ಹುಟ್ಟಿನೊಂದಿಗೆ ಕೆನ್ನೆ ಮೇಲೆ ಅಷ್ಟಗಲದ ಮಚ್ಚೆಯನ್ನು ಈಗ ಯಾವುದೇ ಹಿಂಜರಿಕೆ ಇಲ್ಲದೇ ಹೆಮ್ಮೆಯಿಂದ ತೋರಿಸುತ್ತಾರೆ ಮಂದಾರ. ಆದರೆ ಒಂದು ಕಾಲದಲ್ಲಿ ಈ ಮಜ್ಜೆ ಇವರ ಹಲವು ರಾತ್ರಿಗಳ ನಿದ್ರೆ ಕಸಿದಿತ್ತು. ಇವರ ಪ್ರೇಮಕಥೆ ಸಖತ್ ಇಂಟರೆಸ್ಟಿಂಗ್.
'ಏ ಹುಡ್ಗೀ, ಸ್ವಲ್ಪ ಆಚೆ ಕೂತ್ಕೋ, ಮಗು ಹೆದರಿಕೊಂಡು ಅಳೋದು ಕಾಣಿಸ್ತಿಲ್ವಾ?'
ಸಾರ್ವಜನಿಕ ಬಸ್‌ನಲ್ಲಿ ಪಕ್ಕದಲ್ಲಿ ಕೂತ ಹೆಂಗಸೊಬ್ಬಳು ತನ್ನನ್ನು ಕೆಕ್ಕರಿಸಿ ನೋಡುತ್ತಾ ಹೀಗಂದಾಗ ಆ ಹದಿನೆಂಟರ ಹರೆಯದ ಹುಡುಗಿ ಕಣ್ಣು ತುಂಬಾ ನೀರು. ಅಷ್ಟಕ್ಕೂ ತನ್ನದಲ್ಲದ ತಪ್ಪಿಗೆ ತನಗ್ಯಾಕೆ ಈ ಶಿಕ್ಷೆ ಅಂತ ಆ ಹುಡುಗಿಗೆ ಅರ್ಥ ಆಗುತ್ತಿಲ್ಲ. ಎಲ್ಲ ಹುಡುಗಿಯರಂತೆ ಕಣ್ಣ ತುಂಬ ಕನಸು ಹೊತ್ತಿದ್ದ ಆ ಹುಡುಗಿಗೆ ದುಃಸ್ವಪ್ನದ ಹಾಗೆ ಕಾಡುತ್ತಿದ್ದದ್ದು ಆಕೆಯ ಆ ಬರ್ತ್ ಮಾರ್ಕ್.
ತುಟಿ ಅಂಚಲ್ಲೋ, ಕೊರಳಲ್ಲೋ ಸಣ್ಣ ಬಿಂದುವಿನಿಂಥಾ ಬರ್ತ್ ಮಾರ್ಕ್ ಇದ್ದರೆ ಜನ ಅದನ್ನು ಬ್ಯೂಟಿ ಸಿಂಬಲ್ ಅಂತಾರೆ. ಆ ಬರ್ತ್ ಮಾರ್ಕ್‌ನ ಗಾತ್ರದ ದೊಡ್ಡದಾದಷ್ಟು ಆ ಚೆಂದದ ಕಾಂಸೆಪ್ಟ್‌ಕ್ಷೀಣಿಸುತ್ತ ಹೋಗುತ್ತದೆ. ಆದರೆ ಈ ಹುಡುಗಿಗೆ ಮಚ್ಚೆ ಇದ್ದದ್ದು ಕೆನ್ನೆ ಮೇಲೆ. ಅದು ಸಣ್ಣ ಮಚ್ಚೆ ಅಲ್ಲ. ಅಂಗೈಯಷ್ಟು ಅಗಲದ ಬರ್ತ್ ಮಾರ್ಕ್!
