ಮುನಿಸಿಕೊಂಡ ಯಜಮಾನ್ರ ಮನಸ್ಸು ಗೆಲ್ಲೋದು ಹೇಗೆ?

By Suvarna News  |  First Published Mar 15, 2020, 1:35 PM IST

ಅವರು ಸಿಟ್ಟಾದರೆ ನೀವೂ ಸಿಟ್ಟು ಮಾಡಿಕೊಳ್ಳೋದರಲ್ಲಿ ಅರ್ಥವಿಲ್ಲ. ಬದಲಿಗೆ ಅವರು ಸಿಟ್ಟು ಮಾಡಿಕೊಂಡಾಗ ನೀವು ನಿರ್ಲಕ್ಷಿಸಿಬಿಡಿ. ಆಗ ಅವರ ಸಿಟ್ಟು ಕಂಟ್ರೋಲ್ ಗೆ ಬರುತ್ತದೆ. ನೀವು ಅವರ ಸಿಟ್ಟಿಗೆ ಭಯ ಬಿದ್ದರೆ ಅವರ ಅಹಂ ಹೆಚ್ಚಾಗಿ ನಿಮ್ಮ ಮೇಲೆ ದೌರ್ಜನ್ಯ ಮಾಡಬಹುದು. ಸುಮ್ಮನೇ ನೆಗ್ಲೆಕ್ಟ್ ಮಾಡಿದರೆ ಸಿಟ್ಟು ಮಾಡುವ ಮೊದಲೂ ಅವರು ಯೋಚಿಸುತ್ತಾರೆ. ಸಿಟ್ಟಲ್ಲಿ ಒಂದೇಟು ಹೊಡೆದರೆ, ಹಲ್ಲೆ ಮಾಡಿದರೆ ಮಾತ್ರ ಈ ಸಮಸ್ಯೆಯನ್ನು ಅಲ್ಲಿಗೇ ಬಿಡಬೇಡಿ. ನಿಮ್ಮ ಆತ್ಮಗೌರವಕ್ಕೆ ಎಂದೂ ಧಕ್ಕೆಯಾಗದ ಹಾಗೆ ನೋಡಿಕೊಳ್ಳಿ.


ಬಹಳ ಪ್ರಸಿದ್ಧವಾದ ಒಂದು ಕತೆ ಇದೆ. ದೇವರು ಮೊದಲು ಹೆಣ್ಣನ್ನು ಸೃಷ್ಟಿಸಿದನಂತೆ. ಆಗ ಮೃಗಗಳ ಕಾಟ ಬಹಳ ಇತ್ತು. ಅವಳೊಬ್ಬಳಿಗೇ ಬದುಕೋದು ಕಷ್ಟ ಆಯ್ತು. ಅವಳು ಬ್ರಹ್ಮನ ಬಳಿ ಬಂದು ತನಗಾಗುವ ತೊಂದರೆ ಹೇಳಿಕೊಂಡಳು. ಆಗ ಬ್ರಹ್ಮ ತಲೆ ಓಡಿಸಿ ಇನ್ನೊಂದು ಜೀವಿಯನ್ನು ಸೃಷ್ಟಿ ಮಾಡಿದ. ಅದನ್ನು ಪುರುಷ ಎಂದು ಕರೆದ. ಆಮೇಲೆ ಹೆಣ್ಣನ್ನು ಕರೆದು ಹೇಳಿದ, 'ನೋಡು, ನಿನ್ನ ರಕ್ಷಣೆ ಈತನನ್ನು ಸೃಷ್ಟಿಸಿದ್ದೇನೆ. ಅವನ ಸ್ವಭಾವದ ಬಗ್ಗೆ ನಿನಗೊಂದು ಮಾತು ಹೇಳಬೇಕು. ಇವನೊಬ್ಬ ಹುಂಬ. ನಿನ್ನಷ್ಟು ಬುದ್ಧಿವಂತನಲ್ಲ, ಸ್ವಲ್ಪ ಮೂರ್ಖನೂ ಹೌದು. ತಾನು ಬಲಿಷ್ಠ ಅನ್ನುವ ಅಹಂಕಾರ ಇದೆ. ಆದರೆ ನಿನಗೆ ಇದು ಸಮಸ್ಯೆ ಆದರೆ ಅವನನ್ನು ಸ್ವಲ್ಪ ಹೊಗಳಿ ಬಿಡು. ಕೂಡಲೇ ಅವನ ಸಿಟ್ಟೆಲ್ಲ ಕರಗಿಬಿಡುತ್ತದೆ. ಅವನ ಅಹಂಕಾರ ಸ್ವಲ್ಪ ಕಡಿಮೆ ಮಾಡಬೇಕು ಅಂದರೆ ನಿರ್ಲಕ್ಷ್ಯ ಮಾಡಿ ಬಿಡು. ಇದು ಅವನ ಅಹಂಕಾರ ಮಣಿಸುತ್ತದೆ' ಅಂತ. ಹೆಣ್ಣು ಖುಷಿಯಿಂದ ಒಪ್ಪಿ ಅವನ ಜೊತೆಗೆ ಸಂಸಾರ ಮಾಡುತ್ತ ತನ್ನ ಸಂತತಿಯನ್ನು ಬೆಳೆಸುತ್ತಾಳೆ ಅನ್ನುವಲ್ಲಿಗೆ ಕತೆ ಮುಗಿಯುತ್ತದೆ. ಗಂಡನನ್ನು ಹೇಗೆ ಗೆಲ್ಲಬೇಕು ಅನ್ನುವುದಕ್ಕೆ ಉತ್ತರವನ್ನು ಇಲ್ಲಿ ಭಗವಂತನೇ ಹೇಳಿದ್ದಾನೆ.

