#Feelfree: ವಿವಾಹ ಬಾಹಿರ ಸಂಬಂಧದಲ್ಲಿ ಗರ್ಭಿಣಿ, ಗಂಡನಿಗಿದು ತಿಳಿಯಬಹುದಾ!

By Suvarna NewsFirst Published Aug 15, 2021, 3:10 PM IST
Highlights

ಈ ಹುಡುಗನ ಜೊತೆಗೆ ಸೆಕ್ಸ್‌ ಮಾಡೋದು ನನಗೆ ಬಹಳ ತೃಪ್ತಿ ನೀಡುತ್ತಿದೆ. ಆದರೆ ಈ ನಡುವೆ ನನ್ನ ಪೀರಿಯೆಡ್ಸ್‌ ಮಿಸ್‌ ಆಗಿದೆ. ನಾನೀಗ ನಾಲ್ಕು ತಿಂಗಳ ಗರ್ಭಿಣಿ. ಗಂಡನ ಜೊತೆಗೂ ಸೆಕ್ಸ್ ಮಾಡುತ್ತಿದ್ದೇನೆ. ನಾನು ಈ ಹುಡುಗನಿಂದ ಗರ್ಭಿಣಿಯಾಗಿರುವ ವಿಚಾರ ಗಂಡನಿಗೆ ತಿಳಿಯಬಹುದಾ?

ಪ್ರಶ್ನೆ : ನಾನು 28 ವರ್ಷದ ವಿವಾಹಿತೆ. ಮದುವೆ ಆಗಿ ಕೆಲವು ವರ್ಷಗಳಾಗಿವೆ. ಗಂಡ ನನಗಿಂತ ಐದಾರು ವರ್ಷ ದೊಡ್ಡವರು. ಅವರ ಜೊತೆಗಿನ ಸೆಕ್ಸ್‌ ಲೈಫ್‌ನಲ್ಲಿ ಅಷ್ಟಾಗಿ ತೃಪ್ತಿ ಸಿಗುತ್ತಿರಲಿಲ್ಲ. ಆದರೆ ಇದನ್ನು ಅವರ ಮುಂದೆ ಹೇಳಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ ನಾನು ಇತ್ತೀಚೆಗೆ ಒಬ್ಬ ಹುಡುಗನನ್ನು ಪ್ರೀತಿಸತೊಡಗಿದೆ. ನಮ್ಮಿಬ್ಬರ ನಡುವಿನ ಪ್ರೀತಿ ದೈಹಿಕ ಸಂಬಂಧಕ್ಕೆ ತಿರುಗಿದೆ. ಈ ಹುಡುಗನ ಜೊತೆಗೆ ಸೆಕ್ಸ್‌ ಮಾಡೋದು ನನಗೆ ಬಹಳ ತೃಪ್ತಿ ನೀಡುತ್ತಿದೆ. ನಾವಿಬ್ಬರೂ ಅದನ್ನು ಬಹಳ ಎನ್‌ಜಾಯ್‌ ಮಾಡುತ್ತಿದ್ದೇವೆ. ಆದರೆ ಈ ನಡುವೆ ನನ್ನ ಪೀರಿಯೆಡ್ಸ್‌ ಮಿಸ್‌ ಆಗಿದೆ. ನಾನೀಗ ನಾಲ್ಕು ತಿಂಗಳ ಗರ್ಭಿಣಿ. ಗಂಡನ ಜೊತೆಗೂ ಸೆಕ್ಸ್ ಮಾಡುತ್ತಿದ್ದೇನೆ. ನಾನು ಈ ಹುಡುಗನಿಂದ ಗರ್ಭಿಣಿಯಾಗಿರುವ ವಿಚಾರ ಗಂಡನಿಗೆ ತಿಳಿಯಬಹುದಾ? ಆ ಹುಡುಗನಿಗೆ ಇಂಥಾ ವಿಚಾರಗಳನ್ನೆಲ್ಲ ಸಂಭಾಳಿಸುವುದು ಕಷ್ಟ. ಏಕೆಂದರೆ ಆತ ಇನ್ನೂ 23 ವರ್ಷ ವಯಸ್ಸಿನವನು. ಅವನಿಗೆ ಇದೆಲ್ಲ ತಿಳಿಯುವುದಿಲ್ಲ. ಆದರೆ ಅವನ ಜೊತೆಗಿನ ಸಂಗವನ್ನು ಬಿಡುವುದೂ ಸಾಧ್ಯವಾಗುತ್ತಿಲ್ಲ. ನಾನು ಪ್ರಯತ್ನಿಸಿದಷ್ಟೂ ಅವನ ಮೇಲಿನ ಸೆಳೆತ ಹೆಚ್ಚಾಗುತ್ತಲೇ ಇದೆ. ಹಾಗೆಂದು ಗಂಡನಿಂದ ಹೊರಬಂದು ಈ ಹುಡುಗನ ಜೊತೆಗೆ ಇರುವುದು ಕಷ್ಟ. ಗಂಡನೊಂದಿಗೆ ಇದ್ದುಕೊಂಡೇ ಈ ಸಂಬಂಧ ನಿಭಾಯಿಸಬಹುದಾ?

