Relationship Tips: ಸಂಗಾತಿಯ ಬೆನ್ನು ಬೀಳ್ಬೇಡಿ

Published : Mar 30, 2022, 04:55 PM ISTUpdated : Mar 31, 2022, 07:13 AM IST
Relationship Tips: ಸಂಗಾತಿಯ ಬೆನ್ನು ಬೀಳ್ಬೇಡಿ

ಸಾರಾಂಶ

ಸಂಬಂಧ (RelationshiP ಎನ್ನುವುದು ಎರಡು ಹೃದಯ (Heart)ಗಳ ಬೆಸುಗೆ. ಜತೆಗಿದ್ದ ಮಾತ್ರಕ್ಕೆ ಹೃದಯಗಳ ಬೆಸುಗೆ ಗಟ್ಟಿಯಾಗುತ್ತದೆ ಎಂದೇನಿಲ್ಲ. ಸಂಗಾತಿ (Partner)ಯ ಜತೆಗೇ ಸದಾಕಾಲ ಇರಬೇಕೆಂಬ ಭಾವನೆ (Feeling)ಯನ್ನು ನಿಯಂತ್ರಿಸಿಕೊಳ್ಳಿ. ಜೀವನದ ಬೇರೆ ವಿಚಾರಗಳ ಕಡೆಗೂ ಗಮನ ಕೊಡಿ.

ಸದಾಕಾಲ ಪ್ರೀತಿಪಾತ್ರರೊಂದಿಗೆ ಇರಬೇಕು ಎನ್ನುವ ಆಸೆ ಎಲ್ಲರಿಗೂ ಸಹಜ. ಅದರಲ್ಲೂ ಕೆಲವು ಜನ ಯಾವ ಕೆಲಸ ಮಾಡುವುದಿದ್ದರೂ ತಮ್ಮೊಂದಿಗೆ ಸಂಗಾತಿಯೂ (Partner) ಇರಬೇಕೆಂದು ಬಯಸುತ್ತಾರೆ. ಶಾಪಿಂಗ್ (Shopping) ಹೋಗುವುದಾಗಲೀ, ಯಾರನ್ನೋ ಭೇಟಿಯಾಗುವುದಿರಲಿ, ಮನೆಯಿಂದ ಆಫೀಸ್ (Office) ಅಥವಾ ಬಸ್ ಸ್ಟ್ಯಾಂಡು (Bus stand) ಹೀಗೆ ಎಲ್ಲಾದರೂ ಹೋಗುವುದಿದ್ದರೆ ಸಂಗಾತಿ ಜತೆಗಿರಬೇಕು ಎನ್ನುವಂತೆ ವರ್ತಿಸುತ್ತಾರೆ. ಹುಡುಗಿಯರಿಗೆ (Girl) ಈ ಆಸೆ ಹೆಚ್ಚು. ತಮ್ಮ ಹುಡುಗಿಗೆ ತಾವು ತೀರಾ ಅನಿವಾರ್ಯ ಎನ್ನುವ ಭಾವನೆ ಹುಡುಗರಿಗೆ (Male) ಹೆಚ್ಚು. ಅವರೊಂದಿಗೆ ಸದಾಕಾಲ ತಾವು ಇರಲೇಬೇಕು ಎಂದು ತಿಳಿದುಕೊಳ್ಳುತ್ತಾರೆ.  

ಹುಡುಗರಾಗಲೀ, ಹುಡುಗಿಯರಾಗಲೀ ನಿಮಗೆ ನಿಮ್ಮ ಸಮಯ (Time) ಹಾಗೂ ಕೆಲವೊಂದಿಷ್ಟು ಪ್ರತ್ಯೇಕತೆ (Space) ಬೇಕಿರುತ್ತದೆ. ನಿಮ್ಮದೇ ಕೆಲಸ ಕಾರ್ಯಗಳ ಬಗ್ಗೆ ಗಮನ ನೀಡಲು, ಕಚೇರಿಯ ಕೆಲಸ ಪೂರೈಸಿಕೊಳ್ಳಲು, ಕಚೇರಿ ಸಮಯದ ಬಳಿಕ ಒಂದಿಷ್ಟು ಮನೆಯ ಜವಾಬ್ದಾರಿ ನಿರ್ವಹಿಸಲು ನಿಮ್ಮದೇ ಆದ ಸಮಯ ನಿಮಗೆ ಬೇಕಿರುತ್ತದೆ. ಹೀಗಾಗಿ, ತಾವು ಸಂಗಾತಿಗೆ ತೀರಾ ಅನಿವಾರ್ಯ ಎನ್ನುವ ಭಾವನೆಯಿಂದ ಹೊರಬರಬೇಕು. ಇಲ್ಲವಾದರೆ ಎಲ್ಲೇ ಹೋದರೂ ಆ ಭಾವನೆ ಒಂದು ರೀತಿಯ ಕಿರಿಕಿರಿ ಸೃಷ್ಟಿಸುತ್ತಿರುತ್ತದೆ. 

