ಸ್ನೇಹಿತರು ಜೀವನದ ಅತ್ಯಂತ ಅಮೂಲ್ಯ ಉಡುಗೊರೆ. ನಿಜವಾದ ಸ್ನೇಹ ಸಿಕ್ಕರೆ ಜೀವನ ಸಾರ್ಥಕ. ಸ್ನೇಹಕ್ಕೆ ವರ್ಷ ತುಂಬಿದಷ್ಟು ಅದು ಪಕ್ವವಾಗ್ತಾ ಹೋಗುತ್ತದೆ. ಆಪ್ತ ಸ್ನೇಹಿತರನ್ನು ಮದುವೆ ಎಂಬ ಜಂಜಾಟದಲ್ಲಿ ಮರೆತು ತಪ್ಪು ಮಾಡ್ಬೇಡಿ.
ಮದುವೆಯಾದ್ರೆ ಕಥೆ ಮುಗಿತು, ಇನ್ನು ನೀನು ನಮ್ಮ ಕೈಗೆ ಸಿಕ್ಕಂತೆ ಅಂತಾ ಸ್ನೇಹಿತರು ಹೇಳ್ತಿರ್ತಾರೆ. ಇದು ನೂರಕ್ಕೆ ನೂರು ಸತ್ಯ. ಬಹುತೇಕ ಎಲ್ಲರೂ ಮದುವೆಯಾದ್ಮೇಲೆ ಜವಾಬ್ದಾರಿಯಲ್ಲಿ ಕಳೆದು ಹೋಗ್ತಾರೆ. ದಿನ ಕಳೆದಂತೆ ಸ್ನೇಹಿತರು ದೂರವಾಗ್ತಾರೆ. ಮನೆ, ಪತಿ, ಪ್ರಣಯ, ಮಕ್ಕಳು ಹೀಗೆ ಒಂದಾದ್ಮೇಲೆ ಒಂದು ಜವಾಬ್ದಾರಿಗಳು ತಲೆ ಮೇಲೆ ಬರೋದ್ರಿಂದ ಮಹಿಳೆಯರಿಗೆ ಸಮಯ ಸಿಗೋದಿಲ್ಲ. ಹಾಗಾಗಿ ಹಳೆ ಸ್ನೇಹಿತರ ಭೇಟಿ ಇರಲಿ ಅವರ ಫೋನ್ ನಂಬರ್ ಕೂಡ ಮರೆತು ಹೋಗಿರುತ್ತದೆ. ಅವರ ಹೆಸರು ಮರೆಯುವವರು ಅನೇಕರಿದ್ದಾರೆ.
ಮದುವೆ (Marriage) ಯ ಆರಂಭದ ವರ್ಷ, ಮಕ್ಕಳಾದ ಕೆಲ ವರ್ಷದವರೆಗೆ ಮಹಿಳೆಯರು ಬ್ಯುಸಿ (Busy) ಯಾಗಿರ್ತಾರೆ ನಿಜ. ಮಕ್ಕಳು ದೊಡ್ಡವರಾದಂತೆ ಜವಾಬ್ದಾರಿ ಸ್ವಲ್ಪ ಕಡಿಮೆಯಾಗುತ್ತದೆ. ಬಿಡುವಿನ ಸಮಯದಲ್ಲಿ ಹಳೆ ಸ್ನೇಹಿತರ ನೆನಪು ಕಾಡಲು ಶುರುವಾಗುತ್ತದೆ. ಹೊಸ ಸ್ನೇಹಿತ (Friend) ರನ್ನು ಪಡೆಯುವುದು ಆ ವಯಸ್ಸಿನಲ್ಲಿ ಸುಲಭವಲ್ಲ. ಬಾಲ್ಯದ, ಕಾಲೇಜಿನ ದಿನಗಳಲ್ಲಿ ಸಿಕ್ಕಂತ ಸ್ನೇಹ ಆ ವಯಸ್ಸಿನಲ್ಲಿ ಸಿಗೋದು ಸ್ವಲ್ಪ ಕಷ್ಟ. ಹಾಗೆಯೇ ಕಳೆದು ಹೋದ ಸ್ನೇಹಿತರನ್ನು ಮತ್ತೆ ಸೇರಿಸಲು ಈಗ ಒಂದಿಷ್ಟು ಸಾಮಾಜಿಕ ಜಾಲತಾಣವಿದ್ರೂ ಮೊದಲಿನಂತಾಗಲು ಸಾಧ್ಯವಿಲ್ಲ. ಹಾಗಾಗಿ ಮದುವೆಯಾದ ಮೇಲೂ ನೀವು ನಿಮ್ಮ ಸ್ನೇಹವನ್ನು ಮುಂದುವರೆಸಿಕೊಂಡು ಹೋದ್ರೆ ಮುಂದೆ ಪಶ್ಚಾತಾಪಪಡಬೇಕಾಗಿಲ್ಲ. ಸ್ನೇಹವೆಂಬ ಅಮೂಲ್ಯ ವಸ್ತುವಿಗೆ ಹುಡುಕಾಡಬೇಕಾಗಿಲ್ಲ. ನಾವಿಂದು ಮದುವೆಯಾದ್ಮೇಲೂ ಹೇಗೆ ಸ್ನೇಹಿತರನ್ನು ಕಾಪಾಡಿಕೊಳ್ಳಬೇಕು ಎಂಬುದನ್ನು ನಿಮಗೆ ಹೇಳ್ತೆವೆ.
ಪುರುಷರು ಯಾಕೆ ಹಿರಿಯ ಮಹಿಳೆಯತ್ತ ಆಕರ್ಷಿತರಾಗ್ತಾರೆ ?
ಸ್ನೇಹಿತರಿಗೆ ನೀಡಿ ಸಮಯ : ಹೌದು, ಆರಂಭದಲ್ಲಿ ಹನಿಮೂನ್, ವೀಕೆಂಡ್ ಸುತ್ತಾಡ, ಕುಟುಂಬದ ಪೂಜೆ, ಮದುವೆ ಹೀಗೆ ಬೇರೆ ಬೇರೆ ಕಾರಣಕ್ಕೆ ನಿಮಗೆ ಸ್ನೇಹಿತರ ಜೊತೆ ಕಳೆಯಲು ಮೊದಲಿನಷ್ಟು ಸಮಯ ಸಿಗದೆ ಇರಬಹುದು. ಆದ್ರೆ ಇರುವ ಸಮಯವನ್ನೇ ಹಂಚಿಕೊಳ್ಳುವ ಪ್ರಯತ್ನ ಮಾಡಿ. ನಿಮಗಾಗಿ, ನಿಮ್ಮ ಸ್ನೇಹಿತರಿಗಾಗಿ ಸಮಯ ಹೊಂದಿಸಿಕೊಳ್ಳಿ. ಅವರನ್ನು ಭೇಟಿಯಾಗುವ ಪ್ರಯತ್ನ ಮಾಡಿ. ಇದು ಸಾಧ್ಯವಾಗ್ತಿಲ್ಲ ಎಂದಾದ್ರೆ ಫೋನ್ ಮಾಡಿ ಮಾತನಾಡಿ. ಸ್ನೇಹ ನಿಮ್ಮ ಜೀವನವನ್ನು ಮತ್ತಷ್ಟು ರಸಮಯಗೊಳಿಸುತ್ತದೆ.
