ನಿಮ್ಮ ಗೆಳತಿಯೂ ಒತ್ತಡ ಹಾಕಿ, ಸ್ವಾರ್ಥ ಈಡೇರಿಸಿಕೊಳ್ತಾರಾ?

By Suvarna News  |  First Published Feb 17, 2023, 5:08 PM IST

ನಿಮ್ಮ ಗೆಳತಿಯಲ್ಲಿ ಮ್ಯಾನಿಪ್ಯುಲೇಟಿವ್‌ ಗುಣವಿದ್ದರೆ ಅವರೊಂದಿಗೆ ಏಗುವುದು ಸುಲಭವಲ್ಲ. ಅವರು ಸ್ವಾರ್ಥಿ ಹಾಗೂ ಕುತಂತ್ರಿಯಾಗಿರುತ್ತಾರೆ. ಸಂಬಂಧವನ್ನೂ ಸಹ ಕೇವಲ ಪಡೆದುಕೊಳ್ಳುವುದಕ್ಕೋಸ್ಕರ ಇರುವಂಥದ್ದು ಎಂದು ಅವರು ಭಾವಿಸುತ್ತಾರೆ. ಆದರೂ ಅವರು ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ, ನಿಮಗೂ ಅವರ ಮೇಲೆ ಕಾಳಜಿಯಿದ್ದರೆ ಅವರೊಂದಿಗೆ ನಿಮ್ಮ ವರ್ತನೆ ಹೀಗಿರಲಿ.
 


ಕೆಲವು ಜನ ಎಷ್ಟು ಜಾಣತನ ಹೊಂದಿರುತ್ತಾರೆಂದರೆ, ಇನ್ನೊಬ್ಬರ ಮೇಲೆ ಒತ್ತಡ ಹಾಕಾದರೂ ತಮಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ಪ್ರತಿ ಕುಟುಂಬದಲ್ಲೂ ಇಂತಹ ಒಬ್ಬಿಬ್ಬರಾದರೂ ಜನ ಕಾಣಸಿಗಬಹುದು. ಇಂಥವರನ್ನು ಮ್ಯಾನಿಪ್ಯುಲೇಟಿವ್‌ ವರ್ತನೆ ಹೊಂದಿದ ಜನ ಎಂಬುದಾಗಿ ಹೇಳಲಾಗುತ್ತದೆ. ಇವರು ತೀರ ಸ್ವಾರ್ಥಿಗಳಾಗಿರುತ್ತಾರೆ. ತಮ್ಮ ಸ್ವಾರ್ಥದ ಹೊರತಾಗಿ ಇವರಿಗೆ ಬೇರೆ ಏನೂ ಗೋಚರಿಸುವುದಿಲ್ಲ. ಹಾಗೆಯೇ ಅತೀವ ಕುಶಲತೆಯಿಂದ ಯೋಚಿಸುತ್ತಾರೆ. ಇವರದ್ದು ಒಂದು ರೀತಿಯ ಗುಪ್ತ ಆಕ್ರಮಣ. ಮೇಲ್ನೋಟಕ್ಕೆ ಏನೂ ಕಾಣಿಸದ ಆದರೆ ಒಳಗಿಂದೊಳಗೆ ಹಿಂಸೆ ಉಂಟುಮಾಡುವ ಸ್ವಭಾವ. ಇವರು ತಮ್ಮ ಅನುಕೂಲಕ್ಕಾಗಿ ನಿಮ್ಮ ಮೇಲೆ ಒತ್ತಡ ಹಾಕಿ ನಿಮ್ಮಿಂದ ಏನಾದರೂ ಕೆಲಸ ಮಾಡಿಸಿಕೊಳ್ಳಬಲ್ಲ ಕುಶಲಿಗಳು. ಹೀಗಾಗಿ, ಇವರನ್ನು ಕುತಂತ್ರಿಗಳು ಎನ್ನಬಹುದು. ಇಂಥವರ ಜತೆ ಏಗುವುದು ಭಾರೀ ಕಷ್ಟ. ಆದರೆ, ನಿಮ್ಮ ಸಂಗಾತಿಯೇ ಕುತಂತ್ರಿಯಾಗಿದ್ದರೆ ಏನು ಮಾಡುತ್ತೀರಿ? ದೂರವಾಗುವಂತೆಯೂ ಇಲ್ಲ, ನೆಮ್ಮದಿಯಿಂದಿರಲೂ ಸಾಧ್ಯವಾಗುವುದಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ. ನಿಮ್ಮ ಗೆಳತಿಯೂ ಇಂಥವರಾಗಿದ್ದರೆ ನಿಮ್ಮದು ಹಿತವಿಲ್ಲದ ಸಂಬಂಧವಾಗುತ್ತದೆ. ಅವರ ಜತೆಗೆ ಇರುವಾಗ ನಿಮ್ಮಲ್ಲಿ ಕೆಟ್ಟ ಭಾವನೆಗಳೇ ತುಂಬಿರಬಲ್ಲವು. ಹೀಗಾಗಿ, ಅವರನ್ನು ವಿಶೇಷ ಜಾಣತನದಿಂದ ನಿಭಾಯಿಸಬೇಕಾಗುತ್ತದೆ. 