ಹುಡುಗಿ ಸಿಗ್ತಿಲ್ಲ ಎಂದು ಖಿನ್ನತೆಗೊಳಗಾದ ವ್ಯಕ್ತಿ

ಸಂಗಾತಿಗೆ ನೀವು ಅನಿವಾರ್ಯವಲ್ಲ!
ಹೌದು, ನೀವು ಸಂಗಾತಿಗೆ ಎಲ್ಲ ಸಮಯದಲ್ಲೂ ಅನಿವಾರ್ಯವಲ್ಲ, ಎಲ್ಲ ಕೆಲಸಕ್ಕೂ ನಿಮ್ಮ ಅಗತ್ಯವಿಲ್ಲ. ತಾವು ತೀರಾ ಅಗತ್ಯ ಎನ್ನುವ ಭಾವನೆಯಿಂದ ನೀವು ನರಳಬೇಕಿಲ್ಲ. ಅದಕ್ಕಾಗಿ ಈ 8 ಸ್ಮಾರ್ಟ್ ಟಿಪ್ಸ್ ನಿಮಗಾಗಿ.

•  ಅವರು ಕರೆದರೂ ಎಲ್ಲ ಕಡೆಯೂ ಅವರೊಂದಿಗೆ ಹೋಗಬೇಡಿ. ಕೆಲವೊಮ್ಮೆ ಅವರನ್ನು ಒಬ್ಬರೇ ಹೋಗಲು ಬಿಡಿ. ಇದರಿಂದ ಅವರಿಗೂ ಜವಾಬ್ದಾರಿ ಬರುತ್ತದೆ. ಹಾಗೂ ನಿಮಗೂ ನಿಮ್ಮದೇ ಆದ ಸಮಯವೆಂಬುದೊಂದಿದೆ, ಅದರಲ್ಲಿ ನೀವು ಖುಷಿಯಾಗಿರುವುದನ್ನು ಕಲಿತುಕೊಳ್ಳಲು ಸಾಧ್ಯವಾಗುತ್ತದೆ.  

•  ಸಂಗಾತಿ ಎಲ್ಲಾದರೂ ಹೋಗಿದ್ದಾಗ ಪದೇ ಪದೆ ಫೋನ್ ಮಾಡಿ ಎಲ್ಲಿದ್ದೀಯ, ಏನ್ ಮಾಡ್ತಾ ಇದ್ದೀಯ, ಏನಾದ್ರೂ ತಿಂದ್ಯಾ ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿರಬೇಡಿ. ಅವರು ವಾಪಸ್ ಬರುವವರೆಗೂ ತಂಟೆಗೆ ಹೋಗಬೇಡಿ. ಒಂದು ಸಮಯ ಮೀರುವವರೆಗೂ ಬಾರದೆ ಇದ್ದಾಗ ಮಾತ್ರ ಕಾಲ್ ಮಾಡಿ. ಇಂಥ ವಿಚಾರಣೆಗಳು ನಿಮ್ಮನ್ನು ಡಿಮ್ಯಾಂಡಿಂಗ್ (Demanding)  ವ್ಯಕ್ತಿತ್ವದವರನ್ನಾಗಿ ರೂಪಿಸುತ್ತವೆ.

ಬೇಗ ಬೋರಾಗುವ Relationship.. ಹೀಗೆ ಹೊಸತನ ತನ್ನಿ

•  ನಿಮ್ಮ ಸ್ನೇಹಿತೆಯ ಅಥವಾ ಸಂಗಾತಿಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಅವರ ಸ್ನೇಹಿತರನ್ನು ಸೋಷಿಯಲ್ ಮೀಡಿಯಾದಲ್ಲಿ (Social Media) ಫಾಲೋ (Follow) ಮಾಡುವುದು ಬೇಡ.

