ಒಂದಲ್ಲ ಒಂದು ಕಾರಣಕ್ಕೆ ಅಳುವ ಮಕ್ಕಳಿರ್ತಾರೆ. ಮಕ್ಕಳ ಅಳುವಿಗೆ ಕಾರಣ ಗೊತ್ತಾಗ್ದೆ, ಅವರನ್ನು ತಿದ್ದಲಾಗ್ದೆ ಪಾಲಕರು ಒದ್ದಾಡ್ತಾರೆ. ನಿಮ್ಮ ಮಕ್ಕಳೂ ಈ ಪಟ್ಟಿಗೆ ಸೇರ್ತಾರೆ ಎಂದಾದ್ರೆ ಈ ಟಿಪ್ಸ್ ಫಾಲೋ ಮಾಡಿ
ಮಕ್ಕಳು ಯಾವಾಗ ಹೇಗಿರ್ತಾರೆ ಹೇಳೋಕೆ ಸಾಧ್ಯವಿಲ್ಲ. ಸುಮ್ಮನೆ ಆಟವಾಡ್ತಿರುವ ಮಕ್ಕಳು, ಸಣ್ಣ ವಿಷ್ಯವನ್ನು ದೊಡ್ಡದು ಮಾಡಿ ಅಳ್ತಾರೆ. ಕೆಲ ಮಕ್ಕಳಿಗೆ ಅಳೋಕೆ ಕಾರಣವೇ ಬೇಕಾಗಿಲ್ಲ. ಅವರ ಕಣ್ಣಲ್ಲಿ ಇಷ್ಟೊಂದು ನೀರಿದ್ಯಾ ಎಂಬ ಪ್ರಶ್ನೆ ಬರುವಷ್ಟು ಅಳುವ ಮಕ್ಕಳಿದ್ದಾರೆ. ಅಳೋಕೆ ಶುರು ಮಾಡ್ತಿದ್ದಂತೆ ಕಣ್ಣಿಂದ ಧಾರಾಕಾರವಾಗಿ ನೀರು ಸುರಿಯೋಕೆ ಶುರುವಾಗುತ್ತೆ. ಸಣ್ಣ ಮಕ್ಕಳಿರಲಿ ಇಲ್ಲ ದೊಡ್ಡ ಮಕ್ಕಳಿರಲಿ, ಕೆಲ ಮಕ್ಕಳಿಗೆ ಅಳೋದು ಒಂದು ರೀತಿ ಚಟವಿದ್ದಂತೆ. ತಾವು ಬಯಸಿದ್ದು ಸಿಕ್ಕಿಲ್ಲ ಎಂದಾಗ್ಲೂ ಅಳ್ತಾರೆ, ಪಾಲಕರು ಕಣ್ಣನ್ನು ಸ್ವಲ್ಪ ದೊಡ್ಡದು ಮಾಡಿದ್ರೂ ಅಳ್ತಾರೆ. ಈ ಮಕ್ಕಳಿಗೆ ಪಾಲಕರು ಹೊಡೆಯಬೇಕೆಂದೇನಿಲ್ಲ. ಪಾಲಕರು ಹೊಡೆಯುವ ಸೂಚನೆ ಸಿಕ್ಕಿದ್ರೂ ಹೊಡೆದಂತೆ ಅಳುವ ಮಕ್ಕಳನ್ನು ನೀವು ನೋಡ್ಬಹುದು.