ಇದು ಮಂದಾರ ಸಾಗರ ಅನ್ನೋ ಕ್ರಿಯೇಟಿವ್ ಹೆಣ್ಣುಮಗಳ ಕೆಲವು ವರ್ಷಗಳ ಹಿಂದಿನ ಕಥೆ. ಮಂದಾರ ಮಲೆನಾಡಿನ ಹುಡುಗಿ. ಶಿವಮೊಗ್ಗ ಜಿಲ್ಲೆ ಸಾಗರದವರು. ವೃತ್ತಿಯಲ್ಲಿ ಪತ್ರಕರ್ತೆ. ಈಕೆಯ ಬಗ್ಗೆ 'ಹ್ಯೂಮನ್ಸ್ ಆಫ್ ಬಾಂಬೆ' ಸುದ್ದಿ ಮಾಡಿದೆ. ಹುಟ್ಟಿನೊಂದಿಗೆ ಕೆನ್ನೆ ಮೇಲೆ ಅಷ್ಟಗಲದ ಮಚ್ಚೆಯನ್ನು ಈಗ ಯಾವುದೇ ಹಿಂಜರಿಕೆ ಇಲ್ಲದೇ ಹೆಮ್ಮೆಯಿಂದ ತೋರಿಸುತ್ತಾರೆ. ಆದರೆ ಒಂದು ಕಾಲದಲ್ಲಿ ಈ ಮಜ್ಜೆ ಇವರ ಹಲವು ರಾತ್ರಿಗಳ ನಿದ್ರೆ ಕಸಿದಿತ್ತು.
ಹೆಂಡ್ತಿಯನ್ನು ಯಾಕೆ ಅಷ್ಟು ಲವ್ ಮಾಡ್ತೀರಿ ಅಂತ ಯುವತಿ ಕೇಳಿದಾಗ ಹೀಗೆ ಹೇಳೋದಾ ಬಿಗ್ಬಾಸ್ ವಿನಯ್?
ಬಂಧು, ಮಿತ್ರರು ಸಿಕ್ಕ ಸಿಕ್ಕವರೆಲ್ಲ ಈ ಮಚ್ಚೆ ಬಗ್ಗೆ ಸಲಹೆ ಕೊಡುವವರೇ. ಅದನ್ನು ಕೇಳಿ ಕೇಳಿ ಮನೆಯವರು ಈ ಹುಡುಗಿಗೆ ಹನ್ನೆರಡು ವರ್ಷ ಇದ್ದಾಗಲೇ ಕೆನ್ನೆಯ ಮೇಲಿದ್ದ ಮಚ್ಚೆಯನ್ನು ಆಪರೇಶನ್ ಮೂಲಕ ತೆಗೆದು ಹಾಕಲು ಹೊರಟಿದ್ದರು. ಆದರೆ ವೈದ್ಯರು, ಒಂದು ವೇಳೆ ಹಾಗೆ ಮಾಡಿದರೆ ಅದು ಕ್ಯಾನ್ಸರ್‌ಗೆ ತಿರುಗುವ ಸಾಧ್ಯತೆ ಇದೆ ಎಂದ ಕಾರಣ ಅದು ಸಾಧ್ಯವಾಗಲಿಲ್ಲ. ಆ ಬರ್ತ್ ಮಾರ್ಕ್ ಈಕೆಗೆ ಇಷ್ಟ ಇಲ್ಲದಿದ್ದರೂ ಈಕೆಯ ಜೊತೆಗೇ ಬರುತ್ತಿತ್ತು.
ಒಂದು ಟೈಮಯಲ್ಲಿ ಯಾರೋ 'ನೀನ್ಯಾಕೆ ಲೇಸರ್ ಮೂಲಕ ಇದನ್ನು ರಿಮೂವ್ ಮಾಡಬಾರದು' ಅಂತ ಕೇಳಿದರು. ಈಕೆಗೂ ಅದರಿಂದ ಮುಕ್ತಿ ಬೇಕಿತ್ತು. ಅದಕ್ಕೆ ಸಮ್ಮತಿಸಿ ಈಕೆ ಮಚ್ಚೆಯನ್ನು ಲೇಸರ್ ಚಿಕಿತ್ಸೆ ಮೂಲಕ ತೆಗೆಸಲು ಮುಂದಾದರು. ಆದರೆ ಲೇಸರ್ ಚಿಕಿತ್ಸೆಗೆ ಒಳಗಾದರೂ ಈ ಮಚ್ಚೆ ಹೋಗಲಿಲ್ಲ. ಅಷ್ಟೊತ್ತಿಗೆ ಇದೆಲ್ಲದರಿಂದ ಬೇಸತ್ತು ಹೋಗಿದ್ದ ಮಂದಾರ ಅದನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಲು ಮುಂದಾದರು.
ಎಂದಿನ ಸೀರಿಯಲ್ ಕಥೆಯ ಮಾದರಿಯಲ್ಲೇ ಆ ಟೈಮಲ್ಲಿ ವಿಲನ್‌ಗಳಂತೆ ಕಾಡಿದ್ದು ರಿಲೇಟಿವ್ಸ್. 'ಈ ಮಚ್ಚೆ ಇದ್ದರೆ ನಿನ್ನನ್ನು ಯಾರು ಮದುವೆ ಆಗುತ್ತಾರೆ?' ಎಂಬುದು ಅವರ ಪ್ರಶ್ನೆ. 'ನನ್ನನ್ನು ಪ್ರೀತಿಸುವ ವ್ಯಕ್ತಿ ಖಂಡಿತಾ ನನ್ನ ಬದುಕಿನಲ್ಲಿ ಬರುತ್ತಾನೆ' ಎನ್ನುತ್ತಿದ್ದೆ.
