#Feelfree: ವಿವಾಹೇತರ ಸಂಬಂಧದ ಬಯಕೆ, ನಿಭಾಯಿಸೋದು ಹೇಗೆ?

Suvarna News   | Asianet News
Published : Apr 23, 2021, 02:15 PM IST
#Feelfree: ವಿವಾಹೇತರ ಸಂಬಂಧದ ಬಯಕೆ, ನಿಭಾಯಿಸೋದು ಹೇಗೆ?

ಸಾರಾಂಶ

ಪತಿಗೂ ವಿವಾಹೇತರ ಸಂಬಂಧದ ಬಯಕೆ, ಪತ್ನಿಗೂ ಅಂಥದೇ ಸಂಬಂಧದ ಆಸೆ. ಇದೇಕೆ ಹೀಗೆ? ಇದನ್ನು ಮೀರೋದು ಹೇಗೆ?

ಪ್ರಶ್ನೆ: ನಾನು 38 ವರ್ಷದ ವಿವಾಹಿತ. ಪತ್ನಿಗೆ 35 ವರ್ಷ. ಮಕ್ಕಳಿಲ್ಲ. ನಮ್ಮ ದಾಂಪತ್ಯದಲ್ಲಿ ಸೆಕ್ಸ್ ಸುಖಕ್ಕೇನೂ ಕೊರತೆಯಿಲ್ಲ. ನನಗೆ ವಿವಾಹಪೂರ್ವ ಸಂಬಂಧವಿತ್ತು. ವಿವಾಹದ ನಂತರ ಅದನ್ನು ಬಿಟ್ಟಿದ್ದೇನೆ. ಆದರೆ ಇತ್ತೀಚೆಗೆ ನನ್ನ ಪತ್ನಿ, ಅಕೆಯ ಕೊಲೀಗ್‌ ಜೊತೆ ಇದ್ದಕ್ಕಿದ್ದಂತೆ ಒಂದು ಬಾರಿ ದೈಹಿಕ ಸಂಬಂಧ ಪಡೆದಳು. ಆದರೆ ಇದನ್ನು ನನಗೆ ಪ್ರಾಮಾಣಿಕವಾಗಿ ತಿಳಿಸಿ, ತಪ್ಪೊಪ್ಪಿಕೊಂಡಳು ಕೂಡ. ತನಗೆ ಇದನ್ನು ಮುಂದುವರಿಸುವ ಇಚ್ಛೆ ಇಲ್ಲ ಅಂತಲೂ ತಿಳಿಸಿದಳು. ಆದರೆ ಇತ್ತೀಚೆಗೆ, ನೀನೂ ಇನ್ಯಾರ ಜೊತೆಗಾದರೂ ಸಂಬಂಧ ಇಟ್ಟುಕೋ ಎಂದು ದುಂಬಾಲು ಬೀಳುತ್ತಿದ್ದಾಳೆ. ಬೇಕಿದ್ದರೆ ನನ್ನ ಗೆಳತಿಯನ್ನೇ ಸೆಟ್‌ ಮಾಡಿ ಕೊಡುತ್ತೇನೆ ಎಂದೂ ಹೇಳಿದ್ದಾಳೆ. ಈಕೆಯ ಈ ಒತ್ತಡದ ಹಿಂದಿರುವ ರಹಸ್ಯವೇನು ಎಂದು ಹುಡುಕಿದರೆ, ಈಕೆ ಮತ್ತೆ ತನ್ನ ಕೊಲೀಗ್ ಜೊತೆ ದೇಹ ಸಂಪರ್ಕ ಇಟ್ಟುಕೊಳ್ಳಲು ಮುಂದಾಗಿದ್ದಾಳೆ ಎಂದು ತಿಳಿಯಿತು. ಆಕೆಯ ಗಿಲ್ಟ್‌ನಿಂದ ತಪ್ಪಿಸಿಕೊಳ್ಳಲು ನನಗೆ ಇನ್ನೊಂದು ಸಂಬಂಧ ಬೆಳೆಸಲು ಹೇಳುತ್ತಿದ್ದಾಳೆ. ನನಗೂ ಇದರಲ್ಲಿ ತಪ್ಪೇನಿದೆ ಅನಿಸಿತು. ಆದರೂ ಗೊಂದಲ. ಏನು ಮಾಡಲಿ?

