
ಲಖನೌ(ಜೂ.18) ಮದುವೆಯಾಗಿ ಪತಿಯೊಂದು ಸಂಸಾರ ಸಾಗಿಸಬೇಕಿದ್ದ ಪತ್ನಿ, ಮತ್ತೊಬ್ಬನ ಜೊತೆ ಆಪ್ತ ಸಮಯ ಕಳೆಯಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಕಳೆದ ಹಲವು ದಿನಗಳಿಂದ ಪತ್ನಿಯ ನಡೆ ಅನುಮಾನ ಮೂಡಿಸಿದೆ. ಹೀಗಾಗಿ ಪತ್ನಿಯ ನಾಟಕ ಪತ್ತೆ ಹಚ್ಚಲು ಗಂಡ ರಹಸ್ಯವಾಗಿ ಹಿಂಬಾಲಿಸಲು ಆರಂಭಿಸಿದ್ದಾನೆ. ಹೀಗೆ ಪತ್ನಿ ಓಯೋ ರೂಮ್‌ನಲ್ಲಿ ತನ್ನ ಗಳೆಯನ ಜೊತೆ ಆಪ್ತ ಸಮಯ ಕಳೆಯವಾಗಲೇ ಪತಿ ಎಂಟ್ರಿಕೊಟ್ಟಿದ್ದಾನೆ. ಪತಿಯಿಂದ ತಪ್ಪಿಸಿಕೊಳ್ಳಲು ಓಯೋ ಕೊಠಡಿಯ ಕಟಿಕಿಯಿಂದ ಹೊರಬಂದು ಮತ್ತೊಂದು ಕಟ್ಟದ ಮೇಲಿನಿಂದ ಜಿಗಿದು ಪತ್ನಿ ಪರಾರಿಯಾದ ಘಟನೆ ಉತ್ತರ ಪ್ರದೇಶದ ಬರೌತ್ ಬಳಿ ನಡೆದಿದೆ.
ಕೆಲ ವರದಿಗಳ ಪ್ರಕಾರ ಪತಿಯೊಂದಿಗೆ ಸಮಯ ಕಳಯುವುದಕ್ಕಿಂತ ಈಕೆ ತನ್ನ ಗೆಳೆಯನ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಳು. ಪತಿ ಒಂದೆರೆಡು ಬಾರಿ ಪತ್ನಿಯ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ. ಇದು ರಣಾಂಗಣಕ್ಕೆ ಕಾರಣವಾಗಿತ್ತು. ಹೀಗಾಗಿ ಪತ್ನಿ ಕುರಿತು ಮಾತಾಡುವುದು ನಿಲ್ಲಿಸಿದ್ದ. ಆದರೆ ಪತ್ನಿ ನಡೆ ಮತ್ತಷ್ಟು ಅನುಮಾನ ಮೂಡಿಸಿದ ಕಾರಣ, ಪತ್ನಿ ಅಸಲಿಯತ್ತು ಪತ್ತೆ ಹಚ್ಚಲು ಕೆಲ ದಿನಗಳಿಂದ ಹಿಂಬಾಲಿಸಲು ಶುರು ಮಾಡಿದ್ದಾನೆ. ಈ ವೇಳ ತನ್ನ ಅನುಮಾನ ನಿಜವಾಗಿದೆ. ಪತ್ನಿ ಮತ್ತೊಬ್ಬನ ಜೊತೆ ಹೊಟೆಲ್ ರೂಂಗಳಲ್ಲಿ ಕಳೆಯುತ್ತಿರುವುದು ಪತ್ತೆಯಾಗಿದೆ.