 

Latest Videos

undefined

#FeelFree ಯಾವುದು ಸೂಕ್ತ, ಮೊದಲ ರಾತ್ರಿಯೋ ಎರಡನೇ ರಾತ್ರಿಯೋ?

- ಯಜಮಾನ್ರನ್ನು ಹೊಗಳೋದಕ್ಕೆ ಲೆಕ್ಕಾಚಾರ ಬೇಡ

ಹೆಚ್ಚಿನವರಿಗೆ ಪತಿ ದೇವರನ್ನು ಹೊಗಳೋದಕ್ಕೆ ಕೊಂಚ ಹಿಂಜರಿಕೆ ಇರುತ್ತದೆ. ಹೊಗಳಿದ್ರೆ ಎಲ್ಲಿ ಮೇಲಕ್ಕೇರಿ ತನ್ನ ಮಾತು ಕೇಳದೇ ಹೋಗ್ತಾರೋ ಅನ್ನುವ ಭಯ. ಆದರೆ ನಿಮ್ಮ ಈ ಮನಸ್ಥಿತಿ ಅರ್ಥವಿಲ್ಲದ್ದು. ಪತಿಯ ಒಳ್ಳೆಯ ಗುಣಗಳನ್ನು ಹೊಗಳಿದರೆ ಅವರಿಗೆ ನಿಮ್ಮ ಬಗ್ಗೆ ಪ್ರೀತಿ ಹೆಚ್ಚಾಗುತ್ತದೆ. ಜಗತ್ತೆಲ್ಲ ಏನಂದುಕೊಂಡರೇನು, ಪತ್ನಿಯ ಕಣ್ಣಲ್ಲಿ ಒಳ್ಳೆಯವನು ಅನಿಸಿಕೊಂಡಿದ್ದೀನಲ್ಲ ಅನ್ನುವ ನೆಮ್ಮದಿ ಇರುತ್ತದೆ. ಅವರ ಕೀಳರಿಮೆ ಕಡಿಮೆಯಾಗುತ್ತದೆ. ಅವರಿಗೆ ಆತ್ಮವಿಶ್ವಾಸ ಬೆಳೆಯುತ್ತದೆ. ಹೀಗಾದಾಗ ಕೆಲಸದಲ್ಲೂ ಮನೆಯಲ್ಲೂ ಅವರು ನಿಮ್ಮ ಹೊಗಳಿಕೆಗೆ ತಕ್ಕಂತೇ ಇರಲು ಪ್ರಯತ್ನಿಸುತ್ತಾರೆ. ಇದರಿಂದ ನಿಮ್ಮ ಗಂಟೇನೂ ಹೋಗುವುದಿಲ್ಲ. ಯಜಮಾನ್ರು ಸಿಟ್ಟಲ್ಲಿದ್ದಾಗ ಅವರನ್ನು ಓಲೈಸಲು ಇದೊಂದು ಬೆಸ್ಟ್ ಮಾರ್ಗ.

 

ದಾಂಪತ್ಯ ಉಸಿರುಕಟ್ಟಿಸದಂತೆ ಕಾಯ್ದುಕೊಳ್ಳುವುದು ಹೇಗೆ?