ಯಾವುದಾದ್ರೂ ಪ್ಲಾನ್ ಮಾಡ್ತಿರಿ : ನಿಮಗೆ ಅಗತ್ಯವಿಲ್ಲ ಎಂದಾದ್ರೂ ನಿಮ್ಮ ಸ್ನೇಹಿತರಿಗೆ ನಿಮ್ಮ ಅಗತ್ಯವಿರಬಹುದು. ಹಾಗಾಗಿ ತಿಂಗಳಿಗೊಮ್ಮೆಯಾದ್ರೂ ಸ್ನೇಹಿತರಿಗೆ ಸಿಗುವ ಪ್ಲಾನ್ ಮಾಡಿ. ಸಿನಿಮಾ, ಮಾಲ್, ಪಾರ್ಟಿ ಹೀಗೆ ಯಾವುದಾದ್ರೂ ಒಂದು ಪ್ಲಾನ್ ಮಾಡಿ ಅವರನ್ನು ಭೇಟಿಯಾಗಿ. ಸ್ನೇಹಿತರ ಜೊತೆ ಸ್ವಲ್ಪ ಸಮಯ ಕಳೆದ್ರೂ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಒಂದ್ವೇಳೆ ಇಬ್ಬರು ಬೇರೆ ಊರಿನಲ್ಲಿದ್ದಿರಿ ಎಂದಾದ್ರೆ ವಿಡಿಯೋ ಕಾಲ್ ಮಾಡಬಹುದು. ನಿಮ್ಮ ಸಂತೋಷ, ನೋವು, ಸಮಸ್ಯೆಗೆಲ್ಲ ಸ್ನೇಹಿತರಲ್ಲಿ ಪರಿಹಾರವಿರುತ್ತದೆ. ಇದು ಸ್ನೇಹ ಬಲಪಡಿಸುವ ಜೊತೆಗೆ ಮನಸ್ಸನ್ನು ಹಗುರಗೊಳಿಸುತ್ತದೆ.
ವಿಶೇಷ ದಿನ ಮರೆತು ನಿರಾಶೆಗೊಳಿಸಬೇಡಿ : ಹುಟ್ಟುಹಬ್ಬ ಸೇರಿದಂತೆ ವಿಶೇಷ ಸಂದರ್ಭದಲ್ಲಿ ಸ್ನೇಹಿತರು ನಿಮ್ಮ ನಿರೀಕ್ಷೆಯಲ್ಲಿರುತ್ತಾರೆ. ಅವರಿಗೆ ಖುಷಿ ನೀಡಲು ನೀವು ಉಡುಗೊರೆ ನೀಡಬಹುದು. ಇಲ್ಲವೆ ಔಟಿಂಗ್ ಪ್ಲಾನ್ ಮಾಡಬಹುದು. ಮದುವೆಯಾದ್ಮೇಲೆ ಅವರ ಹುಟ್ಟುಹಬ್ಬದ ದಿನ ಮರೆತು ಅವರಿಗೆ ನಿರಾಸೆ ಮಾಡಬೇಡಿ. ದಿನಾಂಕ ಮರೆಯುತ್ತೆ ಎನ್ನುವವರು ಅಲರಾಂ ಸೆಟ್ ಮಾಡಿಕೊಳ್ಳಿ. ನಿಮ್ಮ ಈ ವಿಶೇಷ ಗಿಫ್ಟ್ ಅಥವಾ ಭೇಟಿ ಅವರಿಗೆ ಖುಷಿ ನೀಡುತ್ತದೆ.
ಪತಿಯ ಬಲವಂತದ ಸೆಕ್ಸ್ ಗೆ ನೀವೂ ಕಾರಣವಿರ್ಬಹುದು..
ಹಳೆಯ ನೆನಪುಗಳನ್ನು ಮೆಲಕು ಹಾಕಿ : ಸ್ನೇಹಿತರ ಜೊತೆ ಹಳೆ ನೆನಪುಗಳನ್ನು ಮೆಲಕು ಹಾಕ್ತಿದ್ದರೆ ಅದು ಖುಷಿ ನೀಡುತ್ತದೆ. ಅವರ ಜೊತೆಗಿರುವ ಫೋಟೋಗಳನ್ನು ಹಂಚಿಕೊಳ್ಳಬಹುದು. ಅವರು ಮಾಡಿದ ತರ್ಲೆ ಕೆಲಸವನ್ನು ನೆನಪು ಮಾಡಿ ತಮಾಷೆ ಮಾಡಬಹುದು. ಇಂಥ ಕೆಲಸ ನಿಮ್ಮಿಬ್ಬರ ಅಂತರವನ್ನು ಕಡಿಮೆ ಮಾಡುತ್ತದೆ.