ಕರಿಮಣಿ ಮಾಲಿಕನಿಗೆ ಇರಬೇಕಾದ ಸ್ಪೆಷಲ್ ಕ್ವಾಲಿಫಿಕೇಶನ್ಸ್ ಹೇಳ್ತಿದ್ದಾರೆ, ತಿಳ್ಕೊಳ್ಳಿ!
ಆ ಮಾತು ನಿಜವಾದದ್ದು 2019ರಲ್ಲಿ ನಾನು ಸಂಜಯ್‌ನನ್ನು ಭೇಟಿಯಾದಾಗ. ಅವರು ನನ್ನ ಫ್ರೆಂಡ್‌ನ ಅಣ್ಣ. ಒಮ್ಮೆ ಎಲ್ಲರೂ ಜೊತೆಯಾಗಿ ಟ್ರಿಪ್‌ಗೆ ಹೋದಾಗ ಅವರೂ ಬರುತ್ತಾರೆ. ಟ್ರಿಪ್ ನಿಂದ ಬಂದಮೇಲೆ ಇಬ್ಬರೊಳಗೂ ಏನೋ ಬದಲಾವಣೆ ಅರಿವಿಗೆ ಬರುತ್ತದೆ. ಇಬ್ಬರ ನಡುವೆ ಮೆಸೇಜ್ ಎಕ್ಸ್‌ಚೇಂಚ್ ಶುರುವಾಗುತ್ತದೆ. ಆತ ಅಪ್ಪಿತಪ್ಪಿಯೂ ಈಕೆಯ ಮಚ್ಚೆಯ ಬಗ್ಗೆ ಒಂದು ಮಾತೂ ಕೇಳಲಿಲ್ಲ. ಹುಡುಗಿಗೆ ಆತನ ಬಗ್ಗೆ ಏನೋ ಕಂಫರ್ಟ್ ಫೀಲ್. ತನ್ನ ಬರ್ತ್ ಮಾರ್ಕ್ ಜೊತೆಗೇ ಆತನ ಜೊತೆಗೆ ಯಾವ ಹಿಂಜರಿಕೆಯೂ ಇಲ್ಲದೆ ಇರಬಲ್ಲೆ ಎಂಬ ಭಾವ. ಸುಮಾರು ಎರಡು ತಿಂಗಳ ಚಾಟಿಂಗ್ ಬಳಿಕ ತಾವು ಪ್ರೀತಿಯಲ್ಲಿ ಬಿದ್ದಿರುವುದು ಇಬ್ಬರಿಗೂ ಗೊತ್ತಾಗುತ್ತದೆ. ಆದರೆ ಅದನ್ನು ಬಾಯಿಬಿಟ್ಟು ಹೇಳುವುದು ಹುಡುಗಿಯೂ. ಆ ಹುಡುಗ ಕೊಂಚ ನಾಚಿಕೊಂಡೇ ತನ್ನ ಪ್ರೇಮವನ್ನೂ ಒಪ್ಪಿಕೊಳ್ಳುತ್ತಾರೆ.
ಇದೆಲ್ಲ ಫ್ಯಾಮಿಲಿಗೆ ಗೊತ್ತಾಗಿ, ಇವರಿಬ್ಬರೂ ಕುಟುಂಬದವರನ್ನು ಒಪ್ಪಿಸಿ ಮದುವೆ ಆಗಿದ್ದು ಎರಡು ವರ್ಷಗಳ ಕೆಳಗೆ.
'ಮದುವೆ ಟೈಮಲ್ಲಿ ಮೇಕಪ್ ಮಾಡುವವರಿಗೆ ನನ್ನ ಮಚ್ಚೆಯನ್ನು ಮರೆಮಾಡಬೇಡಿ' ಅನ್ನೋ ಮಾತನ್ನು ಮಂದಾರ ಹೇಳಿದ್ದರು. ಸದ್ಯಕ್ಕೆ ಈ ಜೋಡಿ ಮದುವೆಯಾಗಿ ಹೊಸ ಬದುಕಿನಲ್ಲಿ ಹುರುಪಿನಿಂದ ಹೆಜ್ಜೆ ಹಾಕುತ್ತಿದ್ದಾರೆ.