 

- ಸಿಟ್ಟಿಗಿಂತ ಕಣ್ಣೀರು ಹೆಚ್ಚು ಪವರ್‌ಫುಲ್

ಗಂಡ ಸಿಟ್ಟಾದಾಗ ನೀವು ಸಿಟ್ಟಾದ್ರೆ ಇಬ್ಬರಿಗೂ ಲಾಭವಿಲ್ಲ. ನಿಮ್ಮ ಕಣ್ಣೀರು, ಸಪ್ಪೆ ಮುಖ ಅವರ ಸಿಟ್ಟನ್ನು ಜರ್ರನೆ ಇಳಿಸಬಲ್ಲದು. ಈ ಟ್ರಿಕ್ ಎಷ್ಟೋ ಸಂಬಂಧಗಳನ್ನು ಉಳಿಸಿದೆ. ಕಣ್ಣೀರಿಗೆ ಕರಗದ ಗಂಡಸರು ಕಡಿಮೆ. ಅವರು ಸಿಟ್ಟಾದಾಗ ನೀವೂ ಸಿಟ್ಟಾದರೆ ಅವರು ಸೋಲಲ್ಲ. ಅವರನ್ನು ಸೋಲಿಸಬೇಕು ಅಂದರೆ ಒಂದು ಹನಿ ಕಣ್ಣೀರು ಸಾಕು,

 

- ಮನೆಯನ್ನು ನೀಟ್ ಆಗಿಡಿ.

ಮನೆಯಲ್ಲಿ ಎಲ್ಲೆಂದರಲ್ಲಿ ವಸ್ತುಗಳು ಚೆಲ್ಲಾಡಿಕೊಂಡಿದ್ದರೆ ಮನಸ್ಸು ಕೆಟ್ಟು ಹೋಗುತ್ತದೆ. ಅವರು ಕೆಲಸ ಮಾಡಿ ದಣಿದು ಬರುವಾಗ ಮನಸ್ಸಿಗೆ ಮುದ ನೀಡುವ ವಾತಾವರಣ ಮನೆಯಲ್ಲಿರಬೇಕು. ಆಗ ಅವರು ಖುಷಿಯಿಂದಿರುತ್ತಾರೆ. ಮನೆಯಲ್ಲಿ ವಸ್ತುಗಳೆಲ್ಲ ಹರಡಿಕೊಂಡಿದ್ದರೆ ಇದಕ್ಕಿಂತ ಆಫೀಸ್, ಫ್ರೆಂಡ್ಸೇ ವಾಸಿ ಅಂತ ಅವರು ಮನೆಯ ಕಡೆ ಬರೋದನ್ನು ಲೇಟ್ ಮಾಡುವ ಸಾಧ್ಯತೆ ಇರುತ್ತದೆ.

 

- ಅವರ ಸಿಟ್ಟಿಗೆ ನಿಮ್ಮ ನಿರ್ಲಕ್ಷ್ಯವಿರಲಿ.

ಅವರು ಸಿಟ್ಟಾದರೆ ನೀವೂ ಸಿಟ್ಟು ಮಾಡಿಕೊಳ್ಳೋದರಲ್ಲಿ ಅರ್ಥವಿಲ್ಲ. ಬದಲಿಗೆ ಅವರು ಸಿಟ್ಟು ಮಾಡಿಕೊಂಡಾಗ ನೀವು ನಿರ್ಲಕ್ಷಿಸಿಬಿಡಿ. ಆಗ ಅವರ ಸಿಟ್ಟು ಕಂಟ್ರೋಲ್ ಗೆ ಬರುತ್ತದೆ. ನೀವು ಅವರ ಸಿಟ್ಟಿಗೆ ಭಯ ಬಿದ್ದರೆ ಅವರ ಅಹಂ ಹೆಚ್ಚಾಗಿ ನಿಮ್ಮ ಮೇಲೆ ದೌರ್ಜನ್ಯ ಮಾಡಬಹುದು. ಸುಮ್ಮನೇ ನೆಗ್ಲೆಕ್ಟ್ ಮಾಡಿದರೆ ಸಿಟ್ಟು ಮಾಡುವ ಮೊದಲೂ ಅವರು ಯೋಚಿಸುತ್ತಾರೆ. ಸಿಟ್ಟಲ್ಲಿ ಒಂದೇಟು ಹೊಡೆದರೆ, ಹಲ್ಲೆ ಮಾಡಿದರೆ ಮಾತ್ರ ಈ ಸಮಸ್ಯೆಯನ್ನು ಅಲ್ಲಿಗೇ ಬಿಡಬೇಡಿ. ನಿಮ್ಮ ಆತ್ಮಗೌರವಕ್ಕೆ ಎಂದೂ ಧಕ್ಕೆಯಾಗದ ಹಾಗೆ ನೋಡಿಕೊಳ್ಳಿ.

click me!