ಮಕ್ಕಳು (Children) ಪದೇ ಪದೇ ಅಳಲು ನಾನಾ ಕಾರಣವಿದೆ. ನಿಮ್ಮ ಮಕ್ಕಳು ಯಾವಾಗ್ಲೂ ಅಳ್ತಿರುತ್ತಾರೆ ಎಂದಾದ್ರೆ ನೀವು ಕೆಲ ಟಿಪ್ಸ್ ಫಾಲೋ ಮಾಡುವ ಮೂಲಕ ಅವರನ್ನು ಸರಿದಾರಿಗೆ ತರುವ ಪ್ರಯತ್ನ ನಡೆಸಬಹುದು.
undefined
ಮಗಳ ಡಿಎನ್‌ಎ ಟೆಸ್ಟ್ ಮಾಡಿಸಿದ ದಂಪತಿ, ರಿಪೋರ್ಟ್ ನೋಡಿದ್ರೆ ಇಬ್ಬರಿಗೂ ಮ್ಯಾಚ್ ಆಗ್ತಿಲ್ಲ!
ಕಾರಣವನ್ನು ಗುರುತಿಸಿ : ಮಕ್ಕಳು ಪ್ರತಿ ಸಣ್ಣ ವಿಷಯಕ್ಕೂ ಅಳಲು (Cry) ಕಾರಣವೇನು ಎಂಬುದನ್ನು ಗುರುತಿಸುವುದು ಮುಖ್ಯ ಎನ್ನುತ್ತಾರೆ ತಜ್ಞರು (Experts). ಮಕ್ಕಳ ಸಿಡುಕು ಅಭ್ಯಾಸ (Practice) ಕೂಡ ಅವರನ್ನು ಅಳುವಂತೆ ಮಾಡುತ್ತದೆ. ಅತ್ತರೆ ಎಲ್ಲ ಸಿಗುತ್ತೆ ಎಂಬುದನ್ನು ತಿಳಿದುಕೊಳ್ಳುವ ಕೆಲ ಮಕ್ಕಳು, ಬೇಕಾಗಿದ್ದನ್ನು ಪಡೆಯಲು ಅಳ್ತಾರೆ. ಪಾಲಕರು ನಮ್ಮನ್ನು ನಿರ್ಲಕ್ಷ್ಯ ಮಾಡ್ತಿದ್ದಾರೆ ಎನ್ನುವ ಕಾರಣಕ್ಕೂ ಕೆಲವರು ಅಳ್ತಾರೆ. ಹಾಗಾಗಿ ನಿಮ್ಮ ಮಗು ಪದೇ ಪದೇ ಅಳಲು ಕಾರಣವೇನು ಎಂಬುದನ್ನು ನೀವು ಪತ್ತೆ ಮಾಡ್ಬೇಕು.
ವಿವರಣೆ ಜೊತೆ ಅರ್ಥ ಮಾಡಿಕೊಳ್ಳೋದು ಮುಖ್ಯ : ಮಕ್ಕಳು ಅಳ್ತಿರುವಾಗ ಪಾಲಕರು ಅವರಿಗೆ ವಿವರಣೆ ನೀಡಿ, ಅವರನ್ನು ಸುಮ್ಮನಿರಿಸುವ ಪ್ರಯತ್ನ ಮಾಡ್ತಾರೆ. ಆದ್ರೆ ಮೊದಲು ಮಕ್ಕಳನ್ನು ಅರ್ಥ ಮಾಡಿಕೊಳ್ಳಬೇಕು. ಮಕ್ಕಳ ಜೊತೆ ನೀವು ಮಕ್ಕಳಾಗ್ಬೇಕು. ನೀವು ಹಿರಿಯರಂತೆ ಮಾತನಾಡಿದ್ರೆ, ಮಕ್ಕಳು ಹಿರಿಯರಂತೆ ನಡೆದುಕೊಳ್ಳಬೇಕೆಂದು ಬಯಸಿದ್ರೆ ಅದು ಸಾಧ್ಯವಿಲ್ಲ. ಆಗ ಮಕ್ಕಳು ನಿಮ್ಮಿಂದ ದೂರವಾಗ್ತಾರೆ.