•    ಪ್ರಾಮಾಣಿಕತೆ (Honest), ನೇರ (Direct)
ಮ್ಯಾನಿಪ್ಯುಲೇಟರ್‌ (Manipulator) ಗೆಳತಿಯೊಂದಿಗೆ (Girl Friend) ಸಾಧ್ಯವಾದಷ್ಟೂ ಪ್ರಾಮಾಣಿಕರಾಗಿರಿ ಹಾಗೂ ನೇರವಾದ ಸಂಭಾಷಣೆ ಮಾಡಿ. ಗೊಂದಲದ (Confusion) ಸ್ಥಿತಿಯಲ್ಲಿ ಅವರು ತಮ್ಮ ಬುದ್ಧಿ ಪ್ರಕಟಿಸುವುದು ಹೆಚ್ಚು. ಹೀಗಾಗಿ, ಸುತ್ತಿಬಳಸಿ ಹೇಳದೆ ನೇರವಾಗಿ ಏನು ಬೇಕೋ ಅದನ್ನು ಕೇಳುವಂತೆ ಅವರಿಗೆ ತಿಳಿಸಬೇಕು. ಅವರ ಮೈಂಡ್‌ ಗೇಮ್‌ (Mind Game) ಸಮಯ ವ್ಯರ್ಥ ಮಾಡುವ ಮಾರ್ಗ. ಬಾಯಿಬಿಟ್ಟು ಏನೂ ಹೇಳದೆ ಸುಮ್ಮನೆ ಕೋಪ, ದುಃಖದ ನಟನೆ ಮಾಡುತ್ತಿದ್ದರೆ ನಿಮ್ಮೊಂದಿಗೆ ಅವರು ಆಟವಾಡುತ್ತಿದ್ದಾರೆ ಎಂದರ್ಥ. ಅವರೊಂದಿಗೆ ಕೋಪಿಸಿಕೊಂಡರೆ (Angry) ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತದೆ. ಹೀಗಾಗಿ, ತಾಳ್ಮೆಯಿಂದ ನಿಭಾಯಿಸಿ.

Latest Videos

undefined

Relationship Tips: ವಿವಾಹಿತ ಪುರುಷ ಪ್ರೊಪೋಸ್ ಮಾಡ್ತಿದ್ದಾನಾ? ಹೇಗೆ “ನೋ’ ಅನ್ನೋದು?

•    ಸ್ಪಷ್ಟವಾದ ಮಿತಿ (Boundary) ಹಾಕಿಕೊಳ್ಳಿ
ಸಂಬಂಧದಲ್ಲಿ (Relation) ಮಿತಿ ಇರುವುದು ಉತ್ತಮ. ಯೂನಿವರ್ಸಿಟಿ ಆಫ್‌ ಕೆಂಟುಕಿ ಅಧ್ಯಯನದ ಪ್ರಕಾರ, ಸಂಬಂಧದಲ್ಲಿ ಗಡಿ ಇರಿಸಿಕೊಳ್ಳುವುದು ದೈಹಿಕ (Physical) ಹಾಗೂ ಮಾನಸಿಕ (Mental) ಆರೋಗ್ಯಕ್ಕೆ ಅಗತ್ಯ. ಅವರಿಂದ ನೀವು ಏನು ನಿರೀಕ್ಷೆ ಮಾಡುತ್ತೀರಿ ಎನ್ನುವುದನ್ನು ಸ್ಪಷ್ಟವಾಗಿ ಹೇಳಿ. ಹಾಗೆಯೇ ನಿಮ್ಮ ಅವರ ನಡುವಿನ ಮಿತಿಯ ಬಗ್ಗೆಯೂ ಮೊದಲೇ ತಿಳಿಸಿ. ಅದನ್ನು ಆಗಾಗ ನೆನಪಿಸುತ್ತಿರಿ.