ಉತ್ತರ : ನಿಮ್ಮ ಈ ಸಂಬಂಧವನ್ನು ಗಂಡನಿಗೆ ತಿಳಿಯದ ಹಾಗೆ ನಿಭಾಯಿಸಬಹುದಾ ಅಂತ ಕೇಳಿದ್ದೀರಿ. ಅದು ಬಹಳ ಕಷ್ಟ. ಇಂಥ ವಿಚಾರಗಳೆಲ್ಲ ಸೂಕ್ಷ್ಮ ಮನಸ್ಸು ಇರುವವರಿಗೆ ಬಹಳ ಬೇಗ ತಿಳಿದುಬಿಡುತ್ತದೆ. ಅಷ್ಟೊಂದು ಸೂಕ್ಷ್ಮ ಇಲ್ಲದವರು ಒಂದಿಷ್ಟು ಸಮಯದ ಬಳಿಕ ಆದರೂ ಗ್ರಹಿಸುತ್ತಾರೆ. ಈಗ ಈ ವಿಷಯ ಗಂಡನಿಗೆ ತಿಳಿಯದಿದ್ದರೂ ಮಗು ಆದಮೇಲೆ ಅದರ ಚಹರೆ ತನ್ನ ಹಾಗಿಲ್ಲದ್ದನ್ನು ಕಂಡು ತಿಳಿಯಬಹುದು. ಅದರ ಬದಲು ಗಂಡನಿಗೆ ನೇರವಾಗಿ ವಿಷಯ ತಿಳಿಸುವುದು ಸೂಕ್ತ. ಮುಂದೆ ಎಂದೋ ವಿಷಯ ತಿಳಿದು ಆಘಾತವಾಗಿ ಆ ಮನಸ್ಥಿತಿಯಲ್ಲಿ ಅವರು ಯಾವ ಥರ ವರ್ತಿಸುತ್ತಾರೆ ಅಂತ ಊಹಿಸುವುದು ಕಷ್ಟ. ಅವರನ್ನು ಈಗ ಮಾನಸಿಕವಾಗಿ ಸಿದ್ಧ ಮಾಡಿ ನಂತರ ಈ ವಿಚಾರ ತಿಳಿಸಬಹುದು. ಹುಡುಗನ ಜೊತೆಗಿನ ಸಂಬಂಧವನ್ನು ಮುಂದುವರಿಸುವುದು ನಿಮ್ಮ ದಾಂಪತ್ಯ ಹಾಗೂ ಹುಡುಗನ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಒಂದುವೇಳೆ ನೀವು ಆತನೊಂದಿಗೆ ಇರಲು ಬಯಸಿದರೆ ಅದು ಬೇರೆ ಪ್ರಶ್ನೆ. ಆದರೆ ನಿಮ್ಮ ಪ್ರಶ್ನೆ ನೋಡಿದರೆ ನೀವು ಈಗಿರುವ ದಾಂಪತ್ಯದಿಂದ ಹೊರಬರಲು ಬಯಸುತ್ತಿಲ್ಲ. ಇದನ್ನಿಟ್ಟುಕೊಂಡೇ ಆತನ ಜೊತೆಗೆ ಸಂಬಂಧ ಮುಂದುವರಿಸುವ ಯೋಚನೆಯಲ್ಲಿದ್ದೀರಿ. ಒಂದು ವೇಳೆ ಮುಂದೆ ನಿಮ್ಮ ಪತಿಗೆ ಅನುಮಾನ ಬಂದು ಡಿಎನ್‌ಎ ಟೆಸ್ಟ್‌ ಮಾಡಿಸಿದರಂತೂ ಇದು ಖಂಡಿತಾ ಗೊತ್ತಾಗುತ್ತದೆ. ಆಗ ಅಮಾಯಕ ಮಗು ತನ್ನದಲ್ಲದ ತಪ್ಪಿಗೆ ತಪಿತಸ್ಥ ಭಾವನೆಯಿಂದ ನರಳಬೇಕಾಗುತ್ತದೆ. ಇದು ಮಗುವಿನ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮವನ್ನೂ ಬೀರಬಹುದು. 

