೇಡಿ!
• ಗೋಡೆಯೊಂದಿಗೆ (Wall) ಮಾತನಾಡುತ್ತಿದ್ದೀರಾ?
ಹಲವು ಜನರನ್ನು ನೋಡಿರಬಹುದು. ಮನೆಗೆ ಬಂದಾಕ್ಷಣ ಏಕಾಏಕಿ ಗಂಭೀರವಾಗುತ್ತಾರೆ. ಸಂಗಾತಿಯೊಂದಿಗೆ ಮನಬಿಚ್ಚಿ ಮಾತನಾಡುವುದೇ ಇಲ್ಲ. ಮನೆಯಲ್ಲಿ ನಕ್ಕು ಹಗುರಾಗುವುದಿಲ್ಲ. ಮನೆಯ ಕುರಿತಾದ ಅಥವಾ ಅವರದ್ದೇ ವ್ಯಕ್ತಿತ್ವದಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ನೀವು ಮಾತನಾಡಿದರೂ ಪ್ರತಿಕ್ರಿಯೆ (React) ನೀಡದವರಿದ್ದಾರೆ. ಚರ್ಚೆ, ವಾದಗಳು ಸಂಬಂಧದಲ್ಲೂ ಇರಬೇಕು. ಹಿಂದಾದ ತಪ್ಪುಗಳನ್ನು ಪುನರಾವರ್ತಿಸದಂತೆ ನೋಡಿಕೊಳ್ಳಬೇಕು. ಆಗಲೇ ಬೆಳವಣಿಗೆ, ಪ್ರಬುದ್ಧತೆ (Maturity) ಮೂಡಲು ಸಾಧ್ಯ.
• ಮಾತುಕತೆಯಲ್ಲಿ ಆಳವಿಲ್ಲ
ಹಲವು ಜನ ತಮ್ಮ ಸಂಗಾತಿಯೊಂದಿಗೆ ದೈನಂದಿನ ವ್ಯವಹಾರಗಳಿಗೆ ಸಂಬಂಧಿಸಿ ಮೇಲುಮೇಲಿನ ಮಾತುಕತೆ ನಡೆಸುತ್ತಾರೆಯೇ ಹೊರತು, ದಿನಕ್ಕೊಮ್ಮೆಯಾದರೂ ಪ್ರೀತಿಯಿಂದ, ವಿಶ್ವಾಸದಿಂದ, ಆಳವಾದ (Deep) ಮಾತುಕತೆ ನಡೆಸುವುದಿಲ್ಲ. ನೀವು ಪ್ರಯತ್ನಿಸಿದರೂ ನಿಮ್ಮ ಸಂಗಾತಿ ಇದಕ್ಕೆ ಸಹಕಾರವನ್ನೇ (Help) ನೀಡುವುದಿಲ್ಲ ಎಂದಾದರೆ, ಅವರು ಭಾವನಾತ್ಮಕವಾಗಿ ಬೆಳೆದೇ ಇಲ್ಲ ಎನಿಸಲು ಆರಂಭವಾಗುತ್ತದೆ.
• ಪದೇ ಪದೆ ಅದದೇ ತಪ್ಪು
ಮನೆಯ ವಾತಾವರಣದ ಮೇಲೆ ಪರಿಣಾಮ ಬೀರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದಾಗಿ ಮಾತುಕೊಟ್ಟ ನಿಮ್ಮ ಸಂಗಾತಿ ಅದಕ್ಕೆ ತಕ್ಕಂತೆ ನಡೆದುಕೊಳ್ಳದೇ ಇದ್ದಾಗ ಪದೇ ಪದೆ ವಾಗ್ವಾದ ನಡೆಯುವುದು ಸಹಜ. ಅಂದರೆ, ಅವರು ತಪ್ಪುಗಳನ್ನು (Mistake) ರಿಪೀಟ್ ಮಾಡುತ್ತಲೇ ಇರುತ್ತಾರೆ. ಆದರೆ, ನೀವು ಮಾತ್ರ ಹಿಂದಾದ ತಪ್ಪುಗಳಿಂದ ಪಾಠ ಕಲಿತು ಪ್ರಬುದ್ಧರಾಗಿ ವರ್ತಿಸುತ್ತೀರಿ. ಅವರು ನಿಮ್ಮ ಮಾತುಗಳಿಗೆ ಸ್ಪಂದಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಂಗಾತಿ (Partner) ನಿಮ್ಮಿಂದ ದೂರವಿದ್ದಾರೆ ಎಂದೇ ಭಾಸವಾಗುತ್ತದೆ.
ಭಾರತದ 10 ರಲ್ಲಿ 7 ಮಂದಿ ಮಾಡ್ತಾರೆ ದಾಂಪತ್ಯ ದ್ರೋಹ, ಅಯ್ಯೋ ದೇವ್ರೆ ಎಲ್ಲರೂ ವಂಚಕರೇ ಹಾಗಾದ್ರೆ!
• ನಿಮ್ಮ ಪ್ರೋತ್ಸಾಹ, ಸಲಹೆ (Suggestion) ಮೂಲೆಗುಂಪು
ನೀವು ಎಷ್ಟೇ ಪ್ರೋತ್ಸಾಹ (Encourage) ನೀಡಿದರೂ, ಅತ್ಯುತ್ತಮ ಸಲಹೆ ಕೊಟ್ಟರೂ ಅವುಗಳನ್ನು ಜಾರಿಗೆ ತರದೇ ತಮ್ಮದೇ ವಾದ ಮಂಡಿಸುವ ಸಂಗಾತಿ ಇದ್ದರೆ ಅವರಿಗಿಂತ ಭಾವನಾತ್ಮಕವಾಗಿ ಭಾರೀ ಮುಂದಿದ್ದೇವೆ (Forward) ಎಂದು ನಿಮಗೆ ಅನಿಸುವುದು ಸಹಜ.