ಎಷ್ಟು ಪ್ರಯತ್ನಿಸಿದರೂ ಮಕ್ಕಳಾಗಿಲ್ಲ ಅಂದ ಮಹಿಳೆಗೆ ಕನ್ನಡದ ದೊಡ್ಡ ಕವಯಿತ್ರಿಯೊಬ್ಬರು ಕೊಟ್ಟ ಪರಿಹಾರ ನೋಡಿ!

By Suvarna News  |  First Published Oct 22, 2023, 12:14 PM IST

ಮಗುವಾಗಬೇಕಿದ್ದರೆ ಸಂಭೋಗದ ನಂತರ ಹೀಗೆ ಮಾಡಬೇಕಂತೆ! ಕನ್ನಡದ ಕವಯಿತ್ರಿಯೊಬ್ಬರು ಹೇಳಿದ ಮಾತು ನೋಡಿ! ಇದು ನಿಜವಾ?


ಕನ್ನಡದ ಗಣ್ಯ ಕವಯಿತ್ರಿಯರಲ್ಲಿ ಒಬ್ಬರಾದ ಪ್ರತಿಭಾ ನಂದಕುಮಾರ್‌ ಫೇಸ್‌ಬುಕ್‌ನಲ್ಲಿ ಆಕ್ಟಿವ್‌ ಆಗಿ ಇರುತ್ತಾರೆ. ʼʼಎಷ್ಟು ಪ್ರಯತ್ನಿಸಿದರೂ ಮಕ್ಕಳಾಗಿಲ್ಲʼʼ ಅಂದುಕೊಂಡು ಬಂದ ಮಹಿಳೆಯೊಬ್ಬರಿಗೆ ಪ್ರತಿಭಾ ನಂದಕುಮಾರ್‌ ಕೊಟ್ಟ ಪರಿಹಾರ ತಮಾಷೆಯಾಗಿದೆ, ಇದು ಅವರು ತಿಳಿವಳಿಕೆಯಿದ್ದೇ ಬರೆದುದೋ, ತಮಾಷೆಗಾಗಿ ಬರೆದುದೋ, ಅಜ್ಞಾನದಿಂದ ಬರೆದುದೋ ಗೊತ್ತಾಗುತ್ತಿಲ್ಲ.

ಪ್ರತಿಭಾ ಫೇಸ್‌ಬುಕ್‌ನಲ್ಲಿ ಬರೆದುದು ಹೀಗಿದೆ: ʼʼಸ್ವಲ್ಪ ಹಿಂದೆ ದೇವಸ್ಥಾನದಲ್ಲಿ ಪಾರಾಯಣ ಮಾಡುತ್ತಾ ಕೂತಿದ್ದಾಗ ಒಬ್ಬಳು ಬಂದು ನಮಸ್ಕಾರ ಮಾಡಿ 'ಅಮ್ಮ, ಮಗು ಆಗಲಿ ಅಂತ ಆಶೀರ್ವಾದ ಮಾಡಿ' ಅಂದ್ಲು. ಮಗು ಇಲ್ಲದೇ ಬಹಳ ಚಿಂತೆಯಲ್ಲಿದ್ದಳು ಅಂತ ಗೊತ್ತಾಗ್ತಾ ಇತ್ತು. ನಾನಂದೆ 'ಒಂದು ಮಾತು... ಸೆಕ್ಸ್ ಆದ ಮೇಲೆ ತಕ್ಷಣ ಎದ್ದು ಬಚ್ಚಲು ಮನೆಗೆ ಕ್ಲೀನ್ ಮಾಡ್ಕೊಳಕ್ಕೆ ಹೋಗ್ತಿಯಾ?' ಅಂತ ಕೇಳಿದೆ. ಹೌದು ಅಂದ್ಲು. "ಹಾಗೆ ಮಾಡಬೇಡಾ, ಕಾಲು ಸೇರಿಸಿ ಮಂಡಿ  ಮಡಚಿ ಎಡಗಡೆಗೆ ಪಕ್ಕಕ್ಕೆ ತಿರುಗಿ ಫೀಟಸ್ ಪೊಸಿಷನ್‌ನಲ್ಲಿ ಮಲಕ್ಕೋ, ಬೆಳಗ್ಗೆ ಎದ್ದು ಸ್ನಾನ ಮಾಡು" ಸರಿ ಅಂತ ಹೋದಳು. ಅದಾಗಿ ಸುಮಾರು ದಿನ ಕಾಣಲಿಲ್ಲ. ಇವತ್ತು ದೇವಸ್ಥಾನಕ್ಕೆ ಬಂದು ನಮಸ್ಕಾರ ಮಾಡಿ ಐದು ತಿಂಗಳು ಅಂದ್ಲು!!ʼʼ

Tap to resize

Latest Videos

 

ಇದನ್ನು ತುಂಬಾ ಮಂದಿ ಅವರ ವಾಲ್‌ನಲ್ಲಿ ತಮಾಷೆಯಾಗಿ ತೆಗೆದುಕೊಂಡು ಪ್ರತಿಕ್ರಿಯಿಸಿದ್ದಾರೆ. ಹೆಚ್ಚಿನವರು ನಗುವ ಇಮೋಜಿ ಹಾಕಿದ್ದಾರೆ. ಆದರೆ ಪ್ರತಿಭಾ ಅವರು ಇದನ್ನು ಸೀರಿಯಸ್ಸಾಗಿಯೇ ಬರೆದಂತಿದೆ. ಅವರೇನೂ ತಮಾಷೆ ಮಾಡಿದ ಹಾಗಿಲ್ಲ. ಹಾಗಾದರೆ ಅವರು ಬರೆದುದು ಸತ್ಯವಾ? ಸರಿ, ಇದರ ಬಗೆಗೆ ವೈದ್ಯರೇನು ಹೇಳ್ತಾರೆ?