ಉತ್ತರ: ಹೈ ಫೈ ಸೊಸೈಟಿಗಳಲ್ಲಿ ಇಂಥ ಸಂಬಂಧಗಳು ಸಾಮಾನ್ಯ ಎಂಬ ತಪ್ಪು ತಿಳುವಳಿಕೆ ಅನೇಕರಲ್ಲಿ ಇದೆ. ಹಾಗೇನೂ ಇಲ್ಲ. ಅಲ್ಲೂ ದಾಂಪತ್ಯಗಳಿಗೆ ಹೆಚ್ಚಿನ ಮೌಲ್ಯ ಇದ್ದೇ ಇದೆ. ಎಲ್ಲೋ ಕೆಲವರು ಮಾತ್ರ ದಾಂಪತ್ಯದ ಮೌಲ್ಯಗಳಿಗೆ ಕಡಿಮೆ ಪ್ರಾಶಸ್ತ್ಯ ನೀಡಿ, ದೈಹಿಕ ಸಂಬಂಧಗಳನ್ನೇ ಎತ್ತಿ ಹಿಡಿಯುತ್ತಾರೆ. ಆದರೆ ನಾಗರಿಕ ಸಮಾಜ ಇದನ್ನು ಮಾನ್ಯ ಮಾಡುವುದಿಲ್ಲ. ನಾಗರಿಕ ಸಮಾಜ ಅಂತ ಯಾಕೆ ಹೇಳುತ್ತೇನೆ ಅಂದರೆ, ನಮಗೆಲ್ಲರಿಗೂ ಒಂದು ಕುಟುಂಬ, ದಾಂಪತ್ಯದಲ್ಲಾದರೆ ಅದನ್ನು ಹೊಂದಿಕೊಂಡಿರುವ ಹೆತ್ತವರ ಇನ್ನೆರಡು ಕುಟುಂಬಗಳು, ಮಕ್ಕಳ, ಮೊಮ್ಮಕ್ಕಳು- ಹೀಗೆ ವ್ಯವಸ್ಥೆ ಇರುತ್ತದೆ. ಇದಲ್ಲದೆ ಗಂಡ- ಹೆಂಡತಿಯ ಕಚೇರಿ ಸಂಬಂಧಗಳೂ ಇರುತ್ತವೆ. ಮದುವೆ ಮಾಡುವುದು, ಗಂಡ- ಹೆಂಡತಿ ಎಂದು ಮಾಡುವುದು ಸಮಾಜ ಹಾಗೂ ಕಾನೂನು ಕಟ್ಟಳೆಗಳಿಗೆ ಮಾನ್ಯವಾದ ರೀತಿಯಲ್ಲಿ ಲೈಂಗಿಕ ಸುಖ ಪಡೆಯಲಿ ಎಂದೇ. ಆದರೆ ಅದನ್ನು ಯಾರೂ ಬಾಯಿಬಿಟ್ಟು ಹೇಳುವುದಿಲ್ಲ. 

#Feelfree: ಬೆಡ್‌ರೂಮ್‌ನಲ್ಲಿ ಸರಸ ಹೆಚ್ಚಿಸೋಕೆ ನಿಲುಗನ್ನಡಿ! ...

ನೀವಿಬ್ಬರೂ ಸೆಕ್ಸ್‌ ಸುಖ ಪಡೆಯುತ್ತಿದ್ದೀರಿ ಎಂದು ಹೇಳಿದ್ದೀರಿ. ಈಗ ಅದಕ್ಕಿಂತ ಹೆಚ್ಚಿನದನ್ನು ನೀವು ಬಯಸುತ್ತಿದ್ದೀರಿ. ಅಂದರೆ ನಿಮ್ಮಿಬ್ಬರ ಸೆಕ್ಸ್ ಚಟುವಟಿಕೆ ನಿಮಗೆ ಬೋರ್‌ ಹೊಡೆಸಿದೆ ಎಂದರ್ಥ. ಇದಕ್ಕೆ ಪರಿಹಾರ ಇನ್ನೊಬ್ಬರೊಂಧಿಗೆ ಹಾಸಿಗೆ ಸಂಬಂಧ ಹೊಂದುವುದಲ್ಲ. ಇದಕ್ಕೆ ಕಾನೂನು ಆಕ್ಷೇಪವನ್ನೇನೂ ಹೇಳುವುದಿಲ್ಲ. ಗಂಡ ಅಥವಾ ಹೆಂಡತಿಯ ಎರಡನೇ ಸಂಬಂಧ, ವಿಚ್ಚೇದನಕ್ಕೆ ಪ್ರಬಲ ಕಾರಣವಾಗುವುದೂ ಇಲ್ಲ. ಹಾಗೆಂದು ಅದು ಇಬ್ಬರಿಂದಲೂ ಮಾನ್ಯವೇ ಎಂದರೆ, ಹಾಗೂ ಅಲ್ಲ, ನಿಮ್ಮ ಮಾನಸಿಕ ಸ್ಥಿತಿಗತಿಯನ್ನೇ ನೀವು ನೋಡಿಕೊಳ್ಳಬೇಕು.