•    ಅವರಿಗೆ “ನೋ” ಹೇಳುವುದು ಹೇಗೆ?
ಕುತಂತ್ರಿ, ಸ್ವಾರ್ಥದ ಗೆಳತಿಗೆ “ನೋʼ ಹೇಳುವುದು ಕಷ್ಟಕರ. ಆದರೆ, ಮ್ಯಾನಿಪ್ಯುಲೇಟರ್‌ ಗೆಳತಿ ನಿಮ್ಮ ಸಹಾನುಭೂತಿಯನ್ನು ಮಿಸ್‌ ಯೂಸ್‌ (Miss use) ಮಾಡಿಕೊಳ್ಳುವುದು ಹೆಚ್ಚು. ಹೀಗಾಗಿ, ಯಾವುದಾದರೂ ವಿಚಾರಕ್ಕೆ “ನೋʼ ಎನ್ನುವಾಗ ನಿಮ್ಮಲ್ಲಿ ಸ್ಪಷ್ಟತೆ (Clarity) ಇರಲಿ, ಧೈರ್ಯ ಇರಲಿ. ತಾರ್ಕಿಕತೆಯಿಲ್ಲದ (Unreasonable) ಬೇಡಿಕೆಗಳಿಗೆ ದೃಢವಾಗಿ ಸಾಧ್ಯವಿಲ್ಲ ಎಂದೇ ಹೇಳಬೇಕು, ಇಲ್ಲವಾದರೆ ಇಂತಹ ಬೇಡಿಕೆಗಳಿಗೆ ಕೊನೆ ಎನ್ನುವುದು ಇರುವುದಿಲ್ಲ. 

ಮಡದಿ ಪ್ರಾಮಾಣಿಕಳಾಗಿರಬಹುದು, ಆದರೆ ಎಲ್ಲವನ್ನೂ ಹೇಳಿ ಕೊಳ್ಳೋಲ್ಲ ಅವಳು!

•    ಶಾಂತಿ (Peace) ಕಾಯ್ದುಕೊಳ್ಳಿ
ಗೆಳತಿಯ ಜತೆಗಿರುವಾಗ ಸಾಧ್ಯವಾದಷ್ಟೂ ಶಾಂತರಾಗಿರಿ. ಅವರು ಕೆಲವೊಮ್ಮೆ ಮೊಸಳೆ ಕಣ್ಣೀರು (Crocodile Tears) ಹಾಕಿ ನಿಮ್ಮನ್ನು ಮ್ಯಾನಿಪ್ಯುಲೇಟ್‌ ಮಾಡಲು ಯತ್ನಿಸಬಹುದು. ಅದರಿಂದಾಗಿ ವಾದ-ವಾಗ್ವಾದ ನಡೆಯಬಹುದು. ಹೀಗಾಗಲು ಬಿಡದೆ ಶಾಂತವಾಗಿದ್ದು, ಸ್ಪಷ್ಟವಾಗಿ ಯೋಚನೆ ಮಾಡುತ್ತಿರಿ. ಪರಿಸ್ಥಿತಿ ಶಾಂತವಾಗಲು ಸಮಯ ನೀಡಿ. ಉದ್ವಿಗ್ನರಾಗಿ (ಯಾವುದೇ ನಿರ್ಧಾರ ಕೈಗೊಳ್ಳಬೇಡಿ.

•    ಇತರರೊಂದಿಗಿನ ವರ್ತನೆ (Behaviour) ಬಗ್ಗೆ ಗಮನಿಸಿ
ಕೆಟ್ಟ ಸ್ವಭಾವದ ಜನ ತಮ್ಮ ಸಂಗಾತಿ ಸೇರಿದಂತೆ ಎಲ್ಲರಿಂದಲೂ ಅನುಕೂಲ ಪಡೆದುಕೊಳ್ಳಲು ಯತ್ನಿಸುತ್ತಾರೆ. ಅವರು ನಿಮ್ಮ ಸ್ನೇಹಿತರು, ಕುಟುಂಬ, ಸಹೋದ್ಯೋಗಿ ಹಾಗೂ ಸಾರ್ವಜನಿಕವಾಗಿ ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ಗಮನಿಸಿ. ಸಾಧ್ಯವಾದರೆ, ಅವರ ವರ್ತನೆಯ ಬಗ್ಗೆ ಅವರಿಗೆ ಮನದಟ್ಟು ಮಾಡಿಕೊಡಲು ಯತ್ನಿಸಿ. ತಮ್ಮ ವರ್ತನೆಯ ಬಗ್ಗೆ ಅವರಿಗೆ ಅರಿವಿಲ್ಲದೆ ಇರಬಹುದು. ಅವರು ನಿಮ್ಮನ್ನು ಗಾಢವಾಗಿ ಪ್ರೀತಿಸುತ್ತಿದ್ದರೆ (Love) ಅವರ ಸಮಸ್ಯೆಗಳ ಕುರಿತು ನೇರವಾಗಿ ಮಾತನಾಡಿ. ಇಂತಹ ವರ್ತನೆ ರಿಪೀಟ್‌ ಆಗಬಾರದು ಎಂದು ಸ್ಪಷ್ಟವಾಗಿ ತಿಳಿಸಿ. 
 

click me!