ಪೊಲೀಸ್ ಜೊತೆ ಹೊಟೆಲ್‌ಗೆ ಆಗಮಿಸಿದ ಪತಿ ಹಾಗೂ ಕುಟುಂಬಸ್ಥರು
ಪತ್ನಿ ಆಕೆಯ ಗೆಳೆಯನ ಜೊತೆ ಕಳೆಯಲು ಓಯೋ ರೂಂಗೆ ತೆರಳಿದ್ದಾಳೆ. ಈ ಮಾಹಿತಿ ತಿಳಿದುಕೊಂಡ ಪತಿ, ತನ್ನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ. ಪ್ರಮುಖವಾಗಿ ಪತ್ನಿಯ ತಂದೆ ತಾಯಿಗೂ ಮಾಹಿತಿ ನೀಡಲಾಗಿದೆ. ಇದೇ ವೇಳೆ ಪತ್ನಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ. ಬಳಿಕ ಪತಿ, ಪತ್ನಿಯ ತಂದೆ -ತಾಯಿ ಹಾಗೂ ಪೊಲೀಸರು ಪತ್ನಿ ತಂಗಿದ್ದ ಓಯೋ ರೂಂಗೆ ದಾಳಿ ಮಾಡಿದ್ದಾರೆ.
12 ಅಡಿ ಎತ್ತರದಿಂದ ಜಿಗಿದು ಪರಾರಿ
ಪತ್ನಿ, ಪೊಲೀಸರು, ಪತ್ನಿ ಪೋಷಕರು ಹೊಟೆಲ್ ರೂಂ ಬಾಗಿಲು ತಟ್ಟಿದಾಗ ಪತ್ನಿಗೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದೆ. ಎಲ್ಲರಿಂದ ತಪ್ಪಿಸಿಕೊಳ್ಳಲು ಬೇರೆ ದಾರಿ ಇರಲಿಲ್ಲ. ಹೀಗಾಗಿ ಗೆಳೆಯನಿಗೆ 5 ನಿಮಿಷ ಬಾಗಿಲು ತೆರೆಯದಂತೆ ಸೂಚಿಸಿದ ಈಕೆ, ಮುಖವನ್ನು ದುಪ್ಪಟ್ಟ ಮೂಲಕ ಮುಚ್ಚಿಕೊಂಡು ಓಯೋ ರೂಂ ಕಿಟಕಿ ಮೂಲಕ ಹೊರಬಂದಿದ್ದಾಳೆ. ಬಳಿಕ ಮತ್ತೊಂದು ಸಣ್ಣ ಕಟ್ಟಟದ ಮೆಲ್ಜಾವಣಿಯಿಂದ ಕೆಳಕ್ಕೆ ಜಿಗಿದಿದ್ದಾಳೆ. ಬರೋಬ್ಬರಿ 12 ಅಡಿ ಎತ್ತರದಿಂದ ಕೆಳಕ್ಕೆ ಜಿಗಿದ ಈಕೆ ಸ್ಥಳದಿಂದ ಪರಾರಿಯಾಗಿದ್ದಾಳೆ.
ಪೊಲೀಸರು ಬಾಗಿಲು ತಟ್ಟಿ ಒಳ ಪ್ರವೇಶಿಸುವ ಮೊದಲು ಈಕೆ ಪರಾರಿಯಾಗಿದ್ದಾಳೆ. ಪತ್ನಿ ಹಾಗೂ ಪೊಲೀಸರು ಓಯೋ ರೂಂ ಒಳ ಪ್ರವೇಶಿಸಿ ಪತ್ನಿಯ ಗೆಳೆಯನನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಪತ್ನಿಯ ಪರ್ಸ್ ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇತ್ತ ಪತ್ನಿಯ ಕಪಟ ನಾಟಕ ಬಯಲಾಗಿದೆ.
ವಿಡಿಯೋ ರೆಕಾರ್ಡ್ ಮಾಡಿದ ಕುಟುಂಬಸ್ಥರು
ಪತಿ ಕುಟುಂಬಸ್ಥರು ಈಕೆ ಜಿಗಿದು ಪರಾರಿಯಾಗುತ್ತಿರುವ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ. ಇತ್ತ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪತ್ನಿ ಪೋಷಕರು ಈ ಘಟನೆಯಿಂದ ಆಘಾತಗೊಂಡಿದ್ದಾರೆ. ಇಷ್ಟೇ ಅಲ್ಲ ರಾಜಿ ಪಂಚಾಯಿತಿ ಮಾಡಿಸಲು ಮುಂದಾಗಿದ್ದಾರೆ. ಆದರೆ ಪತಿ ಹಾಗೂ ಆತನ ಕುಟುಂಬಸ್ಥರು ಈ ರೀತಿ ವಂಚನೆ ಮಾಡಿದ ಪತ್ನಿ ಬೇಕಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.