ಮಹಿಳೆಯರು Orgasm ಸಮಸ್ಯೆಯಿಂದ ಬಳಲೇನು ಕಾರಣ?

ʼʼಲೈಂಗಿಕ ಸಂಭೋಗದ ನಂತರ ತಕ್ಷಣವೇ ವಾಶ್‌ ಮಾಡುವುದು ನಿಮಗೆ ಕ್ಲೀನ್‌ಲಿನೆಸ್‌ ಭಾವನೆಯನ್ನು ನೀಡುತ್ತದೆ. ಆದರೆ ಅದು ಗರ್ಭಧಾರಣೆಯನ್ನು ತಡೆಯಲು ಸಹಾಯ ಮಾಡುವುದಿಲ್ಲ. ಸಂಭೋಗದ ನಂತರ ಸ್ನಾನ ಮಾಡಿದರೆ ಅಥವಾ ಯೋನಿಯನ್ನು ತೊಳೆದುಕೊಂಡರೆ ಅಲ್ಲಿರುವ ವೀರ್ಯದ ಅಳಿದುಳಿದ ಅಂಶವನ್ನು ಕ್ಲೀನ್‌ ಮಾಡಬಹುದು. ಆದರೆ ಸಂಭೋಗದ ವೇಳೆಯೇ ಹೆಚ್ಚಿನ ಪ್ರಮಾಣದ ವೀರ್ಯಾಣುಗಳು ಯೋನಿಯೊಳಗೆ ಹೋಗಿರುತ್ತವೆ. ಇದು ಕೇವಲ ಸೆಕೆಂಡ್‌ ಮಾತ್ರದಲ್ಲಿ ನಡೆದುಹೋಗುವ ಘಟನೆ. ಶಿಶ್ನದಿಂದ ಚಿಮ್ಮುವ ವೀರ್ಯ, ಕೂಡಲೇ ಗರ್ಭನಾಳದಲ್ಲಿ ಹೋಗುತ್ತದೆ. ಒಂದು ಸೆಕೆಂಡ್‌ ಅವಧಿಯಲ್ಲಿ ಅದು ಗರ್ಭಕೋಶವನ್ನು ಸೇರುತ್ತದೆ. ಇದರಲ್ಲಿ ಅದೃಷ್ಟವಂತ ವೀರ್ಯಾಣುವೊಂದು, ಅಂಡದೊಂದಿಗೆ ಸೇರಿಕೊಂಡುಬಿಡುತ್ತದೆ. ಇದೆಲ್ಲವೂ ಕ್ಷಣಮಾತ್ರದಲ್ಲಿ ನಡೆಯುವ ಘಟನೆ. ಹೀಗಾಗಿ, ಮಕ್ಕಳಾಗೋಕೆ ಅಂತ ಸಂಭೋಗ ನಡೆದ ನಂತರ ಗಂಟೆಗಟ್ಟಲೆ ಅಂಗಾತ ಮಲಗುವುದು, ಅಥವಾ ಫೀಟಸ್‌ ಪೊಸಿಷನ್‌ನಲ್ಲಿ ಮಲಗುವುದು ಮಾಡಬೇಕಿಲ್ಲ. ಕ್ಲೀನ್‌ ಮಾಡದೆಯೂ ಇರಬೇಕಿಲ್ಲ. ಕ್ಲೀನ್‌ ಮಾಡಿದರೂ ಯಾವ ತೊಂದರೆಯೂ ಇಲ್ಲ. ಅದಕ್ಕೂ ಗರ್ಭ ನಿಲ್ಲುವುದಕ್ಕೂ ಸಂಬಂಧವಿಲ್ಲʼʼ ಎಂದು ಪರಿಣತ ವೈದ್ಯರು, ಗೈನಕಾಲಜಿಸ್ಟ್‌ಗಳು ಹೇಳುತ್ತಾರೆ.

ಪ್ರತಿಭಾ ನಂದಕುಮಾರ್‌ ಅವರು ಯಾವ ಆಧಾರದ ಮೇಲೆ ಮೇಲಿನ ಮಾತನ್ನು ಬರೆದರೋ ಗೊತ್ತಿಲ್ಲ. ತಮ್ಮ ಮಾತಿಗೆ ಆಧಾರವಾಗಿ ಅವರು ಯಾವ ವೈಜ್ಞಾನಿಕ ಆಧಾರವನ್ನೂ ಒದಗಿಸಿಲ್ಲ. ಸದ್ಯಕ್ಕೆ ಇದೊಂದು ತಮಾಷೆ ಪೋಸ್ಟ್‌ ಎಂದು ಭಾವಿಸಿ ನಾವು ಸುಮ್ಮನಾಗಬಹುದೇನೋ!

ಮದುವೆ ಸಮಯದಲ್ಲಿ ತಂದೆ ಬಾಯಿಂದ ಈ ಮಾತು ಕೇಳ ಬಯಸ್ತಾಳೆ ಮಗಳು 

click me!