ಹಣ ತುಂಬಾ ಇದೆ… ಪ್ರೀತಿ ಬೇಕು..! ಮೋಸ ಮಾಡೋರಿಗೆ ಹೀಗೊಂದು ದಾಳ ಹಾಕಿದ್ರೆ!

By Suvarna News  |  First Published Oct 21, 2023, 3:29 PM IST

ನಿಮಗೆ ಲೋನ್ ಕೊಡ್ತೇವೆ ಎಂದು ಕರೆ ಮಾಡಿದ ಬ್ಯಾಂಕ್ ಸಿಬ್ಬಂದಿ ಜೊತೆ ಚಿತ್ರವಿಚಿತ್ರವಾಗಿ ಜನರು ಮಾತನಾಡ್ತಿರುತ್ತಾರೆ. ಈಗ ಅಂಥದ್ದೇ ಚಾಟ್ ಒಂದು ವೈರಲ್ ಆಗಿದೆ. ಅದ್ರಲ್ಲಿ ವ್ಯಕ್ತಿ ಮಾಡಿದ ಮೆಸ್ಸೇಜ್ ಅನೇಕರ ಮನಕದ್ದಿದೆ.
 


ಆನ್ಲೈನ್ ಮೋಸದ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ನಾನಾ ರೀತಿಯಲ್ಲಿ ಜನರನ್ನು ವಂಚಿಸಲಾಗ್ತಿದೆ. ಆನ್ಲೈನ್ ನಲ್ಲಿ ಬುಕ್ ಮಾಡುವ ವಸ್ತು ಒಂದಾದ್ರೆ ಮನೆಗೆ ಬರೋದು ನಿರುಪಯುಕ್ತ ವಸ್ತುಗಳಾಗಿರುತ್ತವೆ. ಮತ್ತೆ ಕೆಲವರು, ಕರೆ ಮಾಡಿದವರು ಬ್ಯಾಂಕ್ ನವರು ಎಂದು ನಂಬಿ ತಮ್ಮೆಲ್ಲ ಮಾಹಿತಿ ನೀಡ್ತಾರೆ. ಕೆಲವೇ ಕ್ಷಣಗಳಲ್ಲಿ ಅವರ ಖಾತೆ ಖಾಲಿಯಾಗಿರುತ್ತದೆ. ಇನ್ನು ಕೆಲ ಮೋಸಗಾರರು, ಬರೀ ಫೋನ್ ಕರೆ ರಿಸಿವ್ ಮಾಡಿದ್ರೆ ಸಾಕು ಖಾತೆಯಲ್ಲಿರುವ ಹಣ ದೋಚುತ್ತಾರೆ. ಈಗ ಅಂಗಡಿ ಮುಂದಿಟ್ಟ ಆನ್ಲೈನ್ ಪೇಮೆಂಟ್ ಸ್ಕ್ಯಾನಿಂಗ್ ನಲ್ಲೂ ಮೋಸ ನಡೆಯುತ್ತದೆ. ಈ ರೀತಿ ಮಾತ್ರವಲ್ಲ, ಕೆಲಸ ಕೊಡ್ತೇನೆ, ಸಿನಿಮಾದಲ್ಲಿ ಆಕ್ಟಿಂಗ್ ಮಾಡಿಸ್ತೇನೆ ಹೀಗೆ ನಾನಾ ಆಸೆ ತೋರಿಸಿ ಹಣ ತೆಗೆದುಕೊಳ್ಳುವ ಜನರು ನಂತ್ರ ಕೈ ಎತ್ತುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ನಾನಾ ಮೆಸ್ಸೇಜ್, ಮೇಲ್ ಗಳನ್ನು ನೀವು ನೋಡ್ಬಹುದು. ಹುಡುಗಿ ಹೆಸರಿನಲ್ಲಿ ಮೆಸ್ಸೇಜ್ ಮಾಡಿದ್ರೆ ಇಲ್ಲವೆ ಕರೆ ಮಾಡಿದ್ರೆ ಜನರು ಹೆಚ್ಚು ಆಸಕ್ತಿ ತೋರಿಸುತ್ತಾರೆ ಎನ್ನುವುದು ಜನರಿಗೆ ಗೊತ್ತು. ಹಾಗಾಗಿಯೇ ಹುಡುಗಿ ಹೆಸರಿನಲ್ಲಿ ಜನ ಮೋಸ ಮಾಡ್ತಾರೆ.

ಸಾಮಾಜಿಕ ಜಾಲತಾಣ (Social Media ) ದಲ್ಲಿ ಇಂಥದ್ದೇ ಒಂದು ಮೋಸ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಹುಡುಗಿ ಹೆಸರಿನಲ್ಲಿ ಮೋಸ ಮಾಡಿದ್ದಾನೆ. ಆದ್ರೆ ಇದಕ್ಕೆ ವ್ಯಕ್ತಿ ನೀಡಿದ ಉತ್ತರ ಭಿನ್ನವಾಗಿದೆ. ಕೆಲಸದ ಹೆಸರಿನಲ್ಲಿ ನನಗೆ ಮೋಸ ಮಾಡಲಾಗ್ತಿದೆ ಎಂಬುದನ್ನು ತಿಳಿದ ವ್ಯಕ್ತಿ ಮದುವೆ, ಪ್ರೀತಿ (Love) ವಿಷ್ಯವನ್ನು ಚಾಟ್ ಮಾಡಲು ಶುರು ಮಾಡ್ತಾನೆ. ಆಗ ವ್ಯಕ್ತಿ ಅದಕ್ಕೆ ಉತ್ತರ ನೀಡದೆ ಸುಮ್ಮನಾಗೋದನ್ನು ನೀವು ನೋಡ್ಬಹುದು. ಈ ಚಾಟ್ನ ಸ್ಕ್ರೀನ್ ಚಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Latest Videos