ಅತ್ತರೆ ಪ್ರಯೋಜನವಿಲ್ಲ ಎಂಬ ಅರಿವು ಮೂಡಿಸಿ : ಒಂದೇ ದಿನಕ್ಕೆ ಮಕ್ಕಳ ಸ್ವಭಾವವನ್ನು ಬದಲಿಸಲು ಸಾಧ್ಯವಿಲ್ಲ. ಮಕ್ಕಳನ್ನು ನಿಧಾನವಾಗಿ ಬದಲಿಸಬೇಕು. ಅತ್ತರೆ ಏನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಬೇಕು. ಅಳುವ ಬದಲು ಧೈರ್ಯವಾಗಿ ಎಲ್ಲವನ್ನೂ ಎದುರಿಸುವಂತೆ ಅವರಿಗೆ ಹೇಳಬೇಕು. ಹಾಗೆ ಮಕ್ಕಳ ಮೇಲೆ ಪಾಲಕರು ತಮ್ಮ ಅಭಿಪ್ರಾಯ ಹೇರಬಾರದು.
Chanakya Niti: ಅತಿಯಾಗಿ ತಿನ್ನೋ ವ್ಯಕ್ತಿಯ ಬಳಿ ಲಕ್ಷ್ಮೀ ನಿಲ್ಲೋದಿಲ್ವಂತೆ !
ಮಕ್ಕಳ ಅಳುವಿನ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಹೇಳೋದೇನು? : ಜ್ಯೋತಿಷ್ಯ ಶಾಸ್ತ್ರದಲ್ಲೂ ಮಕ್ಕಳ ಅಳುವಿನ ಬಗ್ಗೆ ಹೇಳಲಾಗಿದೆ. ಸಖಾಸುಮ್ಮನೆ ಅಳುವ, ಭಯಕ್ಕೊಳಗಾಗುವ ಮಕ್ಕಳನ್ನು ಸರಿದಾರಿಗೆ ತರಲು ಶಾಸ್ತ್ರದಲ್ಲಿ ಕೆಲ ಉಪಾಯ ಹೇಳಲಾಗಿದೆ.
• ಆತ್ಮವಿಶ್ವಾಸವಿದ್ರೂ ನಿಮ್ಮ ಮಗು ಮಾತು ಮಾತಿಗೆ ಅಳುತ್ತೆ ಎಂದಾದ್ರೆ ನೀವು ಪ್ರಾತಃ ಕಾಲದಲ್ಲಿ ಮಗುವಿನ ಜೊತೆ ಸೂರ್ಯನಿಗೆ ಜಲವನ್ನು ಅರ್ಪಿಸಿ.
• ಮಗುವಿನ ಅಳು ನಿಮ್ಮನ್ನು ಸುಸ್ತು ಮಾಡಿದೆ ಎಂದಾದ್ರೆ ಬೆಳ್ಳಿಯ ಗುಂಡನ್ನು ಬಿಳಿ ದಾರದಲ್ಲಿ ಪೋಣಿಸಿ ಕತ್ತಿಗೆ ಹಾಕಿ.
• ಸದಾ ಕಿರಿಕಿರಿಯಲ್ಲಿರುವ ಮಕ್ಕಳ ಹಣೆಗೆ ಪ್ರತಿ ದಿನ ಬಿಳಿ ಚಂದನದ ತಿಲಕವನ್ನು ಇಡಬೇಕು.
• ಮಧ್ಯರಾತ್ರಿ ಎಚ್ಚರಗೊಳ್ಳುವ ಮಗು ಅಳುತ್ತೆ ಎಂದಾದ್ರೆ ಅದರ ತಲೆಬಿಂದಿನ ಕೆಳಗೆ ಹನುಮಾನ್ ಚಾಲಿಸವನ್ನು ಇಡಿ.
• ಮಗು ತುಂಬಾ ಹಠಮಾರಿಯಾಗಿದ್ದರೆ ಪ್ರತಿ ಮಂಗಳವಾರ ಕೆಂಪು ಬೇಳೆಯನ್ನು ದಾನವಾಗಿ ನೀಡಿ.