ಈಗ ಇನ್ನೊಂದು ಪರಿಸ್ಥಿತಿಯನ್ನು ಊಹಿಸಿಕೊಳ್ಳಿ. ನಿಮ್ಮ ಪತ್ನಿ ಗರ್ಭಿಣಿಯಾದಳು ಎಂದಿಟ್ಟುಕೊಳ್ಳಿ. ಈ ಮಗು ನಿಮ್ಮದು ಎಂಬ ಖಾತ್ರಿ ನಿಮಗೆ ಇರುತ್ತದೆಯೇ? ನಿಮ್ಮ ಪತ್ನಿಯ ಕೊಲೀಗ್‌ನ ಮಗುವನ್ನು ನಿಮ್ಮದೇ ಮಗು ಎಂದು ನೀವು ಸ್ವೀಕರಿಸುವುದಾದರೆ ತಕರಾರೇನೂ ಇಲ್ಲ. ಇಲ್ಲವಾದರೆ ನಿಮಗೆ ಸದಾ ಮಾನಸಿಕ ತಲ್ಲಣ ತಳಮಳ ಖಾತ್ರಿ. ಇದು ನಿಮ್ಮ ಮುಂದಿನ ಬದುಕಿನ ಮೇಲೆ ನೆಗೆಟಿವ್‌ ಪರಿಣಾಮ ಬೀರಲಾರದೆ?

ಹಾಗೇ ನಿಮ್ಮ ಎರಡನೇ ಸಂಬಂಧ, ನಿಮ್ಮ ಪತ್ನಿಯ ಮನಸ್ಸಿನ ಮೇಲೆ ಕೆಡುಕು ಉಂಟುಮಾಡಲಾರದು ಎಂಬುದಕ್ಕೆ ಖಾತ್ರಿ ಏನಿದೆ? ಹಾಗೇ ನಿಮ್ಮ ಇತರ ಸಂಬಂಧಗಳು ಬಯಲಾದಾಗ, ಅದು ನಿಮ್ಮ ಪತ್ನಿಯ ಗೆಳತಿಯ ಕುಟುಂಬ ಅಥವಾ ನಿಮ್ಮ ಪತ್ನಿಯ ಕೊಲೀಗ್‌ನ ಕುಟುಂಬದಲ್ಲಿ ಉಂಟುಮಾಡಬಹುದಾದ ತಲ್ಲಣಗಳನ್ನು ಊಹಿಸಿದ್ದೀರಾ? 
ಇವೆಲ್ಲವನ್ನೂ ಚೆನ್ನಾಗಿ ಯೋಚಿಸಿ ನೋಡಿ, ನಂತರವೇ ಮುಂದುವರಿಯಿರಿ. ನನ್ನ ಸಲಹೆ ಏನೆಂದರೆ, ನೀವಿಬ್ಬರೂ ಕುಳಿತು ಮುಕ್ತವಾಗಿ ಮಾತಾಡುವುದು ಹಾಗೂ ದಾಂಪತ್ಯ ಸಂಬಂಧವನ್ನು ಇನ್ನಷ್ಟು ಹಾರ್ದಿಕವಾಗಿ, ಗಟ್ಟಿಯಾಗಿ ರೂಪಿಸಿಕೊಳ್ಳುವುದು. ಅದರಿಂದಲೇ ನಿಮ್ಮ ಸೆಕ್ಸ್‌ನಲ್ಲೂ ನವನವೀನತೆ ಬರಲು ಸಾಧ್ಯ.

#Feelfree: ಶಿಶ್ನವನ್ನು ಕಚ್ಚಿ ಹಿಡಿದು ಕತ್ತರಿಸೋ ಯೋನಿ! ಹೀಗೂ ಇದೆಯಾ! ...

ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತೆಂಟು. ಅವಿವಾಹಿತ. ನನ್ನ ಶಿಶ್ನ ನಿಮಿರಿದ ಸ್ಥಿತಿಯಲ್ಲಿ ಒಂದು ಕಡೆ ಬಾಗಿದಂತಿದೆ. ಇದರಿಂದ ಮುಂದೆ ದಾಂಪತ್ಯದಲ್ಲಿ ಸಮಸ್ಯೆ ಇದೆಯೇ?

ಉತ್ತರ: ಏನೂ ಸಮಸ್ಯೆಯಿಲ್ಲ. ನಿಮ್ಮ ಶಿಶ್ನ ನಿಮಿರಿದಾಗ ನಲುವತ್ತೈದು ಡಿಗ್ರಿಗಿಂತಲೂ ಹೆಚ್ಚು ಬಾಗಿದ್ದರೆ ಮಾತ್ರ ವೈದ್ಯರ ಬಳಿ ಪರೀಕ್ಷೆ ಮಾಡಿಸಬೇಕು. ಇಲ್ಲವಾದರೆ ಅದು ಸಹಜ. 

#Feelfree: ನನ್ನ ಗಂಡ ಸಂಭೋಗದ ಉತ್ತುಂಗ ತಲುಪುವುದೇ ಇಲ್ಲ! ...

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!