undefined

ಪದೆ ಪದೇ ಸೋಡಾ ಕುಡಿಯೋರಿಗೆ ಈ ರೋಗ ಕಾಡಬಹುದು. ಅದಕ್ಕೆ ಬೇಡ ಬಿಟ್ಬಿಡಿ

ವೈರಲ್ ಆಗಿರುವ ಫೋಟೋದಲ್ಲಿ ಏನಿದೆ? : ಈ ಪೋಸ್ಟ್‌ನಲ್ಲಿ  ಲಾವಣ್ಯ ಹೆಸರಿಟ್ಟುಕೊಂಡಿರುವ ಹುಡುಗ, ವ್ಯಕ್ತಿ ಜೊತೆ ಮಾತನಾಡುತ್ತಿದ್ದಾನೆ. ಲಾವಣ್ಯ ವ್ಯಕ್ತಿಗೆ ಕೆಲಸ ಬೇಕೇ ಎಂದು ಕೇಳುತ್ತಾಳೆ. ವ್ಯಕ್ತಿ ಇದಕ್ಕೆ ಉತ್ತರ ನೀಡೋದಿಲ್ಲ. ಬದಲಾಗಿ ಹುಡುಗಿಗೆ ಫ್ಲರ್ಟ್ ಮಾಡಲು ಪ್ರಾರಂಭಿಸುತ್ತಾನೆ. ತನ್ನ ಜೀವನದಲ್ಲಿ ಹಣದ ಕೊರತೆಯಿಲ್ಲ. ಆದರೆ ಪ್ರೀತಿಯ ಅಗತ್ಯವಿದೆ. ಪ್ರೀತಿ ತನಗೆ ಬೇಕು ಎಂದು ಲಾವಣ್ಯಗೆ ಹೇಳುತ್ತಾನೆ. ಈ ಮೆಸ್ಸೇಜ್ ಗೆ ಉತ್ತರ ನೀಡುವ ಬದಲು ಲಾವಣ್ಯ ಮತ್ತೆ ಮತ್ತೆ ಕೆಲಸ ಬೇಕಾ ಎಂದು ಕೇಳುತ್ತಾಳೆ. ಇದಾದ ನಂತರ ಈ ಜಗತ್ತಿನಲ್ಲಿ ಯಾರೂ ಯಾರನ್ನೂ ಪ್ರೀತಿಸುವುದಿಲ್ಲ ಎಂದು ಆ ವ್ಯಕ್ತಿ ಹೇಳುತ್ತಾನೆ. ಆದ್ರೆ ಆ ಸಂದೇಶಕ್ಕೆ ಹುಡುಗಿ  ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದಕ್ಕೆ ಬಳಕೆದಾರರು ನಾನಾ ರೀತಿಯಲ್ಲಿ ಕಮೆಂಟ್ ಮಾಡ್ತಿದ್ದಾರೆ. 

ಮಹಿಳೆಯನ್ನು ಅಸಭ್ಯವಾಗಿ ತೋರಿಸೋದು ಅಪರಾಧ, ತಪ್ಪಿದಲ್ಲಿ ಶಿಕ್ಷೆ ಕಟ್ಟಿಟ್ಟ ಬುತ್ತಿ!

Chetty Arun ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ಸ್ಕ್ರೀನ್ ಶಾರ್ಟ್ ಫೋಟೋ ಹಂಚಿಕೊಳ್ಳಲಾಗಿದೆ. ಸಾಕಷ್ಟು ಹಣವಿದೆ. ಪ್ರೀತಿ ಬೇಕು. ಮೋಸಗಾರನೊಂದಿಗೆ ಪ್ರೀತಿ, ಪ್ರಪಂಚ, ಶಾಂತಿ ಮತ್ತು ಎಲ್ಲದರ ಬಗ್ಗೆ ಹಾರ್ಟ್ ಟು ಹಾರ್ಟ್ ಸಂಭಾಷಣೆ ಎಂದು ಶೀರ್ಷಿಕೆಯನ್ನು ಹಾಕಲಾಗಿದೆ. 

ಬಳಕೆದಾರರು ಹೇಳಿದ್ದೇನು? : ಒಬ್ಬರು ನನಗೂ ಇಂಥದ್ದೇ ಮೆಸ್ಸೇಜ್ (Message) ಬಂದಿದೆ ಎಂದು ಒಬ್ಬರು ಬರೆದ್ರೆ ಮತ್ತೊಬ್ಬರು ಮೋಸಗಾರನಿಗೆ ಮೋಸ ಎಂದು ಕಮೆಂಟ್ ಮಾಡಿದ್ದಾರೆ. ೬೧ ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದಿರುವ ಈ ಪೋಸ್ಟ್ (Post) ಗೆ ಅನೇಕರು ಲೈಕ್ ಒತ್ತಿದ್ದಾರೆ. ಮೋಸಗಾರ ತನ್ನ ಕ್ಯಾರೆಕ್ಟರ್ ಬ್ರೇಕ್ ಮಾಡಿಲ್ಲ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.  
 

Paisa bohot hai. Pyaar chahiye.

Had a heart to heart conversation about love, world, peace, and everything with a scamster. pic.twitter.com/gfiZScQdKx

— Chetty Arun (@ChettyArun)
click me!