ಪ್ರಶ್ನೆ : ನಲವತ್ತು ವರ್ಷದ ಗಂಡಸು. ಮದುವೆಯಾಗಿ ನಾಲ್ಕು ವರ್ಷ ಕಳೆದಿದೆ. ಮಕ್ಕಳಿಲ್ಲ. ಮನೆಯವರು ಮತ್ತೊಂದು ಮದುವೆ ಆಗಲು ಒತ್ತಾಯಿಸುತ್ತಿದ್ದಾರೆ. ಪತ್ನಿ ಬಗ್ಗೆ ನನಗೆ ಅಂಥಾ ಆಸಕ್ತಿಯೂ ಇಲ್ಲ. ಇತ್ತೀಚೆಗೆ ಅವಳು ಹೊರೆ ಅನಿಸಿ ರೇಗಾಡುತ್ತೇನೆ. ನಾನು ಇನ್ನೊಂದು ಮದುವೆ ಆಗಬಹುದೇ? ಆಗ ನನಗೆ ಮಕ್ಕಳಾಗುವ ಸಾಧ್ಯತೆ ಇದೆಯೇ. 

ಉತ್ತರ : ಬಹುಶಃ ನೀವು ಪತ್ನಿಯ ಜೊತೆಗೆ ಹೆಚ್ಚೆಚ್ಚು ಆಪ್ತವಾಗಿ ಸಮಯ ಕಳೆದರೆ ಈ ವಿರಸ ಕಡಿಮೆಯಾಗಬಹುದೇನೋ. ಒಂದು ಹಂತದ ಬಳಿಕ ಪತಿ ಪತ್ನಿಯರ ಲೈಂಗಿಕ ಆಸಕ್ತಿ ಕಡಿಮೆ ಆಗುವುದು ಸಹಜ. ಆದರೆ ಇದನ್ನು ಹೆಚ್ಚಿಸಿಕೊಳ್ಳಲು ಕೇಗಲ್‌ ಎಕ್ಸರ್‌ಸೈಸ್‌ನಂಥಾ ದಾರಿಗಳಿವೆ. ಮಕ್ಕಳಾಗದ್ದಕ್ಕೆ ನಿಮ್ಮ ಸಮಸ್ಯೆ ಕಾರಣವಾಗಿರುವ ಸಾಧ್ಯತೆ ಇದೆ, ಮೊದಲು ಅದನ್ನು ಟೆಸ್ಟ್‌ ಮಾಡಿಸಿಕೊಳ್ಳಿ. ಒಂದು ವೇಳೆ ಪತ್ನಿಯಲ್ಲಿ ಸಮಸ್ಯೆ ಇದರೂ ಅದಕ್ಕೆ ಮರು ವಿವಾಹ ಪರಿಹಾರ ಅಲ್ಲ. ಬದಲಿಗೆ ಐವಿಎಫ್‌ ಮೂಲಕ ಮಕ್ಕಳನ್ನು ಪಡೆಯಲು ಪ್ರಯತ್ನಿಸಬಹುದು. ಅನಾಥ ಮಗುವನ್ನು ದತ್ತು ಪಡೆಯಬಹುದು. ಮನೆಯ ಉಳಿದವರ ಮಾತಿಗೆ ಹೆಚ್ಚು ಬೆಲೆ ಕೊಡದೇ ಪತ್ನಿಯ ಜೊತೆಗಿನ ಸಂಬಂಧ ಸುಧಾರಿಸುವತ್ತ ಗಮನ ಕೊಡಿ. 

click me!