•  ನೀವೇ ಯಾವತ್ತೂ ಮೊದಲು ಮೆಸೇಜ್ (Message) ಮಾಡುತ್ತಿರಬೇಡಿ. ಹಾಗೂ ತುರ್ತು ವಿಚಾರವಿಲ್ಲದೆ ಇದ್ದರೆ ಅವರಿಂದ ತಕ್ಷಣ ಪ್ರತಿಕ್ರಿಯೆ (Reaction) ನಿರೀಕ್ಷಿಸಬೇಡಿ. ಸಾಮಾಜಿಕ ಬದುಕಿನಲ್ಲಿ ಇತರ ಜನರ ಬಗ್ಗೆ ಗಮನ ನೀಡಲು ಅವರಿಗೆ ಸಮಯ ಕೊಡಿ.

•  ನಿಮ್ಮನ್ನು ಅವಲಂಬಿಸಿರಬೇಕೆಂದು ಹಠಮಾರಿ (Aggressive) ಧೋರಣೆ ಹೊಂದಿರಬೇಡಿ. ಹಾಗೂ ಇದಕ್ಕಾಗಿ ಹಠದ ವರ್ತನೆಯನ್ನೂ ತೋರಬೇಡಿ.

•  ಒಂದೊಮ್ಮೆ ನಿಮ್ಮ ಸಂದೇಶಕ್ಕೆ ಪ್ರತಿಯಾಗಿ ಅವರು ದಿನವಿಡೀ ಸಂದೇಶ ಕಳುಹಿಸಿಲ್ಲವೆಂದರೂ ಬೇಸರಿಸಿಕೊಳ್ಳಬೇಡಿ. ಹಾಗೂ ಅವರು ನಿಮಗೆ ಮೋಸ (Cheat) ಮಾಡುತ್ತಿದ್ದಾರೆ ಎಂದೆಲ್ಲ ಯೋಚಿಸಬೇಡಿ. ಅವರು ಬೇರೆ ಯಾವುದೋ ಕೆಲಸದಲ್ಲಿ ಮರೆತಿರಬಹುದು. ಮರೆಯುವುದು ಎಲ್ಲರ ಸಹಜ ಗುಣ. 

•  ಸಂಗಾತಿ ನಿಮ್ಮ ಬಗ್ಗೆ ತೀವ್ರವಾದ ಕಾಳಜಿ ತೋರಬೇಕೆಂಬ ಆಸೆ ನಿಮಗಿದ್ದರೆ ಅದಕ್ಕಾಗಿ ಏನೇನೋ ನಾಟಕವಾಡಬೇಡಿ. ಸ್ನೇಹಿತರನ್ನು, ಕುಟುಂಬದವರನ್ನು ನಿಮ್ಮ ಮಧ್ಯೆ ಎಳೆದು ತರಬೇಡಿ.

•  ಸಾಮಾಜಿಕ ತಾಣಗಳಲ್ಲಿ ನಿಮ್ಮ ಕುಟುಂಬದ ಪ್ರಮುಖ ವ್ಯಕ್ತಿಗಳಿಂದ ದೂರವಿರುವುದು ಜಾಣತನವಲ್ಲ. ಇದರಿಂದ ನಿಮ್ಮ ಸಂಗಾತಿಗೆ ನೀವು ಹತ್ತಿರವಾಗಲು ಸಾಧ್ಯವಿಲ್ಲ. 

•  ಸಂಗಾತಿ ಬೇರೆಯವರೊಂದಿಗೆ ಮಾತನಾಡಿದರೆ, ಹರಟೆ ಹೊಡೆದರೆ, ಸ್ನೇಹಿತರೊಂದಿಗೆ, ಸಹೋದ್ಯೋಗಿಗಳೊಂದಿಗೆ ಸುತ್ತಾಡಿದರೆ ಹೊಟ್ಟೆಕಿಚ್ಚು (Jealous) ಪಡಬೇಡಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ 4 ರಾಶಿ ಜನಗಳೊಂದಿಗೆ ಜಾಗರೂಕರಾಗಿರಿ, ಅವರು ನಿಮ್ಮ ಮನಸ್ಸಿನಲ್ಲಿ ಏನಿದೆ ಎಂದು ಓದುತ್ತಾರೆ
ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!